twitter
    For Quick Alerts
    ALLOW NOTIFICATIONS  
    For Daily Alerts

    ಜೈಲು ನನ್ನನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿತು; ಬಂಧನದ ದಿನಗಳ ಬಗ್ಗೆ ಸಂಜಯ್ ದತ್ ಮಾತು

    |

    ಬಾಲಿವುಡ್‌ನ ಮುನ್ನಾಭಾಯ್, ಖಳನಾಯಕ್, ಸಂಜುಬಾಬ ಹೀಗೆ ತರಹೇವಾರಿ ಹೆಸರುಗಳಿಂದ ಖ್ಯಾತಿಗಳಿಸಿರುವ ಸಂಜಯ್ ದತ್ ಗೆ ಇಂದು (ಜುಲೈ 29) ಹುಟ್ಟುಹಬ್ಬದ ಸಂಭ್ರಮ. 62ನೇ ವಸಂತಕ್ಕೆ ಕಾಲಿಟ್ಟಿರುವ ಸಂಜಯ್ ದತ್ ಗೆ ಅಭಿಮಾನಿಗಳಿಂದ ಮತ್ತು ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ.

    ಚಲನ ಚಿತ್ರಾಭಿಮಾನಿಗಳ ಪ್ರೀತಿಯ ಸಂಜುಬಾಬ ತನ್ನ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಚಿತ್ರರಂಗದ ಉತ್ತುಂಗದಲ್ಲಿದ್ದಾಗಲೇ ಜೈಲು ಸೇರಿದ ದತ್ ತನ್ನ ಅಮೂಲ್ಯ ಸಮಯವನ್ನು ಜೈಲಿಯನಲ್ಲಿ ಕಳೆದರು. 1993ರ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಕ್ಕಾಗಿ ಸಂಜಯ್ ದತ್ ಜೈಲುವಾಸ ಅನುಭವಿಸಬೇಕಾಯಿತು. ದತ್ 18 ತಿಂಗಳು ಜೈಲಿನಲ್ಲಿ ಕಳೆದಿದ್ದರು. ಜೈಲುವಾಸದ ದಿನಗಳು ಮತ್ತು ಜೈಲು ಕಲಿಸಿದ ಪಾಠದ ಬಗ್ಗೆ ಸಂಜಯ್ ದತ್ ಸಂದರ್ಶನವೊಂದರಲ್ಲಿ ವಿವರವಾಗಿ ಹೇಳಿದ್ದಾರೆ. ಮುಂದೆ ಓದಿ...

    ಜೈಲು ನನ್ನ ಅಹಂಕಾರ ಮುರಿಯಿತು

    ಜೈಲು ನನ್ನ ಅಹಂಕಾರ ಮುರಿಯಿತು

    ಜೈಲು ವಾಸದ ಬಗ್ಗೆ ಬಹಿರಂಗ ಪಡಿಸಿದ್ದ ಸಂಜಯ್ ದತ್, "ಜೈಲು ನನ್ನ ಅಹಂಕಾರವನ್ನು ಮುರಿಯಿತು" ಎಂದಿದ್ದರು. "ಜೈಲಿನಲ್ಲಿ ಕಳೆದ ಸಮಯ ನನಗೆ ಸಾಕಷ್ಟು ಸಂಗತಿಗಳನ್ನು ಅರಿತುಕೊಳ್ಳಲು ಸಾಧ್ಯವಾಯಿತು. ಅದು ನನ್ನ ಅಹಂಕಾರವನ್ನು ಮುರಿಯಿತು" ಎಂದು ಹೇಳಿದ್ದರು.

    ಪುಣೆಯ ಯರವಾಡ ಜೈಲಿನಲ್ಲಿ ದತ್ ಜೀವನ

    ಪುಣೆಯ ಯರವಾಡ ಜೈಲಿನಲ್ಲಿ ದತ್ ಜೀವನ

    2013ರಲ್ಲಿ ಸುಪ್ರಿಂ ಕೋರ್ಟ್ ಅಂತಿಮ ತೀರ್ಪು ನೀಡುವ ಮೂಲಕ ಸಂಜಯ್ ದತ್‌ಗೆ 5 ವರ್ಷಗಳ ಕಾಲ ಶಿಕ್ಷೆ ಪ್ರಕಟಿಸಿತು. 2013ರಲ್ಲಿ ಸಂಜಯ್ ದತ್ ಮತ್ತೆ ಪುಣೆಯ ಯರವಾಡ ಜೈಲು ಸೇರಿದರು. ಜೈಲುವಾಸದ ಬಗ್ಗೆ ಸಂದರ್ಶನದಲ್ಲಿ ಮಾತನಾಡಿರುವ ಸಂಜಯ್ ದತ್ ಜೈಲು ತನ್ನನ್ನು ಉತ್ತಮ ವ್ಯಕ್ತಿಯಾಗಿ ರೂಪಾಂತರಗೊಳ್ಳಲು ಸಹಾಯ ಮಾಡಿತು ಎಂದಿದ್ದರು.

    ನನ್ನನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿದೆ

    ನನ್ನನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿದೆ

    "ನನ್ನ ಬಂಧನದ ದಿನಗಳು ರೋಲರ್ ಕೋಸ್ಟರ್‌ ಸವಾರಿಗಿಂತ ಕಡಿಮೆಯಿಲ್ಲ. ಪಾಸಿಟಿವ್ ದೃಷ್ಟಿಯಲ್ಲಿ ನೋಡುವುದಾದರೆ ನನಗೆ ಬಹಳಷ್ಟು ಕಲಿಸಿದೆ ಮತ್ತು ನನ್ನನ್ನು ಉತ್ತಮ ವ್ಯಕ್ತಿಯನ್ನಾಗಿ ಮಾಡಿದೆ" ಎಂದಿದ್ದರು. ಕುಟುಂಬದಿಂದ ತಿಂಗಳುಗಟ್ಟಲೆ ದೂರವಾಗಿದ್ದರೂ ತನಗೆ ಕಲಿಕೆಯ ಅನುಭವ ಎಂದು ಹೇಳಿದ್ದರು. ತನ್ನ ಕುಟುಂಬ ಮತ್ತು ಪ್ರೀತಿ ಪಾತ್ರರಿಂದ ದೂರ ಇರುವುದು ಒಂದು ಸವಾಲಾಗಿತ್ತು ಎಂದಿದ್ದರು ಸಂಜಯ್ ದತ್.

    ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿತ್ತು

    ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿತ್ತು

    "ಜೈಲು ದಿನಗಳು ನನಗೆ ನನ್ನ ದೇಹವನ್ನು ಸರಿಯಾದ ಆಕಾರದಲ್ಲಿಟ್ಟುಕೊಳ್ಳುವುದನ್ನು ಕಲಿತೆ. ಡಂಬಲ್ಸ್ ಗಳ ಬದಲಾಗಿ ಕಸದ ಡಬ್ಬ ಮತ್ತು ಮಣ್ಣಿನ ಮಡಕೆಗಳನ್ನು ಬಳಸುವುದನ್ನು ಕಲಿತೆ. ಪ್ರತಿ ಆ ತಿಂಗಳಿಗೊಮ್ಮೆ ಜೈಲಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸುತ್ತಿದ್ದೆವು. ಅಲ್ಲಿ ನಾನು ಡೈಲಾಗ್ ಹೇಳುತ್ತಿದ್ದೆ. ಹಾಡು, ನೃತ್ಯ, ಸ್ಕಿಟ್‌ಗಳ ಮೂಲಕ ತಮ್ಮನ್ನು ತಾವು ವ್ಯಕ್ತಪಡಿಸುತ್ತಿದ್ದೆವು" ಎಂದು ಬಹಿರಂಗ ಪಡಿಸಿದ್ದರು.

    2016 ಫೆಬ್ರವರಿಯಲ್ಲಿ ಜೈಲಿನಿಂದ ಬಿಡುಗಡೆ

    2016 ಫೆಬ್ರವರಿಯಲ್ಲಿ ಜೈಲಿನಿಂದ ಬಿಡುಗಡೆ

    ಜೈಲು ಅವಧಿ ಪೂರ್ಣಗೊಳಿಸುವಾಗ ಅವರ ಸಹ ಖೈದಿಗಳೆಲ್ಲರೂ ಕುಟುಂಬವಾಗಿದ್ದರು ಮತ್ತು ಎಂದಿಗೂ ಬಿಟ್ಟುಕೊಡದಂತೆ ಪ್ರೋತ್ಸಾಹಿಸಿದರು ಎನ್ನುವ ಅಂಶವನ್ನು ಹೇಳಿದ್ದರು. 2016 ಫೆಬ್ರವರಿಯಲ್ಲಿ ಸಂಜಯ್ ದತ್ ಸ್ವತಂತ್ರ ವ್ಯಕ್ತಿಯಾದರು. ಫೆಬ್ರವರಿಯಲ್ಲಿ ಜೈಲು ಶಿಕ್ಷೆ ಪೂರ್ಣಗೊಳಿಸಿ ಹೊರಬಂದರು.

    ತಂದೆಯ ಬಗ್ಗೆ ಭಾವುಕ ಮಾತು

    ತಂದೆಯ ಬಗ್ಗೆ ಭಾವುಕ ಮಾತು

    ತನ್ನ ಬಿಡುಗಡೆ ಬಗ್ಗೆ ಮಾತಾಡಿದ್ದ ದತ್, "ಅಂತಿಮ ತೀರ್ಪಿನ ಬಳಿಕ ನಾನು ಬಿಡುಗಡೆಯಾದ ದಿನ ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣವಾಗಿದೆ. ನಾನು ನನ್ನ ತಂದೆಯನ್ನು ಕಳೆದುಕೊಂಡಿದ್ದೆ. ನನ್ನನ್ನು ಹೀಗೆ ಸ್ವತಂತ್ರವಾಗಿ ನೋಡಲು ಇನ್ನು ಜೀವಂತವಾಗಿದ್ದಾರೆ ಎಂದು ಬಯಸುತ್ತೇನೆ. ಇದನ್ನು ನೋಡಲು ಅವರು ಅತ್ಯಂತ ಸಂತೋಷದ ವ್ಯಕ್ತಿಯಾಗಿರುತ್ತಿದ್ದರು. ಅವರು ಯಾವಾಗಲು ಶಕ್ತಿಯ ಆಧಾರಸ್ತಂಭ" ಎಂದು ಹೇಳಿದ್ದರು. ಸಂಜಯ್ ದತ್ ತಂದೆ ಸುನಿಲ್ ದತ್ 2005ರಲ್ಲಿ ಹೃದಯಾಘಾತದಿಂದ ನಿಧನಹೊಂದಿದ್ದರು.

    ಸಂಜಯ್ ದತ್ ಬಯೋಪಿಕ್

    ಸಂಜಯ್ ದತ್ ಬಯೋಪಿಕ್

    ಸಂಜಯ್ ದತ್ ಜೈಲಿನಿಂದ ಬಂದ ಬಳಿಕ ಮತ್ತೆ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಸಾಕಷ್ಟು ನಿರ್ಮಾಪಕರು ಸಂಜಯ್ ದತ್ ಬಿಡುಗಡೆಯನ್ನು ಕಾಯುತ್ತಿದ್ದರು. ಅದರಂತೆ ಮತ್ತೆ ಸಿನಿಮಾಗಳಲ್ಲಿ ನಿರತಾರಿದ್ದಾರೆ. ಸಂಜಯ್ ದತ್ ಜೀವನಾಧಾರಿತ ಸಿನಿಮಾ ಕೂಡ ಬಿಡುಗಡೆಯಾಯಿತು. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

    ಕ್ಯಾನ್ಸರ್ ಗೆದ್ದಿರುವ ಮುನ್ನಾಭಾಯ್

    ಕ್ಯಾನ್ಸರ್ ಗೆದ್ದಿರುವ ಮುನ್ನಾಭಾಯ್

    ಇನ್ನೇನು ಎಲ್ಲಾ ಸಂತೋಷವಾಗಿ ಸಾಗುತ್ತಿದೆ ಎನ್ನುವಷ್ಟೊತ್ತಿಗೆ ಕ್ಯಾನ್ಸರ್ ಎನ್ನುವ ಮಹಾಮಾರಿ ಸಂಜಯ್ ದತ್ ಅವರನ್ನು ಆವರಿಸಿಕೊಂಡಿತು. ಕಳೆದ ವರ್ಷ ಸಂಜಯ್ ದತ್ ಗೆ ಶ್ವಾಸಕೋಶ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಚಿಕಿತ್ಸೆಯ ಬಳಿಕ ಸದ್ಯ ಚೇತರಿಸಿಕೊಂಡಿದ್ದಾರೆ. ಇದೀಗ ಮತ್ತೆ ಸಿನಿಮಾಗಳಲ್ಲಿ ನಿರತರಾಗಿದ್ದಾರೆ.

    English summary
    Bollywood Actor Sanjay Dutt revealed that jail-time helped him transform into a better person.
    Thursday, July 29, 2021, 13:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X