Ramcharan: ಪ್ರೈವೇಟ್ ಜೆಟ್.. ₹4 ಕೋಟಿ ಕಾರು.. ₹35 ಕೋಟಿ ಬಂಗಲೆ: ಅಬ್ಬಬ್ಬಾ ಟಾಲಿವುಡ್ ಕುಬೇರ ರಾಮ್‌ಚರಣ್!
ಆಸ್ಕರ್ ವೇದಿಕೆಯಲ್ಲಿ 'ನಾಟು ನಾಟು' ಗೀತೆಗೆ ಪ್ರಶಸ್ತಿ ಸಿಗುತ್ತಿದ್ದಂತೆ ಮತ್ತೊಮ್ಮೆ ರಾಮ್‌ಚರಣ್, ಜ್ಯೂ. ಎನ್‌ಟಿಆರ್ ಹೆಸ್ರು ಹಾಲಿವುಡ್‌ನಲ್ಲೂ ಸದ್ದು ಮಾಡ್ತಿದೆ. ಶೀಘ್ರದಲ್ಲೇ ಹಾಲಿವುಡ್ ಎಂಟ್ರಿ ಕೊಡುವ ಬಗ್ಗೆಯೂ ರಾಮ್‌ಚರಣ್ ಸುಳಿವು ಕೊಟ್ಟಿದ್ದಾರೆ. ತಿಂಗಳಿಗೆ ಅಂದಾಜು 3 ಕೋಟಿ ಸಂಪಾದಿಸುವ ಚರಣ್ ಯಾವ ಕಾರುಗಳನ್ನು ಬಳಸುತ್ತಾರೆ? ಅವರ ಒಟ್ಟು ಆಸ್ತಿ ಮೌಲ್ಯ ಎಷ್ಟು ಎನ್ನುವ ಕುತೂಹಲ ಇದ್ದೇ ಇರುತ್ತದೆ.
ತಂದೆ ಚಿರಂಜೀವಿ ಟಾಲಿವುಡ್ ಮೆಗಾಸ್ಟಾರ್. 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಕೋಟಿ ಕೋಟಿ ಸಂಪಾದಿಸಿದ್ದಾರೆ. 90ರ ದಶಕದಲ್ಲೇ ಒಂದು ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆದು ಬಾಲಿವುಡ್ ಮಂದಿ ಕೂಡ ಬೆರಗಾಗುವಂತೆ ಮಾಡಿದ್ದರು. ತಂದೆ ಹಾದಿಯಲ್ಲೇ ಚಿರುತ ಸಿನಿಮಾ ಮೂಲಕ ಚರಣ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 'ಮಗಧೀರ' ಸಿನಿಮಾ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಮುಂದೆ ಹಲವು ಸಿನಿಮಾಗಳಲ್ಲಿ ನಟಿಸಿದ ಚರಣ್ 'RRR' ಚಿತ್ರದ ಸೀತಾರಾಮರಾಜು ಆಗಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ.

ಚಿರು ನಟನೆಯ 'ಖೈದಿ ನಂ. 150' ಚಿತ್ರದಿಂದ ನಿರ್ಮಾಪಕ ಪಟ್ಟ ಅಲಂಕರಿಸಿದರು. ಇನ್ನು ಪೆಪ್ಸಿ, ಟಾಟಾ ಡೊಕೊಮೊ, ಅಪೊಲೊ ಜಿಯೊ, ಹೀರೊ ಮೊಟೊಗ್ರಾಪ್, ಫ್ರೂಟಿ, ವೊಲಾನೊ, ಸೇರಿದಂತೆ 30ಕ್ಕೂ ಅಧಿಕ ಬ್ರ್ಯಾಂಡ್‌ಗಳ ಅಂಬಾಸಿಡರ್ ಆಗಿ ಚರಣ್ ಒಳ್ಳೆ ಆದಾಯ ಪಡೆಯುತ್ತಿದ್ದಾರೆ. ರಾಮ್‌ಚರಣ್ ಒಟ್ಟು ಆಸ್ತಿ ಮೌಲ್ಯ ಅಂದಾಜು 1370 ಕೋಟಿ ರೂ.ಗೂ ಅಧಿಕ ಎನ್ನಲಾಗುತ್ತಿದೆ. ವರ್ಷಕ್ಕೆ 30 ಕೋಟಿ ಆದಾಯ ರಾಮ್‌ಚರಣ್ ಎಣಿಸುತ್ತಾರೆ ಎಂದು ಟಾಲಿವುಡ್ ಮಂದಿ ಹೇಳುತ್ತಾರೆ.
'RRR' ಚಿತ್ರಕ್ಕಾಗಿ ರಾಮ್‌ಚರಣ್ ಬರೋಬ್ಬರಿ 45 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನುವ ಅಂದಾಜಿದೆ. 2014ರಲ್ಲಿ ನಟ ರಾಮ್‌ಚರಣ್- ಉಪಾಸನಾ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಅಪೋಲೊ ಆಸ್ಪತ್ರೆಗಳ ಅಧ್ಯಕ್ಷರು ಮತ್ತು ಸಹ-ಸಂಸ್ಥಾಪಕ ಡಾಕ್ಟರ್ ಪ್ರತಾಪ್ ಸಿ ರೆಡ್ಡಿ ಅವರ ಮೊಮ್ಮಗಳಾದ ಉಪಾಸನಾ ಕೂಡ ಬಹಳ ಶ್ರೀಮಂತ ಮಹಿಳೆ. ಕುಟುಂಬದ ಆಸ್ತಿ ಬಿಟ್ಟು ದಂಪತಿ ಒಟ್ಟು ಆಸ್ತಿ ಮೌಲ್ಯ 2000 ಕೋಟಿ. ರೂ ದಾಟುತ್ತದೆ ಎನ್ನುವ ಅಂದಾಜಿದೆ. ದೇಶದಲ್ಲಿ ಅತಿ ಹೆಚ್ಚು ತೆರಿಗೆ ಕಟ್ಟುವವರಲ್ಲಿ ರಾಮ್‌ಚರಣ್ ದಂಪತಿ ಕೂಡ ಇದ್ದಾರೆ.

ರಾಮ್‌ಚರಣ್‌ಗೆ ಹೈದರಾಬಾದ್ ಜೂಬ್ಲಿ ಹಿಲ್ಸ್‌ನಲ್ಲಿ ಅಂದಾಜು 25,000 ಚದರ ಅಡಿ ವಿಸ್ತೀರ್ಣದ ಬಂಗ್ಲೆ ಇದೆ. ಸ್ವಿಮ್ಮಿಂಗ್ ಪೂಲ್, ಟೆನ್ನಿಸ್ ಕೋರ್ಟ್, ದೇವಸ್ಥಾನ, ಜಿಮ್, ಫಿಶ್ ಪಾಂಡ್ ಸೇರಿದಂತೆ ಸಾಕಷ್ಟು ಸೌಕರ್ಯಗಳಿವೆ. ಈ ಬಂಗಲೆಯ ಅಂದಾಜು ಬೆಲೆ 35 ಕೋಟಿ ರೂ. ಎನ್ನಲಾಗುತ್ತದೆ. ಇದರ ಜೊತೆಗೆ ಮುಂಬೈನಲ್ಲಿ ಒಂದು ಪೆಂಟ್ ಹೌಸ್ ಕೂಡ ಇದೆ. ಇನ್ನು ಚರಣ್ ಉಪಯೋಗಿಸುವ ಕಾರ್‌ಗಳ ವಿಚಾರಕ್ಕೆ ಬಂದರೆ 4 ಕೋಟಿ ರೂ. ಬೆಲೆಯ ಮಸ್ಟಮೈಸ್ಜ್ಡ್ ಮರ್ಸಿಡೀಸ್ ಮೆಬ್ಯಾಕ್ GLS600 ಕಾರು ಇದೆ.
ಆಡಿ ಮಾರ್ಟಿನ್ V8 ವಿಂಟೇಜ್, ರೋಲ್ಸ್ ರಾಯ್ಸ್ ಫಾಂಟಮ್, ರೇಂಜ್‌ರೋವರ್ ಆಟೊಬಯೋಗ್ರಫಿ, ಆಸ್ಟನ್ ಮಾರ್ಟಿನ್ ಹಾಗೂ ಫೆರಾರಿ ಫೊರ್ಟ್‌ಪಿನೊ ಕಾರುಗಳಿವೆ. ಇದೆಲ್ಲದರ ಜೊತೆಗೆ ಒಂದು ಪ್ರೈವೇಜ್ ಜೆಟ್ ಕೂಡ ರಾಮ್‌ಚರಣ್ ಬಳಿಯಿದೆ. ಒಟ್ನಲ್ಲಿ ಮೆಗಾಪವರ್ ಸ್ಟಾರ್ ಟಾಲಿವುಡ್ ಕುಬೇರ ಎನ್ನಬಹುದು.


Click it and Unblock the Notifications











