twitter
    For Quick Alerts
    ALLOW NOTIFICATIONS  
    For Daily Alerts

    ಅಂಬರೀಶ್ ಪದೇ-ಪದೇ ಭೇಟಿ ನೀಡುತ್ತಿದ್ದ ಹೋಟೆಲ್‌ಗಳು

    |

    ಅಂಬರೀಶ್ ಎಂದರೆ ಅವರ ಜಾಲಿ ಜೀವನವೇ ಕಣ್ಣಮುಂದೆ ಬರುತ್ತದೆ. ಯಾವಾಗಲೂ ಗೆಳೆಯರ ಗುಂಪಿನಲ್ಲಿದ್ದು ಎಲ್ಲರೊಂದಿಗೆ ನಗುತ್ತಾ-ಹರಟುತ್ತಾ ಸಂತೋಶದಿಂದ ಕಾಲಕಳೆದವರು ಅಂಬರೀಶ್.

    Recommended Video

    ಅಂಬಿ ಹುಟ್ಟು ಹಬ್ಬದ ಆಚರಣೆಗೆ ಅಂಬಿ ಸ್ಮಾರಕದ ಬಳಿ ಯಾರೆಲ್ಲಾ ಬಂದಿದ್ದಾರೆ ನೋಡಿ| Ambareesh

    ಅಂಬರೀಶ್ ಎಲ್ಲಿದ್ದರಲ್ಲಿ ಗೆಳೆಯರ ದಂಡು ನೆರೆದೇ ಇರುತ್ತಿತ್ತು. ಅಭಿಮಾನಿಗಳು ಗೆಳೆಯರು ಅವರಿಗಾಗಿ ದೂರ-ದೂರದಿಂದ ಊಟ, ತಿಂಡಿ, ಅದರಲ್ಲೂ ಮಾಂಸಾಹಾರದ ತಿನಿಸು ಜೊತೆಗೆ ಗುಂಡನ್ನೂ ತಂದುಕೊಡುತ್ತಿದ್ದರು.

    ಅಂಬರೀಶ್ ಅತ್ಯಾಪ್ತ ಮಿತ್ರ ರಾಜೇಂದ್ರ ಸಿಂಗ್ ಬಾಬು ತೆರೆದ ನೆನಪಿನ ಪುಸ್ತಕಅಂಬರೀಶ್ ಅತ್ಯಾಪ್ತ ಮಿತ್ರ ರಾಜೇಂದ್ರ ಸಿಂಗ್ ಬಾಬು ತೆರೆದ ನೆನಪಿನ ಪುಸ್ತಕ

    ಅಂಬರೀಶ್ ಅವರೂ ಸಹ ಸ್ವತಃ ಭೋಜನ ಪ್ರಿಯರು. ಮಾಂಸದೂಟ ಅವರಿಗೆ ಅಚ್ಚು-ಮೆಚ್ಚು. ಅದರಲ್ಲಿಯೂ ಗೆಳೆಯರು ಮತ್ತು ಗುಂಡು ಜೊತೆಗಿದ್ದುಬಿಟ್ಟರೆ ಅಂಬಿ ಲಯಕ್ಕೆ ಬಂದು ಬಿಡುತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಅವರ ಆತ್ಮೀಯರು.

    ಅಂಬರೀಶ್‌ ಅವರಿಗೆ ಇಷ್ಟವಾದ ಕೆಲವು ಹೋಟೆಲ್‌ಗಳಿದ್ದವು

    ಅಂಬರೀಶ್‌ ಅವರಿಗೆ ಇಷ್ಟವಾದ ಕೆಲವು ಹೋಟೆಲ್‌ಗಳಿದ್ದವು

    ಅಂಬರೀಶ್ ಅವರಿಗೆ ಇಷ್ಟವಾದ ಕೆಲವು ಹೋಟೆಲ್‌ಗಳಿದ್ದವು. ಕೆಲವು ತಿಂಡಿಗಳೂ ಇದ್ದವು. ಕೆಲವು ಹೋಟೆಲ್‌ಗಳಲ್ಲೇ ಅವರು ಯಾವಾಗಲೂ ವಾಸ್ತವ್ಯ ಹೂಡುತ್ತಿದ್ದರು. ಹೀಗೆ ಅಂಬರೀಶ್‌ ಅವರಿಗೆ ಜನರ ಜೊತೆಗೆ ಹೋಟೆಲ್, ಊಟ-ತಿಂಡಿ ಬಗೆಯೂ ಭಾವನಾತ್ಮಕ ಸಂಬಂಧವೇ ಇತ್ತೆನ್ನಬಹುದು.

    ಹನುಮಂತು ಹೋಟೆಲ್ ಬಿರಿಯಾನಿ ಅಚ್ಚುಮೆಚ್ಚು

    ಹನುಮಂತು ಹೋಟೆಲ್ ಬಿರಿಯಾನಿ ಅಚ್ಚುಮೆಚ್ಚು

    ಮಂಡ್ಯದ ಗಂಡು ಅಂಬರೀಶ್‌ ಗೆ ಮೈಸೂರಿನ ಹನುಮಂತು ಹೋಟೆಲ್ ಬಿರಿಯಾನಿ ಎಂದರೆ ಪಂಚ ಪ್ರಾಣ. ಸಿನಿಮಾ ನಟನೆ ಆರಂಭವಾಗುವುದಕ್ಕೂ ಮುಂಚಿನಿಂದಲೂ ಅವರು ಹನುಮಂತು ಹೋಟೆಲ್‌ನ ಖಾಯಂ ಕಸ್ಟಮರ್‌. ಹನುಮಂತು ಹೋಟೆಲ್‌ನ ಬಿರಿಯಾನಿ, ಚಿಕನ್ ಚಿಲ್ಲಿ ಪಂಚಪ್ರಾಣ.

    ಹ್ಯಾಪಿ ಬರ್ಥಡೇ ರೆಬೆಲ್ ಸ್ಟಾರ್: ಚಿತ್ರರಂಗಕ್ಕೆ ಕಾಡುತ್ತಿದೆ ಅಂಬರೀಷ್ ಅನುಪಸ್ಥಿತಿಹ್ಯಾಪಿ ಬರ್ಥಡೇ ರೆಬೆಲ್ ಸ್ಟಾರ್: ಚಿತ್ರರಂಗಕ್ಕೆ ಕಾಡುತ್ತಿದೆ ಅಂಬರೀಷ್ ಅನುಪಸ್ಥಿತಿ

    ಮೈಲಾರಿ ಹೋಟೆಲ್ ದೋಸೆ-ಗಟ್ಟಿ ಚಟ್ನಿ

    ಮೈಲಾರಿ ಹೋಟೆಲ್ ದೋಸೆ-ಗಟ್ಟಿ ಚಟ್ನಿ

    ಅಂಬರೀಶ್ ಅವರಿಗೆ ಮೈಸೂರಿನ ಮೈಲಾರಿ ಹೋಟೆಲ್‌ನ ದೋಸೆಯೂ ಬಹಳ ಇಷ್ಟ. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೇಳುವಂತೆ. ವಿಷ್ಣುವರ್ಧನ್, ಅಂಬರೀಶ್ ಹಾಗೂ ರಾಜೇಂದ್ರ ಸಿಂಗ್ ಬಾಬು ಮೈಸೂರಿನಲ್ಲಿದ್ದಾಗ ಪ್ರತಿದಿನ ಜಾವಾ ಬೈಕ್‌ನಲ್ಲಿ ಹೋಗಿ ಹನುಮಂತು ಹೋಟೆಲ್ ಬಿರಿಯಾನಿ, ಮೈಲಾರಿ ಹೋಟೆಲ್ ದೋಸೆ ತಿನ್ನುತ್ತಿದ್ದರಂತೆ. ಅಂಬರೀಶ್, ವಿಷ್ಣುವರ್ಧನ್ ಅನ್ನು ಸುತ್ತಾಡಿಸುತ್ತೀಯಾ ಎಂದು ಬಾಬು ಅವರಿಗೆ ಬೈದಿದ್ದರಂತೆ ನಿರ್ದೇಶಕ ಪುಟ್ಟಣ್ಣ ಕಣಗಾಲ್.

    ಗೆಳೆಯರನ್ನೆಲ್ಲಾ ಕರೆದುಕೊಂಡು ಹೋಗುತ್ತಿದ್ದರಂತೆ

    ಗೆಳೆಯರನ್ನೆಲ್ಲಾ ಕರೆದುಕೊಂಡು ಹೋಗುತ್ತಿದ್ದರಂತೆ

    ಬೆಂಗಳೂರಿನ ಶಿವಾಜಿ ಮಿಲ್ಟ್ರಿ ಹೋಟೆಲ್, ರಂಗಣ್ಣ ಮಿಲ್ಟ್ರಿ ಹೋಟೆಲ್, ಹೋಟೆಲ್ ನೃಪಗುಂತಾ, ವಿದ್ಯಾರ್ಥಿ ಭವನ ಸಹ ಇಷ್ಟದ ಹೋಟೆಲ್‌ಗಳಾಗಿದ್ದವು. ಅಂಬರೀಶ್‌ ಗೆ ಯಾವುದಾದರೂ ಹೋಟೆಲ್‌ನ ಊಟ-ತಿಂಡಿ ಇಷ್ಟವಾದರೆ ಗೆಳೆಯರನ್ನೆಲ್ಲಾ ಅಲ್ಲಿಗೆ ಕರೆದುಕೊಂಡು ಹೋಗಿ ಊಟ ಕೊಡಿಸುವ ಅಭ್ಯಾಸವಿತ್ತು.

    ವುಡ್‌ಲ್ಯಾಂಡ್ಸ್‌ ಹೋಟೆಲ್‌ನಲ್ಲಿ 17 ವರ್ಷ ವಾಸ

    ವುಡ್‌ಲ್ಯಾಂಡ್ಸ್‌ ಹೋಟೆಲ್‌ನಲ್ಲಿ 17 ವರ್ಷ ವಾಸ

    ಇನ್ನೊಂದು ಆಸಕ್ತಿಕರ ವಿಷಯವೆಂದರೆ ಬೆಂಗಳೂರಿನ ರಿಚ್‌ಮಂಡ್ ವೃತ್ತದ ಬಳಿಯ ವುಡ್‌ಲ್ಯಾಂಡ್ಸ್‌ ಹೋಟೆಲ್‌ನಲ್ಲಿ ಸುಮಾರು 17 ವರ್ಷ ಇದ್ದರು ಅಂಬರೀಶ್. ಹೊಸ ಮನೆ ನಿರ್ಮಿಸುವವರೆಗೆ ಅವರು ಇದ್ದದ್ದು ವುಡ್‌ಲ್ಯಾಂಡ್ಸ್‌ನ 412 ನೇ ಸಂಖ್ಯೆಯ ರೂಂ ನಲ್ಲಿಯೇ.

    ಮೈಸೂರಿನ ಸಂದೇಶ್‌ ಪ್ರಿನ್ಸ್‌ನಲ್ಲಿ ವಾಸ್ತವ್ಯ

    ಮೈಸೂರಿನ ಸಂದೇಶ್‌ ಪ್ರಿನ್ಸ್‌ನಲ್ಲಿ ವಾಸ್ತವ್ಯ

    ಮೈಸೂರಿಗೆ ಹೋದಾಗೆಲ್ಲಾ ಅಲ್ಲಿ ಸಂದೇಶ್ ಪ್ರಿನ್ಸ್‌ ಹೋಟೆಲ್‌ನ ರೂಂ ನಂಬರ್ 1302ನಲ್ಲಿಯೇ ಉಳಿದುಕೊಳ್ಳುತ್ತಿದ್ದರು. ಅಲ್ಲಿಗೆ ಗೆಳಯರನ್ನು ಕರೆಸಿಕೊಂಡು ಹರಟೆ, ಗುಂಡು ಪಾರ್ಟಿಗಳನ್ನು ಮಾಡುತ್ತಿದ್ದರಂತೆ. ಸಂದೇಶ್‌ ಪ್ರಿನ್ಸ್‌ ಗೆ ಅಂಬರೀಶ್ ಬಂದರೆಂದರೆ, ಹನುಮಂತು ಹೋಟೆಲ್‌ನಿಂದ ಬಿರಿಯಾನಿ, ಮೈಲಾರಿಯಿಂದ ದೋಸೆ ಪಾರ್ಸಲ್‌ ಬಂದು ಬಿಡುತ್ತಿತ್ತಂತೆ.

    ರೆಬೆಲ್ ಸ್ಟಾರ್ ಅಂಬರೀಶ್ ಬಗ್ಗೆ ನಿಮಗೆಷ್ಟು ಗೊತ್ತು?: ಈ 10 ಪ್ರಶ್ನೆಗಳಿಗೆ ಉತ್ತರಿಸಿರೆಬೆಲ್ ಸ್ಟಾರ್ ಅಂಬರೀಶ್ ಬಗ್ಗೆ ನಿಮಗೆಷ್ಟು ಗೊತ್ತು?: ಈ 10 ಪ್ರಶ್ನೆಗಳಿಗೆ ಉತ್ತರಿಸಿ

    English summary
    Actor Ambareesh favorite hotels and food list. He likes Hanumanthu hotel Biriyani and Mylari hotel Dose.
    Monday, June 1, 2020, 17:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X