For Quick Alerts
  ALLOW NOTIFICATIONS  
  For Daily Alerts

  'ಹಾಲುಂಡ ತವರು' ನಟಿ ಸಿತಾರಾ ಮದುವೆಯಾಗದೆ 'ಒಬ್ಬಂಟಿಯಾಗಿ ಉಳಿದಿದ್ದೇಕೆ?

  |

  ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಸಿತಾರಾ ಸದ್ಯ ಪೋಷಕ ಪಾತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. 90 ದಶಕದಲ್ಲಿ ಟಾಪ್ ನಟಿಯಾಗಿ ಮೆರೆದು ಅಭಿನಯದ ಮೂಲಕ ಸಂಚಲನ ಸೃಷ್ಟಿಸಿದ್ದ ಬಹುಭಾಷ ನಟಿ. ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಸಿತಾರಾ, ಕನ್ನಡದಲ್ಲಿ ಹೆಚ್ಚಾಗಿ ಅಳುಮುಂಜಿ ಪಾತ್ರಗಳ ಮೂಲಕ ಗಮನ ಸೆಳೆದಿದ್ದರು.

  ಮುದ್ದು ಮುಖದ ಸುಂದರ ನಟಿ ಸಿತಾರಾ 'ಹಾಲುಂಡ ತವರು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಮೊದಲ ಸಿನಿಮಾನೆ ಸೂಪರ್ ಹಿಟ್ ಆಗುತ್ತಿದ್ದಂತೆ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 'ಹಾಲುಂಡ ತವರು' ಚಿತ್ರದಲ್ಲಿ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಜೊತೆ ಕಾಣಿಸಿಕೊಂಡಿದ್ದ ಸಿತಾರಾ ಅದ್ಭುತ ಅಭಿನಯಕ್ಕೆ ಕನ್ನಡಾಭಿಮಾನಿಗಳು ಫಿದಾ ಆಗಿದ್ದರು.

  ಈ ವಿಷಯದಲ್ಲಿ ಕನ್ನಡ ಚಿತ್ರರಂಗ ಬಹಳ 'ವೀಕ್' ಇದೆಈ ವಿಷಯದಲ್ಲಿ ಕನ್ನಡ ಚಿತ್ರರಂಗ ಬಹಳ 'ವೀಕ್' ಇದೆ

  ಲೀಟರ್ ಗಟ್ಟಲೆ ಕಣ್ಣೀರು ಸುರಿಸಿ ಪ್ರೇಕ್ಷಕರ ಕಣ್ಣನ್ನು ಒದ್ದೆ ಮಾಡಿದ್ದ ನಟಿ, ಸಾಕಷ್ಟು ಸಿನಿಮಾಗಳಲ್ಲಿ ಮಿಂಚಿದ್ದಾರೆ. 90ರ ದಶಕದಲ್ಲಿ ಸೌತ್ ಸಿನಿ ಇಂಡಸ್ಟ್ರಿಯ ಬಹುಬೇಡಿಕೆ ನಟಿಯಾಗಿದ್ದ ಸಿತಾರಾ ಇನ್ನು ಮದುವೆಯಾಗದೆ ಸಿಂಗಲ್ ಆಗಿಯೆ ಉಳಿದಿದ್ದಾರೆ ಎನ್ನುವುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಅಷ್ಟಕ್ಕು ಸಿತಾರಾ ಸಿಂಗಲ್ ಆಗಿಯೇ ಇರಲು ಕಾರಣವೇನು? ಮುಂದೆ ಓದಿ..

  ಸಿತಾರಾಗೆ ಈಗ 46 ವರ್ಷ

  ಸಿತಾರಾಗೆ ಈಗ 46 ವರ್ಷ

  46 ವರ್ಷದ ನಟಿ ಸಿತಾರಾ ಇನ್ನು ಮದುವೆಯಾಗದೆ ಒಂಟಿ ಜೀವನ ನಡೆಸುತ್ತಿದ್ದಾರೆ. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಎಲ್ಲಾ ಭಾಷೆಯಗಳಿಲ್ಲೂ ಅಭಿನಯಿಸಿರುವ ಸಿತಾರಾ, 2000ನೇ ಇಸವಿಯಲ್ಲಿ ಬೇಡಿಕೆ ಇರುವಾಗಲೆ ಚಿತ್ರರಂಗದಿಂದ ದೂರ ಸರಿಯುತ್ತಾರೆ. ಸಿತಾರಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ, ಕುಟುಂಬದ ಜೊತೆ ಆರಾಮಾಗಿ ಇದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆದರೆ ಸಿತಾರಾ ಒಬ್ಬಂಟಿಯಾಗಿಯೆ ಇದ್ದಾರೆ.

  10 ತಿಂಗಳ ಚಿತ್ರರಂಗ: ಬಿಡುಗಡೆಯಾಗಿದ್ದು 163 ಸಿನಿಮಾ, 100 ಡೇಸ್ ಆಗಿದ್ದು ಎರಡೇ ಸಿನಿಮಾ10 ತಿಂಗಳ ಚಿತ್ರರಂಗ: ಬಿಡುಗಡೆಯಾಗಿದ್ದು 163 ಸಿನಿಮಾ, 100 ಡೇಸ್ ಆಗಿದ್ದು ಎರಡೇ ಸಿನಿಮಾ

  ಚಿತ್ರರಂಗದಿಂದ ಬ್ರೇಕ್ ಪಡೆದಿದ್ದ ನಟಿ

  ಚಿತ್ರರಂಗದಿಂದ ಬ್ರೇಕ್ ಪಡೆದಿದ್ದ ನಟಿ

  ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಅಭಿನಯಿಸುತ್ತ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದ್ದ ನಟಿ ದಿಢೀರನೆ ಮಾಯವಾಗುತ್ತಾರೆ. 2000ನೇ ಇಸವಿಯ ನಂತರ ಸಿತಾರಾ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಳ್ಳುತ್ತಾರೆ. ತೆಲುಗು ಬಿಟ್ಟರೆ ಯಾವ ಭಾಷೆಯಲ್ಲೂ ಕಾಣಿಸಿಕೊಳ್ಳುವುದಿಲ್ಲ. ಅದೆ ಸಮಯದಲ್ಲಿ ಸಿತಾರಾ ತಂದೆಯನ್ನು ಕಳೆದುಕೊಳ್ಳುತ್ತಾರೆ. ಹಾಗಾಗಿ ಸುಮಾರು ಎರಡು ಮೂರು ವರ್ಷಗಳ ಕಾಲ ಸಿನಿಮಾದಿಂದ ಸಂಪೂರ್ಣ ದೂರ ಉಳಿಯುತ್ತಾರೆ. ನಂತರ ಮತ್ತೆ ವಾಪಸ್ ಆಗುವ ಸಿತಾರಾ ತೆರೆಮೇಲೆ ಮಿಂಚಲು ಪ್ರಾರಂಭಿಸುತ್ತಾರೆ.

  ಚರ್ಚೆಗೆ ಕಾರಣವಾಗಿತ್ತು ಮುರುಳಿ ಜೊತೆಗಿನ ಸಂಬಂಧ

  ಚರ್ಚೆಗೆ ಕಾರಣವಾಗಿತ್ತು ಮುರುಳಿ ಜೊತೆಗಿನ ಸಂಬಂಧ

  ಈ ವಯಸ್ಸಿನಲ್ಲಿಯೂ ಚಾರ್ಮ್ ಕಳೆದುಕೊಳ್ಳದ ಸಿತಾರಾ ಮದುವೆಯಾಗದಿಲು ಕಾರಣ ನಟ ಮತ್ತು ನಿರ್ಮಾಪಕ ಮುರುಳಿ ಎನ್ನುವ ಮಾತುಗಳು ಹರಿದಾಡುತ್ತಿವೆ. ಸಿತಾರಾ ಚಿತ್ರರಂಗದ ಉತ್ತುಂಗದಲ್ಲಿರುವಾಗಲೆ ನಟ ಮುರುಳಿ ಜೊತೆ ಆತ್ಮೀಯರಾಗಿದ್ದರು. ಇಬ್ಬರ ನಡುವಿನ ಆತ್ಮೀಯತೆ ನೋಡಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದವು. ದುರದೃಷ್ಟ ಅಂದರೆ ಮುರುಳಿ ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ. 2010ರಲ್ಲಿ ಮುರುಳಿ ಹೃದಯಾಘಾತದಿಂದ ಮೃತಪಡುತ್ತಾರೆ. ಮುರುಳಿಯ ಸಾವು ಸಿತಾರಾ ಅವನ್ನು ಖಿನ್ನತೆಗೆ ನೂಕಿತ್ತು ಎಂದು ಹೇಳಲಾಗುತ್ತೆ. ಹಾಗಾಗಿಯೆ ಸಿತಾರಾ ಮತ್ತೆ ಚಿತ್ರರಂಗದಿಂದ ಕೊಂಚ ಅಂತರ ಕಾಯ್ದುಕೊಳ್ಳುತ್ತಾರೆ. ಅರಗಿಸಿಕೊಳ್ಳಲಾದ ಗೆಳೆಯನ ಸಾವು ಚಿತ್ರರಂಗದಿಂದ ಮಾತ್ರವಲ್ಲದೆ, ಮದುವೆಯಿಂದನೂ ದೂರ ಇರುವಂತೆ ಮಾಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಆ ನಂತರ ಸಿತಾರಾ ಪೋಷಕಪಾತ್ರದ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರುತ್ತಾರೆ.

  ತಂದೆಯನ್ನು ಕಳೆದುಕೊಂಡ ಸಿತಾರಾ

  ತಂದೆಯನ್ನು ಕಳೆದುಕೊಂಡ ಸಿತಾರಾ

  ನಟಿ ಸಿತಾರಾ ನಟ ಮುರಳಿಯ ಸಾವಿನ ಶಾಕ್ ನಿಂದ ಹೊರ ಬರುವುದರಲ್ಲೆ ತಂದೆಯನ್ನು ಕಳೆದುಕೊಳ್ಳುತ್ತಾರೆ. ಸಿತಾರಾ ಪಾಲಿಗೆ ಅವರ ತಂದೆಯೆ ಎಲ್ಲದು ಆಗಿದ್ದರು. ಸ್ನೇಹಿತನಂತಿದ್ದ ತಂದೆಯನ್ನು ಕಳೆದುಕೊಂಡ ನಟಿ ಮತ್ತಷ್ಟು ಕುಗ್ಗಿಹೋಗುತ್ತಾರೆ. ಆಧಾರಸ್ತಂಭವಾಗಿದ್ದ ತಂದೆಯ ಸಾವು ಮದುವೆ ಬಗ್ಗೆ ಯೋಚಿಸುವುದಕ್ಕು ಸಾಧ್ಯವಾಗಿಲ್ಲ.

  2018 ರೌಂಡಪ್: ಗಾಂಧಿನಗರದಲ್ಲಿ ಈ ವರ್ಷ ಕೋಲಾಹಲ ಸೃಷ್ಟಿಸಿದ ವಿವಾದಗಳಿವು.!2018 ರೌಂಡಪ್: ಗಾಂಧಿನಗರದಲ್ಲಿ ಈ ವರ್ಷ ಕೋಲಾಹಲ ಸೃಷ್ಟಿಸಿದ ವಿವಾದಗಳಿವು.!

  ಮದುವೆ ಬಗ್ಗೆ ಸಿತಾರಾ ಹೇಳಿದ್ದೇನು?

  ಮದುವೆ ಬಗ್ಗೆ ಸಿತಾರಾ ಹೇಳಿದ್ದೇನು?

  ಸಿತಾರಾ ಮದುವೆ ಆಗಿದ್ದಾರೆ ಎಂದೆ ಅನೇಕರು ನಂಬಿದ್ದರು. ಆದರೆ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಸಿತಾರಾ ಇನ್ನು ಮದುವೆ ಆಗಿಲ್ಲ ಎನ್ನುವ ವಿಚಾರವನ್ನು ಸ್ಪಷ್ಟಪಡಿಸುತ್ತಾರೆ. "ನನಗೆ ಇನ್ನು ಮದುವೆ ಆಗಿಲ್ಲ. ಮದುವೆ ಆಗುತ್ತೀನೋ ಇಲ್ಲವೊ ನನಗೆ ಗೊತ್ತಿಲ್ಲ. ಮದುವೆ ಆದರೆ ಖಂಡಿತ ಸೀಕ್ರೆಟ್ ಆಗಿ ಇರುವುದಿಲ್ಲ" ಎಂದು ಹೇಳಿದ್ದಾರೆ. ಯಾಕಿನ್ನು ಮದುವೆಯಾಗಿಲ್ಲ ಎಂದರೆ "ಆಗಿಲ್ಲ ಅಷ್ಟೆ" ಎಂದು ಹೇಳುತ್ತಾರೆ. ಮುಂದೆ ಮದುವೆ ಆಗ್ತಾರಾ ಎನ್ನುವುದು ಗೊತ್ತಿಲ್ಲ. ಸದ್ಯ ಚಿತ್ರರಂಗದಲ್ಲಿ ಮತ್ತೆ ಬ್ಯುಸಿಯಾಗಿದ್ದಾರೆ.

  Read more about: marriage ಮದುವೆ
  English summary
  South Indian Famous actress Sithara still single she is not married.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X