twitter
    For Quick Alerts
    ALLOW NOTIFICATIONS  
    For Daily Alerts

    25 ವರ್ಷ ಪೂರೈಸಿದ 'ಪೊಲೀಸ್ ಸ್ಟೋರಿ': ಸಾಯಿ ಕುಮಾರ್ ಮೊದಲ ಆಯ್ಕೆಯಾಗಿರಲಿಲ್ಲ

    |

    ಅದು 1996. ಕರ್ನಾಟಕದಲ್ಲಿ ಪೊಲೀಸ್ ಹವಾ ಸೃಷ್ಟಿಯಾದ ವರ್ಷ. ಪೊಲೀಸ್ ಅಂದ್ರೆ ಏನು, ಪೊಲೀಸರ ಗತ್ತು, ಪೊಲೀಸರ ಮಹತ್ವ ಸಾರಿದ ಸೂಪರ್ ಹಿಟ್ ಸಿನಿಮಾ ಜನರ ಮುಂದೆ ಸಮಯ. ಕನ್ನಡ ಚಿತ್ರರಂಗದಲ್ಲಿ ಸಾಯಿ ಕುಮಾರ್ 'ಡೈಲಾಗ್ ಕಿಂಗ್' ಪಟ್ಟಕ್ಕೇರಿದ ವರ್ಷ. ಹೌದು, ಸಾಯಿ ಕುಮಾರ್ ನಟಿಸಿ, ಬಹಳ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದ 'ಪೊಲೀಸ್ ಸ್ಟೋರಿ' 25 ವರ್ಷ ಪೂರೈಸಿದೆ.

    ಥ್ರಿಲ್ಲರ್ ಮಂಜು ಚೊಚ್ಚಲ ಭಾರಿಗೆ ನಿರ್ದೇಶನ ಮಾಡಿದ್ದ 'ಪೊಲೀಸ್ ಸ್ಟೋರಿ' ಸಾರ್ವಕಾಲಿಕ ಹಿಟ್ ಚಿತ್ರಗಳಲ್ಲಿ ಒಂದು. ಇದೊಂದು ರೀತಿ ಕಲ್ಟ್ ಚಿತ್ರ ಎನ್ನಬಹುದು. 'ಪೊಲೀಸ್ ಸ್ಟೋರಿ' ನಂತರ ಕನ್ನಡ ಇಂಡಸ್ಟ್ರಿಯಲ್ಲಿ ಇಂತಹದ್ದೇ ಹಲವು ಪೊಲೀಸ್ ಸ್ಟೋರಿಗಳು ಸಿನಿಮಾಗಳು ಆದವು. ಆದರೆ, ಸಾಯಿ ಕುಮಾರ್ ಅಭಿನಯದಷ್ಟು ಬೇರೆ ಯಾವ ಚಿತ್ರಗಳು ಸಕ್ಸಸ್ ಕಂಡಿಲ್ಲ.

    ಒಂದು ಸಿನಿಮಾದಿಂದ ಎಲ್ಲವನ್ನೂ ಕಳೆದುಕೊಂಡಿದ್ದ ಸಾಯಿ ಕುಮಾರ್ಒಂದು ಸಿನಿಮಾದಿಂದ ಎಲ್ಲವನ್ನೂ ಕಳೆದುಕೊಂಡಿದ್ದ ಸಾಯಿ ಕುಮಾರ್

    ಸ್ಟಂಟ್ ಮಾಸ್ಟರ್ ಥ್ರಿಲ್ಲರ್ ಮಂಜುಗೆ ನಿರ್ದೇಶನದಲ್ಲಿ ಲೈಫ್ ಕೊಟ್ಟ ಚಿತ್ರ. ಈ ಸಿನಿಮಾ ಆರಂಭವಾಗಿದ್ದು ಒಂದು ರೋಚಕ ಕಥೆ. ಈ ಸಿನಿಮಾದಲ್ಲಿ ಸಾಯಿ ಕುಮಾರ್ ನಾಯಕರಾಗಿದ್ದು ಅಕಸ್ಮಾತ್. ಬಹಳಷ್ಟು ಜನರಿಗೆ ತಿಳಿಯದ ಸತ್ಯ ಏನಪ್ಪಾ ಅಂದ್ರೆ ಮೊದಲು ಪೊಲೀಸ್ ಸ್ಟೋರಿ ಚಿತ್ರಕ್ಕೆ ಸಾಯಿ ಕುಮಾರ್ ಹೀರೋ ಆಗಿರಲಿಲ್ಲ. ಕನ್ನಡದ ಖ್ಯಾತ ನಟನರೊಬ್ಬರನ್ನು ಹೀರೋ ಮಾಡ್ಬೇಕು ಎಂದು ಥ್ರಿಲ್ಲರ್ ಮಂಜು ಯೋಚಿಸಿದ್ದರು. ಆದರೆ, ಕೊನೆಗೆ ಆ ಅವಕಾಶ ಸಾಯಿ ಕುಮಾರ್ ಪಾಲಿಗೆ ಬಂತು. ಮುಂದೆ ಓದಿ...

    ಡೈರೆಕ್ಷನ್ ನಿರ್ಧರಿಸಿದ್ದ ಥ್ರಿಲ್ಲರ್ ಮಂಜು

    ಡೈರೆಕ್ಷನ್ ನಿರ್ಧರಿಸಿದ್ದ ಥ್ರಿಲ್ಲರ್ ಮಂಜು

    ಆಗಿನ ಸಮಯಕ್ಕೆ ಖ್ಯಾತ ಸಾಹಸ ನಿರ್ದೇಶಕರಾಗಿದ್ದ ಥ್ರಿಲ್ಲರ್ ಮಂಜು ಸಿನಿಮಾ ನಿರ್ದೇಶನ ಮಾಡಬೇಕು ಎಂದು ನಿರ್ಧರಿಸಿ ಬಿಟ್ಟಿದ್ದರು. ಅದಕ್ಕಾಗಿ ಸಣ್ಣಮಟ್ಟದಲ್ಲಿ ತಯಾರಿ ಸಹ ನಡೆಸುತ್ತಿದ್ದರು. ಈ ವಿಷಯ ತಿಳಿದ ಬರಹಗಾರ ಎಸ್‌ಎಸ್ ಡೇವಿಡ್, ಥ್ರಿಲ್ಲರ್ ಮಂಜು ಅವರನ್ನು ಸಂಪರ್ಕಿಸಿ ಪೊಲೀಸ್ ಸ್ಟೋರಿ ಕಥೆ ಹೇಳ್ತಾರೆ. ಸ್ಕ್ರಿಪ್ಟ್ ಕೇಳಿ ಥ್ರಿಲ್ ಆದ ಥ್ರಿಲ್ಲರ್ ಮಾಸ್ಟರ್ ಈ ಸಿನಿಮಾ ಮಾಡೋಣ ಎಂದು ನಿರ್ಧರಿಸಿದರು. 1996ರ ಜನವರಿ ತಿಂಗಳಲ್ಲಿ ಶೂಟಿಂಗ್ ಆರಂಭಿಸೋಣ ಎಂದು ಪ್ಲಾನ್ ಮಾಡಿದರು. ಆದರೆ, ಹೀರೋ ಯಾರು ಎಂದು ಅಂತಿಮವಾಗಿರಲಿಲ್ಲ.

    'ಪೊಲೀಸ್ ಸ್ಟೋರಿ' ಸ್ಕ್ರಿಪ್ಟ್ ಕೇಳಿದ್ದ ಸಾಯಿ ಕುಮಾರ್

    'ಪೊಲೀಸ್ ಸ್ಟೋರಿ' ಸ್ಕ್ರಿಪ್ಟ್ ಕೇಳಿದ್ದ ಸಾಯಿ ಕುಮಾರ್

    ಡಬ್ಬಿಂಗ್ ಕಲಾವಿದ ಪಿಜೆ ಶರ್ಮಾ ಅವರ ಮಗ ಸಾಯಿ ಕುಮಾರ್ ಅಷ್ಟೊತ್ತಿಗಾಗಲೇ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದರು. ಹೀಗೆ ಒಮ್ಮೆ ಥ್ರಿಲ್ಲರ್ ಮಂಜು ಪೊಲೀಸ್ ಸ್ಟೋರಿ ಸ್ಕ್ರಿಪ್ಟ್ ಸಾಯಿ ಕುಮಾರ್ ಬಳಿ ಹೇಳಿದ್ದರು. ಆ ಸ್ಕ್ರಿಪ್ಟ್ ಕೇಳಿದ್ಮೇಲೆ ಸಾಯಿ ಕುಮಾರ್ ಅವರಿಗೆ ಎಲ್ಲೋ ಒಂದು ಕಡೆ ಈ ಸಿನಿಮಾ ನಾನು ಮಾಡಿದ್ರೆ ಚೆನ್ನಾಗಿರುತ್ತೆ ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದರು. ಅವಿನಾಶ್ ಪಾತ್ರ ನಾನು ಮಾಡ್ಲಾ ಸರ್ ಎಂದು ಥ್ರಿಲ್ಲರ್ ಮಂಜು ಬಳಿ ಕೇಳಿದ್ರಂತೆ. ಅದಕ್ಕೆ ಮಾಸ್ಟರ್ 'ನೀನು ಮಾಡಿದ್ರೆ ಹೀರೋ ಮಾಡ್ಬೇಕು' ಬೇಡ ಸುಮ್ಮನಿರು ಅಂದಿದ್ದರಂತೆ. ಆದರೆ, ನಿರ್ದೇಶಕ ಥ್ರಿಲ್ಲರ್ ಮಂಜು ಮನಸ್ಸಿನಲ್ಲಿ ಬೇರೆಯದ್ದೇ ನಟರಿದ್ದರು.

    ಕಾಣ್ದೆ ಇರೋ ಆ ನಾಲ್ಕನೇ ಸಿಂಹ ಯಾರು? ಸಾಯಿಕುಮಾರ್ ಹೇಳ್ತಿರೋದೇನು?ಕಾಣ್ದೆ ಇರೋ ಆ ನಾಲ್ಕನೇ ಸಿಂಹ ಯಾರು? ಸಾಯಿಕುಮಾರ್ ಹೇಳ್ತಿರೋದೇನು?

    ವಿಷ್ಣುವರ್ಧನ್ ಅಂದುಕೊಂಡಿದ್ದ ಥ್ರಿಲ್ಲರ್ ಮಂಜು

    ವಿಷ್ಣುವರ್ಧನ್ ಅಂದುಕೊಂಡಿದ್ದ ಥ್ರಿಲ್ಲರ್ ಮಂಜು

    'ಪೊಲೀಸ್ ಸ್ಟೋರಿ' ಸಿನಿಮಾವನ್ನು ಸಾಹಸ ಸಿಂಹ ವಿಷ್ಣುವರ್ಧನ್ ಅವರಿಂದ ಮಾಡಿಸಬೇಕು ಎಂದು ಥ್ರಿಲ್ಲರ್ ಮಂಜು ಆಸೆ ಪಟ್ಟಿದ್ದರು. ಅಷ್ಟು ದೊಡ್ಡ ನಟರ ಜೊತೆ ಸಿನಿಮಾ ಅಂದ್ರೆ ಅಷ್ಟು ಬಜೆಟ್ ಇರಲಿಲ್ಲ ಅಂತ ಆಸೆ ಕೈಬಿಟ್ಟರು. ಆಮೇಲೆ ಕುಮಾರ್ ಗೋವಿಂದ್ ಅಂದುಕೊಂಡ್ರು. ಅವರು ಎರಡ್ಮೂರು ಸಿನಿಮಾ ಮಾಡ್ತಿದ್ದ ಕಾರಣ ಆಗಲಿಲ್ಲ. ಆಮೇಲೆ ಸಾಯಿ ಕುಮಾರ್ ಅವರೇ ಮಾಡಲಿ ಅಂತ ನಿರ್ಧರಿಸಲಾಯಿತು ಎಂದು ಈ ಹಿಂದೆ ಥ್ರಿಲ್ಲರ್ ಮಂಜು ಟಿವಿ9ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

    ಟ್ರೆಂಡ್ ಸೃಷ್ಟಿಸಿದ 'ಅಗ್ನಿ'

    ಟ್ರೆಂಡ್ ಸೃಷ್ಟಿಸಿದ 'ಅಗ್ನಿ'

    ಪೊಲೀಸ್ ಸ್ಟೋರಿ ಚಿತ್ರದಲ್ಲಿ ಸಾಯಿ ಕುಮಾರ್ 'ಅಗ್ನಿ' ಹೆಸರಿನ ಅಧಿಕಾರಿಯಾಗಿ ನಟಿಸಿದ್ದರು. ಸಾಯಿ ಕುಮಾರ್ ಮ್ಯಾನರಿಸಂ, ಡೈಲಾಗ್ ಡಿಲವರಿ ಟ್ರೆಂಡ್ ಆಗಿತ್ತು. ಅದರಲ್ಲೂ 'ಅಗ್ನಿ....ಅಗ್ನಿ' ಎಂದು ಕಣ್ಣಾರಳಿಸಿ ಹೇಳುವ ಡೈಲಾಗ್ ಸಖತ್ ಹಿಟ್ ಆಗಿತ್ತು. ಬಹುಶಃ ಆಗಿನ ಸಮಯಕ್ಕೆ ಸೋಶಿಯಲ್ ಮೀಡಿಯಾ ಇದ್ದಿದ್ದರೆ ಟಿಕ್‌ಟಾಕ್, ಟ್ರೋಲ್ ಎಲ್ಲವೂ ಜೋರಾಗಿ ಆಗಿರ್ತಿತ್ತು. ಈಗಲೂ ಈ ಡೈಲಾಗ್ ಎವರ್‌ಗ್ರೀನ್ ಎನ್ನಬಹುದು.

    ಚೆನ್ನಾಗಿ ಹೋಗಿಲ್ಲ ಅಂದ್ರೆ ಆಕ್ಟಿಂಗ್ ಬಿಡ್ತೀನಿ

    ಚೆನ್ನಾಗಿ ಹೋಗಿಲ್ಲ ಅಂದ್ರೆ ಆಕ್ಟಿಂಗ್ ಬಿಡ್ತೀನಿ

    ಸಿನಿಮಾ ಶೂಟಿಂಗ್ ಮುಗಿತು. ಸೆಲೆಬ್ರಿಟಿಗಳಿಗಾಗಿ ಒಂದು ಪ್ರಿಮಿಯರ್ ಶೋ ಮಾಡ್ತೀನಿ. ಥ್ರಿಲ್ಲರ್ ಮಂಜುಗಿದ್ದ ಕ್ರೇಜ್‌ಗೆ ಇಡೀ ಇಂಡಸ್ಟ್ರಿ ನೋಡೋಕೆ ಬಂದಿದ್ದರು. ಚಿತ್ರ ವೀಕ್ಷಣೆ ಮಾಡಿದ್ಮೇಲೆ ಯಾರೂ ರಿಯಾಕ್ಟ್ ಮಾಡಿಲ್ಲ. ನಮಗೆ ಚಿಂತೆ. ಏಕೆ ಯಾರೂ ಏನು ಹೇಳ್ತಿಲ್ಲ ಎಂಬ ಆತಂಕ. 'ಮಾಸ್ಟರ್ ಈ ಸಿನಿಮಾ ಚೆನ್ನಾಗಿ ಹೋದ್ರೆ ಆಕ್ಟಿಂಗ್ ಮುಂದುವರಿಸ್ತೀನಿ, ಇಲ್ಲಂದ್ರೆ ನಾನು ಇಲ್ಲಿಗೆ ನಿಲ್ಲಿಸಿಬಿಡ್ತೀನಿ' ಎಂದು ಹೇಳಿದ್ರು. ಚಂದನ್ ಸುರೇಶ್ ಈ ಚಿತ್ರ ವಿತರಣೆ ಮಾಡೋಕೆ ಬಂದ್ರು. ರಿಲೀಸ್ ಮಾಡ್ತೀನಿ ಅಂತ ಆಗಸ್ಟ್ 15ಕ್ಕೆ ದಿನಾಂಕ ಘೋಷಣೆ ಮಾಡಿದ್ರು. ಮೊದಲ ದಿನ ಮೊದಲ ಶೋ ಹೌಸ್‌ಫುಲ್ ಆಯ್ತು. ಕನ್ನಡದಲ್ಲಿ 19 ವಾರ ಯಶಸ್ವಿ ಪ್ರದರ್ಶನ ಆಯ್ತು. ಒಂಬತ್ತುಕ್ಕೂ ಹೆಚ್ಚು ಥಿಯೇಟರ್‌ನಲ್ಲಿ 100 ದಿನ ಪೂರೈಸಿತು ಎಂದು ಥ್ರಿಲ್ಲರ್ ಮಂಜು ನೆನಪು ಮೆಲುಕು ಹಾಕಿದರು.

    ಥ್ರಿಲ್ಲರ್ ಮಂಜು ಸಂಬಂಧಿ ನಿರ್ಮಾಣ

    ಥ್ರಿಲ್ಲರ್ ಮಂಜು ಸಂಬಂಧಿ ನಿರ್ಮಾಣ

    ಅಂದ್ಹಾಗೆ, ಈ ಚಿತ್ರವನ್ನು ಥ್ರಿಲ್ಲರ್ ಮಂಜು ಅವರ ಸಹೋದರ ಗುರುಮೂರ್ತಿ, ನರಸಿಂಹ ಮೂರ್ತಿ ನಿರ್ಮಾಣ ಮಾಡಿದ್ದರು. ಸಾಯಿ ಕುಮಾರ್ ಅವರ ತಂದೆ ಪಿಜೆ ಶರ್ಮಾ ಸಹ ಅಭಿನಯಿಸಿದ್ದರು. ಸತ್ಯ ಪ್ರಕಾಶ್ ಪ್ರಮುಖ ಖಳನಾಯಕನಾಗಿ ಕಾಣಿಸಿಕೊಂಡಿದ್ದರು. ಹಿನ್ನೆಲೆ ಸಂಗೀತ ಸಾಧು ಕೋಕಿಲಾ ನೀಡಿದ್ದರು. ಕನ್ನಡದ ಜೊತೆ ಅದೇ ಹೆಸರಿನಲ್ಲಿ ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆಯಾಗಿತ್ತು. ಹಿಂದಿಯಲ್ಲು ಡಬ್ ಆಯ್ತು. 'ಪೊಲೀಸ್ ಸ್ಟೋರಿ' ಮುಂದುವರಿದ ಭಾಗ 2007ರಲ್ಲಿ ತೆರೆಗೆ ಬಂದಿದೆ.

    English summary
    Kannada Actor Sai Kumar starrer Police Story movie Completes 25 Years; know interesting facts about the movie.
    Tuesday, August 17, 2021, 9:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X