twitter
    For Quick Alerts
    ALLOW NOTIFICATIONS  
    For Daily Alerts

    1,000 ಕೋಟಿ ರೂ ವೆಚ್ಚದಲ್ಲಿ 'ಮಹಾಭಾರತ' ಸಿನಿಮಾ ನಿರ್ಮಿಸಲು ಮುಂದಾಗಿದ್ದ ಉದ್ಯಮಿಯ ದುರಂತ ಕಥೆ

    |

    ಸುಮಾರು ಮೂರು ವರ್ಷಗಳ ಹಿಂದೆ ಭಾರತ ಮಾತ್ರವಲ್ಲ, ಇಡೀ ಜಗತ್ತಿನ ಚಿತ್ರರಂಗವೇ ಅಚ್ಚರಿಪಡುವಂತಹ ಸುದ್ದಿಯೊಂದನ್ನು ನೀಡಿದ್ದರು ಕರಾವಳಿ ಮೂಲದ ದುಬೈ ಉದ್ಯಮಿ ಬಾವಗುತ್ತು ರಘುರಾಮ್ ಶೆಟ್ಟಿ (ಬಿಆರ್ ಶೆಟ್ಟಿ). ಕನ್ನಡದ ಭೂಪಟವನ್ನು ಜಗತ್ತಿನ ಮೂಲೆ ಮೂಲೆಗೂ ಪರಿಚಯಿಸುವಂತಹ ಸಿನಿಮಾ ಇದಾಗುತ್ತಿತ್ತು.

    Recommended Video

    ದೂರದರ್ಶನಕ್ಕೆ 60ರ ಸಂಭ್ರಮ

    ಏಕೆಂದರೆ ಬಿಆರ್ ಶೆಟ್ಟಿ ಘೋಷಿಸಿದ್ದು ಬರೋಬ್ಬರಿ 1,000 ಕೋಟಿ ರೂ ವೆಚ್ಚದ ಸಿನಿಮಾವನ್ನು. 'ಮಹಾಭಾರತ' ಮಹಾಕಾವ್ಯದ ಕಥೆಯನ್ನು ಎರಡು ಭಾಗಗಳಲ್ಲಿ ಸಿನಿಮಾ ರೂಪದಲ್ಲಿ ನೀಡುವ ಮೂಲಕ ಇಡೀ ಜಗತ್ತಿಗೆ ಮಹಾಭಾರತದ ಪುರಾಣವನ್ನು ತಲುಪಿಸುವ ಬಯಕೆಯನ್ನು ಅವರು ವ್ಯಕ್ತಪಡಿಸಿದ್ದರು. ಇದು ಕೆಲ ಕಾಲ ಚಿತ್ರರಂಗದಲ್ಲಿ ಭಾರಿ ಚರ್ಚೆಯ ಸಂಗತಿಯಾಗಿತ್ತು. ಮುಂದೆ ಓದಿ...

    ದುಬೈ ಉದ್ಯಮಿ ಬಿಆರ್ ಶೆಟ್ಟಿಯ 1000 ಕೋಟಿ ಸಿನಿಮಾ ನಿಲ್ಲಲು ಕಾರಣ ಇಲ್ಲಿದೆದುಬೈ ಉದ್ಯಮಿ ಬಿಆರ್ ಶೆಟ್ಟಿಯ 1000 ಕೋಟಿ ಸಿನಿಮಾ ನಿಲ್ಲಲು ಕಾರಣ ಇಲ್ಲಿದೆ

    ಒಂದೇ ವರ್ಷದಲ್ಲಿ ಎರಡು ಭಾಗ

    ಒಂದೇ ವರ್ಷದಲ್ಲಿ ಎರಡು ಭಾಗ

    2018ರಲ್ಲಿ ಚಿತ್ರೀಕರಣ ಆರಂಭಿಸಿ 2020ರಲ್ಲಿ 'ಮಹಾಭಾರತ' ಬಿಡುಗಡೆ ಮಾಡಲು ಅವರು ಉದ್ದೇಶಿಸಿದ್ದರು. 2020ರಲ್ಲಿ ಮೊದಲ ಭಾಗ ಬಿಡುಗಡೆಯಾದ 90 ದಿನಗಳ ನಂತರ ಅದರ ಎರಡನೆಯ ಭಾಗವನ್ನು ತೆರೆಗೆ ತರುವ ಬಯಕೆಯನ್ನು ಉದ್ಯಮಿ ಬಿಆರ್ ಶೆಟ್ಟಿ ವ್ಯಕ್ತಪಡಿಸಿದ್ದರು.

    ನೂರಕ್ಕೂ ಹೆಚ್ಚು ಭಾಷೆಗಳಲ್ಲಿ ಸಿನಿಮಾ

    ನೂರಕ್ಕೂ ಹೆಚ್ಚು ಭಾಷೆಗಳಲ್ಲಿ ಸಿನಿಮಾ

    ಈ ಅದ್ಧೂರಿ ವೆಚ್ಚದ ಚಿತ್ರದಲ್ಲಿ ಆಸ್ಕರ್ ಪ್ರಶಸ್ತಿ ಪುರಸ್ಕೃತ ತಂತ್ರಜ್ಞರು, ಭಾರತೀಯ ಚಿತ್ರರಂಗದ ವಿವಿಧ ಭಾಷೆಗಳ ಅನೇಕ ಖ್ಯಾತನಾಮ ನಟರು ಇರಲಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಣವಾಗಿ, ಭಾರತದ ವಿವಿಧ ಭಾಷೆಗಳು ಸೇರಿದಂತೆ ಸುಮಾರು 100 ಭಾಷೆಯಲ್ಲಿ ಡಬ್ ಮಾಡುವ ಕನಸನ್ನು ಹಂಚಿಕೊಂಡಿದ್ದರು.

    1000 ಕೋಟಿ ಬಜೆಟ್ 'ಮಹಾಭಾರತ' ಚಿತ್ರದಲ್ಲಿ ಆಮೀರ್ ಖಾನ್ ಪಾತ್ರವೇನು.?1000 ಕೋಟಿ ಬಜೆಟ್ 'ಮಹಾಭಾರತ' ಚಿತ್ರದಲ್ಲಿ ಆಮೀರ್ ಖಾನ್ ಪಾತ್ರವೇನು.?

    ಮೋಹನ್ ಲಾಲ್, ಶಾರುಖ್ ಖಾನ್

    ಮೋಹನ್ ಲಾಲ್, ಶಾರುಖ್ ಖಾನ್

    ಮಲಯಾಳಂನ ಖ್ಯಾತ ನಿರ್ದೇಶಕ ಶ್ರೀಕುಮಾರ್ ಮೆನನ್ ನಿರ್ದೇಶನ ಮಾಡಲಿದ್ದು, ಭೀಮನ ಪಾತ್ರಕ್ಕೆ ಮೋಹನ್ ಲಾಲ್ ಹಾಗೂ ಮತ್ತೊಂದು ಪಾತ್ರಕ್ಕೆ ಶಾರುಖ್ ಖಾನ್ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂಬ ಮಾಹಿತಿಯನ್ನು ತಿಳಿಸಲಾಗಿತ್ತು.

    ರಾಂಡಪೂಜಮ್ ಕೃತಿ ಆಧಾರ

    ರಾಂಡಪೂಜಮ್ ಕೃತಿ ಆಧಾರ

    ಮಲಯಾಳಂನ ಖ್ಯಾತ ಬರಹಗಾರ ವಾಸುದೇವನ್ ನಾಯರ್ ಬರೆದಿದ್ದ 'ರಾಂಡಪೂಜಮ್' ಪುಸ್ತಕವನ್ನು ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡಲು ಉದ್ದೇಶಿಸಲಾಗಿತ್ತು. ಆದರೆ 2019ರಲ್ಲಿ ಮಾತನಾಡಿದ್ದ ಬಿಆರ್ ಶೆಟ್ಟಿ, ಈ ಸಿನಿಮಾವನ್ನು ಸದ್ಯಕ್ಕೆ ಕೈಬಿಡಲಾಗಿದೆ ಎಂದು ತಿಳಿಸಿದ್ದರು.

    ಭಿನ್ನಾಭಿಪ್ರಾಯದಿಂದ ಸಿನಿಮಾ ಸ್ಥಗಿತ

    ಭಿನ್ನಾಭಿಪ್ರಾಯದಿಂದ ಸಿನಿಮಾ ಸ್ಥಗಿತ

    ನಿರ್ದೇಶಕ ಶ್ರೀಕುಮಾರ್ ಮತ್ತು ವಾಸುದೇವನ್ ನಾಯರ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಇದರಿಂದಾಗಿ ಸಿನಿಮಾ ಕೆಲಸ ನಡೆಯುತ್ತಿಲ್ಲ. ಸದ್ಯಕ್ಕೆ ಒಳ್ಳೆಯ ಸ್ಕ್ರಿಪ್ಟ್ ರೈಟರ್‌ಗೆ ಹುಡುಕುತ್ತಿದ್ದೇವೆ. ಈಗ ಈ ಸಿನಿಮಾ ಕಾರ್ಯ ಸ್ಥಗಿತಗೊಂಡಿದೆ. ಸಮಯ ತೆಗೆದುಕೊಂಡರೂ ತೊಂದರೆಯಿಲ್ಲ. ಮುಂದಿನ ದಿನದಲ್ಲಿ ಈ ಸಿನಿಮಾ ಶುರುಮಾಡುತ್ತೇನೆ ಎಂದು ಭರವಸೆ ನೀಡಿದ್ದರು.

    ಬೃಹತ್ ಸಾಮ್ರಾಜ್ಯದ ಪತನ

    ಬೃಹತ್ ಸಾಮ್ರಾಜ್ಯದ ಪತನ

    ಆದರೆ ಈಗಿನ ಪರಿಸ್ಥಿತಿಯನ್ನು ನೋಡಿದಾಗ ಬಿಆರ್ ಶೆಟ್ಟಿ ಈ ಸಿನಿಮಾ ಮಾಡಲು ಸಾಧ್ಯವೇ? ಎಂಬ ಪ್ರಶ್ನೆ ಮೂಡುತ್ತದೆ. ಏಕೆಂದರೆ ಕೋಟ್ಯಧಿಪತಿ ಉದ್ಯಮಿ ಬಿಆರ್ ಶೆಟ್ಟಿ ತೀವ್ರ ನಷ್ಟಕ್ಕೆ ಸಿಲುಕಿದ್ದಾರೆ. ಹಗರಣವೊಂದು ಅವರನ್ನು ಶಿಖರದೆತ್ತರದ ತುದಿಯಿಂದ ಏಕಾಏಕಿ ಪಾತಾಳಕ್ಕೆ ಬೀಳಿಸಿದೆ. ಈ ಅಧಃಪತನವನ್ನು ಅವರು ಊಹಿಸಲೂ ಸಾಧ್ಯವಿರಲಿಲ್ಲ.

    ಕೈಯಲ್ಲಿದ್ದದ್ದು ಎಂಟು ಡಾಲರ್ ಹಣ

    ಕೈಯಲ್ಲಿದ್ದದ್ದು ಎಂಟು ಡಾಲರ್ ಹಣ

    1973ರಲ್ಲಿ ಅವರು ಉಡುಪಿಯಿಂದ ಅಬುದಾಬಿಗೆ ಕಾಲಿರಿಸುವ ವೇಳೆ ಅವರ ಬಳಿ ಇದ್ದಿದ್ದು 8 ಡಾಲರ್ ಹಣ, ಅಂದರೆ ಕೇವಲ 610 ರೂ. ಅಲ್ಲಿ ಮೊದಲು ಆರಂಭಿಸಿದ್ದು ಮೆಡಿಕಲ್ ರೆಪ್ರೆಸೆಂಟೆಟೀವ್ ಕೆಲಸ. ಕಠಿಣ ಪರಿಶ್ರಮ, ಬುದ್ಧಿವಂತಿಕೆ, ಸೂಕ್ತ ಯೋಜನೆ ಎಲ್ಲವೂ ಅವರ ಕೈಹಿಡಿಯಿತು. ಅದರ ಫಲವೇ ಎನ್‌ಎಂಸಿ (ನ್ಯೂ ಮೆಡಿಕಲ್ ಸೆಂಟರ್) ಹೆಲ್ತ್ ಎಂಬ ಬೃಹತ್ ಖಾಸಗಿ ಆರೋಗ್ಯ ಸಂಸ್ಥೆಯ ಹುಟ್ಟು. ಇದು ಅಬುದಾಬಿಯ ಮೊದಲ ಕಂಪೆನಿಯೂ ಹೌದು. 1980ರಲ್ಲಿ ಯುಎಇ ಎಕ್ಸ್‌ಚೇಂಜ್ ಸ್ಥಾಪಿಸಿದ್ದ ಅವರು ಬೆಳೆದ ರೀತಿ ದೊಡ್ಡ ಸ್ಫೂರ್ತಿ.

    32 ಸಾವಿರ ಕೋಟಿ ರೂ ಆಸ್ತಿ

    32 ಸಾವಿರ ಕೋಟಿ ರೂ ಆಸ್ತಿ

    ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿದ್ದ ವಿವರದ ಪ್ರಕಾರ 2018ರಲ್ಲಿ ಅವರ ವೈಯಕ್ತಿಕ ಆಸ್ತಿ 420 ಕೋಟಿ ಡಾಲರ್ (ಸುಮಾರು 32 ಸಾವಿರ ಕೋಟಿ ರೂ). ಯುಎಇ ಎಂಬ ತೈಲ ಸಿರಿವಂತ ಜಾಗದಲ್ಲಿ ಆಸ್ಪತ್ರೆ, ಶಿಕ್ಷಣ, ಔಷಧ ಉದ್ಯಮದ ಮೂಲಕ ಬೆಳೆದರು. ಹೀಗೆ ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ಅವರು ಸಾವಿರ ಕೋಟಿ ರೂಪಾಯಿಯ ಸಿನಿಮಾದ ಕನಸು ಕಂಡಿದ್ದು. ಆದರೆ ತಾವೇ ಸ್ಥಾಪಿಸಿದ ಎನ್‌ಎಂಸಿ ಹೆಲ್ತ್ ಸಂಸ್ಥೆಯ ಮುಖ್ಯಸ್ಥನ ಹುದ್ದೆಗೆ 2020ರ ಫೆಬ್ರವರಿಯಲ್ಲಿ ರಾಜೀನಾಮೆ ನೀಡುವಂತಾಯಿತು.

    ವರದಿ ನೀಡಿದ ಆಘಾತ

    ವರದಿ ನೀಡಿದ ಆಘಾತ

    ಕಳೆದ ಡಿಸೆಂಬರ್ 17ರಂದು ಅಮೆರಿಕದ ಹೂಡಿಕೆ ಸಂಸ್ಥೆ ಮುಡ್ಡಿ ವಾಟರ್ಸ್ ನೀಡಿದ ವರದಿಯಲ್ಲಿ ಬಿಆರ್ ಶೆಟ್ಟಿ ಅವರ ಸಂಸ್ಥೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿತ್ತು. ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿನ ಮೊತ್ತ ನೀಡಿ ಆಸ್ತಿ ಸ್ವಾಧೀನ ಮಾಡಿದೆ. ನಗದು ಬ್ಯಾಲೆನ್ಸ್ ಮತ್ತು ಸಾಲದ ಬಗ್ಗೆ ಸತ್ಯಗಳನ್ನು ಮುಚ್ಚಿಟ್ಟಿದೆ. ಸಾಲ ಪಡೆಯುವ ಸಲುವಾಗಿ ಹೆಲ್ತ್ ಸಂಸ್ಥೆಯ ಷೇರುಗಳನ್ನು ಬ್ಯಾಂಕ್‌ಗಳಲ್ಲಿ ಅಡ ಇರಿಸಲಾಗಿದೆ. ಅನೇಕ ಅವ್ಯವಹಾರಗಳು ನಡೆದಿದ್ದರೂ ಎಲ್ಲವನ್ನೂ ಮುಚ್ಚಿಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು.

    ಬ್ಯಾಂಕ್ ಖಾತೆಗೆ ತಡೆ

    ಬ್ಯಾಂಕ್ ಖಾತೆಗೆ ತಡೆ

    ಅಲ್ಲಿಂದ ಅವರ ಎಲ್ಲ ಸಂಸ್ಥೆಗಳೂ ಹಂತ ಹಂತವಾಗಿ ಷೇರು ಮೌಲ್ಯ ಕಳೆದುಕೊಳ್ಳತೊಡಗಿದವು. 77 ಹರೆಯದ ಉದ್ಯಮಿ ಬಿಆರ್ ಶೆಟ್ಟಿ ಈಗ ಸಾಲು ಸಾಲು ಹೊಡೆತಗಳನ್ನು ಎದುರಿಸುವಂತಾಗಿದೆ. ಬಿಆರ್ ಶೆಟ್ಟಿ ಮತ್ತು ಅವರ ಕುಟುಂಬದವರು ಮತ್ತು ಅವರೊಂದಿಗೆ ಪಾಲುದಾರಿಕೆ ಹೊಂದಿರುವ ಕಂಪೆನಿಗಳ ಬ್ಯಾಂಕ್ ಖಾತೆಗಳನ್ನು ಯುಎಇಯ ಕೇಂದ್ರೀಯ ಬ್ಯಾಂಕ್ (ಸಿಬಿಯುಎಇ) ತಡೆ ಹಿಡಿದಿದೆ. ಶೆಟ್ಟಿ ಅವರಿಗೆ ಸಂಬಂಧಿಸಿದ ಅನೇಕ ಕಂಪೆನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿದೆ.

    ನಡೆಯುತ್ತಿದೆ ಕುರುಕ್ಷೇತ್ರ!

    ನಡೆಯುತ್ತಿದೆ ಕುರುಕ್ಷೇತ್ರ!

    ಉಡುಪಿಯ ಕಾಪುವಿನಲ್ಲಿ ಜನಿಸಿದ ಅವರು, ಉಡುಪಿ ಮುನ್ಸಿಪಲ್ ಕೌನ್ಸಿಲ್‌ನಲ್ಲಿ ಚುನಾವಣೆಗೂ ಸ್ಪರ್ಧಿಸಿದ್ದರು. ಆಗ ಅವರಿಗೆ 26 ವರ್ಷ. ತಮ್ಮ 31ನೇ ವಯಸ್ಸಿನಲ್ಲಿ ಅವರು ಅಬುದಾಬಿಗೆ ತೆರಳಿದ್ದು. ಎರಡೇ ವರ್ಷದಲ್ಲಿ ಎನ್‌ಎಂಸಿ ಕ್ಲಿನಿಕ್ ಆರಂಭಿಸಿದರು. ನಂತರ ತಮ್ಮ ಸಂಸ್ಥೆಯನ್ನು ಬೆಳೆಸುತ್ತಾ ಹೋದರು. 2010ರಲ್ಲಿ ಜಗತ್ತಿನ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದ 100 ಮತ್ತು 141ನೇ ಮಹಡಿಗಳನ್ನು ಖರೀದಿಸಿದರು. 2018ರಲ್ಲಿ ಮತ್ತಷ್ಟು ಕಂಪೆನಿಗಳನ್ನು ಆರಂಭಿಸಿದರು. ಆದರೆ ಈ ಹಠಾತ್ ಪೆಟ್ಟು ಅವರಿಗೆ ಆಘಾತ ನೀಡಿದೆ. ಸದ್ಯ ಅವರು ಭಾರತದಲ್ಲಿಯೇ ಇದ್ದಾರೆ. ವಿದೇಶಕ್ಕೆ ಹೋಗಿ ಅಲ್ಲಿ ತನ್ನದೇ ಸಾಮ್ರಾಜ್ಯ ಕಟ್ಟಿದ ಅವರ 'ಮಹಾಭಾರತ'ದ ಕಥನದಲ್ಲೀಗ 'ಕುರುಕ್ಷೇತ್ರ' ಶುರುವಾಗಿದೆ. ಅದರ ಸೋಲು-ಗೆಲುವು ಯಾರದ್ದಾಗಲಿದೆ...?

    English summary
    Billionaire businessman RN Shetty who once announced producing of Mahabharata movie in Rs 1,000 crore budget is struggling.
    Tuesday, April 28, 2020, 10:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X