ಜಪಾನ್ ಬಾಕ್ಸಾಫೀಸ್‌ನಲ್ಲಿ ಅತಿಹೆಚ್ಚು ಗಳಿಕೆ ಕಂಡ ಭಾರತದ ಚಿತ್ರಗಳ ಪಟ್ಟಿ: 'KGF' ಕಥೆ ಏನಾಗಲಿದೆ?

ದೂರದ ಜಪಾನ್ ಬಾಕ್ಸಾಫೀಸ್‌ನಲ್ಲಿ ಭಾರತದ ಸಿನಿಮಾಗಳ ಆರ್ಭಟ ಮತ್ತೆ ಶುರುವಾಗಿದೆ. ಇತ್ತೀಚೆಗೆ ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಅಲ್ಲಿ ಶತದಿನೋತ್ಸವ ಆಚರಿಸಿ ದಾಖಲೆ ಬರೆದಿತ್ತು. ಇದೀಗ ರಾಮ್‌ಚರಣ್ ನಟನೆಯ 'ರಂಗಸ್ಥಳಂ' ಹಾಗೂ ಯಶ್ ನಟನೆಯ 'KGF' ಸರಣಿ ಚಿತ್ರಗಳು ರಿಲೀಸ್ ಆಗಿ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿವೆ. ಸದ್ಯ ಚಿಟ್ಟಿಬಾಬು ಹವಾ ಕೊಂಚ ಜೋರಾಗಿದೆ.

ಭಾರತದ ಸಿನಿಮಾಗಳು ಜಪಾನ್ ದೇಶದಲ್ಲಿ ಬಿಡುಗಡೆಯಾಗುವುದು ಕಡಿಮೆ. ಆಗೊಮ್ಮೆ ಈಗೊಮ್ಮೆ ಇಂತಹ ಪ್ರಯತ್ನಗಳು ನಡೆಯುತ್ತವೆ. ವಿಶ್ವದಾದ್ಯಂತ ತೆರೆಕಂಡು ಭರ್ಜರಿ ಸಕ್ಸಸ್ ಕಂಡ ಸಿನಿಮಾಗಳನ್ನು ನಂತರ ಅಲ್ಲಿ ಜಪಾನೀಸ್ ಭಾಷೆಯ ಸಬ್‌ ಟೈಟಲ್ಸ್ ಜೊತೆ ರಿಲೀಸ್ ಮಾಡಲಾಗುತ್ತದೆ. ಹಲವು ವರ್ಷಗಳಿಂದ ಇಂತಹ ಪ್ರಯತ್ನ ನಡೀತಿದೆ. ರಜನಿಕಾಂತ್ ನಟನೆಯ 'ಮುತ್ತು' ಸಿನಿಮಾ ದಶಕಗಳ ಹಿಂದೆಯೇ ಅಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿತ್ತು.

Rangasthalam vs KGF: List of Highest Grossing Indian Films In Japan Boxoffice

ಈ ಹಿಂದೆ ಕನ್ನಡ ಸಿನಿಮಾಗಳು ಜಪಾನ್ ದೇಶದಲ್ಲಿ ಬಿಡುಗಡೆ ಆಗಿರಲಿಲ್ಲ. ಆದರೆ ಸೂಪರ್ ಹಿಟ್ 'KGF' ಸರಣಿ ಚಿತ್ರಗಳನ್ನು ಅಲ್ಲಿನ ವಿತಕರಕರು ಕೊಂಡುಕೊಂಡು ಹೋಗಿ ರಿಲೀಸ್ ಮಾಡಿದ್ದಾರೆ. ಏಕಕಾಲಕ್ಕೆ ಚಾಪ್ಟರ್- 1 ಹಾಗೂ ಚಾಪ್ಟರ್-2 ಸಿನಿಮಾಗಳನ್ನು ಜಪಾನ್ ಪ್ರೇಕ್ಷಕರು ಮುಂದಿಡಲಾಗಿದೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜಪಾನ್‌ನಲ್ಲಿ ನಿಧಾನವಾಗಿ ರಾಕಿ ಭಾಯ್ ಕ್ರೇಜ್ ಶುರುವಾಗ್ತಿದೆ. ಇನ್ನು ಈ ಹಿಂದೆ ಜಪಾನ್ ಬಾಕ್ಸಾಫೀಸ್‌ಲ್ಲಿ ಭಾರತದ ಯಾವ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನುವ ಡಿಟೈಲ್ಸ್ ಮುಂದೆ ಇದೆ ಓದಿ.

ಮೊದಲ ಸ್ಥಾನದಲ್ಲಿ ಮೌಳಿ 'RRR'

ಕಳೆದ ವರ್ಷ ನವೆಂಬರ್ 21ಕ್ಕೆ ಜಪಾನ್ ದೇಶದಲ್ಲಿ 'RRR' ಸಿನಿಮಾ ರಿಲೀಸ್ ಆಗಿತ್ತು. ರಾಜಮೌಳಿ, ರಾಮ್‌ಚರಣ್, ಜ್ಯೂ. ಎನ್‌ಟಿಆರ್ ಹೋಗಿ ಅಲ್ಲಿ ಪ್ರಚಾರ ಮಾಡಿ ಬಂದಿದ್ದರು. ಸಾಧಾರಣ ಓಪನಿಂಗ್ ಪಡೆದುಕೊಂಡಿದ್ದ ಸಿನಿಮಾ ನಿಧಾನವಾಗಿ ಬಾಕ್ಸಾಫೀಸ್‌ನಲ್ಲಿ ತಳವೂರಿತ್ತು. ಬರೋಬ್ಬರಿ 118 ಕೋಟಿ ರೂ. ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿತ್ತು. ಬ್ರಿಟೀಷರ ವಿರುದ್ಧ ರಾಮ್‌-ಭೀಮ್ ಹೋರಾಟ ನೋಡಿ ಅಲ್ಲಿನ ಪ್ರೇಕ್ಷಕರಿ ಫಿದಾ ಆಗಿದ್ದರು.

27 ವರ್ಷಗಳ ಹಿಂದೆ 'ಮುತ್ತು' ಮ್ಯಾಜಿಕ್

1996ರಲ್ಲಿ ರಜನಿಕಾಂತ್ ನಟನೆಯ 'ಮುತ್ತು' ಸಿನಿಮಾ ಜಪಾನ್ ದೇಶದಲ್ಲಿ ಬಿಡುಗಡೆಯಾಗಿತ್ತು. ಅವತ್ತಿನ ಕಾಲಕ್ಕೆ ಬರೋಬ್ಬರಿ 23 ಕೋಟಿ ರೂ. ಗಳಿಕೆ ಕಂಡಿತ್ತು. ಈ ಸಿನಿಮಾ ಮೂಲಕ ರಜನಿಕಾಂತ್‌ಗೆ ಜಪಾನ್‌ನಲ್ಲಿ ದೊಡ್ಡ ಅಭಿಮಾನಿ ಬಳಗ ಸೃಷ್ಟಿಯಾಗಿತ್ತು. ಆ ನಂತರ ಕೂಡ ತಲೈವಾ ಸಿನಿಮಾಗಳನ್ನು ಜಪಾನ್ ಪ್ರೇಕ್ಷಕರ ಮುಂದಿಡುವ ಪ್ರಯತ್ನ ನಡೀತು. ಬಾಲಿವುಡ್‌ನ ಒಂದಷ್ಟು ಸಿನಿಮಾಗಳು ತೆರೆಕಂಡರೂ 'ಮುತ್ತು' ದಾಖಲೆ ಮುರಿಯಲು ಸಾಧ್ಯವಾಗಲಿಲ್ಲ.

Rangasthalam vs KGF: List of Highest Grossing Indian Films In Japan Boxoffice

18 ಕೋಟಿ ರೂ. ಗಳಿಸಿದ್ದ 'ಬಾಹುಬಲಿ- 2'

'RRR'ಗೂ ಮುನ್ನ ರಾಜಮೌಳಿ ನಿರ್ದೇಶನದ 'ಬಾಹುಬಲಿ ದಿ ಕನ್‌ಕ್ಲೂಷನ್' ಸಿನಿಮಾ ಕೂಡ ಜಪಾನ್‌ನಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು. 18 ಕೋಟಿ ರೂ. ಗಳಿಸಿ ಸಿನಿಮಾ ಎಲ್ಲರ ಹುಬ್ಬೇರಿಸಿತ್ತು. ಪ್ರಭಾಸ್ ನಟನೆ ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದ್ದು ಗೊತ್ತೇಯಿದೆ. ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್‌ ಅನ್ನು ಮತ್ತೆ ಹುಟ್ಟು ಹಾಕಿದ್ದು ಇದೇ ಸಿನಿಮಾ. ಇದೇ ಹಾದಿಯಲ್ಲಿ ಈಗ ಸಾಕಷ್ಟು ಸಿನಿಮಾ ಬರ್ತಿವೆ.

'ತ್ರೀ ಈಡಿಯಟ್ಸ್' ದರ್ಬಾರ್

ಇನ್ನು ಆಮೀರ್ ಖಾನ್ ನಟನೆಯ 'ತ್ರೀ ಈಡಿಯಟ್ಸ್' ಸಿನಿಮಾ 10.05 ಕೋಟಿ ರೂ. ಕಲೆಕ್ಷನ್ ಮಾಡಿದ್ರೆ, ಶ್ರೀದೇವಿ ನಟನೆಯ 'ಇಂಗ್ಲೀಷ್ ವಿಂಗ್ಲೀಷ್' 9.46 ಕೋಟಿ ರೂ. ಗಳಿಸಿ ಸದ್ದು ಮಾಡಿತ್ತು. ಇದೀಗ ಏಕಕಾಲಕ್ಕೆ 'ರಂಗಸ್ಥಳಂ' ಹಾಗೂ 'KGF' ಸರಣಿ ಸಿನಿಮಾಗಳು ತೆರೆಕಂಡು ಒಳ್ಳೆ ಓಪನಿಂಗ್ ಪಡೆದುಕೊಂಡಿದೆ. ರಾಮ್‌ಚರಣ್ ನಟನೆಯ 'ರಂಗಸ್ಥಳಂ' ಜಪಾನ್ ಬಾಕ್ಸಾಫೀಸ್‌ನಲ್ಲಿ ಫಸ್ಟ್ ಡೇ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

More from Filmibeat

English summary
Rangasthalam vs KGF: List of Highest Grossing Indian Films In Japan Boxoffice. Rangasthalam gets the biggest opening in Japan. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X