ಭಾರತದ ಅತ್ಯಂತ ಶ್ರೀಮಂತ ಬಾಲನಟಿ ರಿವಾ ಅರೋರಾ: 18 ವರ್ಷವೂ ದಾಟದ ಈಕೆಯ ಆದಾಯವೆಷ್ಟು ಗೊತ್ತೆ?

ಸಿನಿಮಾರಂಗದಲ್ಲಿ ಎಲ್ಲರು ಕಲಾವಿದರೆ ಆಗಿದ್ದರೂ, ಶ್ರೀಮಂತಿಕೆ ವಿಷಯ ಬಂದಾಗ ಅದು ಮೇಲೆ ಕೆಳಗೆ ಆಗುತ್ತದೆ. ಕೆಲವರು ಕೋಟಿಗಳ ಒಡೆಯರಾಗಿದ್ದರೇ, ಮತ್ತೆ ಕೆಲವರು ಸಾವಿರ, ಲಕ್ಷಗಳಲ್ಲೇ ಜೀವನ ನಡೆಸುವವರು ಇದ್ದಾರೆ. ಬಾಲಿವುಡ್‌ನಲ್ಲಿ ಈಗಿನ್ನು ಹೆಜ್ಜೆಯಿಡುತ್ತಿರುವ ಈ ಬಾಲನಟಿ ಕೋಟ್ಯಾಂತರ ರೂಪಾಯು ಆದಾಯ ಗಳಿಸುತ್ತಿದ್ದಾರೆ.

ಹೌದು, 8 ಕೋಟಿ ರೂ.ಗಳ ನಿವ್ವಳ ಮೌಲ್ಯದ ಆದಾಯ ಗಳಿಸುವ ಮೂಲಕ ನಟಿ ರಿವಾ ಅರೋರಾ ಭಾರತದಲ್ಲಿನ ಅತ್ಯಂತ ಶ್ರೀಮಂತ ಬಾಲನಟಿಯಾಗಿದ್ದಾರೆ. ಡಿಎನ್‌ಎ ಪ್ರಕಾರ, ರಿವಾ ಅರೋರಾ ಅವರ ನೆಟ್ ವರ್ತ್ ಸುಮಾರು 1 ಮಿಲಿಯನ್, ಸರಿಸುಮಾರು ರೂ 8.2 ಕೋಟಿ. ಹೀಗಾಗಿಯೇ ಅವರನ್ನು ದೇಶದ ಅತ್ಯಂತ ಶ್ರೀಮಂತ ಬಾಲನಟಿ ಎಂದು ಗುರುತಿಸಲಾಗಿದೆ.

Richest Child Star of India: Riva Arora is the Youngest and Richest Child Actress

ದೇಶದ ಅತ್ಯಂತ ಶ್ರೀಮಂತ ಬಾಲನಟಿ ರಿವಾ ಅರೋರಾ!

ದೇಶದಾದ್ಯಂತ 400 ಮಿಲಿಯನ್ ಬಳಕೆದಾರರನ್ನು ತಲುಪುವ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಸಿನಿಮಾ ಉದ್ಯಮದಲ್ಲಿ ತೊಡಗಿಸಿಕೊಂಡಿರುವವರ ಆರ್ಥಿಕತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಪ್ರಮುಖ ನಟರು ಈಗ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಚಲನಚಿತ್ರಗಳು ಮತ್ತು ವೆಬ್‌ ಸೀರಿಸ್‌ಗಳಿಂದ ಕೋಟಿಗಳನ್ನು ಗಳಿಸುತ್ತಿದ್ದಾರೆ. ಇದರಲ್ಲಿ ಬಾಲನಟರು ಕೂಡ ಸಕತ್ ಕಮಾಯಿ ಮಾಡುತ್ತಿದ್ದಾರೆ.

ಸಿನಿಮಾರಂಗ ಬೆಳೆಯುತ್ತಿದ್ದು, ಇದರಲ್ಲಿ ಯುವ ನಟಿ ರಿವಾ ಅರೋರಾ ತನ್ನ ಆನ್-ಸ್ಕ್ರೀನ್ ಪ್ರದರ್ಶನಗಳಿಗೆ ಮಾತ್ರವಲ್ಲದೆ ಸಾಮಾಜಿಕ ಮಾಧ್ಯಮದ ಇನ್‌ಫ್ಲುಯೆನ್ಸರ್ ಆಗಿಯು ಹಣ ಗಳಿಸುತ್ತಿದ್ದಾರೆ. 18 ವರ್ಷದೊಳಗಿನವರಾಗಿದ್ದರೂ, ರಿವಾ ಅರೋರಾ ಈಗಾಗಲೇ ಬಾಲಿವುಡ್‌ನ ಸುಮಾರು 28 ಸಿನಿಮಾಗಳಲ್ಲಿ ನಟಿಸಿದ್ದಾರೆ.

ಬಾಲಿವುಡ್‌ನಲ್ಲಿ ಬಾಲನಟಿ ರಿವಾ ಅರೋರಾ

ರಿವಾ ಅರೋರಾ ಹೆಚ್ಚು ಖ್ಯಾತಿ ಗಳಿಸಿದ್ದು, 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ಸಿನಿಮಾದನಲ್ಲಿ ವಿಕ್ಕಿ ಕೌಶಲ್ ಜೊತೆಗೆ ಕಾಣಿಸಿಕೊಂಡ ಬಳಿಕ. ಆದಾದ ನಂತ ಗುಂಜಾನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್‌ನಲ್ಲಿ ಜಾನ್ವಿ ಕಪೂರ್‌ ಅವರ ಕಿರಿಯ ವಯಸ್ಸಿನ ಪಾತ್ರದಲ್ಲಿ ನಟಿಸಿದ್ದರು. ಇನ್ನು, ಶ್ರೀದೇವಿ ಅವರ ಕೊನೆಯ ಚಿತ್ರ 'ಮಾಮ್'‌ನಲ್ಲಿ ಕೂಡ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ರಾಕುಲ್ ಪ್ರೀತ್ ಸಿಂಗ್ ನಟನೆಯ 'ಛತ್ರಿವಾಲಿ'ಯಲ್ಲಿ ಒಳ್ಳೆ ಅಭಿನಯ ನೀಡಿ ಗಮನ ಸೆಳೆದಿದ್ದರು.

Richest Child Star of India: Riva Arora is the Youngest and Richest Child Actress

ಸೋಶಿಯಲ್ ಮೀಡಿಯಾದಲ್ಲಿ ರಿವಾ ಅರೋರಾ ಹವಾ!

ರಿವಾ ಅರೋರಾ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೋಬ್ಬರಿ 11.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಹಲವು ಬಾರಿ ಆಕೆಯ ವಯಸ್ಸು ಮತ್ತು ಆಕೆಯ ದೇಹದ ಬೆಳವಣಿಗೆಯಿಂದಾಗಿ ಸುದ್ದಿಯಲ್ಲಿರುತ್ತಾರೆ. ಬಾಲನಟಿ ರಿವಾ ಅರೋರಾ ವಯಸ್ಸು ಇಂಟರ್‌ನೆಟ್‌ನಲ್ಲಿ ಹಲವು ಬಾರಿ ಚರ್ಚೆಯಾಗಿದೆ.

ರಿವಾ ಅರೋರಾ ಕೇವಲ ನಟಿ ಮಾತ್ರವಲ್ಲದೆ ಕಂಟೆಂಟ್ ಕ್ರಿಯೇಟರ್. ಆಕೆ ಫ್ಯಾಷನಿಸ್ಟ್ ಆಗಿದ್ದು, ತನ್ನ ಸುಂದರ ಚಿತ್ರಗಳ ಮೂಲಕ ಅಭಿಮಾನಿಗಳನ್ನು ಆಕರ್ಷಿಸುತ್ತಾರೆ. ಇತ್ತೀಚೆಗಷ್ಟೇ 10 ಮಿಲಿಯನ್ ಫಾಲೋವರ್ಸ್‌ಗಳನ್ನು ಪಡೆದ ಖುಷಿಗೆ 40 ಲಕ್ಷ ಮೌಲ್ಯದ ಆಡಿ ಕ್ಯೂ3 ಕಾರು ಖರೀದಿಸಿದ್ದಾರೆ.

ರಿವಾ ಅರೋರಾ ಮ್ಯೂಸಿಕ್ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಮತ್ತು ತನಗಿಂತ 26 ವರ್ಷ ವಯಸ್ಸಿನ ಕರಣ್ ಕುಂದ್ರಾ ಅವರ ಜೊತೆಗೆ ರೊಮ್ಯಾನ್ಸ್ ಮಾಡಿದ್ದಕ್ಕಾಗಿ ಸಕತ್ ಟ್ರೋಲ್‌ಗೆ ಒಳಗಾಗಿದ್ದಾರೆ. ಮತ್ತೊಂದು ವೀಡಿಯೊದಲ್ಲಿ, ಅವರು 46 ವರ್ಷದ ಗಾಯಕ ಮಿಕಾ ಸಿಂಗ್ ಅವರೊಂದಿಗೆ ನೃತ್ಯ ಮಾಡಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು.

More from Filmibeat

English summary
Youngest and richest child actress Riva Arora.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X