ದರ್ಶನ್ ಹಾಗೂ ಸುದೀಪ್ ಜೊತೆಗಿನ ಅಪರೂಪದ ಫೋಟೊಗಳನ್ನು ಹಂಚಿಕೊಂಡ ರೇಖಾ

ನಟ ದರ್ಶನ್ ಹಾಗೂ ಕಿಚ್ಚ ಸುದೀಪ್ ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ಚಿತ್ರರಂಗಕ್ಕೆ ಬಂದರು. 'ಸ್ಪರ್ಶ' ಚಿತ್ರದ ಮೂಲಕ ಸುದೀಪ್ ಹೀರೋ ಆಗಿ ಗೆದ್ದರೆ 'ಮೆಜೆಸ್ಟಿಕ್' ದಾಸ ಆಗಿ ದರ್ಶನ್ ಅಬ್ಬರಿಸಿದರು. ಇವತ್ತಿಗೂ ಇಬ್ಬರೂ ಕನ್ನಡ ಚಿತ್ರರಂಗದ ಸ್ಟಾರ್ ನಟರಾಗಿ ಮೆರೆಯುತ್ತಿದ್ದಾರೆ.

ವಿಶೇಷ ಅಂದ್ರೆ 'ಸ್ಪರ್ಶ' ಹಾಗೂ 'ಮೆಜೆಸ್ಟಿಕ್' ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದು ರೇಖಾ. ಸುದೀಪ್ ಜೋಡಿಯಾಗಿ 'ಸ್ಪರ್ಶ' ಚಿತ್ರದಲ್ಲಿ ಮಿಂಚಿದ ರೇಖಾ ಮುಂದೆ ಸ್ಪರ್ಶ ರೇಖಾ ಅಂತ್ಲೇ ಹೆಸರಾದರು. ಬಳಿಕ ಕೂಡ ಆಕೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರು. ಆದರೆ ಆ ಎರಡು ಚಿತ್ರಗಳ ಪಾತ್ರಗಳಿಂದಲೇ ಪ್ರೇಕ್ಷಕರು ಇಂದಿಗೂ ಗುರ್ತಿಸುತ್ತಿದ್ದಾರೆ.

 Rekha shares an unseen pic from the sets of Sparsha and mejestic

ಶಿವರಾಜ್‌ಕುಮಾರ್ ಹಾಗೂ ರಮ್ಯಾ ಕೃಷ್ಣ ನಟನೆಯ 'ಯಾರೇ ನೀ ಅಭಿಮಾನಿ' ಚಿತ್ರದಲ್ಲಿ ಮೊದಲಿಗೆ ರೇಖಾ ನಟಿಸಿದ್ದರು. ಅದೇ ವರ್ಷವೇ 'ಸ್ಪರ್ಶ' ಸಿನಿಮಾ ಬಿಡುಗಡೆಯಾಗಿತ್ತು. ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ಚಿತ್ರದಲ್ಲಿ ಸುಮಾ ಎನ್ನುವ ಪಾತ್ರದಲ್ಲಿ ಮಿಂಚಿದ್ದರು. ಇನ್ನು 'ಮೆಜೆಸ್ಟಿಕ್' ಚಿತ್ರದಲ್ಲಿ ಕಿರಣ್ ಆಗಿ ದಾಸನಿಗೆ ಜೊತೆಯಾಗಿದ್ದರು.

ದರ್ಶನ್ ಹಾಗೂ ಸುದೀಪ್ ಒಂದ್ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದರು. ಬಳಿಕ ವೈಮನಸ್ಸಿನಿಂದ ಇಬ್ಬರೂ ದೂರಾಗಿದ್ದರು. ಇಬ್ಬರು ಮತ್ತೆ ಒಂದಾಗಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಆದರೆ ಸುದೀಪ್ ಇಂದಿಗೂ ದರ್ಶನ್ ಕಡೆ ಸ್ನೇಹ ಹಸ್ತ ಚಾಚುತ್ತಲೇ ಇದ್ದಾರೆ. ಇತ್ತೀಚೆಗೆ ಟ್ವಿಟ್ಟರ್‌ನಲ್ಲಿ ಅಭಿಮಾನಿಗಳ ಜೊತೆ ಮಾತನಾಡುತ್ತಾ ನಮ್ಮಿಬ್ಬರ ನಡುವೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದರು.

ಮತ್ತೊಂದು ಕಾಮೆಂಟ್‌ನಲ್ಲಿ ದರ್ಶನ್‌ಗೆ ಒಳ್ಳೆಯದಾಗಲಿ ಎಂದು ಸುದೀಪ್ ಹಾರೈಸಿದ್ದರು. ಇದನ್ನು ನೋಡಿ ಇಬ್ಬರೂ ಆದಷ್ಟು ಬೇಗ ಒಂದಾಗುತ್ತಾರೆ ಎಂದು ಕೆಲವರು ಭಾವಿಸಿದ್ದಾರೆ. ಇಂತಹ ಸಮಯದಲ್ಲೇ ನಟಿ ಸ್ಪರ್ಶ ರೇಖಾ ಇಬ್ಬರ ಜೊತೆಗಿನ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 'ಮೆಜೆಸ್ಟಿಕ್' ಹಾಗೂ 'ಸ್ಪರ್ಶ' ಚಿತ್ರದ ಮೇಕಿಂಗ್ ಸ್ಟಿಲ್ಸ್ ಪೋಸ್ಟ್ ಮಾಡಿದ್ದಾರೆ. ನಗುವ ಎಮೋಜಿಗಳನ್ನು ಹಾಕಿ ಫೋಟೊಗಳು ತೇಲಿ ಬಿಟ್ಟಿದ್ದಾರೆ.

 Rekha shares an unseen pic from the sets of Sparsha and mejestic

ರೇಖಾ ಹಂಚಿಕೊಂಡಿರುವ ಫೋಟೊಗಳನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಕಾರಣ ಈ ಫೋಟೊಗಳನ್ನು ಈ ಹಿಂದೆ ಯಾರು ನೋಡಿರಲಿಲ್ಲ. 22 ವರ್ಷಗಳ ಹಿಂದಿನ ಅಪರೂಪದ ಫೋಟೊಗಳು ಇವು. ಅದೇ ಕಾರಣಕ್ಕೆ ಅಭಿಮಾನಿಗಳ ಮನಗೆದ್ದಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳು ವೈರಲ್ ಆಗುತ್ತಿದೆ.

'ಮೆಜೆಸ್ಟಿಕ್' ಬಳಿಕ ರೇಖಾಗೆ ದೊಡ್ಡ ಅವಕಾಶಗಳು ಸಿಗಲಿಲ್ಲ. ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. 10 ವರ್ಷಗಳ ಬಳಿಕ 'ಡೆಮೋ ಪೀಸ್' ಸಿನಿಮಾ ನಿರ್ಮಿಸಿ ನಟಿಸಿದರು. ಇತ್ತೀಚೆಗೆ ಕೆಲ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಸ್ಪರ್ಶ ರೇಖಾ ನಟಿಸಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 4 ಸ್ಪರ್ಧಿಯಾಗಿ ಕೂಡ ದೊಡ್ಮನೆ ಒಳಗೆ ಹೋಗಿ ವೀಕ್ಷಕರ ಗಮನ ಸೆಳೆದಿದ್ದರು. 'ತ್ರಿಪುರ ಸುಂದರಿ' ಎನ್ನುವ ಧಾರಾವಾಹಿಯಲ್ಲಿ ನಟಿಸಿದ್ದರು.

ಇತ್ತೀಚೆಗೆ ನಟ ಸುದೀಪ್ ಚಿತ್ರರಂಗದಲ್ಲಿ 28 ವರ್ಷ ಪೂರೈಸಿದ ಸಂಭ್ರಮ ಹಂಚಿಕೊಂಡಿದ್ದರು. ಜೊತೆಗೆ ಈ ಹಾದಿಯಲ್ಲಿ ತಮ್ಮ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದ ತಿಳಿಸಿದ್ದರು. ಇದೆಲ್ಲದರ ನಡುವೆಯೇ ರೇಖಾ ಪೋಸ್ಟ್ ವೈರಲ್ ಆಗ್ತಿದೆ.

ಮಾಡೆಲಿಂಗ್ ಮೂಲಕ ರೇಖಾ ಚಿತ್ರರಂಗಕ್ಕೆ ಬಂದರು. ನಟಿಸಿದ್ದು ಕೆಲವೇ ಸಿನಿಮಾಗಳಲ್ಲಿ ಆದರೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದ್ದಾರೆ.

More from Filmibeat

English summary
Rekha posted Sparsha and mejestic making stills
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X