ರಶ್ಮಿಕಾಗೆ ಒಂದಲ್ಲ ಎರಡೆರಡು ಬಾರಿ ಖಡಕ್ ತಿರುಗೇಟು ಕೊಟ್ಟಿದ್ದ ರಿಷಬ್ ಶೆಟ್ಟಿ!
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗದಿಂದ ದೂರಾಗಿಬಿಟ್ಟಿದ್ದಾರೆ. ಕೆಲವರು ಆಕೆಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಾರೆ. ಹಿಂದೆ ಆಕೆಯನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಿ ಎಂದು ನೆಟ್ಟಿಗರು ಆಗ್ರಹಿಸಿದ್ದರು. ಗೊತ್ತೋ ಗೊತ್ತಿಲ್ಲದೆಯೇ ರಶ್ಮಿಕಾ ಕೆಲವೊಮ್ಮೆ ಎಡವಟ್ಟು ಮಾಡಿಕೊಂಡಿದ್ದಾರೆ. ಇತ್ತೀಚೆಗೆ ವೇದಿಕೆಯೊಂದರಲ್ಲಿ ನಾನು ಹೈದರಾಬಾದ್‌ನವಳು ಎಂದಿದ್ದರು. ಬಳಿಕ ಸಂದರ್ಶನವೊಂದರಲ್ಲಿ ನಾನು ಕನ್ನಡದ ಹುಡುಗಿ ಎಂದು ವರಸೆ ಬದಲಿಸಿದ್ದರು.
ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಪ್ರೀತಿಸಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದು ಬಳಿಕ ದೂರಾಗಿದ್ದು ಗೊತ್ತೇಯಿದೆ. ಬ್ರೇಕಪ್ ಬಳಿಕ ತಾನಾಯ್ತು ತನ್ನ ಸಿನಿಮಾ ಆಯ್ತು ಎಂದು ಕೊಡಗಿನ ಬೆಡಗಿ ಕರಿಯರ್ ಕಡೆ ಗಮನ ಹರಿಸಿದ್ದಾರೆ. ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಆಕೆ ನಟಿಸುವ ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಆಗುತ್ತಿವೆ. ದಿಢೀರನೆ ರಕ್ಷಿತ್ ಶೆಟ್ಟಿ ಜೊತೆಗಿನ ಎಂಗೇಜ್‌ಮೆಂಟ್ ಮುರಿದು ವಿಜಯ್ ದೇವರಕೊಂಡಗೆ ಆಕೆ ಹತ್ತಿರವಾಗಿದ್ದು ಕೆಲ ಅಭಿಮಾನಿಗಳು ಬೇಸರಕ್ಕೆ ಕಾರಣವಾಗಿದೆ.

ನೋಡ್ತಾ ನೋಡ್ತಾ ರಶ್ಮಿಕಾ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿ ಗುರ್ತಿಸಿಕೊಂಡಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್‌ಗಳ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮಹಿಳಾ ಪ್ರಧಾನ ಸಿನಿಮಾಗಳು ಕೂಡ ಆಕೆಯ ಕೈಯಲ್ಲಿವೆ. ಬ್ರೇಕಪ್ ಬಳಿಕ ಕೂಡ ನಾನು ಹಾಗೂ ರಶ್ಮಿಕಾ ಸ್ನೇಹಿತರಾಗಿ ಇದ್ದೀವಿ ಎಂದು ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದಾರೆ. ಆದರೆ ರಿಷಬ್ ಶೆಟ್ಟಿ ಹಾಗೂ ರಶ್ಮಿಕಾ ನಡುವೆ ಭಿನ್ನಾಭಿಪ್ರಾಯಗಳಿವೆ.
ರಶ್ಮಿಕಾಳನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ರಿಷಬ್ ಶೆಟ್ಟಿ. 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ನಟಿಸಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆಗ ಶುರುವಾಗಿದ್ದ ರಕ್ಷಿತ್-ರಶ್ಮಿಕಾ ಸ್ನೇಹ ಬಳಿಕ ಪ್ರೀತಿಗೆ ತಿರುಗಿ ಎಂಗೇಜ್‌ಮೆಂಟ್ ತನಕ ಹೋಗಿತ್ತು. ಆ ಸಮಯದಲ್ಲಿ ರಕ್ಷಿತ್-ರಿಷಬ್ ಆತ್ಮೀಯ ಸ್ನೇಹಿತರು. ಹಾಗಾಗಿ ಎಲ್ಲರೊಟ್ಟಿಗೆ ರಶ್ಮಿಕಾ ಉತ್ತಮ ಒಡನಾಟ ಇಟ್ಟುಕೊಂಡಿದ್ದರು.
ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಪರಂವಃ ಸ್ಟುಡಿಯೋ ಸಂಸ್ಥೆ ಹೆಸರು ಹೇಳಲು ರಶ್ಮಿಕಾ ಡ್ರಾಮಾ ಮಾಡಿದ್ದರು. 'ಕಿರಿಕ್‌ಪಾರ್ಟಿ' ತಂಡದವರು ನನ್ನ ಫೋಟೊ ಸಿನಿಮಾದಲ್ಲಿ ನಟಿಸುವಂತೆ ಕೇಳಿದ್ದರು. ನಾನು ಒಪ್ಪಿರಲಿಲ್ಲ. ಬಳಿಕ ನಟಿಸುವಂತೆ ದುಂಬಾಲು ಬಿದ್ದಿದ್ದರು. 'ಪರಂವಹ್ ಸ್ಟುಡಿಯೋಸ್' ಹೆಸರು ಹೇಳದೇ ವ್ಯಂಗ್ಯವಾಗಿ ಬೆರಳು ತೋರಿಸುತ್ತಾ ಆ ಸಂಸ್ಥೆಯಿಂದ ಕರೆ ಬಂದಿತ್ತು. ನಾನು ನಟಿಸೋಕೆ ಇಷ್ಟ ಇಲ್ಲ ಎಂದಿದ್ದೆ" ಎಂದು ರಶ್ಮಿಕಾ ಹೇಳಿದ್ದರು.
ರಶ್ಮಿಕಾ ಹೀಗೆ 'ಪರಂವಹ್ ಸ್ಟುಡಿಯೋಸ್' ಹೆಸರು ಹೇಳುವುದಕ್ಕೂ ಹಿಂದೆ ಮುಂದೆ ನೋಡಿದ್ದು ರಿಷಬ್ ಶೆಟ್ಟಿಗೆ ಬೇಸರವಾಗಿತ್ತು ಎನಿಸುತ್ತದೆ. ರಶ್ಮಿಕಾ ಹೆಸರು ಹೇಳದೇ ಆಕೆಯ ಸ್ಟೈಲ್‌ನಲ್ಲೇ ರಿಷಬ್ ತಿರುಗೇಟು ಕೊಟ್ಟಿದ್ದರು. ಸಂದರ್ಶನವೊಂದರಲ್ಲಿ ಸಮಂತಾ, ರಶ್ಮಿಕಾ, ಕೀರ್ತಿ ಸುರೇಶ್, ಸಾಯಿ ಪಲ್ಲವಿ ಈ 4 ಜನರಲ್ಲಿ ಯಾರ ನಟನೆ ಇಷ್ಟ? ಯಾರೊಟ್ಟಿಗೆ ನಟಿಸ್ತೀರಾ? ಎನ್ನುವ ಪ್ರಶ್ನೆಗೆ ರಿಷಬ್ ಶೆಟ್ಟಿ ಎದುರಾಗಿತ್ತು. ಅದಕ್ಕೆ ಉತ್ತರಿಸಿದ್ದ ರಿಷಬ್ ನೀವು ಹೇಳಿದ ಹೆಸರುಗಳಲ್ಲಿ ಈ ತರಹದ (ರಶ್ಮಿಕಾ ಸನ್ನೆ ಮಾಡಿ ತೋರಿಸಿದಂತೆ) ನಟಿಯರು ನನಗೆ ಇಷ್ಟ ಇಲ್ಲ" ಎಂದು ಪರೋಕ್ಷವಾಗಿ ರಶ್ಮಿಕಾಗೆ ಟಾಂಗ್ ಕೊಟ್ಟಿದ್ದರು.
'ಕಿರಿಕ್ ಪಾರ್ಟಿ' ಸಿನಿಮಾ 8 ವರ್ಷ ಪೂರೈಸಿದ ಸಮಯದಲ್ಲಿ ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದರು. ಆಗ ಅವರು ಹಂಚಿಕೊಂಡಿದ್ದ ಫೋಟೊದಲ್ಲಿ ರಶ್ಮಿಕಾ ಮಂದಣ್ಣ ಇರಲಿಲ್ಲ. ಬೇಕೆಂದೇ ಈ ಫೋಟೊ ಹಂಚಿಕೊಂಡಿದ್ದಾರೆ. ರಶ್ಮಿಕಾಗೆ ಕೌಂಟರ್ ಕೊಡಲು ಈ ರೀತಿ ಮಾಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಒಟ್ಟಾರೆ ರಿಷಬ್ ಪರೋಕ್ಷವಾಗಿ ಎರಡು ಬಾರಿ ರಶ್ಮಿಕಾಗೆ ಟಾಂಗ್ ಕೊಟ್ಟಿದ್ದರು.


Click it and Unblock the Notifications











