ಅಸಲಿ ಸುದ್ದಿ: 'ಆ ಮನೆ' ಕಾರಣದಿಂದ ಮುರಿದು ಬಿದ್ದಿತ್ತು ರಶ್ಮಿಕಾ-ರಕ್ಷಿತ್ ನಡುವಿನ ಪ್ರೀತಿ

By ಫಿಲ್ಮಿ ಬೀಟ್ ಡೆಸ್ಕ್

Recommended Video

ಇಬ್ಬರ ನಡುವಿನ ಪ್ರೀತಿ ಮುರಿದು ಬೀಳೋಕೆ ಕಾರಣವಾಗಿದ್ದು ಇದೇ!! | FILMIBEAT KANNADA

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರಪ್ರಿಯರ ಮನಗೆದ್ದ ನಟಿ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ನಡುವಿನ ಪ್ರೀತಿಯ ಅಧ್ಯಾಯ ಈಗ ಮುಗಿದ ಕಥೆ. ಇಬ್ಬರ ಪ್ರೀತಿ, ಎಂಗೇಜ್ ಮೆಂಟ್, ಮದುವೆ ವಿಚಾರಗಳಿಗೆ ಬ್ರೇಕ್ ಬಿದ್ದು ಎರಡು ವರ್ಷಗಳ ಮೇಲಾಗಿದೆ. ರಶ್ಮಿಕಾ ಸದ್ಯ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ರಕ್ಷಿತ್ ಮೂರು ವರ್ಷಗಳ ನಂತರ ಅವನೇ ಶ್ರೀಮನ್ನಾರಾಯಣನಾಗಿ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ.

ಆದರೆ ಇಬ್ಬರ ಪ್ರೀತಿ, ಬ್ರೇಕ್ ಅಪ್ ವಿಚಾರ ಮಾತ್ರ ಸದ್ದು ಮಾಡುತ್ತಲೆ ಇದೆ. ಈ ವಿಚಾರವಾಗಿ ತರಹೇವಾರಿ ಸುದ್ದಿಗಳು ಹರಿದಾಡುತ್ತಿವೆ. ರಶ್ಮಿಕಾನೇ ರಕ್ಷಿತ್ ಗೆ ಕೈ ಕೊಟ್ಟು ಹೋಗಿದ್ದಾರೆ, ತೆಲುಗಿನಲ್ಲಿ ಖ್ಯಾತಿಗಳಿಸುತ್ತಿದ್ದಂತೆ ರಕ್ಷಿತ್ ಶೆಟ್ಟಿಯನ್ನು ದೂರ ತಳ್ಳಿದರು, ವಿಜಯ್ ದೇವರಕೊಂಡ ಸಿಕ್ಕಮೇಲೆ ರಕ್ಷಿತ್ ಬೇಡವಾಗಿದ್ದಾರೆ, ಲಿಪ್ ಲಾಕ್ ದೃಶ್ಯ ಹೀಗೆ ಒಂದಿಷ್ಟು ಸುದ್ದಿಗಳು ಹರಿದಾಡುತ್ತಿವೆ.

ಆದರೆ ಇಬ್ಬರ ಬ್ರೇಕ್ ಅಪ್ ಗೆ ಅಸಲಿ ಕಾರಣವೇನು ಎನ್ನುವುದು ಯಾರಿಗೂ ಗೊತ್ತಿಲ್ಲ. ಈಗಾಗಲೆ ಎಲ್ಲರೂ ಅಂದುಕೊಂಡ ಹಾಗೆ ಲಿಪ್ ಲಾಕ್, ವಿಜಯ್ ದೇವರಕೊಂಡ, ನೇಮು ಫೇಮು ಯಾವುದು ಅಲ್ಲ. ಇದೆಲ್ಲ ಇಬ್ಬರ ಬ್ರೇಕ್ ಅಪ್ ಆದ್ಮೇಲಿನ ಕಥೆ. ಹಾಗಾದರೆ ಇಬ್ಬರ ಪ್ರೀತಿಗೆ ಎಳ್ಳುನೀರು ಬಿಟ್ಟ ಅಸಲಿ ಕಾರಣವೇನು ಎನ್ನುವುದು ಇಲ್ಲಿದೆ ನೋಡಿ.

 ಇಬ್ಬರ ಪ್ರೀತಿಗೆ ಮುಳುವಾಯ್ತು 'ಆ ಮನೆ'

ಇಬ್ಬರ ಪ್ರೀತಿಗೆ ಮುಳುವಾಯ್ತು 'ಆ ಮನೆ'

ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಮಾಡಿಕೊಂಡ ನಂತರ ಇನ್ನೇನು ಒಂದೆರಡು ವರ್ಷದಲ್ಲಿ ಹಸೆಮಣೆ ಏರಲು ಸಿದ್ಧರಾಗಿದ್ದರು. ಆದರೆ ಆಗಲೆ ಇಬ್ಬರ ಬ್ರೇಕ್ ಅಪ್ ಸುದ್ದಿ ದೊಡ್ಡ ಮಟ್ಟಕ್ಕೆ ವೈರಲ್ ಆಯಿತು. ಯಾಕೆ? ಏನು? ಎನ್ನುವುದು ಯಾರಿಗೂ ಗೊತ್ತಾಗಲಿಲ್ಲ. ಅಸಲಿಗೆ ಇಬ್ಬರ ದೂರ ದೂರ ಆಗಲು ಕಾರಣವಾಗುದ್ದು 'ಮನೆ'. ಒಂದು ಮನೆಯ ವಿಚಾರ ಇಬ್ಬರ ಪ್ರೀತಿ, ಪ್ರೇಮ ಮದುವೆ ಕನಸನ್ನು ಸುಟ್ಟು ಭಸ್ಮ ಮಾಡಿದೆ.

 ಮನೆ ಕಟ್ಟುವ ಕನಸು ರಕ್ಷಿತ್ ಗೆ

ಮನೆ ಕಟ್ಟುವ ಕನಸು ರಕ್ಷಿತ್ ಗೆ

ರಕ್ಷಿತ್ ಶೆಟ್ಟಿ ನಿನ್ನೆ 'ಫಿಲ್ಮಿ ಬೀಟ್ ಕನ್ನಡ'ಕ್ಕೆ ನೀಡಿದ ಸಂದರ್ಶನದಲ್ಲಿ 'ಮೊದಲು ಮನೆ ಕಟ್ಟಬೇಕು ನಂತರ ಮದುವೆ' ಎಂದು ಹೇಳಿದ್ದಾರೆ. ಅಂದರೆ ರಕ್ಷಿತ್ ಗೆ ಬೆಂಗಳೂರಿನಲ್ಲಿ ದೊಡ್ಡ ಮನೆ ಕಟ್ಟಬೇಕು, ನಂತರ ಮದುವೆ ಆಗಬೇಕು ಎನ್ನುವ ದೊಡ್ಡ ಕನಸಿದೆ. ಮನೆ ಕಟ್ಟುವುದಕ್ಕು ಬ್ರೇಕ್ ಅಪ್ ಗೂ ಏನು ಸಂಬಂಧ ಅಂತೀರಾ? ರಕ್ಷಿತ್ ಮನೆ ಕನಸನ್ನು ನನಸು ಮಾಡಿಕೊಳ್ಳಲು ರಶ್ಮಿಕಾ ಮನೆಯವರ ಸಹಾಯ ಬೇಡಿದ್ದಾರೆ.ಅಂದರೆ ರಕ್ಷಿತ್ ತಾನು ಪ್ರೀತಿಸಿ ಮದುವೆ ಆಗಲು ಹೊರಟಿದ್ದ ರಶ್ಮಿಕಾ ಮನೆಯವರ ಬಳಿಯೆ ಮನೆ ಕಟ್ಟಲು ಹಣ ಕೇಳಿದ್ದರಂತೆ. ಇನ್ನೂ ನಿಶ್ಚಿತಾರ್ಥ ಆಗಿದ್ದಷ್ಟೆ, ಆಗಲೇ ರಕ್ಷಿತ್ ಭಾವಿ ಪತ್ನಿಯ ಮನೆಯಲ್ಲಿ ಹಣ ಕೇಳಿರುವುದು ರಶ್ಮಿಕಾ ಮನೆಯವರಿಗೆ ಸರಿ ಅನಿಸಲಿಲ್ಲ. ಇದಕ್ಕೆ ರಶ್ಮಿಕಾ ತಾಯಿ ಸುತರಾಮ್ ಒಪ್ಪಲಿಲ್ಲವಂತೆ. ನಿನ್ನ ಮನೆಯನ್ನು ನೀನೆ ಕಟ್ಟಿಕೊ, ನಂತರ ಬೇಕಾದರೆ ರಶ್ಮಿಕಾ ಮದುವೆ ಮಾಡಿಕೋ ಎಂದು ಪಟ್ಟುಹಿಡಿದ್ದರಂತೆ.

 ದುಬಾರಿ ಮನೆ ಕಟ್ಟುವ ಪ್ಲಾನ್ ನಲ್ಲಿ ರಕ್ಷಿತ್

ದುಬಾರಿ ಮನೆ ಕಟ್ಟುವ ಪ್ಲಾನ್ ನಲ್ಲಿ ರಕ್ಷಿತ್

ರಕ್ಷಿತ್ ಕನಸಿನ ಮನೆಯ ಪ್ಲಾನ್ ಕೇಳಿದರೆ ಅಚ್ಚರಿ ಪಡುತ್ತೀರಿ. ಹೌದು, ಕೋಟಿ ಕೋಟಿ ವೆಚ್ಚದ ದುಬಾರಿ ಮನೆ ಕಟ್ಟಲು ರಕ್ಷಿತ್ ಪ್ಲಾನ್ ಮಾಡಿಕೊಂಡಿದ್ದರು. ಬೆಂಗಳೂರಿನ ಪ್ರತಿಷ್ಠಿತ ಸ್ಥಳದಲ್ಲಿ ಸುಮಾರು 60 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಮನೆ ಕಟ್ಟುವ ಯೋಜನೆ ಜಾರಿಯಲ್ಲಿದೆ ಎಂಬುದು ಅವರ ಆಪ್ತ ಮೂಲಗಳು ಹೇಳುವ ಸಂಗತಿ. ಈ ಕನಸಿನ ಮನೆಗೆ ರಕ್ಷಿತ್ ಮತ್ತು ರಶ್ಮಿಕಾನೇ ರಾಜ-ರಾಣಿಯಾಗಿದ್ದರು. ಆದರೆ ರಕ್ಷಿತ್ ಮನೆಯ ಕನಸನ್ನು ನನಸು ಮಾಡಿಕೊಳ್ಳಲು ಭಾವಿ ಪತ್ನಿ ಮನೆಯವರ ಸಹಾಯಕ್ಕೆ ಬರಲಿಲ್ಲ. ಹೇಗೂ ರಶ್ಮಿಕಾ ಅವರನ್ನು ಮದುವೆ ಆಗುತ್ತೀನಿ, ಅವರ ಮನೆಯವರೆ ಹಣದ ಸಹಾಯ ಮಾಡಲಿ ಎನ್ನುವುದು ರಕ್ಷಿತ್ ಲೆಕ್ಕಾಚಾರವಾಗಿತ್ತು. ಆದರೆ ಅದೇ ಲೆಕ್ಕಾಚಾರ ರಕ್ಷಿತ್ ಜೀವನದ ಲೆಕ್ಕಾಚಾರವನ್ನೇ ಬದಲಿಸಿತು ಎಂಬುದು ಸದ್ಯ ಗೊತ್ತಾಗಿರುವ ಸಂಗತಿ.

 ಮೂರು ನಾಲ್ಕು ತಿಂಗಳ ಬಳಿಕ ಸುದ್ದಿ ವೈರಲ್

ಮೂರು ನಾಲ್ಕು ತಿಂಗಳ ಬಳಿಕ ಸುದ್ದಿ ವೈರಲ್

ರಶ್ಮಿಕಾ ಮನೆಯಲ್ಲಿ ರಕ್ಷಿತ್ ಶೆಟ್ಟಿಯೆ ಅಳಿಯ ಎಂದು ಒಪ್ಪಿಕೊಂಡು, 2017 ಜುಲೈನಲ್ಲಿ ಇಬ್ಬರ ನಿಶ್ಚಿತಾರ್ಥ ಸಮಾರಂಭ ಕೂಡ ಅದ್ದೂರಿಯಾಗಿ ನೆರವೇರಿತ್ತು. ಆದರೆ ಕೆಲವೇ ಕೆಲವು ತಿಂಗಳಲ್ಲಿ ಇಬ್ಬರ ಬ್ರೇಕ್ ಅಪ್ ಸುದ್ದಿ ವೈರಲ್ ಆಯ್ತು. ಅಸಲಿಗೆ ಸುದ್ದಿ ಹೊರ ಬೀಳುವ ಮೂರು ನಾಲ್ಕು ತಿಂಗಳ ಮೊದಲೆ ರಶ್ಮಿಕಾ ಮನೆಯವರು ರಕ್ಷಿತ್ ಶೆಟ್ಟಿಯನ್ನು ದೂರ ತಳ್ಳಿಬಿಟ್ಟಿದ್ದರು ಎಂದು ಹೇಳಲಾಗುತ್ತಿದೆ. ರಶ್ಮಿಕಾ ತಾಯಿ ತನ್ನ ಮಗಳನ್ನು ರಕ್ಷಿತ್ ಗೆ ಕೊಡುವುದಿಲ್ಲ ಎಂದು ನಿರ್ಧರಿಸಿದ್ದರು. ಅಷ್ಟರಲ್ಲೆ ರಶ್ಮಿಕಾ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಚಿತ್ರರಂಗದಲ್ಲಿ ದೊಡ್ಡ ಭವಿಷ್ಯವಿದೆ ಎನ್ನುವುದು ರಶ್ಮಿಕಾ ಮನೆಯವರಿಗೆ ಗೊತ್ತಾಗಿ ಹೋಗಿತ್ತು. ನಂತರ ವಿಜಯ್ ದೇವರಕೊಂಡ ಜೊತೆ ಸಿನಿಮಾಗೆ ಸಹಿ ಮಾಡುತ್ತಾರೆ. ಇಬ್ಬರ ಬ್ರೇಕ್ ಅಪ್ ಸಮಯದಲ್ಲಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ನಡುವೆ ಏನೋ ನಡೀತಿದೆ ಎನ್ನುವ ಸುದ್ದಿ ಕಾಡ್ಚಿಚ್ಚಿನಂತೆ ಹಬ್ಬುತ್ತೆ. ಆ ನಂತರ ಲಿಪ್ ಲಾಕ್ ದೃಶ್ಯ, ಇಬ್ಬರ ಕ್ಲೋಸ್ ನೆಸ್ ಗೂ ಮತ್ತು ರಶ್ಮಿಕಾ-ರಕ್ಷಿತ್ ಬ್ರೇಕ್ ಅಪ್ ಗೂ ಲಿಂಕ್ ಆಗಿ ಬೇರೆಯದ್ದೆ ಸುದ್ದಿ ಹರಿದಾಡಲು ಶುರುವಾಗುತ್ತೆ.

 ಮನೆ ಕಟ್ಟಿ ಮದುವೆ ಆಗ್ತಾರಂತೆ ರಕ್ಷಿತ್

ಮನೆ ಕಟ್ಟಿ ಮದುವೆ ಆಗ್ತಾರಂತೆ ರಕ್ಷಿತ್

ರಕ್ಷಿತ್ ಶೆಟ್ಟಿ ಈಗನೂ ಸಹ ಮನೆ ಕಟ್ಟಿಯೆ ನಂತರ ಮದುವೆ ಆಗುವ ನಿರ್ಧಾರದಲ್ಲಿದ್ದಾರೆ. ಮನೆಕಟ್ಟಿದ ನಂತರ ಮನೆಯವರು ನೋಡಿದ ಹುಡುಗಿಯನ್ನು ಮದುವೆಯಾಗುತ್ತಾರಂತೆ. ಆದರೆ ರಕ್ಷಿತ್ ಭವ್ಯ ಬಂಗಲೆಯ ಕನಸು ಯಾವಾಗ ನನಸಾಗುತ್ತೊ ಗೊತ್ತಿಲ್ಲ. ಆದರೆ ಸದ್ಯ ಅವನೇ ಶ್ರೀಮನ್ನಾರಾಯಣ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಕನ್ನಡ ಮಾತ್ರವಲ್ಲದೆ ಐದು ಭಾಷೆಯಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. ರಕ್ಷಿತ್ ಹಾಗೂ ರಶ್ಮಿಕಾ ಇಬ್ಬರಿಗೂ ಚಿತ್ರರಂಗದಲ್ಲಿ ಭವಿಷ್ಯವಿದೆ. ಸಾರ್ವಜನಿಕವಾಗಿ ಒಟ್ಟಾದವರು ದೂರವಾದಾಗ ಸಹಜವಾಗಿಯೇ ಒಂದಷ್ಟು ಗಾಳಿಸುದ್ದಿಗಳು ಹರಿದಾಡುತ್ತವೆ. ಆದರೆ, ಇದೇ ಮೊದಲ ಬಾರಿಗೆ ಇಬ್ಬರ ನಡುವೆ ಮುನಿಸು ಹುಟ್ಟಲು ಅಸಲಿ ಕಾರಣ ಇಲ್ಲಿ ಬಯಲಾಗಿದೆ.

More from Filmibeat

English summary
Real reason for Kannada actor Rakshith Shetty and Rashmika Mandanna love break up.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X