ಪದೇ ಪದೆ ಫೋನ್ ನಂಬರ್ ಬದಲಿಸುವ ಸುದೀಪ್; ಪಾಪ ಸಾನ್ವಿ ಪಜೀತಿ ಏನು?

By ಫಿಲ್ಮ್‌ಬೀಟ್ ಡೆಸ್ಕ್

ಸೆಲೆಬ್ರೆಟಿಗಳು ಫೋನ್ ಕರೆ, ಮೆಸೇಜ್‌ಗಳಿಂದ ಸಾಕಷ್ಟು ಕಿರಿಕಿರಿ ಅನುಭವಿಸುತ್ತಾರೆ. ಇದೇ ಕಾರಣಕ್ಕೆ ಪದೇ ಪದೆ ಫೋನ್ ನಂಬರ್ ಬದಲಿಸುವಂತಾಗುತ್ತಾರೆ. ಸೆಲೆಬ್ರೆಟಿಗಳ ಫೋನ್ ನಂಬರ್ ಸಿಕ್ಕರೆ ಸಹಜವಾಗಿಯೇ ಎಲ್ಲರೂ ಕರೆ ಮಾಡುತ್ತಾರೆ. ನಟ ಸುದೀಪ್ ಕೂಡ ಇಂತಹ ಸಮಸ್ಯೆ ಎದುರಿಸಿದ್ದಾರೆ.

ಇಂತಹ ಕಿರಿಕಿರಿ ಕಾರಣಕ್ಕೆ ಸಿನಿಮಾ ತಾರೆಯರು ಆಗಾಗ್ಗೆ ಫೋನ್ ನಂಬರ್ ಬದಲಿಸುತ್ತಾರೆ. ಒಂದಲ್ಲ ಎರಡಲ್ಲ ನಾಲ್ಕೈದು ನಂಬರ್ ಬಳಸುತ್ತಿರುತ್ತಾರೆ. ಕೆಲವೊಮ್ಮೆ ಹೊಸ ನಂಬರ್‌ಗಳಿಂದ ಬರುವ ಕರೆಗಳನ್ನು ಸ್ವೀಕರಿಸುವುದಿಲ್ಲ. ಇನ್ನು ಆಪ್ತ ಸಹಾಯರನ್ನು ನೇಮಿಸಿಕೊಂಡಿರುತ್ತಾರೆ. ಕರೆ ಮಾಡಿರೋದು ಯಾರು, ಯಾಕೆ ಎಂದು ತಿಳಿದಮೇಲೆ ಮಾತನಾಡುತ್ತಾರೆ. ಆಪ್ತರಿಗೆ ಮಾತ್ರ ಒಂದು ನಂಬರ್ ಕೊಟ್ಟಿರುತ್ತಾರೆ.

Sanvi Sudeep shares how her father Kiccha Sudeep frequently changes phone numbers causing confusion

ಈ ಫೋನ್ ನಂಬರ್ ವಿಚಾರದಲ್ಲಿ ಸ್ಟಾರ್ ನಟ, ನಟಿಯರ ಕಷ್ಟ ಕೇಳೋದೆ ಬೇಡ. ನಟ ಕಿಚ್ಚ ಸುದೀಪ್ ಕೂಡ ಏಳೆಂಟು ಫೋನ್ ನಂಬರ್ ಬಳಸುತ್ತಾರೆ. ಆದರೆ ಯಾವಾಗ ಯಾವುದು ಇರುತ್ತದೆ ಎಂದು ಹೇಳುವುದು ಕಷ್ಟವಂತೆ. ಅದೇ ಕಾರಣಕ್ಕೆ ತಂದೆ ಬಳಸುವ ಎಲ್ಲಾ ಫೋನ್ ನಂಬರ್ ಅನ್ನು ಮಗಳ ಸಾನ್ವಿ ತಮ್ಮ ಫೋನ್‌ನಲ್ಲಿ ಸೇವ್ ಮಾಡಿಕೊಂಡಿದ್ದಾರೆ. ಇದರಿಂದ ವಿಚಿತ್ರ ಪಜೀತಿ ಅವರು ಎದುರಿಸುವಂತಾಗಿದೆಯಂತೆ. ಅದನ್ನು ತಮಾಷೆಯಾಗಿ ಹೇಳಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಸಾನ್ವಿ ಸುದೀಪ್ ಭಾಗವಹಿಸಿ ಮಾತನಾಡಿದ್ದಾರೆ. "ನಮ್ಮಪ್ಪ ಪ್ರತಿ ತಿಂಗಳು ಫೋನ್ ನಂಬರ್ ಬದಲಿಸುತ್ತಿರುತ್ತಾರೆ. ನಾನು ಅಪ್ಪ 1 ಇಂದ ಅಪ್ಪ 7 ವರೆಗೆ ನಂಬರ್ ಸೇವ್ ಮಾಡಿಕೊಂಡಿದ್ದೇನೆ. ಅಪ್ಪ New, ಅಪ್ಪ New, New ಎಂದು ಸೇವ್ ಮಾಡಿದ್ದೀನಿ. ಒಂದು ನಂಬರ್ ಅನ್ನು Actual ಅಪ್ಪ ಎಂದು ಸೇವ್ ಮಾಡಿಕೊಂಡಿದ್ದೆ. ಇದನ್ನು ನೋಡಿ ನಮ್ಮಮ್ಮ ಅಚ್ಚರಿ ವ್ಯಕ್ತಪಡಿಸಿದ್ದರು" ಎಂದು ಸಾನ್ವಿ ಹೇಳಿದ್ದಾರೆ.

"ನಾನು ಫೋನ್ ಅಲ್ಲಿ ಹೀಗೆ ನಂಬರ್ ಸೇವ್ ಮಾಡಿಕೊಂಡಿರುವುದನ್ನು ನಮ್ಮಮ್ಮ ನೋಡಿ, ಏನಿದು. ಜನ ಏನಂದುಕೊಳ್ತಾರೆ ಅಂತ ಹೇಳಿದ್ದನ್ನು ನೆನಪಿಕೊಂಡು ಸಾನ್ವಿ ನಕ್ಕಿದ್ದಾರೆ. ಜನರಿಗೆ ಫೋನ್ ನಂಬರ್ ಸಿಕ್ಕಿಬಿಡುತ್ತದೆ. ಹಾಗಾಗಿ ಅಪ್ಪ ಪದೇ ಪದೆ ನಂಬರ್ ಬದಲಿಸುವಂತಾಗುತ್ತದೆ. ಬಳಿಕ ನಾನು ಎಮೊಜಿ ಸೇರಿಸಿ ಒಂದಷ್ಟು ನಂಬರ್ ಸೇವ್ ಮಾಡಿದೆ. ಈಗ 'ಫಾದರ್ ಡಿಯರೆಸ್ಟ್' ಅಂತ ನಂಬರ್ ಸೇವ್ ಮಾಡಿಕೊಂಡಿದ್ದೀನಿ, ಸದ್ಯಕ್ಕೆ ಕನ್‌ಫ್ಯೂಸ್ ಆಗಲ್ಲ. ಕೆಲವೊಮ್ಮೆ ಅಪ್ಪ ಹಳೇ ನಂಬರ್ ಬಳಸುತ್ತಾರೆ, ಹಾಗಾಗಿ ನಾನು ಯಾವುದನ್ನು ಡಿಲೀಟ್ ಮಾಡಲ್ಲ" ಎಂದು ಸಾನ್ವಿ ವಿವರಿಸಿದ್ದಾರೆ.

ಇತ್ತೀಚೆಗೆ ಕೆಲ ಸಂದರ್ಶನದಲ್ಲಿ ಸಾನ್ವಿ ಸುದೀಪ್ ಭಾಗವಹಿಸಿ ಮಾತನಾಡಿದ್ದರು. ಆಕೆಯ ಹೇಳಿಕೆಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ತಮ್ಮ ವಿದ್ಯಾಭ್ಯಾಸ, ಕ್ರಶ್ ಹೀಗೆ ಸಾಕಷ್ಟು ವಿಚಾರಗಳನ್ನು ಆಕೆ ಹಂಚಿಕೊಂಡಿದ್ದರು. ಕೆಲ ದಿನಗಳ ಹಿಂದೆ ಜೀ ಕನ್ನಡ ಸರಿಗಮಪ ವೇದಿಕೆಗೆ ಬಂದು ಹಾಡು ಹಾಡಿ ರಂಜಿಸಿದ್ದರು. ಸುದೀಪ್ ಹಾಗೂ ಪತ್ನಿ ಪ್ರಿಯಾ ಕೂಡ ಅದಕ್ಕೆ ಸಾಕ್ಷಿ ಆಗಿದ್ದರು.ಸಾನ್ವಿ ಸುದೀಪ್ ಚಿಕ್ಕಂದಿನಿಂದ ಹಾಡುವುದನ್ನು ಅಭ್ಯಾಸ ಮಾಡುತ್ತಾ ಬರ್ತಿದ್ದಾರೆ.

'ದಬಾಂಗ್- 3' ಚಿತ್ರದ ಹಾಡೊಂಡಕ್ಕೆ ಟ್ರ್ಯಾಕ್ ಕೂಡ ಹಾಡಿದ್ದರು. ಅನ್ನಪೂರ್ಣ ಆಕ್ಟಿಂಗ್ ಸ್ಕೂಲ್‌ನಲ್ಲಿ ನಟನೆಯ ಪಟ್ಟುಗಳನ್ನು ಕಲಿತ್ತಿದ್ದಾರೆ. ತಂದೆಯ ಹಾದಿಯಲ್ಲಿ ಚಿತ್ರರಂಗಕ್ಕೆ ಬರುವ ಮನಸ್ಸು ಮಾಡಿದ್ದಾರೆ. ಆದರೆ ನಾಯಕಿಯಾಗಿ ನಟಿಸೋಲ್ಲ. ಕೆಲವರು ನನಗೆ ನೆಗೆಟಿವ್ ರೋಲ್ ಸೂಕ್ತ ಎನ್ನುತ್ತಾರೆ. ನೋಡೋಣ ಅಂತಹ ಅವಕಾಶಗಳು ಸಿಕ್ಕರೆ ಕಂಡಿತ ನಟಿಸ್ತೀನಿ ಎಂದು ಸಾನ್ವಿ ಸುದೀಪ್ ಹೇಳಿದ್ದರು. ಬಾಲಿವುಡ್ ನಟ ಸಿದ್ದಾರ್ಥ್ ಮಲ್ಹೋತ್ರಾ ನನ್ನ ಕ್ರಶ್, ಆತನ ಮದುವೆ ಆದಾಗ ಹಾರ್ಟ್ ಬ್ರೇಕ್ ಆಗಿತ್ತು ಎಂದು ತಿಳಿಸಿದ್ದರು.

More from Filmibeat

English summary
Sanvi Sudeep jokes about the challenges of saving her father Kiccha Sudeep’s ever-changing phone numbers;
Read more about: sudeep sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X