"ನಟಿಸುವಾಗ ಸಹ ನಟನ ಜೊತೆ ಒಂದು ರೀತಿ ಕನೆಕ್ಷನ್, ಬಾಂಡಿಂಗ್ ಇರ್ಬೇಕು.. ಅದು ಮುಖ್ಯ": ಸಪ್ತಮಿ ಗೌಡ

By ಫಿಲ್ಮಿಬೀಟ್ ಡೆಸ್ಕ್

'ಕಾಂತಾರ' ಚಿತ್ರದಲ್ಲಿ ಲೀಲಾ ಆಗಿ ಮೋಡಿ ಮಾಡಿದ ಬೆಡಗಿ ಸಪ್ತಮಿ ಗೌಡ. ಮೊದಲ ಸಿನಿಮಾ ಬಳಿಕ ವಿದೇಶಕ್ಕೆ ತೆರಳಿ ಓದಬೇಕು ಎಂದುಕೊಂಡಿದ್ದ ಸಪ್ತಮಿ ಲಾಕ್‌ಡೌನ್ ಕಾರಣಕ್ಕೆ ಇಲ್ಲೇ ಉಳಿದುಕೊಳ್ಳುವಂತಾಯಿತು. ಬಳಿಕ 'ಕಾಂತಾರ' ಸಿನಿಮಾ ಅವಕಾಶ ಸಿಕ್ಕಿತ್ತು.

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ' ಸಿನಿಮಾ ಪ್ಯಾನ್ ಇಂಡಿಯಾಮಟ್ಟದಲ್ಲಿ ಹಿಟ್ ಆಗಿತು. ನೋಡ ನೋಡುತ್ತಲೇ ಸಪ್ತಮಿ ಬಾಲಿವುಡ್ ಸಿನಿಮಾದಲ್ಲಿ ಕೂಡ ನಟಿಸಿ ಬಂದರು. ಬಳಿಕ 'ಯುವ' ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದರು. ಆ ಸಿನಿಮಾ ಕೂಡ ಹಿಟ್ ಆಯಿತು. ಅಭಿಷೇಕ್ ಅಂಬರೀಶ್ ಜೊತೆ 'ಕಾಳಿ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಕಾರಣಾಂತರಗಳಿಂದ ಆ ಸಿನಿಮಾ ತಡವಾಗುತ್ತಿದೆ.

Sapthami gowda opens up about how important connection chemistry bonding with co star

'ತಮ್ಮುಡು' ಸಿನಿಮಾ ಮೂಲಕ ಸಪ್ತಮಿ ಗೌಡ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇತ್ತೀಚೆಗೆ ಮಯೂರ ರಾಘವೇಂದ್ರ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಸಪ್ತಮಿ ಗೌಡ ಮಾತನಾಡಿದ್ದಾರೆ. ಶಾನ್ವಿ ಶ್ರೀವಾಸ್ತವ, ರುಕ್ಮಿಣಿ ವಸಂತ್ ಹಾಗೂ ಚೈತ್ರಾ ಆಚಾರ್ ಸಹ ಸಾಥ್ ನೀಡಿದ್ದಾರೆ. ಈ ರೌಂಡ್ ಟೇಬಲ್ ಚಿಟ್‌ಚಾಟ್‌ನಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ 4 ಜನ ಮಾತನಾಡಿದ್ದಾರೆ.

ಸಹ ಕಲಾವಿದರ ಜೊತೆ ಲವ್, ಕ್ರಶ್ ಆಗಿದ್ಯಾ? ಎನ್ನುವ ಪ್ರಶ್ನೆಗೆ ನಾಲ್ಕು ಜನ ಉತ್ತರಿಸಿದ್ದಾರೆ. ಶಾನ್ವಿ ಶ್ರೀವಾಸ್ತವ ಮಾತನಾಡಿ "ಒಬ್ಬ ನಟನೊಟ್ಟಿಗೆ ಏಳೆಂಟು ತಿಂಗಳು ಶೂಟಿಂಗ್ ವೇಳೆ ಕಾಲ ಕಳೆದರೆ, ರೊಮ್ಯಾಂಟಿಕ್ ಸೀನ್‌ಗಳಲ್ಲಿ ನಟಿಸಿದರೆ ಏನೋ ಒಂದು ಆಗುತ್ತದೆ. ಅದು ಸರ್ವೇಸಾಮಾನ್ಯ. ಅದರ ಅರ್ಥ ಲವ್ವಲ್ಲಿ ಬಿದ್ದಿದ್ದೀವಿ ಅಂತ ಅರ್ಥ ಅಲ್ಲ" ಎಂದಿದ್ದಾರೆ.

ರುಕ್ಮಿಣಿ ವಸಂತ್ ಪ್ರತಿಕ್ರಿಯಿಸಿ "ನಾವು ನಟಿಸುವಾಗ, ಗಾಢವಾದ ಸನ್ನಿವೇಶಗಳಲ್ಲಿ ರೊಮ್ಯಾಂಟಿಕ್‌ ಸೀನ್ ಮಾಡುವಾಗ ಅಂತಹ ಕನೆಕ್ಷನ್ ಆಗಲೇಬೇಕು. ಹಾಗಂತ ಅದು ಲವ್ ಆಗಿರಲೇಬೇಕಂತ ಇಲ್ಲ. ಆಗ ಮಾತ್ರ ಚೆನ್ನಾಗಿ ನಟಿಸೋಕೆ ಸಾಧ್ಯ. ಅದರ ಅರ್ಥ ಕನೆಕ್ಷನ್ ಆಗುತ್ತದೆ. ಅದನ್ನು ಲವ್, ರಿಲೇಷನ್‌ಶಿಪ್ ಅನ್ನೋಕೆ ಸಾಧ್ಯವಿಲ್ಲ" ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

Sapthami gowda opens up about how important connection chemistry bonding with co star

ಇದೇ ಪ್ರಶ್ನೆಗೆ ಸಪ್ತಮಿ ಗೌಡ ಮಾತನಾಡಿ "ನಾನು ಕೂಡ ರುಕ್ಮಿಣಿ ಮಾತನ್ನು ಒಪ್ಪುತ್ತೇನೆ. ಆಕೆ ಪ್ರೇಕ್ಷಕರನ್ನು ಕನ್ವಿನ್ಸ್ ಮಾಡಬೇಕು ಅಂದ್ರೆ, ಆಕೆ ಅದನ್ನು ಫೀಲ್ ಮಾಡಿ ತೋರಿಸಬೇಕು. ಆಕೆ ಲವ್ ಸ್ಟೋರಿಯಲ್ಲಿ ನಟಿಸುತ್ತಿದ್ದರೆ ಪ್ರೀತಿಲಿ ಬಿದ್ದಂತೆ ನಟಿಸಬೇಕು, ಅದರರ್ಥ ಆಗಿ ಪ್ರೀತಿಯಲ್ಲಿ ಬಿದ್ದಿದ್ದಾಳೆ ಅಂತಲ್ಲ. ಬ್ರೇಕಪ್ ಸೀನ್ ಅಂದ್ರೆ, ನಿಜವಾಗಿಯೂ ಬ್ರೇಕ್ ಅಪ್ ಆಗಿದೆ ಅನ್ನುವಂತೆ ಮಾಡಿ ತೋರಿಸಬೇಕು"

"ನಮಗೆ ಡೈರೆಕ್ಟರ್ಸ್ ರಿಸರ್ಸಲ್, ವರ್ಕ್‌ಶಾಪ್ ಮಾಡೋಕೆ ಹೇಳುತ್ತಾರೆ. ನಾವು ಆಗ ಕನೆಕ್ಷನ್ ಬಿಲ್ಡ್ ಮಾಡಲು ಪ್ರಯತ್ನಿಸುತ್ತೇವೆ. ಅದು ಒಂದು ಬಾಂಡ್. ಆ ಸಮಯದಲ್ಲಿ ನಾನು ಸೀನ್ ಬಗ್ಗೆ ಮಾತನಾಡಲ್ಲ, ಬೇರೆ ವಿಚಾರಗಳ ಬಗ್ಗೆ ಮಾತನಾಡುತ್ತೇವೆ. ಬೇರೆ ವಿಚಾರಗಳ ಬಗ್ಗೆ ಮಾತನಾಡಿ ಕನೆಕ್ಷನ್ ಆಗಿ ಕಂಫರ್ಟ್ ಆಗಿ ನಟಿಸೋಕೆ ಸಾಧ್ಯ" ಎಂದಿದ್ದಾರೆ.

"ಗಾಸಿಪ್, ವಿವಾದಗಳ ಸಮಯದಲ್ಲಿ ನಾವು ಏನೋ ಮಾತನಾಡಿ ಅದು ಏನೇನೋ ಅರ್ಥ ಪಡೆಯುತ್ತದೆ. ನಾವು ಹೆಚ್ಚು ತಲೆ ಕೆಡಿಸಿಕೊಳ್ಳಲ್ಲ. ಅಭ್ಯಾಸ ಆಗಿರುತ್ತದೆ. ಆದರೆ ನಮ್ಮ ತಾಯಿನೋ, ತಂದೆನೋ ಅದನ್ನು ನೋಡಿದಾಗ ಅವರ ಮೇಲೆ ಪರಿಣಾಮ ಬೀರುತ್ತದೆ. ನನಗೆ ಒಬ್ಬ ತಂಗಿ ಇದ್ದಾಳೆ. ಆಕೆಯ ಮೇಲೆ ಪರಿಣಾಮ ಬೀರಬಹುದು" ಎಂದು ಸಪ್ತಮಿ ಗೌಡ ವಿವರಿಸಿದ್ದಾರೆ.

More from Filmibeat

English summary
Sapthami gowda talks about good chemistry with co star while shooting;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X