'ಜಾಕಿ' ಚಿತ್ರದ ಪುಟ್ಟವ್ವ ಈಗ ಹೇಗಿದ್ದಾಳೆ ಗೊತ್ತಾ? ಅಪ್ಪು ನೆನೆದು ಆಕೆ ಹೇಳಿದ್ದೇನು?

ಪುನೀತ್ ರಾಜ್‌ಕುಮಾರ್ ನಟನೆಯ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾ 'ಜಾಕಿ'. ಇತ್ತೀಚೆಗೆ ಈ ಸಿನಿಮಾ ರೀ-ರಿಲೀಸ್ ಆಗಿ ಮತ್ತೊಮ್ಮೆ ದೊಡ್ಡದಾಗಿ ಸದ್ದು ಮಾಡಿತ್ತು. ಸೂರಿ ನಿರ್ದೇಶನದಲ್ಲಿ ಜಾಕಿ ಆಗಿ ಪವರ್ ಸ್ಟಾರ್ ಪರ್ಫಾರ್ಮನ್ಸ್ ಮರೆಯೋಕೆ ಸಾಧ್ಯವಿಲ್ಲ. ಚಿತ್ರದ ಪ್ರತಿ ಪಾತ್ರವನ್ನು ಸೂರಿ ವಿಭಿನ್ನವಾಗಿ ಡಿಸೈನ್ ಮಾಡಿದ್ದರು.

ಪರಂಗಿ ಸೀನ, ಮಿಠಾಮಿ ರಾಮ, ಜೂಲಿ ಹೀಗೆ ಚಿತ್ರವಿಚಿತ್ರ ಹೆಸರಿನ ಪಾತ್ರಗಳನ್ನು ಕಟ್ಟಿಕೊಟ್ಟಿದ್ದರು. ಬರೀ ನಾಯಕ, ನಾಯಕಿ ಮಾತ್ರವಲ್ಲದೇ ಈ ಪಾತ್ರಗಳೆಲ್ಲಾ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಇನ್ನು ಚಿತ್ರದಲ್ಲಿ ಪುಟ್ಟವ್ವ ಎನ್ನುವ ವಿಶೇಷ ಚೇತನ ಹುಡುಗಿಯ ಪಾತ್ರವೂ ಇದೆ. ನಟಿ ನಿಶಾ ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೇ ಪಾತ್ರ ಚಿತ್ರದ ಕಥೆಗೆ ಟ್ವಿಸ್ಟ್ ಕೊಡುತ್ತದೆ.

Remember Jackie Child Artist who acted as blind girl puttavva Here s How She Looks Now

ತನ್ನದಲ್ಲದ ತಪ್ಪಿಗೆ 'ಜಾಕಿ' ಊರು ಬಿಡುತ್ತಾನೆ. ಯಶೋಧ(ಹರ್ಷಿಕಾ ಪೂಣಚ್ಚ)ಳನ್ನು ಹುಡುಕುತ್ತಾ ಹೊರಡುವ ಜಾಕಿಗೆ ಪುಟ್ಟವ್ವಳ ಸಾವು ಆಘಾತ ತರುತ್ತದೆ. ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದು ಗೊತ್ತಿಯಿದೆ. ಪುಟ್ಟವ್ವ ಪಾತ್ರ ಇನ್ನು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ನಿಶಾ ಕೂಡ ಆ ಚಿತ್ರವನ್ನು ಇನ್ನು ಮರೆತ್ತಿಲ್ಲ. 'ಜಾಕಿ' ಬಳಿಕ ಒಂದೆರಡು ಚಿತ್ರಕ್ಕೆ ನಿಶಾ ಬಣ್ಣ ಹಚ್ಚಿದ್ದರು.

'ಶ್ರೀವಿಷ್ಣು ದಶಾವತಾರ' ಧಾರಾವಾಹಿಯಲ್ಲಿ ಕೂಡ ನಿಶಾ ನಟಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಚೆಲುವೆ ಆಗಾಗ್ಗೆ ಪೋಸ್ಟ್ ಹಾಕುತ್ತಿರುತ್ತಾರೆ. ಇದೀಗ 'ಜಾಕಿ' ಸಿನಿಮಾ ಚಿತ್ರೀಕರಣದ ದಿನಗಳನ್ನು ನೆನೆದು ಬರೆದುಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ ಸಹಕಾರವನ್ನು ನೆನಪು ಮಾಡಿಕೊಂಡಿದ್ದಾರೆ. ಚಿತ್ರೀಕರಣದ ವೇಳೆ ಕ್ಲಿಕ್ಕಿಸಿದ ಫೋಟೊ ಸಹ ಹಂಚಿಕೊಂಡಿದ್ದಾರೆ.

Remember Jackie Child Artist who acted as blind girl puttavva Here s How She Looks Now

"ನನಗೆ ಇನ್ನು ನೆನಪಿದೆ. 'ಜಾಕಿ' ಚಿತ್ರದ ಮೊದಲ ದಿನದ ಚಿತ್ರೀಕರಣ. ನೋವು ಹಾಗೂ ಹತಾಶೆಯ ಎರಡರ ಮಿಶ್ರಣವಾದ ಅನುಭವ. ಅದರಲ್ಲೂ ಯಾವುದೇ ಡೈಲಾಗ್ ಇಲ್ಲದೇ ಕೆರೆ ಬಳಿ ಶವದ ರೀತಿ ನಟಿಸಿದ್ದನ್ನು ಮರೆಯೋಕೆ ಸಾಧ್ಯವಿಲ್ಲ. ಆಗ ಮನತುಂಬಿ ಬಂದು ನಾನು ಭಾವುಕಳಾದೆ. ಆದರೆ ಅಪ್ಪು ಸರ್ ನನ್ನ ಸಂಕಟ ಗಮನಿಸಿ ಸಮಾಧಾನ ಮಾಡಲು ಬಂದರು"

"ನನ್ನ ಪಾತ್ರ ಬಹಳ ಮಹತ್ವ ಇದೆ. ನನಗೆ ಸಾಕಷ್ಟು ಸಂಭಾಷಣೆ ಕೊಡುವುದಾಗಿ ಅವರು ನನಗೆ ಭರವಸೆ ನೀಡಿದರು, ಚಿಂತಿಸಬೇಡಿ ಎಂದು ಹೇಳಿದ್ದರು. 15 ವರ್ಷ ವಯಸ್ಸಿನಲ್ಲಿ, ಅವರ ಹತ್ತಿರ ಇರುವುದು ನನಗೆ ನಂಬಲಾಗದಷ್ಟು ಸಂತೋಷವಾಯಿತು. ಅಪ್ಪು ಸರ್ ಹಾಗೂ ಇತರ ಪ್ರತಿಭಾವಂತ ನಟರೊಂದಿಗೆ ಮೇಲುಕೋಟೆಯಲ್ಲಿ 25 ದಿನಗಳ ಅಮೂಲ್ಯವಾದ ಚಿತ್ರಕರಣ ನನ್ನ ಕಲಿಕೆಗೆ ಸಹಕಾರಿಯಾಗಿತು."

"ಜಾಕಿ ಚಲನಚಿತ್ರದ ಚಿತ್ರೀಕರಣದಲ್ಲಿ ಅವರ ವಿನಮ್ರತೆ, ಸಮರ್ಪಣೆ ಭಾವ, ಉತ್ಸಾಹ ಹಾಗೂ ಸಿನಿಮಾ ಬಗ್ಗೆ ಅವರ ಪ್ಯಾಷನ್ ಮರೆಯಲು ಸಾಧ್ಯವಿಲ್ಲ. ಹಾಗೆಯೇ ಅವರು ತಮ್ಮ ಜೀವನವನ್ನು ನಡೆಸಿದ ರೀತಿಯನ್ನು ಅನುಕರಿಸಲು ನಾನು ಬಯಸುತ್ತೇನೆ" ಎಂದು ನಿಶಾ ಬರೆದುಕೊಂಡಿದ್ದಾರೆ. ಆಕೆಯ ಪೋಸ್ಟ್‌ಗೆ ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

More from Filmibeat

English summary
Jackie film actress recalls movie shooting and Puneeth Rajkumar support;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X