ತಾವು ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದರ ಬಗ್ಗೆ ಮೌನ ಮುರಿದ ಸಂಜನಾ ಗಲ್ರಾನಿ

By Filmibeat Desk

ನಟಿ ಸಂಜನಾ ವಿರುದ್ಧ ಹಿಂದೆ ದಾಖಲಾಗಿದ್ದ ಡ್ರಗ್‌ ಕೇಸ್‌ ಅನ್ನು ಕರ್ನಾಟಕ ಹೈಕೋರ್ಟ್‌ ರದ್ದು ಮಾಡಿ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಡ್ರಗ್ಸ್‌ ಕೇಸ್‌ನಲ್ಲಿ ಸಂಜನಾ ಸಿಸಿಬಿ ವಶದಲ್ಲಿದ್ದಾಗಲೇ ಆಕೆ ಮದುವೆ ಆಗಿದ್ದಾರೆ ಎನ್ನುವ ವಿಚಾರ ರಿವೀಲ್ ಆಗಿತ್ತು. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಅಜೀಜ್ ಪಾಷಾ ಜೊತೆ ಆಕೆ ಮದುವೆ ಆಗಿದೆ ಎನ್ನಲಾಗಿತ್ತು.

ಇತ್ತೀಚೆಗೆ ಸಾಕಷ್ಟು ಸಂದರ್ಶನಗಳಲ್ಲಿ ನಟಿ ಸಂಜನಾ ಮಾತನಾಡುತ್ತಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹೆಸರು ಕೇಳಿಬಂದಿರುವ ವಿಚಾರದ ಬಗ್ಗೆಯೂ ಮಾತನಾಡಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವುದು ನಿಜಕ್ಕೂ ನರಕ ಎಂದು ತಮ್ಮ ಜೈಲು ದಿನಗಳ ಬಗ್ಗೆ ನೆನಪಿಸಿಕೊಂಡಿದ್ದಾರೆ. ಆದಷ್ಟು ಬೇಗ ನಟ ದರ್ಶನ್ ಈ ಸಂಕಷ್ಟದಿಂದ ಪಾರಾಗಿ ಬರುವ ಆಶಯ ವ್ಯಕ್ತಪಡಿಸಿದ್ದಾರೆ.

Sanjana Galrani reveals why she converted to Islam after marriage

ಇನ್ನು ತಾವು ಸಿಸಿಬಿ ವಶದಲ್ಲಿದ್ದಾಗಲೇ ತಮ್ಮ ಮದುವೆ ವಿಚಾರ ಸುದ್ದಿಯಾಗಿದ್ದರ ಬಗ್ಗೆ ಸಂಜನಾ ಮಾತನಾಡಿದ್ದಾರೆ. ಟಿಆರ್‌ಪಿಗಾಗಿ ಅಂದು ಅದನ್ನು ದೊಡ್ಡ ವಿಷಯ ಮಾಡಲಾಯಿತು. ಅಸಲಿಗೆ ಆಗ ಇನ್ನು ನಮ್ಮ ಮದುವೆ ಆಗಿರಲಿಲ್ಲ. ಎಂಗೇಜ್‌ಮೆಂಟ್ ಅಷ್ಟೇ ಆಗಿತ್ತು. ನಾನು ಜೈಲಿನಿಂದ ಬಿಡುಗಡೆ ಆಗಿ ಬಂದಮೇಲೆ ಮದುವೆ ಆಗಿದ್ದು ಎಂದು ವಿವರಿಸಿದ್ದಾರೆ. ಈ ಬಗ್ಗೆ ನ್ಯಾಷನಲ್ ಟಿವಿ ಯೂಟ್ಯೂಬ್ ವಾಹಿನಿ ಸಂದರ್ಶನದಲ್ಲಿ ಸಂಜನಾ ಮಾತನಾಡಿದ್ದಾರೆ.

ಅಜೀಜ್ ಪಾಷಾ ಕೈ ಹಿಡಿದು ಮುಸ್ಲಿಂ ಆಗಿ ಮತಾಂತರ ಆಗಿದ್ದಕ್ಕೆ ಕಾರಣ ಏನು ಎನ್ನುವುದನ್ನು ಸಂಜನಾ ಗರ್ಲಾನಿ ವಿವರಿಸಿದ್ದಾರೆ. "ನಾವು ಮದುವೆ ಆಗುವಾಗ ಅಜೀಜ್ ತಾಯಿಗೆ 82 ವರ್ಷ ವಯಸ್ಸು. ಅವರ ತಾಯಿ ನನಗೆ ಬಹಳ ಕ್ಲೋಸ್. ಅವರಲ್ಲಿ ಹುಡುಗ ಹುಡುಗಿ ಮದುವೆ ಆಗಬೇಕು ಅಂದ್ರೆ ಹಿರಿಯರ ಯೋಚನೆ ಆ ರೀತಿಯೇ ಇರುತ್ತದೆ. ಅವರ ಮೇಲಿನ ಪ್ರೀತಿ, ಗೌರವ ಅಂಥದ್ದು. ಒಂದು ಸಹಿ ಮಾಡಿದ ಮಾತ್ರಕ್ಕೆ ಮುಸ್ಲಿಂ ಆಗೋಗ್ತೀನಿ, ಹಿಂದೂ ದೇವಸ್ಥಾನಕ್ಕೆ ಹೋಗಬಾರದು ಎಂದು ನನಗೆ ಅನ್ನಿಸಿರಲಿಲ್ಲ"

Sanjana Galrani reveals why she converted to Islam after marriage

"ನನಗೆ ಹಿಂದೂ ಒಂದು ಕಣ್ಣು, ಮುಸ್ಲಿಂ ಒಂದು ಕಣ್ಣು. ಸ್ಯಾಂಡಲ್‌ವುಡ್ ಡ್ರಗ್ ಕೇಸ್ ಆದಾಗ ಅವರು ನನ್ನ ಬೆಂಬಲಕ್ಕೆ ನಿಂತಿದ್ದರು. ಇಷ್ಟೆಲ್ಲಾ ಮಾಡಿದವರಿಗೆ ಒಂದು ಸಹಿ ಮಾಡಿದರೆ ಚಿಕ್ಕವಳು ಆಗ್ತೀನಾ? ಅಂತ ಅನ್ನಿಸಿತು. ಆದರೆ ಇದು ಪಬ್ಲಿಕ್ ಆಗುತ್ತದೆ ಎಂದು ನನಗೆ ಅನ್ನಿಸಿರಲಿಲ್ಲ. ಟ್ರೋಲ್ ಮಾಡುವವರಿಗೆ ಬೇರೆ ಏನು ಕೆಲಸ ಹೇಳಿ? ನಾನು ಎಲ್ಲಾ ಮತಗಳನ್ನು ಗೌರವಿಸುತ್ತೀನಿ. ಕೊನೆಗೆ ದೇವರು ಒಬ್ಬರೇ, ಹಿಂದೂ- ಮುಸ್ಲಿಂ ಎಲ್ಲರೂ ಒಳ್ಳೆಯವರು"

ನೀವು ಮುಸ್ಲಿಂ ಆಗುವ ಬದಲು ಅಜೀಜ್ ಅವರನ್ನು ಹಿಂದೂ ಧರ್ಮಕ್ಕೆ ಯಾಕೆ ಕರೆತರಲಿಲ್ಲ? ಎನ್ನುವ ಪ್ರಶ್ನೆ ಸಂಜನಾ ಉತ್ತರಿಸಿದ್ದಾರೆ. "ನಾನು ನಮ್ಮ ಪತಿಯನ್ನು ಬಹಳ ಗೌರವಿಸುತ್ತೇನೆ. ಮುಸ್ಲಿಂ ಮತಕ್ಕೆ ಮತಾಂತರ ಆಗುವಂತೆ ನನ್ನ ಪತಿ ಯಾವತ್ತೂ ಹೇಳಲಿಲ್ಲ. ಆ ಪರಿವಾರದಲ್ಲಿ ನಾನು ಒಬ್ಬಳಾಗಬೇಕು ಎಂದು ಅವರ ಖುಷಿಗಾಗಿ ಮಾಡಿದೆ. ಈ ಬಗ್ಗೆ ನನ್ನ ಮೇಲೆ ಯಾರೂ ಒತ್ತಡ ಹೇರಲಿಲ್ಲ" ಎಂದಿದ್ದಾರೆ.

"ನಾನು ಡ್ರಗ್ಸ್‌ ಕೇಸ್‌ನಲ್ಲಿ ಪೊಲೀಶ್ ವಶದಲ್ಲಿದ್ದಾಗ ಇನ್ನು ಮದುವೆ ಆಗಿರಲಿಲ್ಲ. ಎಂಗೇಜ್ ಆಗಿದ್ದೆ. ಹೊರಗೆ ಬಂದಮೇಲೆ ಮದುವೆ ಪೇಪರ್ಸ್‌ಗೆ ಸಹಿ ಮಾಡಿದೆವು. ನಾನು ಅಷ್ಟೊತ್ತಿಗೆ ಕನ್ವರ್ಟ್ ಆಗಿದ್ದೆ. ಮದುವೆ ಆಗಿರಲಿಲ್ಲ. ನನ್ನ ಫೋನ್‌ನಲ್ಲಿ ಒಂದಷ್ಟು ಫೋಟೊಗಳು ಇದ್ದವು. ಪ್ರಕರಣದ ತನಿಖೆ ವೇಳೆ ನನ್ನ ಫೋನ್ ರಿಟ್ರೈವ್ ಮಾಡಿದ್ದಾಗ ಆ ಫೋಟೊಗಳು ಹೊರಗೆ ಬಂತು. ಟಿಆರ್‌ಪಿಗಾಗಿ ಅದನ್ನೆಲ್ಲಾ ಬಳಸಿಕೊಂಡರು. ನಾನು ಅದ್ಧೂರಿಯಾಗಿ ಮದುವೆ ಆಗಬೇಕು ಎಂದುಕೊಂಡಿದ್ದೆ. ಆದರೆ ಇಷ್ಟೆಲ್ಲಾ ಆಯಿತು" ಎಂದು ಸಂಜನಾ ಬೇಸರ ಹೊರ ಹಾಕಿದ್ದಾರೆ.

More from Filmibeat

English summary
Sanjana Galrani opens up about her engagement and marriage with Azeez Pasha;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X