twitter
    For Quick Alerts
    ALLOW NOTIFICATIONS  
    For Daily Alerts

    'RRR'ಗೆ ಮುಚ್ಚಿಲ್ಲ ಆಸ್ಕರ್ ಹಾದಿ: ಆದರೆ ಪ್ರವೇಶ ಹೇಗೆ?

    |

    'RRR' ಸಿನಿಮಾ ಈ ಬಾರಿ ಭಾರತದಿಂದ ಆಸ್ಕರ್‌ಗೆ ಅಧಿಕೃತವಾಗಿ ಕಳಿಸಲ್ಪಡುತ್ತದೆ ಎಂಬ ನಂಬಿಕೆ ಬಲವಾಗಿತ್ತು. ಈಗಾಗಲೇ 'RRR' ಬಗ್ಗೆ ಪಶ್ಚಿಮ ರಾಷ್ಟ್ರಗಳಲ್ಲಿ ಇರುವ ಒಲವು ಮತಗಳಾಗಿ ಪರಿವರ್ತನೆಗೊಂಡು ಒಂದಾದರೂ ಆಸ್ಕರ್‌ ಅನ್ನು 'RRR' ಗೆಲ್ಲಲಿದೆ ಎಂದೆಣಿಸಲಾಗಿತ್ತು.

    ಆದರೆ ಭಾರತದ ಫಿಲಂ ಫೆಡರೇಶನ್ (ಎಫ್‌ಎಫ್‌ಐ), 'RRR' ಸಿನಿಮಾದ ಬದಲಿಗೆ ಗುಜರಾತಿ ಭಾಷೆಯ 'ಚಲ್ಲೊ ಶೋ' ಸಿನಿಮಾವನ್ನು ಭಾರತದಿಂದ ಅಧಿಕೃತವಾಗಿ ಆಸ್ಕರ್‌ಗೆ ಕಳಿಸಿದೆ. ಇದು 'RRR' ಗೆ ಆಸ್ಕರ್‌ಗೆ ಹೋಗುವ ಹಾದಿಯನ್ನು ಮುಚ್ಚಿಲ್ಲ, ಆದರೆ ಸಣ್ಣ ಹಿನ್ನಡೆಯನ್ನಂತೂ ಮಾಡಿದೆ.

    ಹಾಗಿದ್ದರೆ 'RRR' ಸಿನಿಮಾ ಆಸ್ಕರ್‌ಗೆ ಹೇಗೆ ಹೋಗಲಿದೆ. ಅಲ್ಲಿ ಆಸ್ಕರ್‌ನ ಯಾವ ವಿಭಾಗಗಳಲ್ಲಿ 'RRR' ನಾಮಿನೇಟ್ ಆಗಬಹುದಾಗಿದೆ. ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗದೇ ಇರುವುದರಿಂದ ಆಗುವ ಹಿನ್ನಡೆ ಏನು? ವಿವರವಾದ ಮಾಹಿತಿ ಇಲ್ಲಿದೆ.

    ಆಸ್ಕರ್‌ಗೆ 'ಕೂಳಂಗಳ್' ಅಧಿಕೃತ ಆಯ್ಕೆ, ಗಮನ ಸೆಳೆದಿದ್ದು 'ಜೈ ಭೀಮ್'

    ಆಸ್ಕರ್‌ಗೆ 'ಕೂಳಂಗಳ್' ಅಧಿಕೃತ ಆಯ್ಕೆ, ಗಮನ ಸೆಳೆದಿದ್ದು 'ಜೈ ಭೀಮ್'

    ಎಫ್‌ಎಫ್‌ಐ ಕಳಿಸಿದರಷ್ಟೆ ಆಸ್ಕರ್‌ಗೆ ಸಿನಿಮಾ ಹೋಗಬೇಕು ಎಂಬ ನಿಯಮವೇನಿಲ್ಲ. ಖಾಸಗಿಯಾಗಿಯೂ ಸಿನಿಮಾಗಳು ಆಸ್ಕರ್‌ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಕಳೆದ ಬಾರಿ ಎಫ್‌ಎಫ್‌ಐ, ತಮಿಳಿನ 'ಕೂಳಂಗಳ್' ಸಿನಿಮಾವನ್ನು ಆಸ್ಕರ್‌ಗೆ ಅಧಿಕೃತವಾಗಿ ಕಳಿಸಿಕೊಟ್ಟಿತ್ತು, ಆದರೆ ಸೂರ್ಯ ನಟನೆಯ 'ಜೈ ಭೀಮ್' ಹಾಗೂ ಮಲಯಾಳಂನ 'ಮರಕ್ಕರ್; ಅರಬ್ಬಿ ಕಡಲಿಂಟೆ ಸಿಂಹಂ' ಸಿನಿಮಾಗಳು ಆಸ್ಕರ್‌ಗೆ ಪ್ರವೇಶ ಪಡೆದಿದ್ದವು. 'ಕೂಳಂಗಳ್' ಹಾಗೂ 'ಮರಕ್ಕರ್' ಸಿನಿಮಾ ಆಸ್ಕರ್‌ನ ಮೊದಲ ಹಂತದಲ್ಲಿಯೇ ಸ್ಪರ್ಧೆಯಿಂದ ಹೊರಬಿದ್ದರೆ, 'ಜೈ ಭೀಮ್' ಸಿನಿಮಾ ಒಂದು ಹಂತ ಮೇಲೇರಿ ನಿರೀಕ್ಷೆ ಹುಟ್ಟಿಸಿತ್ತು. ಆದರೆ ನಾಮಿನೇಟ್ ಆಗಲು ವಿಫಲವಾಗಿತ್ತು. ಇದೇ ಮಾದರಿಯಲ್ಲಿ ಈಗ 'RRR' ಸಿನಿಮಾ ಸಹ ಆಸ್ಕರ್‌ಗೆ ಹೋಗಲಿದೆ.

    10000 ಸಾವಿರ ಜನಕ್ಕೆ 'RRR' ತೋರಿಸಲಿರುವ ತಂಡ

    10000 ಸಾವಿರ ಜನಕ್ಕೆ 'RRR' ತೋರಿಸಲಿರುವ ತಂಡ

    'RRR' ಸಿನಿಮಾದ ವಿದೇಶಿ ಪ್ರಚಾರಕ ಡಿಲೆನ್ ಮಾರ್ಚೆಟಿ, 'RRR' ಸಿನಿಮಾ ಈ ಬಾರಿ ಆಸ್ಕರ್ ಗೆಲ್ಲುವ ಸಕಲ ಸಾಧ್ಯತೆ ಇದೆ ಎಂದಿದ್ದು, ಅದಕ್ಕಾಗಿಯೇ ಸಿನಿಮಾದ ಪರವಾಗಿ ಮತ್ತೊಂದು ದೊಡ್ಡ ಪ್ರಚಾರ ಅಭಿಯಾನ ಮಾಡುವುದಾಗಿ ಹೇಳಿದ್ದಾರೆ. ಆಸ್ಕರ್‌ನಲ್ಲಿ ಉತ್ತಮ ಸಿನಿಮಾಕ್ಕೆ ಮತ ಚಲಾಯಿಸುವ 10000 ಜನರಿಗೆ ಸಿನಿಮಾವನ್ನು ತೋರಿಸುತ್ತೇವೆ ಮತ್ತು 'RRR' ಸಿನಿಮಾವನ್ನು ಎಲ್ಲ ವಿಭಾಗಗಳಲ್ಲಿಯೂ ಆಸ್ಕರ್‌ಗೆ ಗಣನೆಗೆ ತೆಗೆದುಕೊಳ್ಳುವಂತೆ ಒತ್ತಾಯಿಸಲಿದ್ದೇವೆ'' ಎಂದಿದ್ದಾರೆ.

    ಯಾವ ವಿಭಾಗಗಳಲ್ಲಿ ಸ್ಪರ್ಧಿಸಲಿದೆ 'RRR'?

    ಯಾವ ವಿಭಾಗಗಳಲ್ಲಿ ಸ್ಪರ್ಧಿಸಲಿದೆ 'RRR'?

    'RRR' ಸಿನಿಮಾವು ಉತ್ತಮ ಸಿನಿಮಾ, ಉತ್ತಮ ಒರಿಜಿನಲ್ ಚಿತ್ರಕತೆ, ಉತ್ತಮ ನಿರ್ದೇಶನ, ಹಾಡು, ಹಿನ್ನೆಲೆ ಸಂಗೀತ, ಕ್ಯಾಮೆರಾವರ್ಕ್, ಪ್ರೊಡಕ್ಷನ್ ಡಿಸೈನ್, ಎಡಿಟಿಂಗ್, ವಸ್ತ್ರ ವಿನ್ಯಾಸ, ಕೇಶ ವಿನ್ಯಾಸ ಹಾಗೂ ಮೇಕಪ್, ಧ್ವನಿ ಮತ್ತು ವಿಶ್ಯುಲ್ ಎಫೆಕ್ಟ್, ಅತ್ಯುತ್ತಮ ನಟ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಪೋಷಕ ನಟಿ ವಿಭಾಗಗಳಲ್ಲಿ ಆಸ್ಕರ್‌ಗೆ ನಾಮಿನೇಟ್ ಆಗಲಿದೆ ಮತ್ತು ಸಿನಿಮಾದ ಬಗ್ಗೆ ಈಗಾಗಲೇ ಪಶ್ಚಿಮ ರಾಷ್ಟ್ರಗಳಲ್ಲಿ ಒಳ್ಳೆಯ ಅಭಿಪ್ರಾಯವಿರುವ ಕಾರಣ ಆಸ್ಕರ್‌ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ ಡಿಲೆನ್ ಮಾರ್ಚೆಟಿ.

    'RRR' ಉಂಟಾಗಿದೆ ಒಂದು ಹಿನ್ನಡೆ

    'RRR' ಉಂಟಾಗಿದೆ ಒಂದು ಹಿನ್ನಡೆ

    ಆದರೆ 'RRR' ಸಿನಿಮಾವು ಎಫ್‌ಎಫ್‌ಐನಿಂದ ಅಧಿಕೃತವಾಗಿ ಆಯ್ಕೆ ಆಗದಿರುವುದು ಸಣ್ಣ ಹಿನ್ನಡೆಯನ್ನು ಉಂಟು ಮಾಡಲಿದೆ. ಆಯಾ ದೇಶದ ಸರ್ಕಾರ ಅಥವಾ ಸರ್ಕಾರಾಧೀನ ಸಂಸ್ಥೆಯಿಂದ ಆಯ್ಕೆಯಾದ ಸಿನಿಮಾಗಳು ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಡಿಯಲ್ಲಿ ಆಸ್ಕರ್‌ಗೆ ಸ್ಪರ್ಧೆ ಮಾಡಬಹುದಾಗಿರುತ್ತದೆ. ಈ ವಿಭಾಗದಲ್ಲಿ ಹಾಲಿವುಡ್ ಸಿನಿಮಾ ಹೊರತುಪಡಿಸಿ ವಿದೇಶಿ ಸಿನಿಮಾಗಳು ಮಾತ್ರವೇ ಸ್ಪರ್ಧೆಯಲ್ಲಿರುತ್ತವೆ. ಎಫ್‌ಎಫ್‌ಐನಿಂದ 'RRR' ಆಯ್ಕೆ ಆಗದ ಕಾರಣ ಈ ವಿಭಾಗದಲ್ಲಿ 'RRR' ಸ್ಪರ್ಧಿಸುವಂತಿಲ್ಲ. ಆದರೆ ಇದರ ಹೊರತಾಗಿ ಇನ್ನುಳಿದ ವಿಭಾಗಗಳಲ್ಲಿ 'RRR' ಸ್ಪರ್ಧೆ ಮಾಡಬಹುದಾಗಿದೆ.

    English summary
    RRR movie still has chance to participate in Oscars 2023. RRR will contest for award in many categories.
    Thursday, September 22, 2022, 16:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X