ಒಂದ್ಕಾಲದಲ್ಲಿ ಸ್ಟಾರ್‌ ನಟಿಯಾಗಿ ಮೆರೆದ ಈ ಚೆಲುವೆಯನ್ನು ಈಗ ಗುರುತು ಹಿಡಿಯುವುದು ಕೂಡ ಕಷ್ಟ..!

ಸೆಲೆಬ್ರೆಟಿಗಳಿಗೆ ತಮ್ಮ ಸೌಂದರ್ಯ ಕೊಂಚ ಡಲ್ ಹೊಡೀತಿದೆ ಅಂತ ಗೊತ್ತಾದ ತಕ್ಷಣವೇ ಸರ್ಜರಿಗಳ ಮೊರೆ ಹೋಗುತ್ತಾರೆ. ಲಕ್ಷಾಂತರ ರೂಪಾಯಿಗಳನ್ನು ನೀರಿನಂತೆ ಖರ್ಚು ಮಾಡಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಈ ಸಾಲಿಗೆ ಈಗ ಬಾಲಿವುಡ್ ನಾಯಕಿ ರಿಮಿ ಸೇನ್ ಕೂಡ ಸೇರಿದ್ದಾರಾ ಅನ್ನುವ ಅನುಮಾನ ಅನೇಕರನ್ನು ಈಗ ಕಾಡುತ್ತಿದೆ.

ಹೌದು. ರಿಮಿ ಸೇನ್.. ಒಂದ್ಕಾಲದಲ್ಲಿ ಪ್ರಿಯಾಂಕ ಚೋಪ್ರಾ, ಕತ್ರಿನಾ ಕೈಫ್ ಮತ್ತು ದೀಪಿಕಾ ಪಡುಕೋಣೆ ಅವರನ್ನು ಸೆಡ್ಡು ಹೊಡೆದಿದ್ದ ಬೆಂಗಾಲಿ ಬೆಡಗಿ. ಹಂಗಾಮಾ.. ಧೂಮ್.. ಫಿರ್ ಹೇರಾ ಪೇರಿ.. ಗರಮ್ ಮಸಾಲಾ.. ಕ್ಯೂಂ ಕೀ.. ಧೂಮ್ 2.. ಗೋಲ್‌ಮಾಲ್.. ಹೀಗೆ ಒಂದಾದ ಮೇಲೊಂದು ಸಿನಿಮಾದಲ್ಲಿ, ಒಬ್ಬರಾದ ಮೇಲೊಬ್ಬರಂತೆ ಸೂಪರ್ ಸ್ಟಾರ್‌ಗಳ ಜೊತೆ ಕಾಣಿಸಿಕೊಂಡಿದ್ದವರು ರಿಮಿ ಸೇನ್. ಮೂರು ವರ್ಷದಲ್ಲಿ 07 ಹಿಟ್ ಸಿನಿಮಾ ನೀಡಿದ ಹೆಗ್ಗಳಿಕೆ ಕೂಡ ಇವರದ್ದು.

Rimi Sen addresses plastic surgery rumors Clarifies she has only had fillers and Botox

ಆದರೆ, ಆ ನಂತರ ಏನಾಯಿತೋ ಖ್ಯಾತಿಯ ಉತ್ತುಂಗದಲ್ಲಿದ್ದ ರಿಮಿ ಸೇನ್, 2009ರ ಸುಮಾರು ದೊಪ್ಪನೆ ನೆಲಕ್ಕೆ ಬಿದ್ದರು. ಅವಕಾಶಗಳ ಕೊರತೆ ಎದುರಿಸಿದರು. 2011ರ ನಂತರ ಬಾಲಿವುಡ್‌ನಿಂದ ಸಂಪೂರ್ಣವಾಗಿ ಕಣ್ಮರೆಯಾದರು. ಅಲ್ಲಿಂದಾಚೆ ಬಿಗ್ ಬಾಸ್ ಮತ್ತು ಜಲಕ್ ದಿಕ್ಲಾ ಜಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ ರಿಮಿ ಸೇನ್, ಚಿತ್ರಕ್ಕೆ ಬಣ್ಣ ಹಚ್ಚಿ 13 ವರ್ಷಗಳೇ ಉರುಳಿವೆ.

ಇಂಥಾ ರಿಮಿ ಸೇನ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ತಮ್ಮ ಅಭಿಮಾನಿಗಳಿಗಾಗಿ ನಿತ್ಯ ನಿರಂತರ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆ ಪೈಕಿ ಇತ್ತೀಚೆನ ಇವರ ಕೆಲ ಫೋಟೋಗಳು ಅನೇಕರಲ್ಲಿ ಅನುಮಾನವನ್ನು ಹುಟ್ಟು ಹಾಕಿವೆ. ಒಂದ್ಕಾಲದಲ್ಲಿ ಸಹಜ ಸೌಂದರ್ಯದ ಗಣಿಯಾಗಿದ್ದ ರಿಮಿ ಕೂಡ, ಪ್ಲ್ಯಾಸ್ಟಿಕ್ ಸರ್ಜರಿಗೊಳಗಾಗಿದ್ದಾರೆ ಎನ್ನುವ ಚರ್ಚೆಗೆ ಕೂಡ ಈ ಫೋಟೋಗಳು ನಾಂದಿ ಹಾಡಿವೆ.

Rimi Sen addresses plastic surgery rumors Clarifies she has only had fillers and Botox

ಹೀಗಾಗಿಯೇ ವ್ಯಕ್ತವಾಗುತ್ತಿರುವ ಟೀಕೆಗಳಿಗೆ ಉತ್ತರವನ್ನು ನೀಡಿರುವ ರಿಮಿ ಸೇನ್, ನಾನ್ಯಾಕೇ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಲಿ ಎಂದಿದ್ದಾರೆ. ನಡೆಯುತ್ತಿರುವ ಚರ್ಚೆಯನ್ನೆಲ್ಲ ಗಮನಿಸಿ ಗಹಗಹಿಸಿ ನಕ್ಕಿದ್ದಾರೆ.

ಹೌದು, ಹಿಂದೂಸ್ತಾನ್ ಟೈಮ್ಸ್ ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರಿಮಿ ಸೇನ್, ಯಾರಾದರೂ ಅಪರಾಧ ಮಾಡಿ ಆ ನಂತರ ಓಡಿ ಹೋಗದ ಹೊರತು ಪ್ಲಾಸ್ಟಿಕ್ ಸರ್ಜರಿ ಮಾಡುವ ಅಗತ್ಯ ಇಲ್ಲ ಎಂದಿದ್ದಾರೆ. ಭಾರತದ ಹೊರಗೆ ಅನೇಕ ಉತ್ತರಮ ವೈದ್ಯರಿದ್ದಾರೆ. ಅವರು ಫೇಸ್‌ಲಿಫ್ಟ್‌ನಲ್ಲಿ ಉತ್ತಮರಾಗಿದ್ದಾರೆ. ನನಗೂ ಅದನ್ನು ಮಾಡಿಸಬೇಕೆಂಬ ಆಸೆಯಿದೆ ಎಂದಿರುವ ರಿಮಿ ಸೇನ್, ನನಗೆ ಐವತ್ತು ವಯಸ್ಸಾದ ಮೇಲೆ ನಾನು ಆ ಬಗ್ಗೆ ಯೋಚನೆ ಮಾಡುತ್ತೇನೆ ಎಂದಿದ್ದಾರೆ. ಸದ್ಯಕ್ಕೆ ಹಾಗೂ ಹೀಗೂ ಈ ರೂಪದಿಂದ ಕೆಲಸ ನಡೆಯುತ್ತಿದೆ ಎಂದಿದ್ದಾರೆ.

rimi-sen-addresses-plastic-surgery-rumors-clarifies-she-has-only-had-fillers-and-botox

ಮುಂದುವರೆದು ಮಾತನಾಡಿರುವ ರಿಮಿ ಸೇನ್, ಸದ್ಯಕ್ಕೆ ನಾನು ಇಬ್ಬರು ವೈದ್ಯರ ಜೊತೆ ಸಂಪರ್ಕದಲ್ಲಿದ್ದೇನೆ, ಅವರ ಜೊತೆ ನಿರಂತರ ಸಮಾಲೋಚನೆ ಮಾಡುತ್ತೇನೆ ಅವರಿಂದ ನಾನು ಬೊಟೊಕ್ಸ್ ಪಿಆರ್ ಪಿ ಚಿಕಿತ್ಸೆ ಮಾತ್ರ ಮಾಡಿದ್ದೇನೆ ಎಂದಿದ್ದಾರೆ. ನಿಮಗೆ ನನ್ನ ಈ ರೂಪಾಂತರ ಇಷ್ಟವಾಗದೇ ಇದ್ದರೆ, ಎಲ್ಲಿ ನಾನು ಎಡವಿದ್ದೇನೆ ಎನ್ನುವುದನ್ನು ನನಗೆ ಹೇಳಿ, ಆಗ ನಾನು ನನ್ನ ವೈದ್ಯರಿಗೆ ಅವರು ಎಲ್ಲಿ ತಪ್ಪು ಮಾಡುತ್ತಿದ್ದಾರೆ ಎಂದು ಹೇಳಬಹುದು, ತಪ್ಪುಗಳನ್ನು ಸರಿಪಡಿಸಿ ಎಂದು ಕೂಡ ಹೇಳಬಹುದು ಎಂದಿದ್ದಾರೆ.

ಒಟ್ನಲ್ಲಿ ರಿಮಿ ಸೇನ್ ಸದ್ಯಕ್ಕೆ ನಾನು ಯಾವುದೇ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಂಡಿಲ್ಲವೆಂದು ಖಂಡ ತುಂಡವಾಗಿ ಹೇಳಿದ್ದಾರೆ. ಬೊಟೊಕ್ಸ್ ಪಿಆರ್‌ಪಿ ಚಿಕಿತ್ಸೆಯಿಂದ ಮುಖದಲ್ಲಿ ಕೆಲ ಬದಲಾವಣೆಗಳಾಗಿವೆ ಎಂದಿದ್ದಾರೆ. ಆದರೂ ಅನೇಕರಲ್ಲಿರುವ ಅನುಮಾನ ಇನ್ನೂ ದೂರವಾಗಿಲ್ಲ. ರಿಮಿ ಕುರಿತು ಚರ್ಚೆಯೂ ಮುಕ್ತಾಯವಾಗುತ್ತಿಲ್ಲ

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X