34 ವರ್ಷದ ಹಿಂದೆ ಉಪೇಂದ್ರ ನಟಿಸಿದ್ದ ಧಾರಾವಾಹಿ ಯಾವ್ವು? ಇಲ್ಲಿದೆ ನೋಡಿ ಅಪರೂಪದ ವೀಡಿಯೋ

ರಿಯಲ್ ಸ್ಟಾರ್ ಉಪೇಂದ್ರ ಹಂತ ಹಂತವಾಗಿ ಬೆಳೆದು ಇವತ್ತು ಸ್ಟಾರ್ ಪಟ್ಟಕ್ಕೇರಿದ್ದಾರೆ. ಯಾವುದೇ ಸಿನಿಮಾ ಹಿನ್ನಲೆ ಇಲ್ಲದೇ ಬಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ನಿರ್ದೇಶಕರಾಗಿಯೂ ಸೂಪರ್ ಸಕ್ಸಸ್ ಕಂಡಿದ್ದಾರೆ. 80ರ ದಶಕದ ಅಂತ್ಯದಲ್ಲೇ ಉಪ್ಪಿ ಚಿತ್ರರಂಗ ಪ್ರವೇಶಿಸಿದ್ದರು. ಆರಂಭದಲ್ಲಿ ಬರಹಗಾರರಾಗಿ ಗುರ್ತಿಸಿಕೊಂಡಿದ್ದರು. ಕಾಶಿನಾಥ್ ಗರಡಿಯಲ್ಲಿ ಪಳಗಿದ್ದರು.

'ತರ್ಲೆ ನನ್ಮಗ' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಉಪೇಂದ್ರ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದರು. ಬಳಿಕ 'ಶ್' ಹಾಗೂ 'ಓಂ' ಸಿನಿಮಾ ಮೂಲಕ ಸಂಚಲನ ಸೃಷ್ಟಿಸಿದ್ದರು. 'ಎ' ಹಾಗೂ 'ಉಪೇಂದ್ರ' ಚಿತ್ರಗಳನ್ನು ನಿರ್ದೇಶಿಸಿ ನಟಿಸಿ ಗೆದ್ದಿದ್ದರು. ತಮ್ಮ ನ್ಯೂನ್ಯತೆಗಳನ್ನೇ ಪ್ಲಸ್ ಮಾಡಿಕೊಂಡು ಗೆಲುವಿನ ಅಂಬಾರಿ ಏರಿದ್ದರು. ಚಿತ್ರರಂಗಕ್ಕೆ ಬಂದ ಹೊಸತರಲ್ಲಿ ಬಹಳ ಆಕ್ಟೀವ್ ಆಗಿದ್ದರು. ಯಾವುದೇ ಅವಕಾಶ ಸಿಕ್ಕರೂ ಬೇಡ ಎನ್ನುತ್ತಿರಲಿಲ್ಲ.

Rare 1991 Telefilm Video of Real Star Upendra Goes Viral Fans Call Him a True Star

ಕಾಲೇಜು ದಿನಗಳಲ್ಲೇ ನಾಟಕ, ಹಾಡು, ಡೈಲಾಗ್ ಬರೆಯಲು ಆರಂಭಿಸಿದ್ದರು. ಸಿನಿಮಾಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವುದರ ಜೊತೆಗೆ ಕಿರುತೆರೆ ಟೆಲಿಫಿಲ್ಮ್‌ಗೂ ಕೆಲಸ ಮಾಡಿದ್ದರು. 1991ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿದ್ದ ಧಾರಾವಾಹಿಯಲ್ಲಿ ಉಪ್ಪಿ ಬಣ್ಣ ಕೂಡ ಹಚ್ಚಿ ಸಣ್ಣ ಪಾತ್ರದಲ್ಲಿ ಮಿಂಚಿದ್ದರು. ಆ ವೀಡಿಯೋ ಈಗ ವೈರಲ್ ಆಗುತ್ತಿದೆ. ಕಾಶಿನಾಥ್ ಅವರ 'ಅನಂತನ ಅವಾಂತರ' ಹಾಗೂ 'ಲವ್ ಮಾಡಿ ನೋಡು' ಚಿತ್ರಗಳಲ್ಲಿ ಕೂಡ ಮಿಂಚಿದ್ದರು.

'ಶ್' ಚಿತ್ರದಲ್ಲಿ ನಕಲಿ ಪೊಲೀಸ್ ಆಫೀಸರ್ ಆಗಿ ಒದೆ ತಿನ್ನುವ ಪಾತ್ರದಲ್ಲಿ ಉಪ್ಪಿ ಕಮಾಲ್ ಮಾಡಿದ್ದರು. ಅದಕ್ಕೂ ಮುನ್ನ 1991ರಲ್ಲಿ 'ನಿರ್ಮಲೆಯ ಸಾಕ್ಷಿ' ಎಂಬ ಧಾರಾವಾಹಿಯಲ್ಲಿ ಅವರು ಕಾಣಿಸಿಕೊಂಡಿದ್ದರು. ವಾದಿರಾಜ್ ಅವರು ಈ ಧಾರಾವಾಹಿ ಸಾರಥ್ಯ ವಹಿಸಿದ್ದರು. ಒಂದು ಸನ್ನಿವೇಶದಲ್ಲಿ ರಿಯಲ್ ಸ್ಟಾರ್ ಕ್ಯಾಮರಾ ಎದುರಿಸಿದ್ದರು. ಸ್ನೇಹಿತನನ್ನು ಗೋಳು ಹುಯ್ದುಕೊಳ್ಳುವ ಸನ್ನಿವೇಶ ಅದು. ಸದ್ಯ ವೀಡಿಯೋ ವೈರಲ್ ಆಗಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ಉಬ್ಬು ಹಲ್ಲು, ಸಣಕಲು ದೇಹದ ಉಪೇಂದ್ರ ಹೀರೊ ಆಗುವ ಕನಸು ಕಂಡಿರಲಿಲ್ಲ. 'ಓಂ' ಸಿನಿಮಾ ಗೆದ್ದ ಬಳಿಕ ಸ್ನೇಹಿತರ ಸಲಹೆಯಂತೆ ಹಲ್ಲಿಗೆ ಕ್ಲಿಪ್ ಹಾಕಿಸಿಕೊಂಡು ತಮ್ಮ ಲುಕ್ ಬದಲಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ನಿರ್ಮಾಪಕರಾದ ಮಂಜುನಾಥ್ ಹಾಗೂ ಜಗನ್ನಾಥ್ ಬಂದು ಉಪೇಂದ್ರ ಜೊತೆ ಸಿನಿಮಾ ಮಾಡಬೇಕು ಎಂದುಕೊಂಡಿದ್ದರು. ನೀವೇ ಹೀರೊ ಆಗಿಬಿಡಿ ಎಂದಾಗಲೇ 'A' ಸಿನಿಮಾ ಶುರುವಾಗಿದ್ದು.

ನನಗೆ ಸಿನಿಮಾಗಳಲ್ಲಿ ನಟಿಸೋ ಆಸೆ ಇತ್ತು. ನಿರ್ದೇಶಕನಾಗಿ ಸಕ್ಸಸ್ ಕಂಡ ಮೇಲೆ ಅದನ್ನು ಮರೆತುಬಿಟ್ಟಿದ್ದೆ. ಆದರೆ ನಿರ್ಮಾಪಕರೇ ಬಂದು ಹೇಳಿದಾಗ ಮಾಡೋಣ ಎಂದುಕೊಂಡೆ. ನನಗೆ ಸೂಕ್ತ ಎನ್ನುವಂತೆ ಪಾತ್ರ, ಕಥೆ ಡಿಸೈನ್ ಮಾಡಿಕೊಂಡೆ. ಆ ಸಿನಿಮಾ ಶುರುವಾಗುವಾಗ ಸಾಕಷ್ಟು ಅಪಶಕುನಗಳಾಯಿತು. ಆದರೆ ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೇ ಸಿನಿಮಾ ಮಾಡಿದ್ವಿ ಎಂದು ಉಪೇಂದ್ರ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಹೀರೊ ಆಗಿ ಗೆದ್ದ ಬಳಿಕ ನಿರ್ದೇಶನದಿಂದ ಕೊಂಚ ಅಂತರ ಕಾಯ್ದುಕೊಂಡರು. ಆಗೊಮ್ಮೆ ಈಗೊಮ್ಮೆ ಚಿತ್ರ ನಿರ್ದೇಶನಕ್ಕೆ ಕೈ ಹಾಕಿದರು. ಚಿತ್ರದಿಂದ ಚಿತ್ರಕ್ಕೆ ತಮ್ಮ ಲುಕ್ಸ್, ಫಿಟ್‌ನೆಸ್ ಬದಲಿಸಿಕೊಳ್ಳುತ್ತಾ ಬಂದರು. ಆರಂಭದಲ್ಲಿ ಉದ್ದ ಕೂದಲು ಬಿಟ್ಟು ಒಂದೇ ತರಹದ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಉಪ್ಪಿ ಬಳಿಕ ಕೂದಲಿಗೆ ಕತ್ತರಿ ಹಾಕಿ ಸ್ಟೈಲ್ ಅವತಾರದಲ್ಲಿ ಮಿಂಚಿದ್ದರು.

ಸದ್ಯ ಉಪ್ಪಿಯ 34 ವರ್ಷಗಳ ಹಿಂದಿನ ಧಾರಾವಾಹಿ ವೀಡಿಯೋ ವೈರಲ್ ಆಗಿ ಸದ್ದು ಮಾಡ್ತಿದೆ. ರಿಯಲ್ ಸ್ಟಾರ್ ಗ್ರೇಟ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. 'UI' ಬಳಿಕ ಉಪೇಂದ್ರ ನಟನೆಯ '45' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. 'ಭಾರ್ಗವ' ಎಂಬ ಮತ್ತೊಂದು ಸಿನಿಮಾ ಚಿತ್ರೀಕರಣ ನಡೀತಿದೆ.

More from Filmibeat

English summary
Kannada Actor, director Upendra's Old telefilm Video goes viral now
Read more about: upendra sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X