twitter
    For Quick Alerts
    ALLOW NOTIFICATIONS  
    For Daily Alerts

    ಮಹಿಳಾ ದಿನಾಚರಣೆ ವಿಶೇಷ: ಚಿತ್ರರಂಗದಲ್ಲಿ ಸಂಭಾವನೆ ತಾರತಮ್ಯ, ರೊಚ್ಚಿಗೆದ್ದ ಕನ್ನಡ ನಟಿಯರು!

    |

    ಮಾರ್ಚ್ 8 ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ಮಹಿಳಾ ದಿನಾಚರಣೆಯನ್ನು ಸಾಂಕೇತಿಕವಾಗಿ ಒಂದು ದಿನ ಆಚರಣೆ ಮಾಡಬಹುದು. ಆದರೆ ಹೆಣ್ಣಿಲ್ಲದೆ ಜಗತ್ತು ಇಲ್ಲ ಎನ್ನುವುದು ಗೊತ್ತಿರುವ ಸತ್ಯವೆ. ಸದ್ಯ ಸಿನಿಮಾರಂಗದ ಬಗ್ಗೆ ಮಾತನಾಡುವುದಾದರೆ, ಸಿನಿಮಾರಂಗದಲ್ಲಿನ ಮಹಿಳೆಯರ ಬಗ್ಗೆ ಮಾತನಾಡುವುದಾದರೆ, ಮೊದಲು ನೆನಪಾಗೋದು ಮೀ ಟೂ ಪ್ರಕರಣ. ಯಾಕೆಂದರೆ ಹೆಚ್ಚಿನ ಮಹಿಳೆಯರು ಧ್ವನಿಯತ್ತಿ ಮಾಡಿದ ಬಹುದೊಡ್ಡ ಅಭಿಯಾನ ಅದು.

    ಇದನ್ನು ಬಿಟ್ಟರೆ ಸಿನಿಮಾ ಜಗತ್ತಿನಲ್ಲಿ ಮಹಿಳೆಯರ ಸಂಭಾವನೆ ಬಗ್ಗೆ ಆಗಾಗ ಚರ್ಚೆ ಆಗುತ್ತಾ ಇರುತ್ತೆ. ಈ ಸಂಭಾವನೆ ತಾರತಮ್ಯದ ಬಗ್ಗೆ ಈಗಾಗಲೇ ಸಾಕಷ್ಟು ನಟಿಯರು ಮಾತನಾಡಿದ್ದರೆ, ಮಾತಾಡುತ್ತಲೇ ಇದ್ದಾರೆ. ಆದರೆ ಈ ವಿಚಾರದಲ್ಲಿ ಬದಲಾವಣೆ ಆಗುವಂತಹ ಸೂಚನೆಗಳು ಮಾತ್ರ ಕಾಣುತ್ತಿಲ್ಲ.

     ಮಹಿಳಾ ಪ್ರಧಾನ ಚಿತ್ರಕ್ಕೆ ಶ್ವೇತಾ ಶ್ರೀವಾತ್ಸವ್‌ಗೆ ಸಿಕ್ಕಿದ್ದು 40 ಲಕ್ಷ ಸಂಭಾವನೆ: ಇದು ನಿಜವೇ? ಮಹಿಳಾ ಪ್ರಧಾನ ಚಿತ್ರಕ್ಕೆ ಶ್ವೇತಾ ಶ್ರೀವಾತ್ಸವ್‌ಗೆ ಸಿಕ್ಕಿದ್ದು 40 ಲಕ್ಷ ಸಂಭಾವನೆ: ಇದು ನಿಜವೇ?

    ಈ ವಿಚಾರದಲ್ಲಿ ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಟ್, ಬಾಲಿವುಡ್, ಮಾಲಿವುಡ್ ಎಲ್ಲವೂ ಒಂದೆ. ಆದರೆ ಇದಕ್ಕೆ ಕಾರಣ ಏನು ಎನ್ನುವುದು ಮಾತ್ರ ಸ್ಪಷ್ಟವಾಗಿಲ್ಲ. ಒಂದು ಚಿತ್ರದಲ್ಲಿ ಪೋಷಕ ಕಲಾವಿದರು ಅವರವರ ಪಾತ್ರಕ್ಕೆ ತಕ್ಕ ಹಾಗೆ ಸಂಭಾವನೆ ಪಡೆಯುತ್ತಾರೆ. ಆದರೆ ಚಿತ್ರದ ನಾಯಕಿ, ನಾಯಕ ಅಂತ ಬಂದಾಗ ಇಬ್ಬರು ಕೂಡ ಚಿತ್ರಕ್ಕೆ ಅತಿ ಮುಖ್ಯ ಆಗುತ್ತಾರೆ. ಇಲ್ಲದೇ ಹೋದರೆ ಅವರನ್ನು ನಾಯಕ, ನಾಯಕಿ ಅಂತ ಕರೆಯುವುದೇ ಇಲ್ಲ. ಆದರೆ ನಾಯಕನಿಗೆ 100 ಕೋಟಿ ತನಕ ಸಂಭಾವನೆ ಕೊಟ್ಟರೂ ಕೂಡ, ನಾಯಕಿಯರ ಸಂಭಾವನೆ ಮಾತ್ರ 5, 6 ಕೋಟಿ ಮೀರುವುದಿಲ್ಲ. ಹಾಗೆ ಹೆಚ್ಚಿನ ಸಂಭಾವನೆ ಪಡೆದರು ಕೂಡ ಅದು ಒಬ್ಬರೋ, ಇಬ್ಬರಿಗಷ್ಟೇ ಸಿಕ್ಕಿರುತ್ತದೆ. ಅದು ಯಾವುದೋ ಒಂದು ಸಿನಿಮಾಗೆ ಮಾತ್ರ ಸೀಮಿತ ಆಗಿರುತ್ತದೆ.

    ಸಂಭಾವನೆ ವಿಚಾರದಲ್ಲಿ ರೊಚ್ಚಿಗೆದ್ದ ಕನ್ನಡದ ನಟಿಯರು!

    ಸಂಭಾವನೆ ವಿಚಾರದಲ್ಲಿ ರೊಚ್ಚಿಗೆದ್ದ ಕನ್ನಡದ ನಟಿಯರು!

    ಇನ್ನು ಈ ಬಾರಿಯ ಮಹಿಳಾ ದಿನಾಚರಣೆ ಪ್ರಯುಕ್ತ ಸಂದರ್ಶನ ಒಂದರಲ್ಲಿ ನಟಿ ಆದಿತಿ ಪ್ರಭುದೇವ, ಅಮೃತಾ ಅಯ್ಯಂಗಾರ್, ಖುಷಿ ಮಾತನಾಡಿದ್ದಾರೆ. ಸಿನಿಮಾರಂಗದಲ್ಲಿ ಮಹಿಳೆಯರ ಪಯಣ ಹೇಗೆ ಇರಲಿದೆ ಎನ್ನುವ ಬಗ್ಗೆ ಮಾತನಾಡಿದ್ದರೆ. ಜೊತೆಗೆ ಸಂಭಾವನೆ ವಿಚಾರದ ಬಗ್ಗೆಯೂ ಮಾತನಾಡಿದ್ದಾರೆ. ನಟಿಯರಿಗೆ ಸಂಭಾವನೆ ನೀಡುವ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತದಂತೆ. ದಿಯಾ ಖ್ಯಾತಿಯ ನಟಿ ಖುಷಿ ಈ ಬಗ್ಗೆ ಮಾತನಾಡಿದ್ದು, "ದೊಡ್ಡ ದೊಡ್ಡವರಿಗೆ, ನಟರಿಗೆ ನೀಡುವಷ್ಟು ಸಂಭಾವನೆ ನಮಗೆ ಯಾಕೆ ಕೊಡಲ್ಲ. ಅವಕಾಶಗಳು ಯಾಕೆ ಕೊಡಲ್ಲ." ಎಂದಿದ್ದಾರೆ.

    ಕನ್ನಡ ಮಾತಾಡಿದರೆ ಸಂಭಾವನೆ ಕಡಿಮೆ ಅಂತೆ!

    ಕನ್ನಡ ಮಾತಾಡಿದರೆ ಸಂಭಾವನೆ ಕಡಿಮೆ ಅಂತೆ!

    ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ನಟಿ ಅದಿತಿ ಪ್ರಭುದೇವ ಅವರು ಒಂದಷ್ಟು ರೋಚಕ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ನಾಯಕರಿಗಿಂತಲೂ ನಾಯಕಿಯರಿಗೆ ಸಿನಿಮಾರಂಗ ತುಂಬಾ ಚಾಲೆಂಜಿಂಗ್ ಅಂತೆ. "ರೋಡಿನಲ್ಲಿ ಜನರ ಮುಂದೆ ನಾಯಕನನ್ನು ಹಗ್ ಮಾಡಬೇಕು ಅಂದರೆ ಮಾಡಲೇ ಬೇಕು, ಎಲ್ಲೋ ಬೀಳಬೇಕು ಎಂದರೆ ಬೀಳಲೇ ಬೇಕು. ಕೆಲವೊಮ್ಮೆ ನೋವಾಗುತ್ತೆ ಅದು ಅಷ್ಟು ಸುಲಭ ಅಲ್ಲ. ಇನ್ನು ಕನ್ನಡ ಮಾತನಾಡಿದರೆ ಸಂಭಾವನೆ ಕಡಿಮೆ ಕೊಡ್ತಾರೆ." ಎನ್ನುವ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ.

    ಸಂಭಾವನೆ ತಾರತಮ್ಯದ ಬಗ್ಗೆ ಮಾತನಾಡಿದ್ದ ನಟಿ ಪೂಜಾ ಹೆಗ್ಡೆ!

    ಸಂಭಾವನೆ ತಾರತಮ್ಯದ ಬಗ್ಗೆ ಮಾತನಾಡಿದ್ದ ನಟಿ ಪೂಜಾ ಹೆಗ್ಡೆ!

    ಈ ಬಗ್ಗೆ ಈಗಾಗಲೇ ಹಲವು ನಾಯಕ ನಟಿಯರು ಈ ಬಗ್ಗೆ ಮಾತನಾಡಿದ್ದಾರೆ. ನಟಿ ಪೂಜಾ ಹೆಗ್ಡೆ ಈ ಹಿಂದೆ ಬಾಲಿವುಡ್‌ ಸಂಭಾವನೆ ತಾರತಮ್ಯದ ವಿರುದ್ಧ ಮಾತನಾಡಿದ್ದರು. "ಬಾಲಿವುಡ್‌ ಚಿತ್ರರಂಗದಲ್ಲಿ ಸಂಭಾವನೆ ತಾರತಮ್ಯ ಇದೆ. ನಾಯಕಿಯರಿಗೆ ಕಡಿಮೆ ಸಂಭಾವನೆ ಕೊಡಲಾಗುತ್ತದೆ. ಆದರೆ ಹೆಚ್ಚು ಪ್ರೇಕ್ಷಕರನ್ನು ಸೆಳೆಯುವುದೇ ನಾಯಕಿಯರು. ಆದರೆ ಅವರಿಗೆ ನಾಯಕರಿಗಿಂತಲೂ ಸಂಭಾವನೆ ಸದಾ ಕಡಿಮೆ ಇರುತ್ತದೆ. ಇದು ಬದಲಾಗ ಬೇಕು." ಎಂದಿದ್ದಾರೆ.

    ನಟಿಯರಿಗೇಕೆ ಕಡಿಮೆ ಸಂಭಾವನೆ: ಪ್ರಿಯಾಮಣಿ ಪ್ರಶ್ನೆ!

    ನಟಿಯರಿಗೇಕೆ ಕಡಿಮೆ ಸಂಭಾವನೆ: ಪ್ರಿಯಾಮಣಿ ಪ್ರಶ್ನೆ!

    ಬಹುಭಾಷಾ ನಟಿ ಪ್ರಿಯಾಮಣಿ ಕೂಡ ಸಂಭಾವನೆ ಬಗ್ಗೆ ಮಾತನಾಡಿದ್ದರು. ಹಲವು ವರ್ಷಗಳಿಂದ ಸಿನಿಮಾರಂಗದಲ್ಲಿ ಇದ್ದು, ದೊಡ್ಡ ಹೆಸರು ಮಾಡಿರುವ ನಟಿ ಪ್ರಿಯಾಮಣಿ ಸಂಭಾವನೆ ವಿಚಾರದಲ್ಲಿ ಎಲ್ಲಾ ಚಿತ್ರರಂಗದಲ್ಲೂ ತಾರತಮ್ಯ ಇದೆ. ನಾಯಕಿಯರು ತಮ್ಮ ಪಾತ್ರಗಳಿಗೆ ಸಾಕಷ್ಟು ಕಷ್ಟ ಪಟ್ಟು ತಯಾರಿ ಮಾಡಿಕೊಳ್ಳುತ್ತಾರೆ. ಅದರಲ್ಲೂ ವಿಶೇಷ ಪಾತ್ರಗಳಿದ್ದರೆ ಹೆಚ್ಚಿನ ಶ್ರಮವಹಿಸಬೇಕಾಗುತ್ತದೆ. ಆದರೂ ಯಾಕೆ ಈ ತಾರತಮ್ಯಗಳು ಬೇಕು ಎಂದು ಪ್ರಶ್ನಿಸಿದ್ದರು.

    English summary
    Sandalwood Actress Aditi Prabhudeva, Amrutha, Khushi Raise thier Voice On Remunaration Discrimination In Film Industry
    Tuesday, March 8, 2022, 17:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X