ಮದ್ವೆ ಕಾರ್ಡ್ ಪ್ರಿಂಟ್ ಆದ್ಮೇಲೆ ಸಲ್ಮಾನ್ ಖಾನ್‌ಗೆ ಕೈ ಕೊಟ್ಟಿದ್ದೇಕೆ ಸಂಗೀತಾ ಬಿಜಲಾನಿ ? ಉತ್ತರ ಇಲ್ಲಿದೆ..!
ಬಾಲಿವುಡ್ ನಲ್ಲಿ ಸಾರ್ವಕಾಲಿಕ ಚರ್ಚೆ ಎನ್ನುವುದೊಂದಿದ್ದರೆ ಅದು ಬ್ಯಾಚುಲರ್ ಬಾಯ್ ಸಲ್ಮಾನ್ ಖಾನ್ ಅವರ ಮದ್ವೆಯ ಕುರಿತು. ವಯಸ್ಸು 58 ಆಗಿದ್ರೂ ಮದುವೆ ಬಗ್ಗೆ ಯೋಚನೆಯೇ ಮಾಡದೇ ಇನ್ನೂ ಹಾಗೆಯೇ ಸಲ್ಲು ಉಳಿದಿರುವುದರಿಂದ ಅವರ ಅನೇಕ ಅಭಿಮಾನಿಗಳು ಸಂಕಟವನ್ನೂ ಪಡುತ್ತಾರೆ.
ಇನ್ನೂ.. ಒಂದ್ಕಾಲದಲ್ಲಿ ಸಲ್ಲು.. ಸಲ್ಲು.. ಎಂದು ಕನವರಿಸುತ್ತಿದ್ದ ಅನೇಕ ನಾಯಕಿಯರು ಈಗ ಮದುವೆಯಾಗಿ ಗ್ರಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಇನ್ನೂ ಕೆಲವರು ತಮ್ಮ ಮಕ್ಕಳನ್ನು ಕೂಡ ಚಿತ್ರರಂಗಕ್ಕೆ ಕರೆತರುವ ಧಾವಂತದಲ್ಲಿದ್ದಾರೆ. ಆ ಪೈಕಿ ಸಂಗೀತಾ ಬಿಜ್ಲಾನಿ ಕೂಡ ಒಬ್ಬರು. ಇಂಥಾ ಸಂಗೀತಾ ಬಿಜಲಾನಿ ಈಗ ತಮ್ಮ ಮತ್ತು ಸಲ್ಮಾನ್ ಖಾನ್ ಮದುವೆ ಮುರಿದು ಬಿದ್ದಿದ್ದೇಕೆ ಎನ್ನುವುದಕ್ಕೆ ಉತ್ತರವನ್ನು ಕೊಟ್ಟಿದ್ದಾರೆ.

ಹೌದು, ನಿಮಗೆ ಗೊತ್ತಿರಲಿ .. ಸಲ್ಮಾನ್ ಖಾನ್ ಮತ್ತು ಸಂಗೀತಾ 1986ರಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ಇಬ್ಬರದ್ದು ಲವ್ ಅಟ್ ಫಸ್ಟ್ ಸೈಟ್. ಅಲ್ಲಿಂದ ಇಬ್ಬರು ಓಡಾಡದಿರುವ ಜಾಗ ಇಲ್ಲ. ಸುತ್ತಾಡದಿರುವ ಸ್ಥಳ ಇಲ್ಲ. ಇಬ್ಬರು ಕುಂತರು ನಿಂತರು ಸುದ್ದಿಯಾಗುತ್ತಿದ್ದ ದಿನಗಳವು. ಇನ್ನೇನು ಇಬ್ಬರು ಮದುವೆಯಾಗಲಿದ್ದಾರೆ ಎಂದೇ ಬಾಲಿವುಡ್ ಮಾತನಾಡಿಕೊಂಡಿತ್ತು. ಆ ಸುದ್ದಿ ನಿಜಾ ಕೂಡ ಆಗಿತ್ತು. ಇಬ್ಬರ ಮದುವೆಯ ಆಮಂತ್ರಣ ಪತ್ರಿಕೆ ಕೂಡ ಮುದ್ರಿಸಲಾಗಿತ್ತು. ಬಾಲಿವುಡ್‌ನ ಅನೇಕ ಸ್ಟಾರ್‌ಗಳನ್ನೊಳಗೊಂಡು ಬೇರೆ ಬೇರ ಕ್ಷೇತ್ರದ ಗಣ್ಯರಿಗೆ ಮದುವೆಯ ಮಮತೆಯ ಕರೆಯೋಲೆಯನ್ನು ಕೂಡ ನೀಡಲಾಗಿತ್ತು. ಎಲ್ಲವೂ ಅಂದುಕೊಂಡತೆ ಆಗಿದ್ದರೆ ಮೇ 27-1994ರಲ್ಲಿ ಇಬ್ಬರ ಮದುವೆ ಕೂಡ ಆಗಬೇಕಿತ್ತು.
ಆದರೆ ಆ ನಂತರ ಅದೇನಾಯ್ತೋ. ಇದ್ದಕ್ಕಿದ್ದಂತೆ ಮದುವೆ ಮುರಿದು ಬಿತ್ತು. ಮದುವೆ ಮುರಿದು ಬಿದ್ದು ಎರಡು ದಶಕವಾದರೂ ಕೂಡ ಇವತ್ತು ಕೂಡ ಸಲ್ಮಾನ್ ಖಾನ್ ಮತ್ತು ಸಂಗೀತಾ ದೂರವಾಗಿದ್ದೇಕೆ ಎನ್ನುವ ಪ್ರಶ್ನೆ ಅನೇಕರಲ್ಲಿದೆ. ಇದಕ್ಕೆ ಉತ್ತರವನ್ನು ಹುಡುಕುವ ಪ್ರಯತ್ನವನ್ನು ಅನೇಕರು ಇಲ್ಲಿಯವರೆಗೆ ಮಾಡಿದರಾದರೂ ಉತ್ತರ ಸಿಕ್ಕಿರಲಿಲ್ಲ. ಆದರೆ ಈಗ ಖುದ್ದು ಸಂಗೀತಾ ಬಿಜಲಾನಿ ಈ ಕುರಿತು ಮಾತನಾಡಿದ್ದಾರೆ.
ಹೌದು, ಇಂಡಿಯನ್ ಐಡಲ್ ಸೀಸನ್ 15ರಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು. ಇದೇ ಸಮಯದಲ್ಲಿ ರಿಯಾಲಿಟಿ ಶೋದಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷೆ ಮಾಡಿಕೊಳ್ಳಲು ಬಂದಿದ್ದ ಮಾನಸಿ ಘೋಶ್, ಸಂಗೀತಾ ಅವರಲ್ಲಿ ಮದುವೆ ರದ್ದಾಗಿದ್ದೇಕೆ ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ. ಇಂಟ್ರೆಸ್ಟಿಂಗ್ ಅಂದರೆ ಈ ಪ್ರಶ್ನೆಯನ್ನು ತಳ್ಳಿ ಹಾಕುವ ಬದಲು ಸಂಗೀತಾ ಬಿಜಲಾನಿ ಉತ್ತರವನ್ನು ನೀಡಿದ್ದಾರೆ.
ನನ್ನ ಹಳೆಯ ಪ್ರೇಮಿಗಳೆಲ್ಲ ನನ್ನನ್ನು ತುಂಬಾ ಹದ್ದುಬಸ್ತಿನಲ್ಲಿಡುವ ಪ್ರಯತ್ನವನ್ನು ಮಾಡುತ್ತಿದ್ದರು. ಬಟ್ಟೆಯ ವಿಚಾರದಲ್ಲಿ ತುಂಬಾ ಮೂಗು ತೂರಿಸುತ್ತಿದ್ದರು ಎಂದಿರುವ ಸಂಗೀತಾ ಚೋಟುದ್ದ ಬಟ್ಟೆಯನ್ನು ಹಾಕಲು ಅವರು ಬಿಡುತ್ತಿರಲಿಲ್ಲ ಅವರಿಗೆ ಉದ್ದವಾದ ಬಟ್ಟೆಯನ್ನೇ ಹಾಕಬೇಕಿತ್ತು ಎಂದು ಹೇಳಿದ್ದಾರೆ. ಇವರೆಲ್ಲರ ಈ ನಿಯಮಗಳನ್ನು ಪಾಲಿಸಲು ನನ್ನಿಂದ ಸಾಧ್ಯವಾಗಲಿಲ್ಲ ಎಂದಿರುವ ಸಂಗೀತಾ ಮೊದ ಮೊದಲು ಇದೆಲ್ಲದರ ಬಗ್ಗೆ ನಾನು ತುಂಬಾ ಯೋಚನೆ ಮಾಡುತ್ತಿದ್ದೆ, ಆಗ ನನ್ನಲ್ಲಿ ಭಯ ಇತ್ತು, ನಾನು ನಾಚಿಕೆ ಸ್ವಭಾವದವಳಾಗಿದ್ದೆ ಆದರೆ ಈಗ ನಾನು ಯಾರಿಗೂ ಹೆದರಲ್ಲ ಎಂದು ಹೇಳಿದ್ದಾರೆ. ಸಂಗೀತಾ ಅವರ ಈ ಉತ್ತರದಿಂದ ಆಶ್ಚರ್ಯಚಕಿತಗೊಂಡ ಶ್ರೇಯಾ ಗೋಶಾಲ್ ಮತ್ತು ವಿಶಾಲ್ ದದ್ಲಾನಿ ಆ ಮಾಜಿ ಯಾರು ಅವರ ಹೆಸರೇಳಿ ಎಂದು ಮರು ಪ್ರಶ್ನೆಯನ್ನು ಹಾಕಿದ್ದಾರೆ. ಆದರೆ ಸಂಗೀತಾ ಇದಕ್ಕೆ ಉತ್ತರವನ್ನು ನೀಡಿಲ್ಲ. ಅದೆಲ್ಲ ಈಗ ಬೇಡ ಎಂದು ಹೇಳಿ ಸುಮ್ಮನಾಗಿದ್ದಾರೆ.
ಸದ್ಯ ಸಂಗೀತಾ ಬಿಜ್ಲಾನಿ ಅವರ ಈ ಮಾತು ಬಾಲಿವುಡ್‌ನಲ್ಲಿ ಚರ್ಚೆಗೀಡಾಗಿದೆ. ಸಂಗೀತಾ ಎಲ್ಲಿಯೂ ಕೂಡ ಸಲ್ಮಾನ್ ಖಾನ್ ಹೆಸರನ್ನು ತೆಗೆದುಕೊಂಡಿಲ್ಲವಾದರೂ ಅನೇಕರು ಸಂಗೀತಾ ಬಿಜಲಾನಿ ಅವರ ಈ ಮಾಜಿ ಸಲ್ಮಾನ್ ಖಾನ್ ಅವರೇ ಇರಬಹುದು ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಅವರ ಅವರ ಅಭಿಪ್ರಾಯಗಳನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹೊರ ಹಾಕುತ್ತಿದ್ದಾರೆ.


Click it and Unblock the Notifications











