For Quick Alerts
  ALLOW NOTIFICATIONS  
  For Daily Alerts

  ವಿವೇಕ್ ಪ್ರೀತಿ ಐಶ್ವರ್ಯಾ ತಿರಸ್ಕರಿಸಲು ನೈಜ ಕಾರಣವೇನು? ಸಲ್ಮಾನ್ ಖಾನ್ ಪಾತ್ರವೇನು?

  |

  ವಿಶ್ವಸುಂದರಿ ಐಶ್ವರ್ಯಾ ರೈ ಸಿನಿಮಾ ಬದುಕಿನದ್ದು ಒಂದು ತೂಕವಾದರೆ, ಅವರ ಪ್ರೇಮ ಪ್ರಕರಣಗಳದ್ದು ಇನ್ನೊಂದು ತೂಕ. ಸಲ್ಮಾನ್ ಖಾನ್ ಜತೆಗಿನ ವಿವಾದಾತ್ಮಕ ಸಂಬಂಧದಿಂದ ಹಿಡಿದು ಅಭಿಷೇಕ್ ಬಚ್ಚನ್ ಮದುವೆಯವರೆಗೂ ಐಶ್ವರ್ಯಾ ರೈ ಖಾಸಗಿ ಬದುಕು ಸದಾ ಸುದ್ದಿಯಲ್ಲಿತ್ತು. ಈಗಲೂ ಅವರ ಹಳೆಯ ಪ್ರೇಮ ಪುರಾಣಗಳು ಬಾಲಿವುಡ್‌ನಲ್ಲಿ ಚರ್ಚೆಯಲ್ಲಿರುತ್ತವೆ.

  ಐಶ್ವರ್ಯಾ-ಸಲ್ಮಾನ್ ಪ್ರೇಮ ಸಂಬಂಧದಂತೆಯೇ ಕುತೂಹಲ ಕೆರಳಿಸಿದ್ದು, ಐಶ್ವರ್ಯಾ-ವಿವೇಕ್ ಒಬೆರಾಯ್ ಪ್ರೇಮ ಸಲ್ಲಾಪ. ಇದು ಅಲ್ಪ ಕಾಲದ್ದಾಗಿದ್ದರೂ ಆ ಕಾಲದಲ್ಲಿ ಬಾಲಿವುಡ್‌ನಲ್ಲಿ ಭಾರಿ ಸದ್ದು ಮಾಡಿತ್ತು. ಐಶ್ವರ್ಯಾ ಮತ್ತು ವಿವೇಕ್ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ವಿವೇಕ್ ಜತೆಗಿನ ಸಂಬಂಧದ ಬಗ್ಗೆ ಐಶ್ವರ್ಯಾ ಎಂದಿಗೂ ಬಾಯಿಬಿಟ್ಟಿಲ್ಲ. ಜತೆಗೆ ಬ್ರೇಕ್‌ಅಪ್‌ಗೂ ಕಾರಣ ತಿಳಿಸಿಲ್ಲ.

  ವಿವಾಹಕ್ಕೆ 5 ದಿನ ಇದ್ದಾಗ ಸಲ್ಮಾನ್ ಖಾನ್ 'ಮದ್ವೆ ಬೇಡ' ಅಂದಿದ್ದೇಕೆ? ವಿವಾಹಕ್ಕೆ 5 ದಿನ ಇದ್ದಾಗ ಸಲ್ಮಾನ್ ಖಾನ್ 'ಮದ್ವೆ ಬೇಡ' ಅಂದಿದ್ದೇಕೆ?

  ಹಾಗಾದರೆ ವಿವೇಕ್ ಮತ್ತು ಐಶ್ವರ್ಯಾ ಸಂಬಂಧ ಹೇಗಿತ್ತು? ಇಬ್ಬರೂ ದೂರವಾಗಲು ಕಾರಣವೇನು? ಸಲ್ಮಾನ್ ಖಾನ್ ಕಾರಣದಿಂದಾಗಿ ಇಬ್ಬರೂ ಬೇರ್ಪಟ್ಟರೇ ಎಂಬ ಪ್ರಶ್ನೆಗಳಿವೆ.

  ಐಶ್ವರ್ಯಾ-ವಿವೇಕ್ ಸಂಬಂಧ ಹೇಗಿತ್ತು?

  ಐಶ್ವರ್ಯಾ-ವಿವೇಕ್ ಸಂಬಂಧ ಹೇಗಿತ್ತು?

  'ವಿವೇಕ್ ಒಬೆರಾಯ್ ಅವರನ್ನು ಐಶ್ವರ್ಯಾ ಸ್ನೇಹಿತ ಎಂದಷ್ಟೇ ಯಾವಾಗಲೂ ಪರಿಗಣಿಸಿದ್ದರು. ಅವರು ಅನೇಕ ಪ್ರಶಸ್ತಿ ಪ್ರಧಾನ ಸಮಾರಂಭಗಳಲ್ಲಿ ಮತ್ತು ಇತರೆ ಕಾರ್ಯಕ್ರಮಗಳಲ್ಲಿ ಜತೆಯಾಗಿ ಭಾಗವಹಿಸಿದ್ದರು. ಭಾರತ ಹಾಗೂ ವಿದೇಶದ ಅನೇಕ ಕಡೆ ಪ್ರಯಾಣಿಸಿದ್ದರು. ವಿವೇಕ್ ಅವರ ಸ್ನೇಹಿತ ಸಮೀರ್ ಕಾರ್ಣಿಕ್ ನಿರ್ದೇಶನದ 'ಕ್ಯೂಂ... ಹೋ ಗಯಾ ನಾ'ದಲ್ಲಿ ಒಟ್ಟಿಗೆ ನಟಿಸಿದ್ದರು ಕೂಡ' ಎಂದು ಐಶ್ವರ್ಯಾ ರೈ ಅವರ ಆಪ್ತರೊಬ್ಬರು ಹೇಳಿದ್ದಾರೆ.

  ವಾಸ್ತವ ಅವರಿಗೆ ಮಾತ್ರ ಗೊತ್ತು

  ವಾಸ್ತವ ಅವರಿಗೆ ಮಾತ್ರ ಗೊತ್ತು

  ವಿವೇಕ್ ಅವರಿಗೆ ನಿಮ್ಮನ್ನು ಮದುವೆಯಾಗುವುದಿಲ್ಲ ಎಂದು ಐಶ್ವರ್ಯಾ ಸೂಚ್ಯವಾಗಿ ತಿಳಿಸಿದ್ದರು. ಆ ಸಂಬಂಧವನ್ನು ಮುರಿದುಕೊಳ್ಳುತ್ತಿರುವುದರ ಬಗ್ಗೆ ವಿವೇಕ್ ಜತೆ ಮಾತನಾಡಿದ್ದರು. ಸಂಬಂಧ ಬ್ರೇಕ್‌ಅಪ್ ಮಾಡಿಕೊಳ್ಳಲು ನೈಜ ಕಾರಣ ಅವರಿಬ್ಬರಿಗೇ ಗೊತ್ತು. ಈ ಬಗ್ಗೆ ಐಶ್ವರ್ಯಾ ಮಾಧ್ಯಮಗಳಿಗೆ ಯಾವ ಸ್ಪಷ್ಟೀಕರಣವನ್ನೂ ನೀಡಿಲ್ಲ.

  ಸಲ್ಮಾನ್ ಖಾನ್ ಕಾರಣರೇ?

  ಸಲ್ಮಾನ್ ಖಾನ್ ಕಾರಣರೇ?

  'ವಿವೇಕ್-ಐಶ್ವರ್ಯಾ ಬೇರೆ ಬೇರೆಯಾಗಲು ಕಾರಣ ಏನೆಂದು ನನಗೆ ಗೊತ್ತು. ಆದರೆ ಅದು ಅವರಿಬ್ಬರ ಖಾಸಗಿ ವಿಷಯವಾಗಿರುವುದರಿಂದ ಅದರ ಬಗ್ಗೆ ಹೇಳಿಕೆ ನೀಡುವುದಿಲ್ಲ. ವಿವೇಕ್ ಅವರನ್ನು ಸ್ನೇಹಿತನನ್ನಾಗಿ ಇಷ್ಟಪಡುತ್ತಾರೆ. ಆತನ ಬಗ್ಗೆ ನಕಾರಾತ್ಮಕವಾದ ಯಾವ ವಿಚಾರವನ್ನೂ ಆಕೆ ಹೇಳಲು ಬಯಸುವುದಿಲ್ಲ. ಆದರೂ ವಿವೇಕ್ ಮಾತ್ರ ಬಹಳ ಕಾಲದವರೆಗೆ ಆ ಸಂಬಂಧದ ಬಗ್ಗೆ ಭ್ರಮೆಯಲ್ಲಿಯೇ ಇದ್ದರು. ಇದು ಐಶ್ವರ್ಯಾ ರೈ ಅವರ ತಪ್ಪು ಅಲ್ಲ ತಾನೆ? ಎಂದು ಅವರ ಆಪ್ತರೊಬ್ಬರು ತಿಳಿಸಿದ್ದಾರೆ.

  ವಿವೇಕ್ ಒಬೆರಾಯ್ ಗೆ ಜೀವ ಬೆದರಿಕೆ : ಪೊಲೀಸ್ ರಕ್ಷಣೆಯಲ್ಲಿ ನಟವಿವೇಕ್ ಒಬೆರಾಯ್ ಗೆ ಜೀವ ಬೆದರಿಕೆ : ಪೊಲೀಸ್ ರಕ್ಷಣೆಯಲ್ಲಿ ನಟ

  ಕನ್ನಡ ಚಿತ್ರರಂಗಕ್ಕೆ ಬಹಿರಂಗ ಪತ್ರ ಬರೆದ ಮಾಲಾಶ್ರೀ | Filmibeat Kannada
  ವಿವೇಕ್ ಬಗ್ಗೆ ಐಶ್ ಮೌನ

  ವಿವೇಕ್ ಬಗ್ಗೆ ಐಶ್ ಮೌನ

  1994ರಲ್ಲಿ ಸಲ್ಮಾನ್ ಖಾನ್ ಜತೆಗಿನ ಬ್ರೇಕ್‌ಅಪ್ ಬಳಿಕ ಐಶ್ವರ್ಯಾ, ವಿವೇಕ್ ತೆಕ್ಕೆಗೆ ಬಿದ್ದಿದ್ದರು. ಸಲ್ಮಾನ್ ಖಾನ್ ಜತೆಗಿನ ಸಂಬಂಧದ ಬಗ್ಗೆ ಐಶ್ವರ್ಯಾ ಹೆಚ್ಚು ಮಾತಾಡಿದ್ದರೂ, ವಿವೇಕ್ ಕುರಿತಾಗಿ ಮೌನ ವಹಿಸಿದ್ದರು. ಆದರೆ ವಿವೇಕ್ ಸುಮ್ಮನಿರಲಿಲ್ಲ. ಆದರೆ ಬ್ರೇಕ್‌ಅಪ್ ನಂತರ ಸಲ್ಮಾನ್, ಐಶ್ವರ್ಯಾ ಬಗ್ಗೆ ತೀವ್ರ ಕೋಪಗೊಂಡಿದ್ದರು ಎನ್ನಲಾಗಿದೆ. ಇವರಿಬ್ಬರ ಕದನದ ನಡುವೆ ವಿವೇಕ್ ಸಂಕಷ್ಟ ಅನುಭವಿಸಿದ್ದರು. ಅತ್ತ ನಟರಾಗಿ ವಿವೇಕ್ ದೊಡ್ಡ ಯಶಸ್ಸು ಕಾಣಲಿಲ್ಲ. ಐಶ್ವರ್ಯಾ ಅವರಿಂದ ದೂರವಾಗಲು ಇದೂ ಕಾರಣ ಎನ್ನಲಾಗಿದೆ. ವಿವೇಕ್ ಪರಿಚಯಕ್ಕೂ ಮುನ್ನವೇ ಐಶ್ವರ್ಯಾಗೆ ಬಚ್ಚನ್ ಕುಟುಂಬದೊಂದಿಗೆ ಒಡನಾಟ ಇತ್ತು. ಆಗ ಅಭಿಷೇಕ್ ಬಚ್ಚನ್ ಜತೆ ಡೇಟಿಂಗ್ ನಡೆಸದೆ ಇದ್ದರೂ ಐಶ್ವರ್ಯಾ ಸುರಕ್ಷಿತ ಮಾರ್ಗ ಆಯ್ದುಕೊಂಡರು ಎಂದು ಹೇಳಲಾಗಿದೆ.

  ಐಶ್ವರ್ಯ ರೈ ಕೆಣಕಿ ತಪ್ಪು ಮಾಡಿದ್ದ ವಿವೇಕ್ ಒಬೆರಾಯ್ ಕ್ಷಮೆಯಾಚನೆಐಶ್ವರ್ಯ ರೈ ಕೆಣಕಿ ತಪ್ಪು ಮಾಡಿದ್ದ ವಿವೇಕ್ ಒಬೆರಾಯ್ ಕ್ಷಮೆಯಾಚನೆ

  English summary
  Why Aishwarya Rai didn't accept the relationship with Vivek Oberoi? The reason wasn't Salman Khan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X