twitter
    For Quick Alerts
    ALLOW NOTIFICATIONS  
    For Daily Alerts

    ಸಚಿನ್ ತೆಂಡೂಲ್ಕರ್ ವೃತ್ತಿ ಕ್ರಿಕೆಟ್ ಅಲ್ಲ ನಟನೆ: ಇದು ಸತ್ಯ!

    |

    ಸಚಿನ್ ತೆಂಡೂಲ್ಕರ್, ಕ್ರಿಕೆಟ್ ದಂತಕತೆ. ವಿಶ್ವಕ್ರಿಕೆಟ್‌ನಲ್ಲಿ ಸಚಿನ್ ಹೆಸರು ಎಂದೂ ಅಜರಾಮರ. ಡಾನ್ ಬ್ರಾಡ್‌ಮನ್ ನಂತರ ಕ್ರಿಕೆಟ್ ದಂತಕತೆ ಎನಿಸಿಕೊಂಡಿರುವ ಏಕೈಕ ಆಟಗಾರ ಸಚಿನ್ ತೆಂಡೂಲ್ಕರ್.

    ಭಾರತದಲ್ಲಿಯಂತೂ ಸಚಿನ್ ದೇವರೇ! ಸಚಿನ್ ಅನ್ನು 'ಗಾಡ್ ಆಫ್ ಕ್ರಿಕೆಟ್' ಎಂದೇ ಕರೆಯಲಾಗುತ್ತದೆ. 16ನೇ ವಯಸ್ಸಿಗೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸಚಿವ ಹಲವು ದಶಕಗಳ ಕಾಲ ಕ್ರೀಡಾ ಪ್ರೇಮಿಗಳನ್ನು ರಂಜಿಸಿದ್ದಾರೆ. ಭಾರತದಲ್ಲಿ ಕ್ರಿಕೆಟ್ ಜನಪ್ರಿಯತೆಗಳಿಸಲು ಸಚಿನ್ ನೀಡಿರುವ ಯೋಗದಾನ ದೊಡ್ಡದು.

    ಕ್ರಿಕೆಟ್ ದಂತಕತೆ ಎಂದು ಕರೆಸಿಕೊಳ್ಳುವ ಸಚಿನ್ ನಿಜವಾದ ಉದ್ಯೋಗ ಕ್ರಿಕೆಟ್ ಆಡುವುದಲ್ಲ ಬದಲಿಗೆ ನಟನೆ ಎಂದರೆ ನೀವು ನಂಬಲೇಬೇಕು. ಸ್ವತಃ ಸಚಿನ್ ತೆಂಡೂಲ್ಕರ್ ಈ ವಿಷಯವನ್ನು ಹೇಳಿಕೊಂಡಿದ್ದಾರೆ ಅದೂ ನ್ಯಾಯಾಲಯದಲ್ಲಿ, ಸಚಿನ್‌ಗೆ ಕ್ರಿಕೆಟ್ ಕೇವಲ ಹವ್ಯಾಸವಷ್ಟೆ ಅಂತೆ.

    ತಾವು ಕ್ರಿಕೆಟರ್ ಅಲ್ಲ, ನಟರೆಂದು ಅರ್ಜಿ ಸಲ್ಲಿಸಿದ ಸಚಿನ್!

    ತಾವು ಕ್ರಿಕೆಟರ್ ಅಲ್ಲ, ನಟರೆಂದು ಅರ್ಜಿ ಸಲ್ಲಿಸಿದ ಸಚಿನ್!

    2011 ರಲ್ಲಿ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಜಯಿಸಿತು. ಅದೇ ವರ್ಷ ಸಚಿನ್ ತೆಂಡೂಲ್ಕರ್ ವಿದೇಶಿ ಜಾಹೀರಾತುಗಳ ಮೂಲಕ ಸುಮಾರು 6 ಕೋಟಿಗೂ ಹೆಚ್ಚು ಹಣವನ್ನು ಆದಾಯವಾಗಿ ಗಳಿಸಿದ್ದರು. ಆದರೆ ಇದಕ್ಕೆ ಅವರು 1.73 ಕೋಟಿಗೂ ಹೆಚ್ಚು ಹಣ ತೆರಿಗೆ ನೀಡಬೇಕಿತ್ತು. ಆದರೆ ತೆರಿಗೆಯಿಂದ ತಪ್ಪಿಸಿಕೊಳ್ಳಲು ಸಚಿನ್, 'ಕ್ರಿಕೆಟ್ ಆಟ ನನ್ನ ಹವ್ಯಾಸವಷ್ಟೆ, ನನ್ನ ಅಸಲಿ ವೃತ್ತಿ ನಟನೆ' ಎಂದು ಅರ್ಜಿ ಸಲ್ಲಿಸಿ, ತಮಗೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಆದಾಯ ತೆರಿಗೆ ಅಧಿಕಾರಿಗಳನ್ನು ಕೇಳಿಕೊಂಡರು.

    ನಟರಿಗೆ ತೆರಿಗೆ ವಿನಾಯಿತಿ ಇದೆ

    ನಟರಿಗೆ ತೆರಿಗೆ ವಿನಾಯಿತಿ ಇದೆ

    ನಟರಿಗೆ ಇರುವ ತೆರಿಗೆ ವಿನಾಯಿತಿ ಅವಕಾಶ 80 ಆರ್ಆರ್ ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಸಚಿನ್ ಅರ್ಜಿ ಹಾಕಿದರು. ಆದರೆ ಆದಾಯ ತೆರಿಗೆ ಅಧಿಕಾರಿಗಳು ಇದನ್ನು ಒಪ್ಪಲಿಲ್ಲ. ಸಚಿನ್ ಕ್ರಿಕೆಟರ್ ಅಲ್ಲ ಬದಲಿಗೆ ವೃತ್ತಿಪರ ನಟ ಎಂದರೆ ಯಾರು ತಾನೇ ಒಪ್ಪಿಯಾರು. ಆದರೆ ಸಚಿನ್ ಸಹ ಬಿಡಲಿಲ್ಲ. ಕೊನೆಗೆ ಪ್ರಕರಣ ಟ್ರಿಬ್ಯುನಲ್ ನ್ಯಾಯಾಲಯಕ್ಕೆ ಹೋಯಿತು. ಆಶ್ಚರ್ಯಕರ ರೀತಿಯಲ್ಲಿ ಅಲ್ಲಿ ಸಚಿನ್‌ಗೆ ಗೆಲುವಾಯಿತು. ಸಚಿನ್ ಕ್ರಿಕೆಟರ್ ಅಲ್ಲ ಬದಲಿಗೆ ವೃತ್ತಿಪರ ನಟ ಎಂದು ತೀರ್ಮಾನವಾಗಿ ಸಚಿನ್‌ಗೆ ತೆರಿಗೆ ವಿನಾಯಿತಿ ದೊರೆಯಿತು.

    ಕಾರು ಆಮದು ತೆರಿಗೆ ವಿವಾದ

    ಕಾರು ಆಮದು ತೆರಿಗೆ ವಿವಾದ

    ಈ ಹಿಂದೆಯೂ ಒಮ್ಮೆ ಕಾರು ಆಮದು ವಿಷಯದಲ್ಲಿ ಸಚಿನ್ ತೆರಿಗೆ ವಿನಾಯಿತಿ ಪಡೆದಿದ್ದು ದೊಡ್ಡ ಸುದ್ದಿಯಾಗಿತ್ತು. ಸಚಿನ್, 2002ರಲ್ಲಿ ತಮ್ಮ ಮೆಚ್ಚಿನ ಫಾರ್ಮುಲಾ ಕಾರ್ ರೇಸರ್ ಮೈಕಲ್ ಶುಮಾಕರ್ ಅನ್ನು ಭೇಟಿಯಾಗಿದ್ದರು. ಆಗಷ್ಟೆ ಅವರು ಸರ್ ಡಾನ್ ಬ್ರಾಡ್‌ಮನ್‌ರ ಅತಿ ಹೆಚ್ಚು ಶತಕದ ದಾಖಲೆಯನ್ನು ಸರಿಗಟ್ಟಿದ್ದರು. ಈ ಖುಷಿಗೆ ಮೈಕಲ್ ಶುಮಾಕರ್, ಸಚಿನ್‌ಗೆ ಫೆರಾರಿ 360 ಮೊಡೆನಾ ಕಾರನ್ನು ಉಡುಗೊರೆಯಾಗಿ ನೀಡಿದರು. ಈ ಕಾರನ್ನು ಭಾರತಕ್ಕೆ ತೆಗೆದುಕೊಂಡು ಬರಲು ದೊಡ್ಡ ಮೊತ್ತದ ತೆರಿಗೆಯನ್ನು ಸಚಿನ್ ಪಾವತಿಸಬೇಕಿತ್ತು, ಆಗ ಇದ್ದ ಎನ್‌ಡಿಎ ಸರ್ಕಾರದ ಸಚಿವ ಪ್ರಮೋದ್ ಮಹಾಜನ್ ಅವರು ಸಚಿನ್‌ಗೆ ತೆರಿಗೆ ವಿನಾಯಿತಿ ನೀಡಿದರು. ಇದು ಮಾಧ್ಯಮಗಳಲ್ಲಿ ಬಹಳ ದೊಡ್ಡ ಸುದ್ದಿಯಾಗಿತ್ತು. ನಂತರ ಸರ್ಕಾರವು ತೆರಿಗೆ ವಿನಾಯಿತಿ ಆದೇಶವನ್ನು ಹಿಂಪಡೆಯಿತು, ಬಳಿಕ ಫಿಯೇಟ್ ಸಂಸ್ಥೆಯು ಮಧ್ಯ ಪ್ರವೇಶಿಸಿ ಕಾರಿನ ಆಮದು ತೆರಿಗೆ ಪಾವತಿ ಮಾಡಿತು.

    ಡಾಕ್ಯುಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ ಸಚಿನ್

    ಡಾಕ್ಯುಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ ಸಚಿನ್

    ಸಚಿನ್ ಈ ವರೆಗೆ ಹಲವು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಆದರೆ ಅವರು ನಟರಲ್ಲ ಬದಲಿಗೆ ಕ್ರಿಕೆಟರ್ ಮತ್ತು ಮಾಜಿ ರಾಜ್ಯಸಭಾ ಸದಸ್ಯ. ಸಚಿನ್ ಜೀವನ ಆಧರಿಸಿ ಒಂದು ಡಾಕ್ಯುಮೆಂಟರಿ ಮಾದರಿಯ ಸಿನಿಮಾ ಸಹ ಬಂದಿದೆ. ಸಿನಿಮಾದ ಹೆಸರು 'ಸಚಿನ್: ಎ ಬಿಲಿಯನ್ ಡ್ರೀಮ್' ಈ ಸಿನಿಮಾದಲ್ಲಿ ಸಚಿನ್‌ರ ಕ್ರಿಕೆಟ್‌ನ ಹಾಗೂ ಖಾಸಗಿ ಜೀವನದ ವಿಡಿಯೋಗಳನ್ನು ಬಳಸಿಕೊಳ್ಳಲಾಗಿದೆ. ಸಿನಿಮಾದಲ್ಲಿ ನರೇಟರ್ ಆಗಿ ಸಚಿನ್ ಕಾಣಿಸಿಕೊಂಡಿದ್ದಾರೆ. ಆದರೆ ಇದು ಫೀಚರ್ ಫಿಲಮ್ ಅಲ್ಲ ಬದಲಿಗೆ ಒಂದು ರೀತಿಯ ಡಾಕ್ಯುಮೆಂಟರಿ ಆಗಿತ್ತು. ನಂತರ ಒಮ್ಮೆ 'ಕೌನ್ ಬನೇಗಾ ಕರೋಡ್‌ಪತಿ' ಕಾರ್ಯಕ್ರಮದಲ್ಲಿ ಗೆಳೆಯ ವಿನೋದ್ ಕಾಂಬ್ಳಿಯೊಟ್ಟಿಗೆ ಸಚಿನ್ ಕಾಣಿಸಿಕೊಂಡಿದ್ದರು.

    English summary
    Sachin Tendulkar himself said to court that he is only part time cricketer. his profession in acting. Court accepts this.
    Friday, January 14, 2022, 13:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X