twitter
    For Quick Alerts
    ALLOW NOTIFICATIONS  
    For Daily Alerts

    'ಯಾರೆ ನೀನು ಚೆಲುವೆ' ಸಿನಿಮಾಕ್ಕೆ ಮೊದಲ ಆಯ್ಕೆ ರವಿಚಂದ್ರನ್ ಅಲ್ಲ, ಈ ನಟ

    |

    ಯಾರೆ ನೀನು ಚೆಲುವೆ ಕನ್ನಡ ಕ್ಲಾಸಿಕ್‌ಗಳಲ್ಲಿ ಒಂದು, ಇದೊಂದು ರೀಮೇಕ್ ಸಿನಿಮಾ ಆಗಿದ್ದರೂ ಸಹ ಕನ್ನಡಕ್ಕೆ ಅತ್ಯುತ್ತಮವಾಗಿ ತಂದರು ನಿರ್ದೇಶಕ ಡಿ.ರಾಜೇಂದ್ರ ಬಾಬು. ಸಿನಿಮಾಕ್ಕೆ ತನ್ನದೇ ಆದ ಸ್ವಂತಿಕೆ ಬರುವಂತೆ ಮಾಡಿದ್ದು ಹಂಸಲೇಖ ಹಾಡುಗಳು.

    Recommended Video

    ರವಿಚಂದ್ರನ್ ಈ ಚಿತ್ರದಲ್ಲಿ ನಟಿಸದೇ ಇದ್ದಿದ್ರೆ ಅವರ ತಮ್ಮ ಇವತ್ತು ಸ್ಟಾರ್ ಆಗ್ತಿದ್ರಾ?? | Ravi Chandran | Eshwar

    ಸಿನಿಮಾದ ನಾಯಕ ರವಿಚಂದ್ರನ್ ಜೀವನದಲ್ಲಿ ಸಹ ಈ ಸಿನಿಮಾ ಒಂದು ಅದ್ಭುತ ತಿರುವು. ಸೋಲುಗಳನ್ನು ಕಂಡು ನಿರಾಸೆಯಲ್ಲಿದ್ದ ರವಿಚಂದ್ರನ್‌ಗೆ ಈ ಸಿನಿಮಾ ದೊಡ್ಡ ಗೆಲುವು ತಂದುಕೊಟ್ಟಿತು.

    ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ 'ಜಟ್ಟ' ಗಿರಿರಾಜ್ ಸಿನಿಮಾಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ 'ಜಟ್ಟ' ಗಿರಿರಾಜ್ ಸಿನಿಮಾ

    ಮತ್ತೆ-ಮತ್ತೆ ನೋಡಿಸಿಕೊಳ್ಳುವ ಗುಣ ಹೊಂದಿರುವ ಈ ಸಿನಿಮಾದ ನಾಯಕ ಪಾತ್ರಕ್ಕೆ ರವಿಚಂದ್ರನ್ ಮೊದಲ ಆಯ್ಕೆ ಆಗಿರಲಿಲ್ಲ. ಬೇರೊಬ್ಬ ನಾಯಕನೊಂದಿಗೆ ಚಿತ್ರೀಕರಣ ಸಹ ಪ್ರಾರಂಭವಾಗಿಬಿಟ್ಟಿತ್ತು, ಆ ನಂತರ ರವಿಚಂದ್ರನ್‌ ಕೈಗೆ ಆಕಸ್ಮಿಕವಾಗಿ ಈ ಸಿನಿಮಾ ಹೋಯಿತು.

    ರವಿಚಂದ್ರನ್ ಸಹೋದರ ನಟಿಸಬೇಕಿದ್ದ ಸಿನಿಮಾ

    ರವಿಚಂದ್ರನ್ ಸಹೋದರ ನಟಿಸಬೇಕಿದ್ದ ಸಿನಿಮಾ

    ಹೌದು, ಯಾರೆ ನೀನು ಚೆಲುವೆ ಸಿನಿಮಾದ ನಾಯಕನಾಗಿ ಅಭಿನಯಿಸುತ್ತಿದ್ದು, ರವಿಚಂದ್ರನ್ ಅಲ್ಲ ಬದಲಿಗೆ ಅವರ ಸಹೋದರ ಬಾಲಾಜಿ ಅಲಿಯಾಸ್ ಈಶ್ವರ್. ಬಾಲಾಜಿ ನಾಯಕರಾಗಿ ಸಿನಿಮಾದ ಚಿತ್ರೀಕರಣ ಸಹ ಪ್ರಾರಂಭವಾಗಿಬಿಟ್ಟಿತ್ತು, ಆದರೆ ಬಾಲಾಜಿ ಅದೃಷ್ಟ ಕೈಕೊಟ್ಟು ಸಿನಿಮಾ ನಿಂತುಹೋಯಿತು.

    ಸಿನಿಮಾಕ್ಕಾಗಿ ಸ್ಟಿಲ್ಸ್ ಸಹ ತೆಗೆಯಲಾಗಿತ್ತು

    ಸಿನಿಮಾಕ್ಕಾಗಿ ಸ್ಟಿಲ್ಸ್ ಸಹ ತೆಗೆಯಲಾಗಿತ್ತು

    ತಮಿಳಿನ ಸೂಪರ್ ಹಿಟ್ 'ಕಾದಲ್ ಕೋಟ್ಟೈ' ಸಿನಿಮಾವನ್ನು ಕನ್ನಡದಲ್ಲಿ ನಿರ್ಮಾಪಕ ಕೆಸಿಎನ್ ಪ್ರಾರಂಭಿಸಿದ್ದರು. ನಿರ್ದೇಶನ ಮಾಡುತ್ತಿದ್ದಿದ್ದು ಮೋಹನ್ ಬಾಬು. ಆಗ ಹೊಸ ನಟ ಬಾಲಾಜಿ ಹಾಗೂ ಸಿಮ್ರನ್ ಎಂಬ ಹೊಸ ನಟಿಯನ್ನು ಹಾಕಿಕೊಂಡು ಸಿನಿಮಾದ ಚಿತ್ರೀಕರಣವನ್ನು ಒಂದು ವಾರ ನಡೆಸಲಾಗಿತ್ತು. ಸಿನಿಮಾದ ಸ್ಟಿಲ್ಸ್‌ ಸಹ ತೆಗೆಯಲಾಗಿತ್ತು. ನಂತರ ಅಚಾನಕ್ಕಾಗಿ ಸಿನಿಮಾ ನಿಂತುಹೋಯಿತು.

    ಕ್ರೇಜಿ ಸ್ಟಾರ್ ರವಿಚಂದ್ರನ್ ಹೆಸರಲ್ಲಿ ನಕಲಿ ಟ್ವಿಟ್ಟರ್ ಅಕೌಂಟ್ಕ್ರೇಜಿ ಸ್ಟಾರ್ ರವಿಚಂದ್ರನ್ ಹೆಸರಲ್ಲಿ ನಕಲಿ ಟ್ವಿಟ್ಟರ್ ಅಕೌಂಟ್

    ಪಾತ್ರವರ್ಗ, ನಿರ್ದೇಶಕರನ್ನು ಬದಲಾಯಿಸಿದ ರಾಕ್‌ಲೈನ್

    ಪಾತ್ರವರ್ಗ, ನಿರ್ದೇಶಕರನ್ನು ಬದಲಾಯಿಸಿದ ರಾಕ್‌ಲೈನ್

    ನಂತರ ಸಿನಿಮಾವನ್ನು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಕೈಗೆತ್ತಿಕೊಂಡರು. ಆದರೆ ಪಾತ್ರವರ್ಗ ಸೇರಿ ಎಲ್ಲದರಲ್ಲೂ ಬದಲಾವಣೆ ಮಾಡಿದ ಅವರು, ಬಾಲಾಜಿ ಸ್ಥಾನಕ್ಕೆ ರವಿಚಂದ್ರನ್ ಅವರನ್ನು ತಂದರು. ನಿರ್ದೇಶಕರನ್ನು ಬದಲಾಯಿಸಿ ರಾಜೇಂದ್ರ ಬಾಬು ಅವರಿಗೆ ಹೊಣೆ ನೀಡಿದರು. ನಾಯಕಿಯನ್ನಾಗಿ ಹೊಸ ಮುಖ ಸಂಗೀತ ಅನ್ನು ಪರಿಚಯಿಸಿದರು.

    ಬಹುತಾರಾಗಣ ಸಿನಿಮಾ ಆಗಿಬಿಟ್ಟಿತು

    ಬಹುತಾರಾಗಣ ಸಿನಿಮಾ ಆಗಿಬಿಟ್ಟಿತು

    ಸಿನಿಮಾಕ್ಕೆ ವಿಷ್ಣುವರ್ಧನ್, ರಮೇಶ್ ಅರವಿಂದ್, ಪ್ರಕಾಶ್ ರೈ, ಜಗ್ಗೇಶ್ ಹೀಗೆ ಹಲವು ಖ್ಯಾತ ನಟರನ್ನು ಸೇರಿಸಿ ಸಿನಿಮವನ್ನು ಬಹುತಾರಾಗಣದ ಸಿನಿಮಾ ಮಾಡಿಬಿಟ್ಟರು ರಾಕ್‌ಲೈನ್. ಹಂಸಲೇಖ ಹೊಸೆದುಕೊಟ್ಟ ಹಾಡುಗಳಂತೂ ರೀಮೇಕ್‌ ಸಿನಿಮಾಕ್ಕೆ ಹೊಸ ಜೀವವನ್ನೇ ತುಂಬಿದವು.

    ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಂದ ರವಿಚಂದ್ರನ್‌ಗೊಂದು ಬೇಡಿಕೆಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಂದ ರವಿಚಂದ್ರನ್‌ಗೊಂದು ಬೇಡಿಕೆ

    ಸ್ಟಾರ್ ಆಗುತ್ತಿದ್ದರಾ ಬಾಲಾಜಿ?

    ಸ್ಟಾರ್ ಆಗುತ್ತಿದ್ದರಾ ಬಾಲಾಜಿ?

    ಸಿನಿಮಾ ಬಿಡುಗಡೆ ಆದ ಬಳಿಕ ಭಾರಿ ದೊಡ್ಡ ಹಿಟ್ ಆಯಿತು. ಶತದಿನ ಆಚರಿಸಿತು. ಆದರೆ ಇದರಿಂದ ನಷ್ಟವಾಗಿದ್ದು ಬಾಲಾಜಿ ಗೆ ನಂತರ ಎಷ್ಟೋ ವರ್ಷಗಳ ಕಾಲ ಅವರು ನಾಯಕ ನಟನಾಗಲು ಆಗಲಿಲ್ಲ. ಆದರೂ ಸಹ ಹಿಟ್ ಸಿಗಲಿಲ್ಲ. ಯಾರೆ ನೀನು ಚೆಲುವೆ ಸಿನಿಮಾದಲ್ಲಿ ಅವರೇ ನಟಿಸಿ ಹಿಟ್ ಆಗಿದ್ದಿದ್ದರೆ ಅವರೂ ಸ್ಟಾರ್ ಆಗುತ್ತಿದ್ದರೋ ಏನೊ?

    English summary
    V Ravichandran is not the first choice for 'Yare neenu cheluv' movie. Another actor start shooting for the film first then it ends.
    Friday, June 19, 2020, 9:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X