ತಾಯಿಯಾಗುತ್ತಿದ್ದಾರೆ ನಟಿ ಆರತಿ ಛಾಬ್ರಿಯಾ; 'ಸಂತ' ಸಿನಿಮಾ ಬೆಡಗಿ ಈಗ ಯಾವ ದೇಶದಲ್ಲಿದ್ದಾರೆ?

ಪರಭಾಷಾ ನಟಿಯರು ಕೂಡ ಕನ್ನಡ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ. ಕೆಲವರು ಒಂದೆರಡು ಸಿನಿಮಾಗಳಲ್ಲಿ ನಟಿಸಿದರೂ ತಮ್ಮ ಸ್ಕ್ರೀನ್‌ ಪ್ರೆಸೆನ್ಸ್‌ನಿಂದ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದ್ದಾರೆ. ಮುಂಬೈ ಬೆಡಗಿ ಆರತಿ ಛಾಬ್ರಿಯಾ ನಟಿಸಿದ್ದು ಒಂದೆರಡು ಕನ್ನಡ ಸಿನಿಮಾ ಆದರೂ ಆಕೆಯನ್ನು ಕೆಲವರು ಮರೆತ್ತಿಲ್ಲ.

ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಸಾಕಷ್ಟು ನಟಿಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. 'ಅಹಂ ಪ್ರೇಮಾಸ್ಮಿ' ಚಿತ್ರದ ಮೂಲಕ ರವಿಮಾಮನ ಸಹೋದರ ಬಾಲಾಜಿ ಚಿತ್ರರಂಗಕ್ಕೆ ಪರಿಚಿತರಾಗಿದ್ದರು. ಈ ಚಿತ್ರದಲ್ಲಿ ನಟಿಸಿ ಆರತಿ ಛಾಬ್ರಿಯಾ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಮಾಡೆಲಿಂಗ್, ಜಾಹೀರಾತುಗಳಲ್ಲಿ ನಟಿಸಿ ಬಣ್ಣದಲೋಕಕ್ಕೆ ಬಂದ ಆರತಿ ಹಿಂದಿ, ತೆಲುಗು ಸಿನಿಮಾಗಳಲ್ಲಿ ಮೊದಲು ನಟಿಸಿದರು.

Remember Actress Aarti Chabria Aham Premasmi beauty Announces Pregnancy

ರವಿಚಂದ್ರನ್ ಕಣ್ಣಿಗೆ ಬಿದ್ದು ಆರತಿ ಛಾಬ್ರಿಯಾ ಕನ್ನಡ ಚಿತ್ರರಂಗಕ್ಕೆ ಬಂದರು. ಕ್ರೇಜಿಸ್ಟಾರ್ ನಿರ್ಮಿಸಿ, ನಿರ್ದೇಶಿಸಿದ 'ಅಹಂ ಪ್ರೇಮಾಸ್ಮಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತು. ಚಿತ್ರದಲ್ಲಿ ನಟ ಬಾಲಾಜಿ ಜೋಡಿಯಾಗಿ ಸಿಕ್ಕಾಪಟ್ಟೆ ಹಾಟ್ ಆಗಿ ಆರತಿ ಕಾಣಿಸಿಕೊಂಡಿದ್ದರು. ಆ ಬಳಿಕ ಆಕೆ ಮತ್ತೆರಡು ಕನ್ನಡ ಸಿನಿಮಾಗಳಲ್ಲಿ ಮಿಂಚಿದರು.

'ಸಂತ' ಚಿತ್ರದಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಜೋಡಿಯಾಗಿ ಕಾಣಿಸಿಕೊಂಡರು. 'ಹಾರ್ಟ್‌ ಅನ್ನೋ ಅಡ್ಡಾದಲ್ಲಿ' ಎಂದು ಕುಣಿದು ಮೋಡಿ ಮಾಡಿದರು. ಈಗ ಆರತಿ ಛಾಬ್ರಿಯಾ ಅಂದಾಕ್ಷಣ ಈ ಹಾಡು ನೆನಪಾಗುತ್ತದೆ. ಉಪೇಂದ್ರ ಜೊತೆ 'ರಜನಿ' ಕನ್ನಡದಲ್ಲಿ ಆರತಿ ಛಾಬ್ರಿಯಾ ನಟಿಸಿದ ಕೊನೆಯ ಸಿನಿಮಾ. ಆ ಬಳಿಕ ಒಂದಷ್ಟು ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಿದ್ದರು.

ಮುಂಬೈ ಬೆಡಗಿ ಆರತಿ ಛಾಬ್ರಿಯಾ 2019ರಲ್ಲಿ ಹಸೆಮಣೆ ಏರಿದ್ದರು. ಆಸ್ಟ್ರೇಲಿಯಾ ಮೂಲದ ಚಾರ್ಟರ್ಡ್ ಅಕೌಂಟೆಂಟ್ ವಿಶಾರದ್ ಬೀಡಸ್ಸಿ ಎಂಬುವವರ ಕೈ ಹಿಡಿದ ಚೆಲುವೆ ಅಲ್ಲಿಗೆ ಹೋಗಿ ನೆಲೆಸಿದರು. ಇದೀಗ ಬೇಬಿ ಬಂಪ್ ಫೋಟೊಶೂಟ್‌ ಮೂಲಕ ಆರತಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ನಟಿ ಆರತಿ ಛಾಬ್ರಿಯಾ ಹಾಗೂ ಪತಿ ವಿಶಾರದ್ ಬೀಡಸ್ಸಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬೇಬಿ ಬಂಪ್ ಫೋಟೊಶೂಟ್‌ ಮೂಲಕ ಈ ವಿಚಾರವನ್ನು ಆರತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

Remember Actress Aarti Chabria Aham Premasmi beauty Announces Pregnancy

ಆರತಿ ಛಾಬ್ರಿಯಾ ಸಿನಿಮಾಗಳಿಂದ ದೂರವೇ ಉಳಿದಿದ್ದರೂ ಲೈಫ್‌ಸ್ಟೈಲ್ ಹಾಗೂ ಫ್ಯಾಷನ್ ವೀಡಿಯೋಗಳ ಮೂಲಕ ಭಾರೀ ವರಮಾನ ಗಳಿಸುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ 9 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಚೆಲುವೆ ಆಗಾಗ್ಗೆ ಪೋಸ್ಟ್‌ ಮಾಡುತ್ತಿರುತ್ತಾರೆ.

2001ರಲ್ಲಿ 'ಲಜ್ಜಾ' ಚಿತ್ರದಲ್ಲಿ ಆರತಿ ಛಾಬ್ರಿಯಾ ಮೊದಲ ಬಾರಿಗೆ ನಟಿಸಿದ್ದರು. ಬಳಿಕ 'ತುಮ್ ಸೆ ಅಚ್ಚಾ ಕೌನ್ ಹೈ', 'ಅವರಾ ಪಾಗಲ್ ದೀವಾನಾ', 'ಶಾದಿ ನಂ. 1', 'ಶೂಟೌಟ್‌ ಅಟ್ ಲೋಖಂಡವಾಲಾ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಮಿಂಚಿದರು. 'ವ್ಯಹ್ 70 ಕಿಲೋ' ಎನ್ನುವ ಪಂಜಾಬಿ ಚಿತ್ರದಲ್ಲಿ ಕೊನೆಯದಾಗಿ ಆರತಿ ಕಾಣಿಸಿಕೊಂಡಿದ್ದರು.

ಬಿಂದಾಸ್ ಬೆಡಗಿ ಆರಿ ಛಾಬ್ರಿಯಾಗೆ ದೊಡ್ಡ ಅವಕಾಶಗಳು ಸಿಗಲಿಲ್ಲ. ಕನ್ನಡದಲ್ಲಿ ಶಿವಣ್ಣ, ಉಪ್ಪಿ ಜೊತೆ ತೆರೆ ಹಂಚಿಕೊಂಡರೂ ಬಳಿಕ ಸೈಲೆಂಟ್ ಆಗಿದ್ದರು. ಬಾಲಿವುಡ್‌ನಲ್ಲಿ ಹೇಳಿಕೊಳ್ಳುವಂತಹ ಅವಕಾಶ ಸಿಗದಿದ್ದಾಗ ದಕ್ಷಿಣದ ಸಿನಿಮಾಗಳತ್ತ ಮುಖ ಮಾಡಿದ್ದರು. ಮದುವೆ ಬಳಿಕ ಕೂಡ ಒಂದಷ್ಟು ಕಿರುತೆರೆ ಕಾರ್ಯಕ್ರಮದಲ್ಲಿ ಆರತಿ ಮಿಂಚಿದ್ದರು.

More from Filmibeat

English summary
Actress Aarti Chabria Shares Her Baby Bump video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X