20 years of Ranga SSLC; 'ರಂಗ ಎಸ್‌ಎಸ್‌ಎಲ್‌ಸಿ' ಚಿತ್ರದ ಬಜೆಟ್, ಕಲೆಕ್ಷನ್ ಎಷ್ಟಾಗಿತ್ತು?

ಯೋಗರಾಜ್ ಭಟ್ ನಿರ್ದೇಶನದಲ್ಲಿ ನಟ ಕಿಚ್ಚ ಸುದೀಪ್ ಹಾಗೂ ರಮ್ಯಾ ನಟಿಸಿದ ಸಿನಿಮಾ 'ರಂಗ SSLC'. ಎನ್‌. ಕುಮಾರ್ ನಿರ್ಮಾಣದ ಚಿತ್ರಕ್ಕೆ ಸಂದೀಪ್ ಚೌಟ ಸಂಗೀತ ನಿರ್ದೇಶನವಿತ್ತು. ಬರೀ ಟೈಟಲ್‌ನಿಂದಲೇ ಈ ಸಿನಿಮಾ ಗಮನ ಸೆಳೆದಿತ್ತು. ಸುದೀಪ್ ಕರಿಯರ್‌ನಲ್ಲೇ ಬಹಳ ವಿಭಿನ್ನ ಎನಿಸಿಕೊಂಡಿದ್ದ ಈ ಸಿನಿಮಾ ತೆರೆಕಂಡು 20 ವರ್ಷ ಪೂರೈಸಿದೆ.

'ರಂಗ SSLC' ಪಕ್ಕಾ ಮಸಾಲ ಎಂಟರ್‌ಟೈನರ್ ಸಿನಿಮಾ. ಸುದೀಪ್ ರಗಡ್ ಲುಕ್, ಬಾಡಿ ಲಾಂಗ್ವೇಜ್ ಚಿತ್ರದಲ್ಲಿ ಹೈಲೆಟ್ ಆಗಿತ್ತು. ಇನ್ನು ಚಿತ್ರದ ಹಾಡುಗಳನ್ನು ಸಿನಿರಸಿಕರು ಇಂದಿಗೂ ಮರೆತ್ತಿಲ್ಲ. ಸಿನಿಮಾ ಹಿಂದಿಗೂ ಡಬ್ ಆಗಿತ್ತು. ಅಂದಹಾಗೆ ದುನಿಯಾ ವಿಜಯ್ ನಟಿಸಿದ ಮೊದಲ ಸಿನಿಮಾ ಇದು. ಸಣ್ಣ ಪಾತ್ರದಲ್ಲಿ ವಿಜಿ ಮಿಂಚಿದ್ದರು. ಮುಂದೆ 'ದುನಿಯಾ' ಸಿನಿಮಾ ಮೂಲಕ ಅವರು ಹೀರೊ ಆಗಿದ್ದು ಗೊತ್ತೆಯಿದೆ.

Ranga SSLC completes 20 years Here s Sudeep Ramya s film budget box office collection

ಸುದೀಪ್ ಆಟೊ ಡ್ರೈವರ್ 'ರಂಗ' ಆಗಿ ಪ್ರೇಕ್ಷಕರನ್ನು ರಂಜಿಸಿದ್ದರು. SSLC ಎಕ್ಸಾಂ ಪಾಸ್ ಮಾಡೋಕ್ಕಾಗದೇ ಪದೇ ಪದೆ ರಂಗ ಸೋಲುವುದು, ಮುಂದೆ ಬಾಂಬ್ ನಾಗನ ಜೊತೆಗೆ ಜಿದ್ದಿಗೆ ಬಿದ್ದು ಆತನ ಜೀವನ ಏನಾಗುತ್ತದೆ ಎನ್ನುವ ಕಥೆ ಚಿತ್ರದಲ್ಲಿತ್ತು. ಸಿನಿಮಾ ಟೈಟಲ್, ಕಾನ್ಸೆಪ್ಟ್ ನಿಜಕ್ಕೂ ಚೆನ್ನಾಗಿತ್ತು. ಆದರೆ ಒಟ್ಟಾರೆ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಗಿತ್ತು.

ಚಿತ್ರದಲ್ಲಿ ಸುದೀಪ್ ಮ್ಯಾನರಿಸಂ, ಅಭಿನಯ, ಡೈಲಾಗ್ಸ್ ಇವತ್ತಿಗೂ ಅಭಿಮಾನಿಗಳ ಫೇವರಿಟ್. ಅದೇ ಕಾರಣಕ್ಕೆ ಇಂದಿಗೂ ಈ ಚಿತ್ರವನ್ನು ಅವರ ಮರೆತ್ತಿಲ್ಲ. ಇನ್ನು 'ಊರ ಕಣ್ಣು ಯಾರ ಕಣ್ಣು' ಹಾಡನ್ನು ಇವತ್ತಿಗೂ ಜನ ಗುನುಗುತ್ತಾರೆ. ಬಾಂಗ್‌ ನಾಗ ಆಗಿ ರಂಗಾಯಣ ರಘು ಓವರ್ ಮ್ಯಾನರಿಸಂ 'ರಂಗ SSLC' ಚಿತ್ರಕ್ಕೆ ಹಿನ್ನಡೆ ಆಗಿತ್ತು ಎಂದವರು ಇದ್ದಾರೆ.

ಅವತ್ತಿನ ಕಾಲಕ್ಕೆ ಬಹಳ ಅದ್ಧೂರಿಯಾಗಿಯೇ 'ರಂಗ SSLC' ಸಿನಿಮಾ ನಿರ್ಮಾಣವಾಗಿತ್ತು. ರಂಗ ಆಟೋ ಡ್ರೈವರ್ ಆಗಿದ್ದರೂ ಡ್ಯುಯಟ್ ಹಾಡು ಫಾರಿನ್‌ಗೆ ಕರ್ಕೊಂಡು ಹೋಗಿದ್ದರು ನಿರ್ಮಾಪಕರು. ಅಷ್ಟರಮಟ್ಟಿಗೆ ಶ್ರೀಮಂತವಾಗಿ ಸಿನಿಮಾ ನಿರ್ಮಾಣವಾಗಿತ್ತು. ಸುದೀಪ್ ಹಾಗೂ ರಮ್ಯಾ ಇಬ್ಬರಿಗೂ ಭಾರೀ ಕ್ರೇಜ್ ಇತ್ತು. 'ಎಸ್‌ಕ್ಯೂಸ್‌ಮಿ', 'ಅಭಿ' ಸಿನಿಮಾಗಳನ್ನು ಮಾಡಿ ಗೆದ್ದಿದ್ದ ರಮ್ಯಾ ಅವರನ್ನು ಸುದೀಪ್‌ ಜೊತೆ ಜೋಡಿ ಮಾಡಲಾಗಿತ್ತು. ಇಬ್ಬರಿಗೂ ಭರ್ಜರಿ ಸಂಭಾವನೆಯೇ ಸಿಕ್ಕಿತ್ತು.

Ranga SSLC completes 20 years Here s Sudeep Ramya s film budget box office collection

ನಿರ್ಮಾಪಕರೇ ಹೇಳುವ ಪ್ರಕಾರ 2004ರಲ್ಲಿ ಎರಡೂವರೆ ಕೋಟಿ ರೂ. ಬಜೆಟ್‌ನಲ್ಲಿ 'ರಂಗ SSLC' ಸಿನಿಮಾ ಕಟ್ಟಿಕೊಡಲಾಗಿತ್ತು. ಆದರೆ ಕಲೆಕ್ಷನ್ ಅಲ್ಲಿಗಲ್ಲಿಗೆ ಸರಿ ಹೋಗಿತ್ತು. ಹೆಚ್ಚಿನ ಲಾಭ ಬಂದಿಲ್ಲ. ಇದು ಹಿಟ್ ಸಿನಿಮಾ ಎಂದು ಹೇಳುವುದು ಕಷ್ಟ. ಒಂದೊಳ್ಳೆ ಪ್ರಯತ್ನ ಎಂದು ಮಾತ್ರ ಹೇಳಬಹುದು ಎಂದು ನಿರ್ಮಾಪಕ ಎನ್‌. ಕುಮಾರ್ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ.

'ರಂಗ SSLC' ಚಿತ್ರದ ಎಲ್ಲಾ ಹಾಡುಗಳಿಗೆ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದರು. ದುನಿಯಾ ಸೂರಿ ಚಿತ್ರಕ್ಕೆ ಕಥೆ, ಚಿತ್ರಕಥೆ ಬೆರೆದಿದ್ದರು. ಲವ್, ಸೆಂಟಿಮೆಂಟ್, ಕಾಮಿಡಿ, ಡೈಲಾಗ್ಸ್ ಎಲ್ಲಾ ಸೇರಿ 'ರಂಗ SSLC' ಒಂದು ಕಂಪ್ಲಿಟ್ ಪ್ಯಾಕೇಜ್ ಎನಿಸಿಕೊಂಡಿತ್ತು. ರಂಗಾಯಣ ರಘು ನಟಿಸಿದ್ದ ಒಂದಷ್ಟು ಸನ್ನಿವೇಶಗಳಿಗೆ ಕತ್ತರಿ ಹಾಕಿದ್ದರೆ ಸಿನಿಮಾ ಮತ್ತಷ್ಟು ಚೆನ್ನಾಗಿರುತ್ತಿತ್ತು ಎಂದು ಕೆಲವರು ಹೇಳುತ್ತಾರೆ.

ರಂಗನ ತಾಯಿ ಪಾತ್ರದಲ್ಲಿ ಉಮಾಶ್ರೀ ನಟಿಸಿದ್ದರು. ಇನ್ನುಳಿದಂತೆ ಡೈಸಿ ಬೋಪಣ್ಣ, ಬ್ಯಾಂಕ್ ಜನಾರ್ಧನ್, ನಾಗಶೇಖರ್, ಮೈನಾ ಚಂದ್ರು ಸೇರಿದಂತೆ ಹಲವರು 'ರಂಗ SSLC' ಚಿತ್ರದ ಬಳಗದಲ್ಲಿದ್ದರು. ಚಿತ್ರದಲ್ಲಿ ರಮ್ಯಾ ಪಾತ್ರಕ್ಕೆ ಡಬ್ ಮಾಡಿದ್ದ ದೀಪಾಗೆ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಮತ್ತೆ 'ರಂಗ SSLC' ಚಿತ್ರವನ್ನು ನೆನಪಿಸಿಕೊಳ್ಳುತ್ತಿದ್ದಾರೆ.

More from Filmibeat

English summary
The most interesting facts about Ranga SSLC you did not know;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X