ಗಂಡ್ಮಕ್ಳು ಅಂದ್ರೆ ಪಾಪ ಅನ್ಸತ್ತೆ, ಅವ್ರ ಕಷ್ಟಗಳನ್ನು ಯಾರು ಕೇಳಲ್ಲ; ಪ್ರಗತಿ ಹೇಳಿಕೆ ವೈರಲ್

ಸ್ಯಾಂಡಲ್‌ವುಡ್ ಕ್ಯೂಟ್ ಕಪಲ್ ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ. ಇಬ್ಬರೂ ಈಗ ಚಿತ್ರರಂಗದಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ನಟನೆ- ನಿರ್ದೇಶನದಲ್ಲಿ ರಿಷಬ್ ತೊಡಗಿಸಿಕೊಂಡಿದ್ದಾರೆ. 'ಕಾಂತಾರ' ಸಕ್ಸಸ್ ಬಳಿಕ ಅವರ ಸಿನಿಮಾಗಳ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಪ್ರಗತಿ ಕೂಡ ಕಾಸ್ಟ್ಯೂಮ್ ಡಿಸೈನರ್ ಆಗಿ ಗುರ್ತಿಸಿಕೊಂಡಿದ್ದಾರೆ.

ರಿಷಬ್ ಹಾಗೂ ಪ್ರಗತಿ ಪ್ರೀತಿಸಿ ಮದುವೆ ಆದವರು. 8 ವರ್ಷಗಳ ಹಿಂದೆ ಇಬ್ಬರು ಹಸೆಮಣೆ ಏರಿದ್ದರು. ದಂಪತಿಗೆ ಒಬ್ಬ ಮಗ ಹಾಗೂ ಮಗಳು ಇದ್ದಾರೆ. ಸದ್ಯ ಇಬ್ಬರೂ 'ಕಾಂತಾರ-1' ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ರಿಷಬ್ ತಮ್ಮ ಹುಟ್ಟೂರಲ್ಲಿ ಭಾರೀ ಸೆಟ್ ನಿರ್ಮಿಸಿ ಚಿತ್ರೀಕರಣ ನಡೆಸುತ್ತಿದ್ದಾರೆ. ಮಗನನ್ನು ಬೆಂಗಳೂರಿನ ಶಾಲೆ ಬಿಡಿಸಿ ಕುಂದಾಪುರದಲ್ಲಿ ಶಾಲೆಗೆ ಸೇರಿದಿದ್ದಾರೆ. ಒಂದರ್ಥದಲ್ಲಿ ಇಬ್ಬರು ಮಕ್ಕಳ ಜೊತೆಗೆ ರಿಷಬ್-ಪ್ರಗತಿ ದಂಪತಿ ಅಲ್ಲಿ ಶಿಫ್ಟ್ ಆಗಿದ್ದಾರೆ.

Rishab Shetty s wife Pragathi intresting comments on Men s mental health Common challenges

'ಕಾಂತಾರ' ಚಿತ್ರಕ್ಕೆ ಕಾಸ್ಟ್ಯೂಮ್ ಡಿಸೈನರ್ ಆಗಿ ಮಾತ್ರವಲ್ಲದೇ ಸಣ್ಣ ಪಾತ್ರದಲ್ಲಿ ಕೂಡ ಪ್ರಗತಿ ನಟಿಸಿದ್ದರು. ಇನ್ನು ರಿಷಬ್ ಶೆಟ್ಟಿ ಫಿಲ್ಮ್ಸ್ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ದಾರೆ. ಪತಿಯ ರೀತಿಯಲ್ಲೇ ಅವರು ಬಹಳ ಬ್ಯುಸಿಯಾಗಿಬಿಟ್ಟಿದ್ದಾರೆ. ಇತ್ತೀಚೆಗೆ ಅನುಶ್ರೀ ಯೂಟ್ಯೂಬ್ ಸಂದರ್ಶನದಲ್ಲಿ ಪ್ರಗತಿ ಶೆಟ್ಟಿ ಭಾಗವಹಿಸಿದ್ದರು. ಈ ವೇಳೆ ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ಪುರುಷರ ಕಷ್ಟಗಳ ಬಗ್ಗೆ ಯಾರು ಮಾತನಾಡಲ್ಲ. ಅವರ ಬಗ್ಗೆ ಯಾರು ಹೆಚ್ಚು ಗಮನ ಹರಿಸಲ್ಲ. ಪುರುಷನಾಗಿ ಹುಟ್ಟಿದ ಮೇಲೆ ಅದು ಅವರ ಜವಾಬ್ದಾರಿ ಎನ್ನುವವರೇ ಹೆಚ್ಚು. ಆದರೆ ಅವರು ಕೂಡ ಬಹಳ ಒತ್ತಡದಲ್ಲಿ ಜೀವನದಲ್ಲಿ ನಡೆಸುತ್ತಾರೆ. ಆದರೆ ಈ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳಲ್ಲ, ಹೆಚ್ಚು ಮಾತನಾಡಲ್ಲ. ಬಗ್ಗೆ ಚರ್ಚೆ ನಡೆಯುವುದೇ ಕಮ್ಮಿ. ಆದರೆ ಈ ಬಗ್ಗೆ ಇದೀಗ ಪ್ರಗತಿ ಶೆಟ್ಟಿ ಮಾತನಾಡಿರುವುದು ಮಾತುಗಳು ವೈರಲ್ ಆಗುತ್ತಿದೆ.

Rishab Shetty s wife Pragathi intresting comments on Men s mental health Common challenges

ಪ್ರಗತಿ ಶೆಟ್ಟಿ ಮಾತನಾಡುತ್ತಾ ನನಗೆ ಗಂಡು ಮಕ್ಕಳ ಬಗ್ಗೆ ಅನುಕಂಪ ಜಾಸ್ತಿಯಿದೆ. ಯಾಕಂದರೆ ನನ್ನ ಸುತ್ತಾಮುತ್ತ ಹುಡುಗರು ಹೆಚ್ಚು ಕೆಲಸ ಮಾಡುತ್ತಿರುತ್ತಾರೆ. ಸಿನಿಮಾ ಕೆಲಸಗಳಲ್ಲಿ ಅವರೇ ಹೆಚ್ಚು ತೊಡಗಿಸಿಕೊಂಡಿದ್ದಾರೆ. ನಿರ್ದೇಶಕರಾಗು ಕನಸು ಕಂಡವರು, ಕಾರ್ ಡ್ರೈವರ್ ಹೀಗೆ ಸಾಕಷ್ಟು ಹುಡುಗರ ಜೊತೆ ಮಾತನಾಡುತ್ತಿರುತ್ತೇನೆ. ಅದನ್ನೆಲ್ಲಾ ಕೇಳಿದ ಮೇಲೆ ನನಗೆ ಗಂಡು ಮಕ್ಕಳು ಅಂದ್ರೆ ಪಾಪ ಅನಿಸುತ್ತದೆ ಎಂದಿದ್ದಾರೆ.

ಗಂಡು ಮಕ್ಕಳ ಕಷ್ಟಗಳನ್ನು ಯಾರು ಜಾಸ್ತಿ ಕೇಳಲ್ಲ. ನೀವು ಅದನ್ನು ಗಮನಿಸಿರಬಹುದು. ನಾನು ನಿಮ್ಮನ್ನ(ಅನುಶ್ರೀ) ಕೇಳಬಹುದು. ನೀವು ನನ್ನನ್ನು ಕೇಳಬಹುದು. ಅಥವಾ ಹೆಣ್ಣುಮಕ್ಕಳು ಏನಾದರೂ ಮಾಡಿದಾಗ ನಾನು ಬಹಳ ಹೆಮ್ಮೆ ಎಂದುಕೊಳ್ಳುತ್ತೇವೆ. ಆದರೆ ಹುಡುಗರ ವಿಚಾರದಲ್ಲಿ ಅದು ಅವರ ಜವಾಬ್ದಾರಿ, ಇಎಂಐ ಅವರೇ ಕಟ್ಟಬೇಕು ಎಂದು ಹೇಳುತ್ತಾರೆ.

ನಾನು ಹೇಳುವುದು ಕೆಲವರಿಗೆ ತಪ್ಪು ಅನಿಸಬಹುದು. ಮಹಿಳೆಯರು ಈಗ ಎಲ್ಲಾ ರೀತಿಯ ಕ್ಷೇತ್ರಗಳಲ್ಲಿ ಗುರ್ತಿಸಿಕೊಂಡಿದ್ದೇವೆ. ಎಲ್ಲಾ ಪಾತ್ರಗಳನ್ನು ನಿಭಾಯಿಸುತ್ತೇವೆ. ಆದರೆ ಹೆಣ್ಣು ಮಕ್ಕಳ ಬಗ್ಗೆ ಅನುಕಂಪ ಇರುತ್ತದೆ. ಆದರೆ ಪುರುಷರಿಗೆ ಹೆಚ್ಚು ಒತ್ತಡ ಇರುತ್ತದೆ. ಈಗ ನಾವು ಮಕ್ಕಳನ್ನು ಸರಿಯಾಗಿ ಬೆಳೆಸಿದರೆ ಮುಂದೆ ಬದಲಾವಣೆ ಆಗಬಹುದು ಎಂದು ಪ್ರಗತಿ ಶೆಟ್ಟಿ ಹೇಳಿದ್ದಾರೆ.

ಪ್ರತಿ ಯಶಸ್ವಿ ಮಹಿಳೆಯ ಹಿಂದೆ ಒಬ್ಬ ಪುರುಷ ಇರ್ತಾನೆ. ಅದು ತಂದೆ, ಪತಿ, ಮಗ, ಸ್ನೇಹಿತ ಯಾರು ಬೇಕಾದರೂ ಕೂಡ ಆಗಿರಬಹುದು ಎಂದು ಅವರು ವಿವರಿಸಿದ್ದಾರೆ. ಸದ್ಯ ಪುರುಷರ ಬಗ್ಗೆ ಪ್ರಗತಿ ಶೆಟ್ಟಿ ಮಾತನಾಡಿರುವ ಈ ಮಾತುಗಳು ವೈರಲ್ ಆಗುತ್ತಿದೆ. ನಿಮ್ಮ ಮಾತು ನಿಜ ಎಂದು ಸಾಕಷ್ಟು ಜನ ಕಾಮೆಂಟ್ ಮಾಡ್ತಿದ್ದಾರೆ. ಇನ್‌ಸ್ಟಾ ರೀಲ್ಸ್‌ನಲ್ಲಿ ಸದ್ದು ಮಾಡ್ತಿದೆ. ಇನ್ನು ಸೂಪರ್ ಹಿಟ್ 'ಕಾಂತಾರ' ಸಿನಿಮಾ ಬಿಡುಗಡೆಯಾಗಿ ಇಂದಿಗೆ(ಸೆಪ್ಟೆಂಬರ್ 30) ಎರಡು ವರ್ಷ ಕಳೆದಿದೆ.

More from Filmibeat

English summary
Nobody ask men's problems, says sandalwood costume designer Pragathi Rishab Shetty
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X