ಯಶ್, ದರ್ಶನ್, ಧನು.. ತಾರೆಯರ ಮನೆಯಲ್ಲಿ ವರಲಕ್ಷ್ಮಿ ವ್ರತ; ಅಪ್ಪನ ಬೆನ್ನೇರಿದ ಯಥರ್ವ್, ಐರಾ

ಶ್ರಾವಣ ಮಾಸದ ಪೂರ್ಣಿಮೆಯ ಹಿಂದಿನ ಶುಕ್ರವಾರ ವರಲಕ್ಷ್ಮಿ ವ್ರತ ಆಚರಿಸಲಾಗುತ್ತದೆ. ಈ ವರ್ಷವೂ ಎಲ್ಲೆಡೆ ಸಂಭ್ರಮ ಸಡಗರದಿಂದ ವರಲಕ್ಷ್ಮಿ ಹಬ್ಬ ಆಚರಿಸಲಾಗಿದೆ. ಮನೆಯಲ್ಲಿ ಲಕ್ಷ್ಮಿ ಮೂರ್ತಿಗಳಿಗೆ ಅಲಂಕಾರ ಮಾಡಿ ಮಹಿಳೆಯರು ವಿಶೇಷ ಪೂಜೆ ನೆರವೇರಿಸಿದ್ದಾರೆ. ಚಂದನವನದ ತಾರೆಯರ ಮನೆ ಮನಗಳಲ್ಲಿ ಹಬ್ಬದ ಸಡಗರ ಮನೆ ಮಾಡಿತ್ತು.

ಲಕ್ಷ್ಮಿದೇವಿಯನ್ನು ಒಲಿಸಿಕೊಳ್ಳಲು ಈ ಹಬ್ಬ ಆಚರಣೆ ಮಾಡುತ್ತಾರೆ. ಐಶ್ವರ್ಯ, ಆರೋಗ್ಯ, ನೆಮ್ಮದಿ ಬೇಡಿ ವರವ ಕೊಡುವ ಲಕ್ಷ್ಮಿಯನ್ನು ಪ್ರಾರ್ಥಿಸಲಾಗುತ್ತದೆ. ಕನ್ನಡ ಸಿನಿಮಾ ತಾರೆಯರು ಎಲ್ಲಾ ಹಬ್ಬಗಳನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಪ್ರತಿವರ್ಷದಂತೆ ಈ ವರ್ಷವೂ ದರ್ಶನ್, ಉಪೇಂದ್ರ, ಯಶ್ ಹೀಗೆ ಎಲ್ಲರ ಮನೆಯಲ್ಲೂ ವರಲಕ್ಷ್ಮಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗಿದೆ. ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Sandalwood Stars Celebrate Varalakshmi vratham 2025 with Family Love and Festive Spirit

ಉಪ್ಪಿ ಮನೆಯಲ್ಲಿ ವ್ರತ

ರಿಯಲ್ ಸ್ಟಾರ್ ಉಪೇಂದ್ರ ತಮ್ಮ ನಿವಾಸದಲ್ಲಿ ಕುಟುಂಬದ ಜೊತೆ ಎಲ್ಲಾ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುತ್ತಾರೆ. ಪತ್ನಿ ಪ್ರಿಯಾಂಕ ಜೊತೆ ಸೇರಿ ಉಪೇಂದ್ರ ವರಲಕ್ಷ್ಮಿ ಪೂಜೆಯಲ್ಲಿ ಭಾಗಿ ಆಗಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು ಪ್ರಿಯಾಂ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಕತ್ರಿಗುಪ್ಪೆಯ ನಿವಾಸದಿಂದ ಸದಾಶಿವನಗರ ನಿವಾಸಕ್ಕೆ ಕೆಲವೇ ತಿಂಗಳ ಹಿಂದೆ ಉಪ್ಪಿ ಕುಟುಂಬ ಸ್ಥಳಾಂತರಗೊಂಡಿತ್ತು. ತಮ್ಮ ನಿವಾಸದಲ್ಲಿ ಅದ್ಧೂರಿಯಾಗಿ ಹಬ್ಬ ಮಾಡಿದ್ದಾರೆ.

ಮಕ್ಕಳ ಜೊತೆ ಯಶ್ ಹಬ್ಬ

'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರದ ಕೆಲಸಗಳಲ್ಲಿ ನಟ ಯಶ್ ಬ್ಯುಸಿಯಾಗಿದ್ದಾರೆ. ಮುಂಬೈ ಬೆಂಗಳೂರು ಫ್ಲೈಟ್ ಆಗಾಗ್ಗೆ ಏರಿ ಇಳಿಯುತ್ತಾರೆ. ವಿದೇಶ ಪ್ರವಾಸಕ್ಕೂ ಹೋಗಿ ಬರುತ್ತಾರೆ. ಅದೆಲ್ಲದರ ನಡುವೆಯೂ ಫ್ಯಾಮಿಲಿಗೆ ಯಶ್ ಹೆಚ್ಚು ಸಮಯ ಕೊಡುತ್ತಾರೆ. ಅದರಲ್ಲೂ ಹಬ್ಬದ ಸಮಯದಲ್ಲಿ ಎಲ್ಲೆ ಇದ್ದರೂ ಮನೆಗೆ ಬರ್ತಾರೆ. ಈ ಬಾರಿ ವರಲಕ್ಷ್ಮಿ ಹಬ್ಬವನ್ನು ರಾಕಿಂಗ್ ಜೋಡಿ ಸಡಗರ ಸಂಭ್ರಮದಿಂದ ಆಚರಿಸಿದೆ. ದೇವರಿಗೆ ಯಶ್ ದೀರ್ಘದಂಡ ನಮಸ್ಕಾರ ಮಾಡುವಾಗ ಮಕ್ಕಳಾದ ಐರಾ, ಯಥರ್ವ್ ಅಪ್ಪನ ಬೆನ್ನೇರಿ ಆಟ ಆಡಿದ್ದಾರೆ.

ಧನು- ಧನ್ಯಾ ಮೊದಲ ಹಬ್ಬ

ಇದೇ ವರ್ಷ ಫೆಬ್ರವರಿಯಲ್ಲಿ ಧನ್ಯತಾ ಅವರನ್ನು ನಟ ಧನಂಜಯ್ ಪ್ರೀತಿಸಿ ಮದುವೆ ಆಗಿದ್ದರು. ಇದು ದಂಪತಿಗೆ ಮೊದಲ ವರಲಕ್ಷ್ಮಿ ಹಬ್ಬ. ಸಡಗರ ಸಂಭ್ರಮದಿಂದ ದಂಪತಿ ಹಬ್ಬ ಆಚರಿಸಿ ಸಂಭ್ರಮಿಸಿದ್ದಾರೆ.

ವಿಜಯಲಕ್ಷ್ಮಿ ದರ್ಶನ್ ಹಬ್ಬದ ಶುಭಾಶಯ

ನಟ ದರ್ಶನ್ ಮನೆಯಲ್ಲಿ ಕೂಡ ವರಲಕ್ಷ್ಮಿ ಹಬ್ಬವನ್ನು ಆಚರಿಸಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಬಿಳಿ ಬಣ್ಣದ ಸೀರೆ ಉಟ್ಟು ಮಿಂಚಿದ್ದಾರೆ. ಫೋಟೊಗಳನ್ನು ಕ್ಲಿಕ್ಕಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ಹಬ್ಬದ ಶುಭಾಶಯ ಕೋರಿದ್ದಾರೆ. ಕಷ್ಟಗಳೆಲ್ಲಾ ಪರಿಹಾರ ಮಾಡುವಂತೆ ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಇನ್ನುಳಿದಂತೆ ನಟ ಶ್ರೀಮುರಳಿ, ಹಿರಿಯ ನಟಿ ಶ್ರುತಿ, ನಟಿ ಅಮೂಲ್ಯ ಸೇರಿದಂತೆ ಚಂದನವನದ ಹಲವು ತಾರೆಯರು ವರಲಕ್ಷ್ಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಎಲ್ಲರಿಗೂ ಹಬ್ಬದ ಶುಭ ಕೋರಿದ್ದಾರೆ.

ನಟಿ ಪವಿತ್ರಾ ಗೌಡ ಕೂಡ ಹಬ್ಬ ಆಚರಿಸಿ ಖುಷಿ ಪಟ್ಟಿದ್ದಾರೆ. ಸೀರೆ ಉಟ್ಟು ಮಿಂಚಿದ್ದಾರೆ. ಹಬ್ಬದ ದಿನ ಮನೆಯ ಬಳಿ ಬಂದ ಗೋವಿಗೆ ಹಣ್ಣುಹಂಪಲು ಕೊಟ್ಟು, ನೀರುಣಿಸಿ ಧನ್ಯ ಎಂದು ಪೋಸ್ಟ್ ಮಾಡಿದ್ದಾರೆ. ನಿರ್ದೇಶಕ ತರುಣ್ ಪತ್ನಿ ಸೋನಲ್ ಹಾಗೂ ತಾಯಿ ಜೊತೆ ಹಬ್ಬ ಆಚರಿಸಿದ್ದಾರೆ. ಕಿರುತೆರೆ ನಟ, ನಟಿಯರ ಮನೆಗಳಲ್ಲಿ ಕೂಡ ಹಬ್ಬ ಮನೆ ಮಾಡಿದೆ. ನಟಿ ವೈಷ್ಣವಿ ಗೌಡ ಹಬ್ಬ ಆಚರಿಸಿ ಸಂಭ್ರಮ ಹಂಚಿಕೊಂಡಿದ್ದಾರೆ.

More from Filmibeat

English summary
Chandanavana Stars Shine Bright in Varalakshmi vratham 2025 Celebrations
Read more about: yash darshan upendra
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X