twitter
    For Quick Alerts
    ALLOW NOTIFICATIONS  
    For Daily Alerts

    ಬಾಲಿವುಡ್ ಸುರಸುಂದರ ರಿಶಿ ಕಪೂರ್ ಸಿನಿಮಾ ಯಾನದ ಹಿನ್ನೋಟ

    |

    ಬಾಲಿವುಡ್‌ ಗೆ ಇದು ಒಳ್ಳೆಯ ಸಮಯವಲ್ಲ. ನಿನ್ನೆಯಷ್ಟೆ ಶತಮಾನದ ನಟ ಇರ್ಫಾನ್ ಖಾನ್ ಅನ್ನು ಕಳೆದುಕೊಂಡು ದುಖಃ ಇನ್ನೂ ಮಡುಗಟ್ಟಿದ್ದಾಗಲೇ ಹಿರಿಯ ನಟ ರಿಶಿ ಕಪೂರ್ ಇಲ್ಲವಾಗಿದ್ದಾರೆ.

    Recommended Video

    ಬಾಲಿವುಡ್ ದಂತಕಥೆ ರಿಷಿ ಕಪೂರ್ ಇನ್ನಿಲ್ಲ | Rishi Kapoor

    ಕೆಲ ವರ್ಷಗಳಿಂದ ಕ್ಯಾನ್ಸರ್‌ ಜೊತೆಗೆ ಗುದ್ದಾಡುತ್ತಿದ್ದ ಜಾಲಿ ನಟ ರಿಶಿ ಕಪೂರ್ ಇಂದು ಮುಂಜಾನೆ ಅಸುನೀಗಿದ್ದಾರೆ. ಬರೋಬ್ಬರಿ ಅರ್ಧ ಶತಮಾನ ಬಾಲಿವುಡ್‌ನಲ್ಲಿ ಬೇಡಿಕೆಯಲ್ಲಿದ್ದ ನಟ ರಿಶಿ ಕಪೂರ್, ಮಾಡಿದ ನೆನಪುಳಿಯುವ ಸಿನಿಮಾಗಳು ಅಸಂಖ್ಯ.

    ಭಾರತೀಯ ಸಿನಿ ಉದ್ಯಮದ ಅಡಿಗಲ್ಲಾದ ಕಪೂರ್ ಖಾಂದಾನ್ ನ ಕುಡಿಯಲ್ಲೊಬ್ಬರು ರಿಶಿ ಕಪೂರ್. ಕಪೂರ್ ಕುಟುಂಬದವರಾದರೂ ಸಹ ಅವರದ್ದು ಹೂವಿನ ನಡಿಗೆಯೇನೂ ಆಗಿರಲಿಲ್ಲ. ರಿಶಿ ಕಪೂರ್ ಜೀವನ ಪಯಣದ ಕಿರು ಹಿನ್ನೋಟ ಇಲ್ಲಿದೆ.

    ಕಪೂರ್ ಕುಟುಂಬದ ಮೂರನೇ ತಲೆಮಾರಾಗಿ ರಾಜ್ ಕಪೂರ್ ಪುತ್ರ, ಪೃಥ್ವಿ ರಾಜ್‌ಕಪೂರ್ ಮೊಮ್ಮಗನಾಗಿ 4 ಸೆಪ್ಟೆಂಬರ್ 1952 ರಂದು ಹುಟ್ಟಿದರು ರಿಶಿ ಕಪೂರ್. ರಿಶಿ ಕಪೂರ್‌ ಗೆ ಮೂರು ವರ್ಷವಿದ್ದಾಗಲೇ ಸಿನಿಮಾದಲ್ಲಿ ಕಾಣಿಸಿಕೊಂಡರು. ಪ್ಯಾರ್‌ ಹುವಾ ಎಕರಾರ್ ಹುವಾ ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡರು. ಅಲ್ಲಿಂದಲೇ ಅವರ ಸಿನಿ ಜರ್ನಿ ಪ್ರಾರಂಭವಾಗಿದ್ದು.

    ಅಭಿನಯಿಸಿದ ಮೊದಲ ಸಿನಿಮಾದಲ್ಲಿಯೇ ರಾಷ್ಟ್ರಪ್ರಶಸ್ತಿ ಗಳಿಸಿದ್ದು ರಿಶಿ ಹೆಗ್ಗಳಿಕೆ. ಮೊದಲ ಸಿನಿಮಾ 'ಮೇರಾ ನಾಮ್ ಜೋಕರ್‌' ಸಿನಿಮಾಕ್ಕೆ ಅತ್ಯುತ್ತಮ ಬಾಲ್ಯನಟ ಪ್ರಶಸ್ತಿ ರಿಶಿ ಮುಡಿಗೇರಿತು. ಅಲ್ಲಿಂದ ಅವರು ಹಿಂತಿರುಗಿ ನೋಡಿದ್ದೇ ಇಲ್ಲ.

    ಮೇರಾ ನಾಮ್ ಜೋಕರ್ ನಲ್ಲಿ ನಟನೆ

    ಮೇರಾ ನಾಮ್ ಜೋಕರ್ ನಲ್ಲಿ ನಟನೆ

    ಮೊದಲ ಸಿನಿಮಾ ಮೇರಾ ನಾಮ್ ಜೋಕರ್ ಇತಿಹಾಸದಲ್ಲಿ ನಿಂತ ಸಿನಿಮಾವಾದರೂ ಸಹ ಹಣ ಮಾಡಲಿಲ್ಲ. ರಾಜ್‌ ಕಪೂರ್ ವಿಪರೀತ ಸಾಲಕ್ಕೆ ಸಿಕ್ಕಿಕೊಂಡರು. ಆಗ ಮಗ ರಿಶಿ ಕಪೂರ್ ಅನ್ನು ಇಟ್ಟುಕೊಂಡು 'ಬಾಬಿ' ಸಿನಿಮಾ ತೆರೆಗೆ ತಂದರು. ಅದು ರಿಶಿ ಕಪೂರ್ ನಾಯಕನಾಗಿ ಅಭಿನಯಿಸಿದ ಮೊದಲ ಸಿನಿಮಾ. ಸಿನಿಮಾ ಭರ್ಜರಿ ಹಿಟ್ ಸಹ ಆಯಿತು. ಬಾಬಿ ಸಿನಿಮಾದ ಭರ್ಜರಿ ಹಿಟ್ ನಂತರ ಅದೇ ಮಾದರಿಯ ಹಲವು ಪ್ರೇಮಕತೆಗಳಲ್ಲಿ ರಿಶಿ ಅಭಿನಯಿಸಿದರು. ಆದರೆ ಎಲ್ಲವೂ ಯಶಸ್ಸು ಗಳಿಸಲಿಲ್ಲ. ರಿಶಿ ಕಪೂರ್ ಸತತವಾಗಿ ನಾಯಕನಾಗಿ ಅಭಿನಯಿಸಿದ 51 ಸಿನಿಮಾಗಳಲ್ಲಿ ಕೇವಲ 11 ಸಿನಿಮಾಗಳಷ್ಟೆ ಹಿಟ್ ಎನಿಸಿಕೊಂಡವು. ಉಳಿದವೆಲ್ಲಾ ಫ್ಲಾಪ್‌.

    ಹಲವು ಮರೆಯಲಾಗದ ಸಿನಿಮಾ ನೀಡಿದ್ದಾರೆ

    ಹಲವು ಮರೆಯಲಾಗದ ಸಿನಿಮಾ ನೀಡಿದ್ದಾರೆ

    ಆದರೆ ಆ ಹನ್ನೊಂದು ಸಿನಿಮಾಗಳು ಬಾಲಿವುಡ್‌ ಮರೆಯದ ಸಿನಿಮಾಗಳಾಗಿದ್ದವು. ಲೈಲಾ-ಮಜ್ನು, ಸರಗಮ್, ಪ್ರೇಂರೋಗ್, ಕರ್ಜ್ (ಕನ್ನಡದಲ್ಲಿ ಯುಗಪುರುಷ), ಹೀನಾ, ಚಾಂದಿನಿ, ಹನಿಮೂನ್ ಸಿನಿಮಾಗಳು ಬಹುಕಾಲ ನೆನಪಿಟ್ಟುಕೊಳ್ಳುವಂತಹಾ ಸಿನಿಮಾಗಳಾದುವು. ಸೋಲೋ ನಾಯಕನಾಗಿ ಹೆಚ್ಚಿನ ಯಶಸ್ಸು ಕಣದಾಗ ಇಬ್ಬರು ನಾಯಕರ ಸಿನಿಮಾಗಳಲ್ಲಿ ನಟಿಸಲು ಮುಂದಾದರು ರಿಶಿ.

    ನಿರ್ದೇಶನಕ್ಕೂ ಕೈ ಹಾಕಿದ ರಿಶಿ ಕಪೂರ್

    ನಿರ್ದೇಶನಕ್ಕೂ ಕೈ ಹಾಕಿದ ರಿಶಿ ಕಪೂರ್

    1999 ರಲ್ಲಿ ನಿರ್ದೇಶನಕ್ಕೆ ಕೈ ಹಾಕಿದ ರಿಶಿ ಕಪೂರ್ ಅಲ್ಲೂ ಹೆಚ್ಚಿನ ಗಳಿಸಲಿಲ್ಲ. ಕೇವಲ ಎರಡು ಸಿನಿಮಾ ನಿರ್ದೇಶಿಸಿದ ಅವರು, ನಿರ್ದೇಶನ ಕೈಬಿಟ್ಟು ಮತ್ತೆ ನಟನೆಯ ಕಡೆಗೆ ಹೊರಳಿದರು. ಆದರೆ 2000 ದ ನಂತರ ಬಹುತೇಕ ಪೋಷಕಪಾತ್ರಗಳಲ್ಲಿ, ವಿಲನ್ ಪಾತ್ರಗಳಲ್ಲಿ ರಿಶಿ ಕಾಣಿಸಿಕೊಂಡರು.

    2000 ನಂತರ ಪೋಷಕ ಪಾತ್ರ

    2000 ನಂತರ ಪೋಷಕ ಪಾತ್ರ

    ಯೇ ಹೈ ಜಲ್ವಾ, ಫನಾ, ಹಮ್ ತುಮ್ ಸಿನಿಮಾಗಳ ಮೂಲಕ ಪೋಷಕ ಪಾತ್ರಕ್ಕೆ ಎಂಟ್ರಿ ಕೊಟ್ಟ ರಿಶಿ ಅಲ್ಲಿಂದ ಅವರ ಮೂರನೇ ಸಿನಿ ಜರ್ನಿ ಪ್ರಾರಂಭ ಮಾಡಿದರು. ಪೋಷಕ ಪಾತ್ರಗಳಲ್ಲಿ ದೊಡ್ಡ ಯಶಸ್ಸನ್ನೇ ರಿಶಿ ಕಪೂರ್ ಪಡೆದರು. ಹಲವು ನೆನಪುಳಿಯುವ ಪಾತ್ರಗಳನ್ನು ಅವರು ಈ ಸಮಯದಲ್ಲಿ ಮಾಡಿದರು.

    ವಿಲನ್ ಆಗಿಯೂ ಮಿಂಚಿದ ರಿಶಿ ಕಪೂರ್

    ವಿಲನ್ ಆಗಿಯೂ ಮಿಂಚಿದ ರಿಶಿ ಕಪೂರ್

    ವಿಲನ್ ಆಗಿಯೂ ಮಿಂಚಿದ ರಿಶಿ ಕಪೂರ್, ಡಿ ಡೇ, ಅಗ್ನಿಪತ್ ಸಿನಿಮಾದ ಪಾತ್ರಗಳು ನೆನಪುಳಿಯುವಂತಿವೆ. ಸಾಯುವ ಕೆಲ ವರ್ಷಗಳ ಮುಂಚೆ ವಯಸ್ಸಿಗೆ ತಕ್ಕಂತೆ ಸಿನಿಮಾಗಳಲ್ಲಿ ನಟಿಸಿದ ರಿಶಿ, 102 ನಾಟ್‌ಔಟ್, ಕಪೂರ್ ಆಂಡ್ ಕಪೂರ್, ಮುಲ್ಕ್, ದಿ ಬಾಡಿ ಸಿನಿಮಾಗಳು ಅವರಿಗೆ ಹೊಸ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಟ್ಟವು.

    ರಣಬೀರ್ ತಂದೆ ರಿಶಿ ಕಪೂರ್

    ರಣಬೀರ್ ತಂದೆ ರಿಶಿ ಕಪೂರ್

    ವೈಯಕ್ತಿಕ ಜೀವನದಲ್ಲಿ ಹೆಚ್ಚಿನ ಏರಿಳಿತಗಳೇನು ಕಾಣದ ರಿಶಿ ಕಪೂರ್, ತಮ್ಮೊಂದಿಗೆ 15 ಸಿನಿಮಾದಲ್ಲಿ ನಟಿಸಿದ್ದ ನೀತು ಅವರನ್ನು ಮದುವೆಯಾಗಿ, ರಣಬೀರ್ ಕಪೂರ್ ಮತ್ತು ರಿಧಿಮಾ ಕಪೂರ್‌ ಗೆ ಜನ್ಮ ನೀಡಿದರು. ರಣಬೀರ್ ಈಗ ಬಾಲಿವುಡ್‌ನ ಬಹುಬೇಡಿಕೆಯ ನಟರಲ್ಲೊಬ್ಬರು. ರಿಧಿಮಾ ಖ್ಯಾತ ಫ್ಯಾಷನ್ ಡಿಸೈನರ್ ಆಗಿದ್ದಾರೆ.

    ಟ್ವಿಟ್ಟರ್ ಸಕ್ರಿಯರಾಗಿದ್ದ ರಿಶಿ ಕಪೂರ್

    ಟ್ವಿಟ್ಟರ್ ಸಕ್ರಿಯರಾಗಿದ್ದ ರಿಶಿ ಕಪೂರ್

    ಕಟು ಮಾತುಗಳಿಗೆ ಖ್ಯಾತರಾಗಿದ್ದ ರಿಶಿ ಕಪೂರ್, ಟ್ವಿಟ್ಟರ್‌ ನಲ್ಲಿ ಸದಾ ಒಂದಿಲ್ಲೊಂದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದರು. ಆದರೆ ಅಷ್ಟೆ ಅಭಿಮಾನಿಗಳನ್ನೂ ಅವರು ಹೊಂದಿದ್ದರು. 'ದನದ ಮಾಂಸ ತಿನ್ನುವ ಹಿಂದೂ' ಟ್ವೀಟ್ ಭಾರಿ ವಿವಾದಕ್ಕೆ ಕಾರಣವಾಗಿತ್ತು. 2018 ರಲ್ಲಿ ಅವರಿಗೆ ಬೋನ್ ಮ್ಯಾರೊ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ನಂತರ ಇಂದು 2020 ಏಪ್ರಿಲ್ 30 ರಂದು ಮರಣ ಹೊಂದಿದರು.

    English summary
    Actor Rishi Kapoor passed away today. Here is the look at his cine journey. He acted in so many memorable movies.
    Thursday, April 30, 2020, 13:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X