Ram Mandir Pran Pratishtha: ರಾಮಾಯಣದಿಂದ ಪ್ರೇರಿತವಾದ ಅತ್ಯುತ್ತಮ ಧಾರಾವಾಹಿ ಮತ್ತು ಸಿನಿಮಾಗಳು
ಈ ವರ್ಷದ ಜನವರಿ 22 ದೇಶದ ಇತಿಹಾಸದಲ್ಲಿ ಮಹತ್ವದ ದಿನವಾಗಿದೆ. ಅಯೋಧ್ಯೆಯ ಬೃಹತ್ ರಾಮಮಂದಿರ 'ಪ್ರಾಣ ಪ್ರತಿಷ್ಠಾ' ಸಮಾರಂಭವು ನಡೆಯಲಿದ್ದು, ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಕಾರ್ಯಕ್ರಮಕ್ಕೆ ದೇಶದ ಗಣ್ಯರ ಜಿತೆಗೆ ವಿದೇಶಗಳಿಂದಲು ಅತಿಥಿಗಳು ಆಗಮಿಸಲಿದ್ದು, ಎಲ್ಲರ ದೃಷ್ಟಿ ಭಾರತದತ್ತ ನೆಟ್ಟಿದೆ.
ಇದೇ ವೇಳೆ ರಾಮ ಭಜನೆಗಳು, ರಾಮಾಯಣದಿಂದ ಪ್ರೇರಿತವಾದ ಸಿನಿಮಾಗಳು ಮತ್ತು ಧಾರಾವಾಹಿಗಳ ಬಗ್ಗೆ ಹುಡುಕಾಟ ನಡೆಯುತ್ತಿದೆ. ಹಲವು ಮಾಧ್ಯಮಗಳು ಜನವರಿ 22 ರಂದು ರಾಮಾಯಣ ಮಹಾಕಾವ್ಯವನ್ನು ಜನರ ಮುಂದಿಡುವ ಪ್ರಯತ್ನ ಮಾಡುತ್ತಿವೆ. ಇದೇ ಸಂದರ್ಭದಲ್ಲಿ ರಾಮಾಯಣದಿಂದ ಪ್ರೇರಿತವಾದ ಕೆಲವು ಪ್ರಸಿದ್ಧ ಸಿನಿಮಾಗಳು ಮತ್ತು ಧಾರಾವಾಹಿಗಳ ಬಗ್ಗೆ ಮಾಹಿತಿ ಇಲ್ಲಿದೆ.

ರಮಾನಂದ ಸಾಗರ್ ಅವರ ರಾಮಾಯಣ
ರಾಮಾಯಣ ಎಂದ ಕೂಡಲೇ ಮೊದಲಿಗೆ ನೆನಪಿಗೆ ಬರುವುದೇ ರಮಾನಂದ್ ಸಾಗರ್ ಅವರ 'ರಾಮಾಯಣ. ಇದು' ಹಿಂದೂ ಮಹಾಕಾವ್ಯದ ಅತ್ಯುತ್ತಮ ಅಳವಡಿಕೆಯಲ್ಲಿ ಒಂದಾಗಿದೆ. ಮಹಾಕಾವ್ಯದ ಪಾತ್ರದಿಂದ ಹಿಡಿದು ಅದರ ಸಮಯ, ದೃಶ್ಯ ಪರಿಣಾಮಗಳವರೆಗೆ ಎಲ್ಲರನ್ನು ಹಿಡಿದಿಟ್ಟಿತ್ತು ಈ ಧಾರಾವಾಹಿ. 1987ರಲ್ಲಿ ಬಂದ 'ರಾಮಾಯಣ' ವನ್ನು 53 ದೇಶಗಳಲ್ಲಿ ಪ್ರದರ್ಶಿಸಲಾಗಿದ್ದು, ಈವರೆಗೆ ಪ್ರಪಂಚದಾದ್ಯಂತ 650 ದಶಲಕ್ಷಕ್ಕೂ ಹೆಚ್ಚು ವೀಕ್ಷಕರು ವೀಕ್ಷಿಸಿದ್ದಾರೆ. ಇದು ವಿಶ್ವದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಪೌರಾಣಿಕ ಧಾರಾವಾಗಿ. 2020 ರಲ್ಲಿ ಸಾಂಕ್ರಾಮಿಕ ರೋಗದಿಂದಾಗಿ ಲಾಕ್‌ಡೌನ್ ಸಮಯದಲ್ಲಿ ಇದನ್ನು ಮರು-ಪ್ರಸಾರ ಮಾಡಲಾಯಿತು.
ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ
'ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ' ರಾಮಾಯಣದ ಅತ್ಯುತ್ತಮ ಅನಿಮೇಟೆಡ್ ರೂಪಾಂತರಗಳಲ್ಲಿ ಒಂದಾಗಿದೆ. 1992 ರ ಅನಿಮೇಟೆಡ್ ಚಲನಚಿತ್ರವನ್ನು ಜಪಾನೀಸ್ ಮತ್ತು ಭಾರತೀಯ ಅನಿಮೇಷನ್ ಸ್ಟುಡಿಯೋಗಳು ಸಹ ನಿರ್ಮಾಣ ಮಾಡಿವೆ. ಇದನ್ನು ಯುಗೋ ಸಾಕೋ ನಿರ್ಮಿಸಿ ನಿರ್ದೇಶಿಸಿದ್ದಾರೆ. ವಿಶೇಷವಾಗಿ ರಮಾನಂದ ಸಾಗರ್ ಅವರ 'ರಾಮಾಯಣ'ದ ರಾಮನ ಪಾತ್ರದಲ್ಲಿ ಹೆಸರುವಾಸಿಯಾದ ಅರುಣ್ ಗೋವಿಲ್, 'ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ'ದಲ್ಲಿ ರಾಮನಿಗೆ ಧ್ವನಿ ನೀಡಿದ್ದಾರೆ.

ರಾವಣ
ಖ್ಯಾತ ಚಲನಚಿತ್ರ ನಿರ್ದೇಶಕ ಮಣಿರತ್ನಂ ರಾಮಾಯಣ ಮಹಾಕಾವ್ಯದ ಕಥೆಯನ್ನು ರಾವಣನ ದೃಷ್ಟಿಕೋನದಿಂದ 'ರಾವಣ' ಎಂಬ ಸಿನಿಮಾದಲ್ಲಿ ತೋರಿಸಿದ್ದರು. ಚಿತ್ರದಲ್ಲಿ ಡಕಾಯಿತ ಬೀರಾ, ಪೊಲೀಸ್ ಅಧಿಕಾರಿಯ ಹೆಂಡತಿಯನ್ನು ಅಪಹರಿಸಿ ನಂತರ ಆಕೆಯ ಪ್ರೀತಿಯ ಬಲೆಗೆ ಬೀಳುತ್ತಾನೆ. ಸಿನಿಮಾದ ವಿಭಿನ್ನ ಕಥೆ, ಛಾಯಾಗ್ರಹಣ ಮತ್ತು ನಟರ ನಟನೆಗಾಗಿ ಈ ಚಿತ್ರವನ್ನು ನೋಡಲೇಬೇಕು.
ಆರ್‌ಆರ್‌ಆರ್ (RRR)
ಹಲವು ಪ್ರಶಸ್ತಿಗಳ ಸುರಿಮಳೆಯನ್ನೇ ಹರಿಸಿದ ಎಸ್‌ಎಸ್ ರಾಜಮೌಳಿ ಅವರ RRR ಚಿತ್ರವು ಮಹಾಕಾವ್ಯದ ಕಥೆಯಿಂದ ಹಲವಾರು ಅಂಶಗಳನ್ನು ತನ್ನಲ್ಲಿ ಬಳಸಿಕೊಂಡಿದೆ. ಭಗವಾನ್ ರಾಮನ ಪಾತ್ರವನ್ನು ಹೋಲುವ ರಾಮ್ ಚರಣ್ ಅವರ ಚಿತ್ರಣ, ಜೂನಿಯರ್ ಎನ್‌ಟಿಆರ್ ಹನುಮಾನ್ ಮತ್ತು ಆಲಿಯಾ ಭಟ್ ಸೀತೆಯ ಪಾತ್ರಗಳಿಂದ ಪ್ರೇರಿತವಾಗಿವೆ.
ಹನುಮಾನ್
2005 ರಲ್ಲಿ ಬಿಡುಗಡೆಯಾದ 'ಹನುಮಾನ್' ವಿಜಿ ಸಮಂತ್ ನಿರ್ದೇಶನದ ಅನಿಮೇಟೆಡ್ ಚಲನಚಿತ್ರ. ಇದು ತನ್ನ ಶೀರ್ಷಿಕೆ ಪಾತ್ರವಾದ ಭಗವಾನ್ ಹನುಮಾನ್‌ನ ಜೀವನವನ್ನು ತೆರೆ ಮೇಲೆ ತಂದಿದೆ. ರಾಮಾಯಣದ ಘಟನೆಗಳನ್ನು ಚಿತ್ರಿಸುತ್ತದೆ. ಭಾರತದ ಅನಿಮೇಷನ್ ಉದ್ಯಮದ ಬೆಳವಣಿಗೆಗೆ ಕಿಕ್ ಸ್ಟಾರ್ಟ್ ಕೊಟ್ಟ ಹೆಗ್ಗಳಿಕೆ ಈ ಸಿನಿಮಾದ್ದು.
ಹಮ್ ಸಾತ್ ಸಾತ್ ಹೈ
ಸೂರಜ್ ಬರ್ಜತ್ಯಾ ಅವರ ಸೂಒರ್ ಹಿಟ್ 'ಹಮ್ ಸಾಥ್ ಸಾಥ್ ಹೈ' ಸಿನಿಮಾ ಒಂದು ಕೌಟುಂಬಿಕ ಹಿಟ್. ಕುಟುಂಬ ಮತ್ತು ಪ್ರೀತಿಯ ಸುತ್ತ ಸುತ್ತುವ ಈ ಚಿತ್ರವು ರಾಮಾಯಣದಿಂದ ಪ್ರಮುಖ ಸ್ಫೂರ್ತಿಯನ್ನು ಪಡೆದಿದೆ. ಮಲತಾಯಿ ಮಾತಿನಿಂದ ಭಗವಾನ್ ರಾಮನ ವನವಾಸ ಸೇರಿ ಹಲವು ಅಂಶಗಳನ್ನು ಸಿನಿಮಾ ತೆಗೆದುಕೊಂಡಿದೆ.


Click it and Unblock the Notifications










