ನ್ಯೂಯಾರ್ಕ್‌ನಲ್ಲಿ ಸೀರೆಯುಟ್ಟು ಫೋಸ್ ಕೊಟ್ಟ ನಟಿ ಸಮಂತಾ; ಸೀರೆ ಬೆಲೆ ಎಷ್ಟು ಗೊತ್ತೆ?
ನಟಿ ಸಮಂತಾ ರುತ್ ಪ್ರಭು ನ್ಯೂಯಾರ್ಕ್ ನಗರದಲ್ಲಿದ್ದಾರೆ. ನ್ಯೂಯಾರ್ಕ್‌ನಲ್ಲಿ ನಡೆದ 41ನೇ ಇಂಡಿಯನ್ ಡೇ ಪರೇಡ್‌ನಲ್ಲಿ ಸಮಂತಾ ಭಾಗವಹಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಅವರು ತಮ್ಮ ಅಭಿಮಾನಿಗಳಿಗಾಗಿ ಫೋಟೋಗಳನ್ನು ಶೇರ್ ಮಾಡುತ್ತಲೆ ಇರುತ್ತಾರೆ. ತಾವು ನ್ಯೂಯಾರ್ಕ್‌ನಲ್ಲಿರುವ ಫೋಟೋಗಳನ್ನು ಈ ಹಿಂದೆಯೂ ಹಂಚಿಕೊಂಡಿದ್ದರು.
ಮಂಗಳವಾರ ನಟಿ ತನ್ನ Instagramನಲ್ಲಿ ಹಂಚಿಕೊಂಡಿರುವ ಚಿತ್ರಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ. ಕಪ್ಪು ಸೀರೆಯುಟ್ಟ ನಲಿವಿನಂತೆ ನ್ಯೂಯಾರ್ಕ್‌ನಲ್ಲಿ ಸುತ್ತಿದ್ದಾರೆ. ಬಿಂದಾಸ್ ಆಗಿ ನ್ಯೂಯಾರ್ಕ್ ರಸ್ತೆಗಳಲ್ಲಿ ಫೋಟೋಗೆ ಫೋಸ್ ಕೊಟ್ಟಿರುವ ಅವರು ಚಿತ್ರಗಳಿಗೆ ಬ್ಲಾಕ್ ಹಾರ್ಟ್ ಕೊಟ್ಟು ಶೇರ್ ಮಾಡಿದ್ದಾರೆ. ಅಭಿಮಾನಿಗಳು ಅವರನ್ನು ದೇವತೆ, ಅಪ್ಸ್ರೆ ಎಂದು ಹೊಗಳುತ್ತಿದ್ದಾರೆ.

ಈ ಸೀರೆಯನ್ನು ಡಿಸೈನರ್ ಅರ್ಪಿತಾ ಮೆಹ್ತಾ ಡಿಸೈನ್ ಮಾಡಿದ್ದಾರೆ. ಇದೇ ಪೋಟೋಗಳನ್ನು ನಟಿ ಸಮಂತಾ ಜೊತೆಗೆ ಅರ್ಪಿತಾ ಮೆಹ್ತಾ ಅವರ ಅಧಿಕೃತ ಪುಟವು ಶೇರ್ ಮಾಡಿದೆ. "ಸಮಂತಾ ರುತ್ ಪ್ರಭು ನ್ಯೂಯಾರ್ಕ್‌ನಲ್ಲಿ ನಡೆದ 41 ನೇ ಇಂಡಿಯಾ ಡೇ ಪರೇಡ್‌ನಲ್ಲಿ ನಮ್ಮ ಕಪ್ಪು ಮಲ್ಟಿ-ಥ್ರೆಡ್ ಹ್ಯಾಂಡ್-ಎಂಬ್ರಾಯ್ಡರಿ ಸೀರೆಯಲ್ಲಿ ಸರಳ ಸುಂದರವಾಗಿ ಕಾಣುತ್ತಿದ್ದಾರೆ" ಎಂದಿದೆ.
ಸೆಲೆಬ್ರಿಟಿ ಸ್ಟೈಲಿಸ್ಟ್‌ಗಳಾದ ಸೆಲ್ವಿ ತಂಗರಾಜ್ ಮತ್ತು ಪಲ್ಲವಿ ಸಿಂಗ್ ಸಮಂತಾ ಅವರನ್ನು ಅಪ್ಸರೆಯಂತೆ ಸ್ಟೈಲ್ ಮಾಡಿದ್ದಾರೆ. ನಟಿ ಸಮಂತಾ ಧರಿಸಿರುವ ಕಪ್ಪು ಸೀರೆಯನ್ನು ಕೈಯಿಂದ ಕಸೂತಿ ಮಾಡಲಾಗಿದೆ. ಈ ನೆಟ್ ಸೀರೆಯ ಬಾರ್ಡರ್ ಅನ್ನು ವಜ್ರದ ಆಕಾರದ ರತ್ನದ ಅಲಂಕಾರಗಳು ಮತ್ತು ಚಿನ್ನದ ಬಣ್ಣದಲ್ಲಿ ಹೊಳೆಯವಂತೆ ವಿನ್ಯಾಸ ಮಾಡಲಾಗಿದೆ. ಚಿನ್ನ, ಗುಲಾಬಿ, ಹಸಿರು ಮತ್ತು ಕಿತ್ತಳೆ ಬಣ್ಣಗಳ ದಾರಗಳಲ್ಲಿ ಕಸೂತಿ ಮಾಡಲಾಗಿದೆ.

ಸಮಂತಾ ಮುತ್ತುಗಳಿಂದ ಅಲಂಕರಿಸಿದ ತೂಗಾಡುವ ಜುಮುಕಿಗಳು ಮತ್ತು ಹೈ ಹೀಲ್ಸ್ ಧರಿಸಿ ಫೋಟೋಗಳಿಗೆ ಬಿಮದಾಸ್ ಫೋಸ್ ನೀಡಿದ್ದಾರೆ. ಸಮಂತಾ ಅವರು ಧರಿಸಿರುವ ಈ ಸೇರೆ ಅರ್ಪಿತಾ ಮೆಹ್ತಾ ಅವರ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಸೀರೆಯನ್ನು 'ಬ್ಲಾಕ್ ಮಲ್ಟಿ-ಥ್ರೆಡ್ ಹ್ಯಾಂಡ್ ಎಂಬ್ರಾಯ್ಡರಿಡ್ ಸೀರೆ ಸೆಟ್' ಎಂದು ಕರೆಯಲಾಗಿದೆ. ಈ ಸೀರೆಯ ಬೆಲೆ 1,38,000 ಲಕ್ಷ ರೂಪಾಯಿಗಳು.
ಈ ಹಿಂದೆಯೂ ನ್ಯೂಯಾರ್ಕ್ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದ ಅವರು, "ಕನಸುಗಳನ್ನು ಹುಟ್ಟಿಸುವ ಸ್ಥಳ ನ್ಯೂಯಾರ್ಕ್ ಎಂದು ಅವರು ಹೇಳುತ್ತಾರೆ. ನಾನು ಇಲ್ಲಿ ನನ್ನ ಮೊದಲ ಚಿತ್ರಕ್ಕೆ ಚಿತ್ರೀಕರಣ ಮಾಡುವಾಗ ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದೆ. ಮುಂದೆ ಇದನ್ನು ಹೇಗೆ ತೆಗೆದುಕೊಂಡು ಹೋಗಲಿದ್ದಾಳೆ ಎಂಬುದರ ಬಗ್ಗೆ ಸುಳಿವು ಇಲ್ಲದೆ ಭಯಭೀತಳಾದ ಪುಟ್ಟ ಹುಡುಗಿ ಅವಳು... ಆದರೆ ದೊಡ್ಡ ಕನಸನ್ನು ಕನಸು ಕಾಣುವಷ್ಟು ಧೈರ್ಯವಿತ್ತು! ಇಂದು 14 ವರ್ಷಗಳ ನಂತರ..." ಎಂದು ಸ್ಟೈಲೀಶ್ ಲುಕ್‌ನಲ್ಲಿ ತಮ್ಮ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ನಟನೆಯಿಂದ ಕೊಂಚ ವಿರಾಮ ಘೋಷಿಸಿರುವ ನಟಿ ಸಮಂತಾ ಭಾನುವಾರ ನ್ಯೂಯಾರ್ಕ್‌ನಲ್ಲಿ ನಡೆದ ಇಂಡಿಯಾ ಡೇ ಪರೇಡ್‌ನಲ್ಲಿ ಭಾಗವಹಿಸಿದ್ದರು. "ಇಂದು ನಾನು ಇಲ್ಲಿರುವುದು ನಿಜವಾಗಿಯೂ ನನಗೆ ಹೆಮ್ಮೆಯಿದೆ. ನನ್ನ ಸಂಸ್ಕೃತಿ ಮತ್ತು ಪರಂಪರೆ ಎಷ್ಟು ಶ್ರೀಮಂತವಾಗಿದೆ. ನನ್ನ ಪ್ರತಿಯೊಂದು ಚಿತ್ರಕ್ಕೂ ಬೆಂಬಲ ನೀಡುತ್ತಿರುವ ಅಮೆರಿಕಾದ ಭಾರತೀಯರಿಗೆ ಧನ್ಯವಾದಗಳು" ಎಂದು ಸಮಂತಾ ಹೇಳಿದ್ದರು. ನಟಿ ತಮ್ಮ ಖುಷಿ ಚಿತ್ರ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.


Click it and Unblock the Notifications










