ಡಿಸಿಎಂ ಡಿಕೆಶಿ ಒಬ್ಬರೇ ಅಲ್ಲ ; ರಾಜಕೀಯದ 'ಪವರ್' ಹೆಚ್ಚಿಸಲು ಅಪ್ಪು ಹಿಂದೆ ಬಿದ್ದಿದ್ದರು ಹಲವರು- ಅವರು ಯಾರ್ಯಾರು ?

ಡಾ.ರಾಜ್ ಕುಮಾರ್ ಬರೀ ವ್ಯಕ್ತಿಯಲ್ಲ. ಅನೇಕರ ಶಕ್ತಿಯಾಗಿದ್ದವರು. ಡಾ.ರಾಜ್ ಮನಸು ಮಾಡಿದ್ದರೆ ಯಾವತ್ತೋ ಈ ನಾಡಿನ ಮುಖ್ಯಮಂತ್ರಿಯಾಗಬಹುದಿತ್ತು. ಆಂಧ್ರದಲ್ಲಿ ಎನ್.ಟಿ.ಆರ್.. ತಮಿಳುನಾಡಲ್ಲಿ ಎಂ.ಜಿ.ಆರ್.. ಸಿನಿಮಾರಂಗದಿಂದ ಬಂದು ಅದೇ ಜನಪ್ರಿಯತೆಯನ್ನ ಬಳಸಿಕೊಂಡು ಸಿ.ಎಂ ಪಟ್ಟ ಪಡೆದಂತೆ, ಕನ್ನಡದಲ್ಲೂ ಅದೇ ಮಟ್ಟದ ಜನಪ್ರಿಯತೆ ಹೊಂದಿದ್ದ ಡಾ. ರಾಜ್ ಕುಮಾರ್ ರಾಜಕೀಯದತ್ತ ಹೊರಳಬಹುದಿತ್ತು. ಆದರೆ ಈ ಕೆಲಸವನ್ನು ಡಾ.ರಾಜ್ ಕುಮಾರ್ ಅವರು ಯಾವತ್ತು ಮಾಡಲಿಲ್ಲ.

ಬದಲಿಗೆ ನಟನನ್ನ ಎಲ್ಲಾ ಜನರೂ ಪ್ರೀತಿಸ್ತಾರೆ.. ರಾಜಕಾರಣಿಯನ್ನಲ್ಲ.. ಕನ್ನಡಿಗರಿಂದ ಸಿಕ್ಕಿರೋ ಪ್ರೀತಿಯೇ ಸಾಕು.. ನಾನು ಈಗಲೇ ರಾಜಕುಮಾರ ನನಗೆ ರಾಜಕಾರಣ ತಂದುಕೊಂಡುವ ತಾತ್ಕಾಲಿಕ ಕುರ್ಚಿಯ ರಾಜನ ಪಟ್ಟ ಬೇಕಾಗಿಲ್ಲ. ನಾನು ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಸದಾ ರಾಜನೇ ಅಂತ ನಂಬಿದ್ದರು ಡಾ.ರಾಜ್ ಕುಮಾರ್.

Remembering Appu Puneeth Rajkumar Respectfully Denied DCM Shivakumar s Offer for Political Entry

ಇಂತಹ ಮುತ್ತುರಾಜ ಹೆತ್ತ ಮುತ್ತು ಪುನೀತ್ ರಾಜ್ ಕುಮಾರ್ ತಂದೆಯ ಆದರ್ಶವನ್ನೇ ಪಾಲಿಸಿಕೊಂಡು ಬರದೇ ಇರಲು ಹೇಗೆ ಸಾಧ್ಯ..? ಇದಕ್ಕೆ ಅತ್ಯುತ್ತಮ ಉದಾಹರಣೆಯೇ ಡಿಸಿಎಂ ಡಿಕೆ ಶಿವಕುಮಾರ್ ಅವರು ಪುನೀತ್ ರಾಜ್ ಕುಮಾರ್ ಅವರ ಕುರಿತು ಇತ್ತೀಚೆಗೆ ಮಾತನಾಡಿದ ಮಾತುಗಳು.

ಹೌದು, ಡಾ. ಪುನೀತ್ ರಾಜ್‍ಕುಮಾರ್ ಅವರನ್ನು ಎಐ ಮೂಲಕ ಫ್ಯಾನ್ಸ್‌ಗೆ ತೋರಿಸುವ ''ಸ್ಟಾರ್ ಫ್ಯಾನ್ಡಮ್'' (''ಕನ್ನಡದ ಅಪ್ಪು'') ಆ್ಯಪ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬಂದಿದ್ದರು.

ಇದೇ ಸಮಯದಲ್ಲಿ ಆಪ್ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ ಡಿಕೆ ಶಿವಕುಮಾರ್ ಅವರು ಕತ್ತಲೆಗೆ ಹೋಗಿರುವ ಪುನೀತ್ ರಾಜ್‌ಕುಮಾರ್ ಈಗ ತಂತ್ರಜ್ಞಾನದ ಮೂಲಕ ಬೆಳಕಿಗೆ ಬಂದಿದ್ದಾರೆ ಎಂದು ಹೇಳಿದರು. ಮನುಷ್ಯತ್ವಕ್ಕೆ ದೊಡ್ಡ ಉದಾಹರಣೆ ಅಪ್ಪು ಎಂದು ಹೇಳಿದರು. ಪುನೀತ್ ರಾಜ್ ಕುಮಾರ್ ಅವರನ್ನು ರಾಜಕೀಯಕ್ಕೆ ಕರೆತರುವ ಪ್ರಯತ್ನವನ್ನು ಹಲವು ಬಾರಿ ಮಾಡಿದ್ದೇ ಆದರೆ ಅದು ಫಲಕಾರಿಯಾಗಲೇ ಇಲ್ಲ ಎಂದು ಹೇಳಿದರು.

ಈ ಕುರಿತು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಪುನೀತ್ ರಾಜಕುಮಾರ್ ಅವರನ್ನು ರಾಜಕಾರಣದತ್ತ ಸೆಳೆಯಲು ನಾನು ಸಾಕಷ್ಟು ಪ್ರಯತ್ನ ಮಾಡಿದೆ. ಆದರೆ ಅವರು ಬರಲೇ ಇಲ್ಲ ಎಂದು ಹೇಳಿದರು. ಕೇವಲ ಪುನೀತ್ ಮಾತ್ರವಲ್ಲ ಸಹೋದರಿ ಅಶ್ವಿನಿ ಪುನೀತ್ ಅವರನ್ನು ಕೂಡ ನಾನು ರಾಜಕಾರಣಕ್ಕೆ ಬರುವಂತೆ ಹೇಳಿದೆ ಆದರೆ ಅವರು ಕೂಡ ತಮ್ಮ ಪತಿಯ ಹಾದಿಯಲ್ಲೇ ನಡೆಯುವುದಾಗಿ ತಿಳಿಸಿದರೇ ವಿನಃ ರಾಜಕಾರಣಕ್ಕೆ ಬರಲಿಲ್ಲ ಎಂದು ಹೇಳಿದ ಡಿಕೆ ಶಿವಕುಮಾರ್ ಸಕ್ರಿಯ ರಾಜಕಾರಣಕ್ಕೆ ಬರುವುದು ಬೇಡ, ಆದರೆ ಮುಖ್ಯವಾಹಿನಿಯಲ್ಲಿರಿ ಎಂದು ನಾನು ಅವರಿಗೆ ಹೇಳಿದ್ದೇನೆ. ಇಷ್ಟು ದಿನ ಈ ವಿಚಾರ ನಾನು ಎಲ್ಲಿಯೂ ಹೇಳಿರಲಿಲ್ಲ ಆದರೆ ಈಗ ಹೇಳುತ್ತಿದ್ದೇನೆ ಎಂದು ಹೇಳಿದರು.

Remembering Appu Puneeth Rajkumar Respectfully Denied DCM Shivakumar s Offer for Political Entry

ಹೀಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಅಪ್ಪು ಅವರನ್ನು ರಾಜಕೀಯಕ್ಕೆ ಕರೆತರಲು ತಾವು ಮಾಡಿದ ಪ್ರಯತ್ನದ ಕುರಿತು ಮಾತನಾಡಿದರು. ಆದರೆ, ನಿಮಗೆ ಗೊತ್ತಾ ಡಿಕೆ ಶಿವಕುಮಾರ್ ಅವರಷ್ಟೇ ಅಲ್ಲ. ಪುನೀತ್ ರಾಜ್ ಕುಮಾರ್ ಅವರನ್ನು ರಾಜಕೀಯಕ್ಕೆ ಕರೆತರಲು ಹಲವಾರು ರಾಜಕೀಯ ಮುಖಂಡರು ಪ್ರಯತ್ನವನ್ನು ಈ ಹಿಂದೆ ಮಾಡಿದ್ದರು. ಭಾರತದ ಪ್ರಧಾನಿ ನರೇಂದ್ರ ಮೋದಿಯವ್ರೇ ಪುನೀತ್ ರಾಜ್ ಕುಮಾರ್ ಅವ್ರನ್ನ ರಾಜಕೀಯಕ್ಕೆ ಆಹ್ವಾನಿಸಿದ್ದರು. ಈ ಮಾತನ್ನು ನಾವಲ್ಲ. ಬದಲಿಗೆ 2021ರಲ್ಲಿ ಪುನೀತ್ ಅವರ ಬಹುಕಾಲದ ಆಪ್ತ, ವಜ್ರೇಶ್ವರಿ ಕುಮಾರ್ ಎಂದೆ ಚಿರಪರಿಚಿತರಾದ, ಒಂದ್ಕಾಲದಲ್ಲಿ ಅಪ್ಪು ಅವರಿಗೆ ಮ್ಯಾನೇಜರ್ ಕೂಡ ಆಗಿದ್ದ ನಿರ್ಮಾಪಕ ಎನ್.ಎಸ್.ರಾಜ್ ಕುಮಾರ್ ಹೇಳಿದ್ದರು.

ಅಪ್ಪು ಮೇಲಿತ್ತು ಮೋದಿ ಕಣ್ಣು..''ಪವರ್'' ಪಾಲಿಟಿಕ್ಸ್ ಗೆ ನಡೆದಿತ್ತು ಪ್ರಯತ್ನ..?

ಹೌದು. ಈ ಕುರಿತು ಹಲವು ಮಾಧ್ಯಮಗಳಲ್ಲಿ ಮಾತನಾಡಿದ್ದ ಎನ್.ಎಸ್. ರಾಜ್ ಕುಮಾರ್ ಅವರು ಡಿ.ಕೆ.ಶಿ ಅವ್ರಿಂದ ಹಿಡ್ದು ಮಾಜಿ ಸಿ.ಎಂ ಸಿದ್ಧರಾಮಯ್ಯ ತನ್ಕ ಎಲ್ರೂ ಪುನೀತ್ ಅವರನ್ನ ಹೇಗಾದ್ರೂ ಮಾಡಿ ರಾಜಕೀಯಕ್ಕೆ ಕರೆತರಬೇಕೆಂದು ಪ್ರಯತ್ನ ಮಾಡಿದ್ದರು ಎಂದು ಹೇಳಿದ್ದರು. ಇಷ್ಟೇ ಅಲ್ಲ ಅಪ್ಪು ಅವರನ್ನು ಪೊಲಿಟಿಕಲ್ ಫೀಲ್ಡ್ ಗೆ ಕರೆತರಲು ಬರೀ ಕಾಂಗ್ರೆಸ್ ಮಾತ್ರ ಅಲ್ಲ ಕೇಂದ್ರದ ಆಡಳಿತ ಪಕ್ಷ ಬಿ.ಜೆ.ಪಿಯಲ್ಲೂ ಕಸರತ್ತು ನಡೆದಿತ್ತು. ತರ ತರಹದ ಪ್ರಯತ್ನ ಮಾಡಲಾಗಿತ್ತು. ಇಂಟ್ರೆಸ್ಟಿಂಗ್ ಅಂದ್ರೇ ಭಾರತದ ಪ್ರಧಾನಿ ನರೇಂದ್ರ ಮೋದಿಯವ್ರೇ ಪುನೀತ್ ರಾಜ್ ಕುಮಾರ್ ಅವ್ರನ್ನ ರಾಜಕೀಯಕ್ಕೆ ಆಹ್ವಾನಿಸಿದ್ದರು ಎಂದು ಹೇಳಿದ್ದರು.

ಅಂದು ಆ ದಿನಗಳನ್ನ ಮೆಲುಕು ಹಾಕಿದ್ದ ಎನ್.ಎಸ್. ರಾಜ್ ಕುಮಾರ್ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಪುನೀತ್‌ ರಾಜ್‌ಕುಮಾರ್ ಅವರನ್ನು ರಾಜಕೀಯಕ್ಕೆ ಆಹ್ವಾನಿಸಿದ್ದರು. ಆದರೆ ಈ ಆಹ್ವಾನನ್ನು ನಯವಾಗಿಯೇ ತಿರಸ್ಕರಿಸಿದ್ದರು ಅಪ್ಪು ಎಂದು ಹೇಳಿದ್ದರು. ನಾನು ಮೋದಿ ಅವರನ್ನು ಭೇಟಿ ಮಾಡಿದರೆ ರಾಜಕೀಯ ಆಗುತ್ತೆ ಎಂದು ಅಂದು ಹೇಳಿದ್ದ ಅಪ್ಪು, ನನಗೆ ಎಲ್ಲ ಪಕ್ಷಗಳಲ್ಲಿಯೂ ಅಭಿಮಾನಿಗಳು ಇದ್ದಾರೆ. ನಮಗೆ ಎಲ್ಲರೂ ಬೇಕು. ನನಗೆ ರಾಜಕೀಯ ಆಸಕ್ತಿ ಇಲ್ಲ ಎಂದು ಖಂಡ ತುಂಡ ಮಾತುಗಳನ್ನಾಡಿದ್ದರು. ನರೇಂದ್ರ ಮೋದಿ ಅವರನ್ನು ಪುನೀತ್ ಒಮ್ಮೆ ಭೇಟಿಯಾದಾಗಲೂ ಕೂಡ ಮೋದಿ ಅವರ ಜೊತೆ ಏಳು ನಿಮಿಷಗಳ ಕಾಲ ಪುನೀತ್ ಮಾತನಾಡಿದ್ದರು. ರಾಜಕೀಯ ಆಫರ್‌ ತಿರಸ್ಕರಿಸಿದ ನರೇಂದ್ರ ಮೋದಿ ಅವರಿಗೆ ಡಾ ರಾಜ್‌ಕುಮಾರ್ ಕುರಿತಾದ ಪುಸ್ತಕವನ್ನು ಕೂಡ ನೀಡಿದ್ದರು.

Remembering Appu Puneeth Rajkumar Respectfully Denied DCM Shivakumar s Offer for Political Entry

ಹಾಗಂತ ಪುನೀತ್ ಅವ್ರನ್ನ ರಾಜಕೀಯಕ್ಕೆ ಕರೆತರುವ ಪ್ರಯತ್ನ ಇಷ್ಟಕ್ಕೆ ನಿಂತಿತ್ತು ಅಂತೇನೂ ಇರಲಿಲ್ಲ. ತೆರೆಮರೆಯಲ್ಲಿ ಪ್ರಯತ್ನ ನಡಿತಲೇ ಇತ್ತು. ಇದಕ್ಕೆ ಉದಾಹರಣೆಯೆನ್ನುವಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಚಿತ್ರನಟ ಹಾಗೂ ಬಿಜೆಪಿ ಮುಖಂಡ ಜಗ್ಗೇಶ್ ಮತ್ತು ನಿರ್ಮಾಪಕ ಎಸ್.ವಿ. ಬಾಬು ಅವರು ಪುನೀತ್ ಅವರನ್ನು ಭೇಟಿ ಮಾಡಿ, ರಾಜಕೀಯಕ್ಕೆ ಬರುವಂತೆ ಕೋರಿದ್ದರು. ಆಗಲೂ ಪುನೀತ್ ಉತ್ತರ ಇಲ್ಲವೆನ್ನೋದೇ ಆಗಿತ್ತು.

ಪಾಲಿಟಿಕ್ಸ್ ವಿಚಾರದಲ್ಲಿ ಅಣ್ಣಾವ್ರ ಹಾದಿಲೇ ನಡೆದ ರಾಜಕುಮಾರ!

ಸುಮ್ಮನೆ ಒಮ್ಮೆ ಆಲೋಚಿಸಿ ಒಂದು ವೇಳೆ ಪುನೀತ್ ರಂಥಾ ಜನಪ್ರಿಯ ನಟನನ್ನ ರಾಜಕಾರಣಕ್ಕೆ ಕರೆತಂದರೆ ಆ ಪಕ್ಷಕ್ಕೆ ಅದೆಂಥಾ ಪವರ್ ಸಿಗಬೇಡ. ಕುಟುಂಬ ಸಮೇತರಾಗಿ ಚಿತ್ರನೋಡುವಂಥಾ, ಇಷ್ಟಪಡುವಂಥಾ ಅಚ್ಚು ಮೆಚ್ಚಿನ ನಟ ಯಾವುದೋ ಪಾರ್ಟಿಗೆ ಬಂದರೆ, ಚುನಾವಣೆಯಲ್ಲಿ ಈ ಪಕ್ಷಕ್ಕೇನೇ ಮತ ನೀಡಿ ಅಭಿಮಾನಿ ದೇವರುಗಳೇ' ಅಂತ ಕರೆಕೊಟ್ರೆ, ಅಭಿಮಾನಿ ದೇವರುಗಳು ವರ ಕೊಡೋದಿಲ್ವಾ...ಕೊಟ್ಟೇ ಕೊಡ್ತಾರೆ.. ಅಪ್ಪು ಹೀಗೋಂದು ಕರೆ ಕೊಟ್ರೆ ಚುನಾವಣೆಯ ದಿಕ್ಕೇ ಬದಲಿಸ್ತಾರೆ ಅಂತ ಎಲ್ಲಾ ಪಕ್ಷಗಳ ನಾಯಕರೂ ಯೋಚಿಸ್ತಾ ಇದ್ರು. ಹೀಗಾಗಿಯೇ ಪುನೀತ್ ಇಲ್ಲವೆಂದು ಹೇಳಿದ್ರೂ ಮತ್ತೆ ಮತ್ತೆ ಪ್ರಯತ್ನವನ್ನ ಮಾಡಲಾಗ್ತಾನೇ ಇತ್ತು.

ಇದಕ್ಕೆ ಸಾಕ್ಷಿಯೆನ್ನುವಂತೆ ಸಂತೋಷ್ ಅವರು ಬಂದು ಹೋಗಿ ಸುಮಾರು 20 ದಿನಗಳ ನಂತರ, ಬಿಜೆಪಿ
ಮುಖಂಡರಾದ ಗುಜರಾತ್‌ನ ಬಿ.ವಿ.ಎಸ್. ಶರ್ಮಾ ಹಾಗೂ ಆಂಧ್ರಪ್ರದೇಶದ ಸೋಮು ವಿ. ರಾಜು
ಮತ್ತು ನಿರ್ಮಾಪಕ ಎಸ್.ವಿ. ಬಾಬು ಮತ್ತೊಮ್ಮೆ ಸದಾಶಿವನಗರದ ಪುನೀತ್ ನಿವಾಸಕ್ಕೆ ಹೊರಡುವ
ಮನಸು ಮಾಡಿದ್ದರು. ಆದ್ರೇ ಅದಕ್ಕೂ ಮೊದಲು ಪುನೀತ್ ಅವರ ಮ್ಯಾನೇಜರ್ ರಾಜ್ ಕುಮಾರ್
ಅವ್ರನ್ನ ಭೇಟಿಯಾದರು. ಎಲ್ಲ ನಟರೂ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ. ನೀವು ಹೇಳಿ ಪುನೀತ್‌
ಅವರನ್ನು ಒಪ್ಪಿಸಿ ಎಂದರು. ಆಗ ರಾಜ್ ಕುಮಾರ್ ಈ ವಿಷಯದಲ್ಲಿ ಅವರನ್ನು ಒಪ್ಪಿಸುವುದು
ಸಾಧ್ಯವೇ ಇಲ್ಲ ಎಂದು ಹೇಳಿ ಕಳುಹಿಸಿದರು.

ಅತ್ತಿಗೆ ಚುನಾವಣೆಗೂ ನಿಂತಾಗಲೂ ಪುನೀತ್ ಉಳಿದಿದ್ರು ದೂರ!

ಹೀಗೆ ಪದೇ ಪದೇ ಪ್ರಯತ್ನ ವಿಫಲವಾದ ಬೆನ್ನಲ್ಲಿಯೇ ಮತ್ತೊಂದು ಬಾಣವನ್ನ ಹೂಡಲಾಯ್ತು. ಬಿಜೆಪಿ
ಪ್ರಧಾನ ಕಾರ್ಯದರ್ಶಿಯಾಗಿದ್ದ ಅನಿಲ್‌ ಎಂಬುವರ ಮೂಲಕವೂ ಪುನೀತ್‌ರಿಗೆ ಆಹ್ವಾನ ನೀಡಲಾಯಿತು.
ನೀವು ರಾಜಕೀಯಕ್ಕೆ ಬರುವುದೇನು ಬೇಡ, ಆದರೆ, ಒಂದು ಬಾರಿ ನರೇಂದ್ರ ಮೋದಿಯವರನ್ನು ದೆಹಲಿಗೆ
ಬಂದು ಭೇಟಿ ಮಾಡಿ ಎಂದು ಮನವಿ ಮಾಡಿಯೆಂಬ ಮನವಿಯನ್ನೂ ಮಾಡಲಾಯ್ತು.

ವಿಶೇಷ ಅಂದರೆ..ಮೋದಿ ಜೊತೆಗಿನ ಈ ಚಾಯ್ ಪೇ ಚರ್ಚಾ ಆಹ್ವಾನವನ್ನೂ ಕೂಡ ಪುನೀತ್ ರಾಜ್ ಕುಮಾರ್ ನಿರಾಕರಿಸಿದ್ದರು. ಯಾಕಂದ್ರೇ ಆಗಲೇ ಹೇಳಿದಂತೆ ಪುನೀತ್ ರಾಜ್ ಕುಮಾರ್ ತಂದೆಗೆ ತಕ್ಕ ಮಗ.
ಅಣ್ಣಾವ್ರ ಆದರ್ಶವನ್ನೇ ಬೆಳೆಸಿಕೊಂಡು ಬೆಳೆದಿದ್ದ ಭಾಗ್ಯವಂತ.

ಇನ್ನೂ ಎಲ್ಲರೂ ನನಗೆ ಸ್ನೇಹಿತರೇ.. ನಾನು ರಾಜಕಾರಣಕ್ಕೆ ಮಾತ್ರ ಬರಲಾರೆ ಅನ್ನೋದು ಡಾ.ರಾಜ್ ಕುಮಾರ್ ಪಾಲಿಸಿ ಆಗಿತ್ತು. ಮುಖ್ಯಮಂತ್ರಿ ಬಂಗಾರಪ್ಪನವರ ಪುತ್ರಿಯನ್ನ ತಮ್ಮ ಮನೆಯ ಸೊಸೆ ಮಾಡಿಕೊಂಡ ಮೇಲೂ
ರಾಜ್, ರಾಜಕಾರಣದ ತಂಟೆಗೆ ಹೋಗಲಿಲ್ಲ. ಅವರ ರಾಜಕಾರಣ ಅವರಿಗೆ.. ನನ್ನ ಚಿತ್ರರಂಗ ನನಗೆ
ಅಂತ ದೂರವೇ ಉಳಿದಿದ್ದರು. ಅಣ್ಣಾವ್ರ ಈ ಪಾಲಿಸಿಯನ್ನ ಅಪ್ಪು ಕೂಡ ಚಾಚೂ ತಪ್ಪದೇ
ಪಾಲಿಸಿಕೊಂಡು ಬಂದಿದ್ದರು.

ಎಷ್ಟೇ ಒತ್ತಾಯ ಬಂದರೂ ಕೂಡ ಪವರ್ ಸ್ಟಾರ್ ಪಾಲಿಟಿಕ್ಸ್ ಗೆ ಬರಲೇ ಇಲ್ಲ. ತನ್ನ ಸಹನಟರು ಗೆದ್ದು
ರಾಜಕಾರಣದಲ್ಲಿ ದೊಡ್ಡ ಹುದ್ದೆ ಪಡೆದಾಗಲೂ , ತಾವು ಮಾತ್ರ ನಟನಾಗೇ ಉಳಿಸಕೊಳ್ಳೋ ಗಟ್ಟಿ
ನಿರ್ಧಾರವನ್ನ ಬದಲಿಸಲಿಲ್ಲ. ಕುಟುಂಬ ಸದಸ್ಯರು ರಾಜಕರಣಕ್ಕೆ ಇಳಿದಾಗಲೂ ತಾವು ಮಾತ್ರ
ಅದರಿಂದ ಅಂತರ ಕಾಪಾಡಿಕೊಂಡ್ರು. ರಾಜಕಾರಣಕ್ಕೆ ಕರೆದಾಗಲೆಲ್ಲಾ ನಾನು ಅವರ ದಾರಿಯನ್ನೇ
ಫಾಲೋ ಮಾಡ್ತಿನಿ. ಅವರಂತೆಯೇ ಅಭಿಮಾನಿಗಳ ರಾಜಕುಮಾರ ಆಗಿ ಇದ್ದುಬಿಡ್ತಿನಿ. ನನಗೆ
ಎಲ್ಲರೂ ಬೇಕು. ಸ್ನೇಹಿತರಾಗಿ ಇರೋಣ.. ಒಳ್ಳ ಕೆಲಸಕ್ಕೆ ಕೈ ಜೋಡಿಸೋಣ. ಸಮಾಜದ ಒಳಿತಿಗೆ
ಕೆಲಸ ಮಾಡೋಕೆ ಸಿದ್ದ.. ಆದ್ರೆ ರಾಜಕೀಯಕ್ಕೆ ಬರಲಾರೆ. ನೋ ಪಾಲಿಟಿಕ್ಸ್ ಪ್ಲೀಸ್ ಅಂದು ಬಿಡ್ತಾ
ಇದ್ದರು ಪುನೀತ್ ರಾಜ್ ಕುಮಾರ್.

ಅಭಿಮಾನಿಗಳು ನಮಗೆಲ್ಲಾ ಕೊಟ್ಟಿದಾರೆ.. ಇನ್ನೇನೂ ಅವರಿಂದ ಬೇಡಲಾರೆ ಅನ್ನೋ ಅಪ್ಪನ
ಮಾತನ್ನ ಪುನೀತ್ ರಾಜ್ ಕುಮಾರ್ ಯಾವತ್ತೂ ಮೀರಲಿಲ್ಲ. ಅಣ್ಣಾವ್ರ ಹಾದಿ ಬಿಟ್ಟು ಒಂದು ಹೆಜ್ಜೆನೂ
ಆಚೀಚೆ ಅಪ್ಪು ಯಾವತ್ತೂ ನಡೀಲೇ ಇಲ್ಲ.

More from Filmibeat

English summary
Find out why Puneeth Rajkumar chose to stay away from politics. DCM DK Shivakumar discusses the private conversation where Appu respectfully denied his offer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X