twitter
    For Quick Alerts
    ALLOW NOTIFICATIONS  
    For Daily Alerts

    ಪ್ರೇಮಿಗಳ ದಿನ ನೆನಪಿಸಿಕೊಳ್ಳಬೇಕಾದ ಕನ್ನಡ ಸಿನಿಮಾಗಳು

    |

    ಪ್ರೀತಿ ಮತ್ತು ಸಿನಿಮಾಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಪ್ರೇಮವೇ ಮೊದಲು ನಿಜ ಆದರೆ ಪ್ರೇಮದ ಪ್ರಸಾರ ಮಾಡಿದ್ದು, ಪ್ರೇಮಿಸಲು ಪ್ರೇಪಿಸಿದ್ದು ಜನಪದ, ಸಾಹಿತ್ಯದ ನಂತರ ಸಿನಿಮಾಗಳೇ.

    ಪ್ರೀತಿ-ಪ್ರೇಮದ ಕತೆ ಇಲ್ಲದ ಭಾರತೀಯ ಸಿನಿಮಾಗಳನ್ನು ಊಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಸಿನಿಮಾಗಳಲ್ಲಿ ಪ್ರೀತಿ-ಪ್ರೇಮ ಎಂಬುದು ಬಹಳ ಮುಖ್ಯ ಅಂಶ. ಹಾಗೆಯೇ ಪ್ರೇಮಿಗಳಿಗಳೂ ಅಷ್ಟೆ, ಸಿನಿಮಾದ ಪ್ರೇಮ ಗೀತೆಯೊಂದನ್ನು ಗುನುಗಿಕೊಳ್ಳದ ಪ್ರೇಮಿ ಇರಲಾರ. ಸಿನಿಮಾದ ದೃಶ್ಯವನ್ನು ತನ್ನ ಪ್ರೇಮಕತೆಯೊಂದಿಗೆ ಸಮೀಕರಿಸಿಕೊಂಡು ಮನಸ್ಸಲ್ಲೇ ಮಂಡಿಗೆ ಮೆಲ್ಲುವ ಪ್ರೇಮಿಗಳು ಸಹ ಕಡಿಮೆ ಇಲ್ಲ.

    ಕನ್ನಡ ಸಿನಿಮಾಗಳಲ್ಲಿ ಅದ್ಭುತವಾದ ಪ್ರೇಮಕತೆ ಗಳು ಬಂದು ಹೋಗಿವೆ. ಅದರಲ್ಲಿ ಕೆಲವು ಮಾತ್ರ ದಶಕಗಳು ಕಳೆದರು ಜನರ ಮನಸ್ಸಲ್ಲಿ ನಿಂತಿವೆ. ಮುಂದೆಯೂ ನೆಲೆ ನಿಂತಿರುತ್ತವೆ.

    'ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳಿಗೆ' ಎಂದು ಬ್ಲಾಕ್‌ ಆಂಡ್ ವೈಟ್ ಕಾಲದಲ್ಲಿಯೇ ಹಾಡಿದ್ದರು ರಾಜ್‌ಕುಮಾರ್-ಭಾರತಿ. ಈ ಹಾಡಿಗಿಂತಲೂ ನಂಬಿಕೆ ತುಂಬಬಲ್ಲ ಹಾಡು ಮತ್ತೊಂದಿಲ್ಲ, ಬಡ ಪ್ರೇಮಿಗಳಿಗೆ.

    'ನಾ ನಿನ್ನ ಮರೆಯಲಾರೆ'

    'ನಾ ನಿನ್ನ ಮರೆಯಲಾರೆ'

    ಕಲರ್ ಕಾಲಕ್ಕೆ ಬಂದರೆ ಮತ್ತದೇ ಅಣ್ಣಾವ್ರು ನಟಿಸಿರುವ 'ನಾ ನಿಲ್ಲ ಮರೆಯಲಾರೆ' ಸಿನಿಮಾ ಅದೆಷ್ಟೋ ಯುವ ಮನಸ್ಸುಗಳನ್ನು ಪ್ರೇಮಿಸುವಂತೆ ಮಾಡಿತು. ಪ್ರೇಮಿಗಾಗಿ ಎಂಥಹಾ ರಿಸ್ಕ್ ಆದರೂ ಸರಿಯೇ ನುಗ್ಗುವಂತೆ ಮಾಡಿತು. ಜೊತೆಗೆ ಪ್ರೀತಿಯಷ್ಟೆ ಪೋಷಕರೂ ಸಹ ಮುಖ್ಯ ಎಂಬುದನ್ನೂ ತಿಳಿಸಿಕೊಟ್ಟಿತು. ಪ್ರೇಮಿಗಳು ನೋಡಲೇಬೇಕಾದ ಸಿನಿಮಾಗಳಲ್ಲಿ 'ನಾ ನಿಲ್ಲ ಮರೆಯಲಾರೆ' ಒಂದು.

    'ಬಂಧನ' ನವನ್ನು ಮರೆಯುವುದುಂಟೆ

    'ಬಂಧನ' ನವನ್ನು ಮರೆಯುವುದುಂಟೆ

    'ಬಂಧನ' ವನ್ನು ಕನ್ನಡ ಸಿನಿಪ್ರೇಮಿಗಳು ಮರೆಯುವುದುಂಟೆ. ಇದೊಂದು ದುಃಖಾಂತ್ಯದ ಪ್ರೇಮಕತೆ. ಆದರೆ ನಾಯಕನ ಪ್ರೀತಿಯ ಉತ್ಕಟತೆ, ಪ್ರೇಯಸಿಗಾಗಿ ಪ್ರೀತಿಯಿಂದಲೇ ಮಾಡುವ ತ್ಯಾಗ. ಪ್ರೇಯಸಿಯ ಅಸಹಾಯಕತೆ ವಿಷ್ಣುವರ್ಧನ್, ಸುಹಾಸಿನಿ, ಜಗದೀಶ್ ನಟನೆ, ಸಂಗೀತ ಈ ಸಿನಿಮವನ್ನು ಎವರ್‌ಗ್ರೀನ್ ಸಿನಿಮಾ ಮಾಡಿದೆ.

    ಪ್ರೀತಿಗೆ ಅಂತಸ್ತಿನ ಹಂಗಿಲ್ಲವೆಂದ 'ಆಟೋ ರಾಜ'

    ಪ್ರೀತಿಗೆ ಅಂತಸ್ತಿನ ಹಂಗಿಲ್ಲವೆಂದ 'ಆಟೋ ರಾಜ'

    'ಆಟೋ ರಾಜ' ಸಹ ಸುಂದರ ಪ್ರೇಮಕತೆಯೇ. ಶಂಕರ್ ನಾಗ್ ಅನ್ನು ಆಟೊ ಡ್ರೈವರ್‌ಗಳ ಆರಾಧ್ಯ ದೈವ ಮಾಡಿದ ಈ ಸಿನಿಮಾ, 'ನಲಿವಾ ಗುಲಾಬಿ ಹೂವೆ' ಎಂಬ ಸುಂದರ ಗೀತೆಯನ್ನು ಸಹ ಕೊಟ್ಟಿದೆ. ಅಷ್ಟೇ ಅಲ್ಲ, ಪ್ರೇಮಕ್ಕೆ ಅಂತಸ್ತು ಅಡ್ಡಿಯಲ್ಲ ಎಂಬುದನ್ನು ಸಹ ತೋರಿಸಿದ ಸಿನಿಮಾ.

    ಪ್ರೇಮಿಗಳಿಗೆ ಧೈರ್ಯ ತುಂಬಿದ 'ಪ್ರೇಮಲೋಕ'

    ಪ್ರೇಮಿಗಳಿಗೆ ಧೈರ್ಯ ತುಂಬಿದ 'ಪ್ರೇಮಲೋಕ'

    ಕನ್ನಡದ ಪ್ರೇಮಕತೆ ಸಿನಿಮಾಗಳ ಬಗ್ಗೆ ಮಾತನಾಡಿ, 'ಪ್ರೇಮಲೋಕ'ದ ಹೆಸರು ತೆಗೆದುಕೊಳ್ಳದಿದ್ದರೆ ಹೇಗೆ. ರವಿಚಂದ್ರನ್ ರ ಈ ಸಿನಿಮಾ ಪ್ರೇಮಿಗಳಿಗೆ ಧೈರ್ಯ ಕೊಟ್ಟ ಸಿನಿಮಾ. ಪ್ರೀತಿಸಲು ಕಾರಣ ಕೊಟ್ಟ ಸಿನಿಮಾ. ಸಂಪೂರ್ಣ ಯುವತನ ತುಂಬಿದ ಈ ಸಿನಿಮಾ ಸಾವಿರಾರು ಪ್ರೇಮಿಗಳಿಗೆ ಬೈಬಲ್ ಆಗಿತ್ತು ಒಂದು ಕಾಲದಲ್ಲಿ.

    'ಪ್ರೇಮ ರಾಗ ಹಾಡು ಗೆಳತಿ' ಎಂಬ ಅಪ್ಪಟ ಪ್ರೇಮಕತಾ ಸಿನಿಮಾ

    'ಪ್ರೇಮ ರಾಗ ಹಾಡು ಗೆಳತಿ' ಎಂಬ ಅಪ್ಪಟ ಪ್ರೇಮಕತಾ ಸಿನಿಮಾ

    ಶಿವರಾಜ್ ಕುಮಾರ್ ಅವರ ಆರಂಭದ ಹಲವು ಸಿನಿಮಾಗಳು ಪ್ರೇಮಕತೆಗಳೇ ಆಗಿದ್ದವು. ರಮೇಶ್ ಅರವಿಂದ್ ಜೊತೆ ನಟಿಸಿದ ಕೆಲವು ಸಿನಿಮಾಗಳು ಅದ್ಭುತವಾದ ಪ್ರೇಮಕತೆ ಸಿನಿಮಾಗಳಾಗಿ ನಿಂತಿವೆ. 'ನಮ್ಮೂರ ಮಂದಾರ ಹೂವೆ', ಪ್ರೇಮ ರಾಗ ಹಾಡು ಗೆಳತಿ, ಇನ್ನೂ ಕೆಲವು ಸಿನಿಮಾಗಳು 90 ರ ದಶಕದಲ್ಲಿ ಪ್ರೀತಿಸಲು ಹೇಳಿಕೊಟ್ಟವು, ಜೊತೆಗೆ ಗೆಳೆತನದ ಪಾಠವನ್ನೂ ಮಾಡಿದವು.

    ಪ್ರೀತಿಯ ಮುಖ್ಯ ಧಾತು ತ್ಯಾಗದ ಬಗ್ಗೆ ತಿಳಿಸಿದ ರಮೇಶ್ ಸಿನಿಮಾಗಳು

    ಪ್ರೀತಿಯ ಮುಖ್ಯ ಧಾತು ತ್ಯಾಗದ ಬಗ್ಗೆ ತಿಳಿಸಿದ ರಮೇಶ್ ಸಿನಿಮಾಗಳು

    ರಮೇಶ್ ಅರವಿಂದರ ಪ್ರೇಮಕತೆ ಸಿನಿಮಾಗಳು ಪ್ರೇಮದಲ್ಲಿ ಸಾವಧಾನ, ಪರಸ್ಪರ ಗೌರವದ ಪಾಠ ಮಾಡಿದ ಸಿನಿಮಾಗಳು. ಅಮೆರಿಕ-ಅಮೆರಿಕ, ಓ ಮಲ್ಲಿಗೆ, ಬೆಳ್ಳಿ ಮೋಡಗಳು, ನಮ್ಮೂರ ಮಂದಾರ ಹೂವೆ, ಮುಂಗಾರಿನ ಮಿಂಚು ಸಿನಿಮಾ ಅಂತು 90 ರ ದಶಕದ ಮುಂಗಾರು ಮಳೆಯೇ ಆಗಿತ್ತು. ತ್ಯಾಗಮಯಿ ರಮೇಶ್ ಅರವಿಂದ ಪ್ರೀತಿಗಿಂತಲೂ ತ್ಯಾಗ ಮಿಗಿಲು ಎಂಬುದನ್ನು ಸಾರಿದವರು. ಪ್ರೀತಿಯಲ್ಲಿ ತ್ಯಾಗ ಅತಿ ಮುಖ್ಯ ಎಂಬುದನ್ನು ತೋರಿದವರು.

    ಸಿನಿಮಾಗಳಲ್ಲಿ ಪ್ರೇಮದ ಪರಿಭಾಷೆ ಬದಲಾಯ್ತು

    ಸಿನಿಮಾಗಳಲ್ಲಿ ಪ್ರೇಮದ ಪರಿಭಾಷೆ ಬದಲಾಯ್ತು

    2000 ರ ದಶಕದ ಬಳಿಕ ಕನ್ನಡ ಸಿನಿಮಾಗಳಲ್ಲಿ ನಿಧಾನಕ್ಕೆ ಪ್ರೇಮದ ಪರಿಭಾಷೆ ಬದಲಾಗುತ್ತಾ ಸಾಗಿತು. ಯುವತಿಯನ್ನು ಕಾಡಿಸುವ, ಪೀಡಿಸುವ ಸಿನಿಮಾಗಳು ಬಂದವು. ಹುಚ್ಚ, ಓಂ, ಉಪೇಂದ್ರ, ಎ ಇನ್ನೂ ಕೆಲವು ಇಂಥಹಾ ಸಾಲಿನ ಸಿನಿಮಾಗಳಲ್ಲಿ ಪ್ರಮುಖ. ಸಿನಿಮಾಗಳೇ ಪ್ರೀತಿಯ ಪರಿಭಾಷೆಯನ್ನು ಬದಲಿಸಿದವೋ ಅಥವಾ ಪ್ರೇಮಿಗಳ ಬದಲಾದ್ದರಿಂದಲೇ ಸಿನಿಮಾಗಳು ಬದಲಾದವೊ ಅದು ಪ್ರತ್ಯೇಕ ಚರ್ಚೆಯ ವಿಷಯ.

    ಮತ್ತೆ ನವಿರುತನ ತಂದುಕೊಟ್ಟದ್ದು 'ಮುಂಗಾರು ಮಳೆ'

    ಮತ್ತೆ ನವಿರುತನ ತಂದುಕೊಟ್ಟದ್ದು 'ಮುಂಗಾರು ಮಳೆ'

    ಆ ನಂತರ ಮತ್ತೆ ನವಿರು ಪ್ರೇಮಕತೆಗೆ ಸಿನಿಮಾ ರಂಗವನ್ನು ಹೊರಳುವಂತೆ ಮಾಡಿದ್ದು ಯೋಗರಾಜ ಭಟ್ಟರ ಮುಂಗಾರು ಮಳೆ. ಪ್ರೇಮಕ್ಕೆ ನವಿರುತನ, ಹಾಸ್ಯ ಜೊತೆಗೆ ಮತ್ತೆ ತ್ಯಾಗವನ್ನು ಪ್ರೇಮದ ಪ್ರಮುಖ ಅಂಗವೆಂದು ಎತ್ತಿ ತೋರಿಸಿದ ಸಿನಿಮಾ ಮುಂಗಾರು ಮಳೆ. ಇದೇ ಸಮಯದಲ್ಲಿ ಬಿಡುಗಡೆ ಆದ 'ದುನಿಯಾ' ಸಿನಿಮಾವೂ ಸಹ ಪ್ರೇಮದ ಔನ್ಯತ್ಯ ಸಾರಿದ ಸಿನಿಮಾವೇ ಆಗಿದೆ.

    ಯುವತಿಯ ಕಣ್ಣಲ್ಲಿ ಪ್ರೀತಿ ದರ್ಶನ 'ದಿಯಾ'

    ಯುವತಿಯ ಕಣ್ಣಲ್ಲಿ ಪ್ರೀತಿ ದರ್ಶನ 'ದಿಯಾ'

    ಕಳೆದ ವರ್ಷ ಬಿಡುಗಡೆ ಆದ 'ದಿಯಾ' ಮತ್ತು ಲವ್ ಮಾಕ್ಟೆಲ್‌ಗಳು ಮತ್ತೆ ಇನ್ನೂ ಫ್ರೆಶ್ ಆಗಿ ಪ್ರೀತಿಯ ಕತೆಯನ್ನು ಹೇಳಿವೆ. 'ದಿಯಾ' ಸಿನಿಮಾ ಯುವತಿಯ ಕಣ್ಣಿನಿಂದ ಪ್ರೀತಿಯನ್ನು ನೋಡುವ ಪ್ರಯತ್ನವಾದರೆ, ಲವ್ ಮಾಕ್ಟೆಲ್ ಸಾಮಾನ್ಯ ಯುವಕನೊಬ್ಬನ ಜೀವನದ ಹಲವು ಹಂತಗಳಲ್ಲಿ ಎದುರಾಗುವ ಪ್ರೀತಿಯ ಬಗ್ಗೆ ಹೇಳುತ್ತದೆ.

    English summary
    Valentines's day special: Romantic Kannada movies to watch this Valentine's Day.
    Sunday, February 14, 2021, 16:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X