For Quick Alerts
  ALLOW NOTIFICATIONS  
  For Daily Alerts

  ಲೇಡಿ ಸೂಪರ್‌ಸ್ಟಾರ್ ನಯನತಾರಾ ವೃತ್ತಿ ಬದುಕಿನ ಕೆಲ ಕರಾಳ ಸತ್ಯಗಳು

  |

  ಲೇಡಿ ಸೂಪರ್‌ಸ್ಟಾರ್‌ ಅಂತಾನೆ ಫೇಮಸ್‌ ಆಗಿರೋ ಪಂಚ ಭಾಷಾತಾರೆ ನಯನತಾರಾ ವೃತ್ತಿ ಜೀವನದಲ್ಲಿ ಹಲವು ರೀತಿಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಆದರೆ ವೈಯಕ್ತಿಕ ಜೀವನದಲ್ಲಿ ನಯನತಾರ ಹಲವು ಏಳು ಬೀಳುಗಳನ್ನು ಕಂಡಿದ್ದಾರೆ. ಅದರಲ್ಲೂ ಅವರ ಜೀವನದಲ್ಲಿ ಹಲವು ವ್ಯಕ್ತಿಗಳು ಬಂದು ಹೋಗಿದ್ದು ಸಾಕಷ್ಟು ಕರಾಳ ಸತ್ಯಗಳನ್ನು ತಮ್ಮಲ್ಲೇ ಅಡಗಿಸಿಕೊಂಡಿದ್ದಾರೆ.

  ತೆಲುಗು, ತಮಿಳು, ಮಲಯಾಳಂ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿ ನಯನ ತಾರಾ ಬಣ್ಣ ಹಚ್ಚಿದ್ದು ಈಗಲೂ ಬಹುಬೇಡಿಕೆಯ ನಟಿಯಾಗಿದ್ದಾರೆ. ನಯನತಾರ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದು, ಲೇಡಿ ಸೂಪರ್‌ಸ್ಟಾರ್‌ ಎಂದು ಖ್ಯಾತಿ ಪಡೆದುಕೊಂಡಿದ್ದಾರೆ.

  ನಯನ್‌ ತಾರ ಹುಟ್ಟುಹಬ್ಬ- ಭಾವಿ ಪತಿ ನೀಡಿದ ವಿಶೇಷ ಉಡುಗೊರೆ!ನಯನ್‌ ತಾರ ಹುಟ್ಟುಹಬ್ಬ- ಭಾವಿ ಪತಿ ನೀಡಿದ ವಿಶೇಷ ಉಡುಗೊರೆ!

  ನಟ ಸಿಂಬು ಹಾಗೂ ನಯನತಾರ 'ವಲ್ಲವನ್' ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ಸಮಯದಲ್ಲಿ ಇಬ್ಬರಿಗೂ ಸಂಬಂಧ ಇದೆ, ಮದುವೆಯಾಗುತ್ತಾರೆ ಎಂಬ ಸುದ್ದಿ ಚಿತ್ರರಂಗದಲ್ಲಿ ಭಾರೀ ಗುಸು ಗುಸು ಎಬ್ಬಿಸಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಸಿಂಬು ಹಾಗೂ ನಯನತಾರಾ ಇಬ್ಬರು ಸಹ ಒಟ್ಟಿಗೆ ಬಹಳ ಕ್ಲೋಸ್ ಆಗಿ ಆಗಾಗ ಕಾಣಿಸಿಕೊಳ್ಳುತ್ತಿದ್ದರು. ಹೀಗಾಗಿ ಈ ವಿಚಾರ ಸಿನಿಮಾ ಮಂದಿಗೂ ಮಾತಿಗೆ ಸಿಕ್ಕಿ ಬಣ್ಣ ಬಣ್ಣದ ಕಥೆಗಳು ಹುಟ್ಟಿಕೊಂಡಿದ್ದವು. ಆದರೆ ಸಿಂಬು ಹಾಗೂ ನಯನತಾರ ಸಂಬಂಧ ಕೆಲವೇ ವರ್ಷಗಳಲ್ಲೇ ಮುರಿದು ಬಿತ್ತು. ಆದರೆ, ಇಬ್ಬರೂ ಒಟ್ಟಿಗೆ ಇದ್ದ ಕೆಲ ಪೋಟೋಗಳು ಆ ಸಮಯದಲ್ಲಿ ಆನ್‌ಲೈನ್‌ನಲ್ಲಿ ಭಾರೀ ವೈರಲ್ ಆಗಿತ್ತು.

  ಇದಾದ ಕೆಲ ದಿನಗಳ ನಂತರ ಮತ್ತೆ ನಯನತಾರ ಹೆಸರು ಡ್ಯಾನ್ಸಿಂಗ್ ಕಿಂಗ್ ಪ್ರಭುದೇವ ಜೊತೆ ಕೇಳಿ ಬಂತು. 'ವಿಲ್ಲು' ಸಿನಿಮಾ ಚಿತ್ರೀಕರಣದಲ್ಲಿ ನಟ ಪ್ರಭುದೇವ ಹಾಗೂ ನಯನತಾರಾ ಸಂಬಂಧದ ಬಗ್ಗೆ ಬಿಸಿ ಬಿಸಿ ಚರ್ಚೆಗಳು ಶುರುವಾಗಿದ್ದವು. ಆ ಸಮಯದಲ್ಲಿ ಪ್ರಭುದೇವಗೆ ರಾಮಲತಾ ಅವರೊಂದಿಗೆ ಮದುವೆಯಾಗಿ 15 ವರ್ಷಗಳೇ ಆಗಿದ್ದವು. ಅಲ್ಲದೆ ಇಬ್ಬರು ಮಕ್ಕಳು ಕೂಡ ಇದ್ದರು. ಇನ್ನು ಪ್ರಭುದೇವ ಹಾಗೂ ನಯನತಾರಾ ಸಂಬಂಧದ ಸುದ್ದಿ ಪತ್ನಿ ರಾಮಲತಾಗೂ ತಿಳಿದು ಅವರು ನಯನತಾರಾ ಎಲ್ಲಿ ಹೋದರು ಸಹ ಅವರಿಗೆ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದಲ್ಲದೆ, ಮಹಿಳಾ ಸಂಘದ ಸದಸ್ಯರು ಹಾಗೂ ಮಹಿಳೆಯರ ಜೊತೆ ಸೇರಿ ನಯನತಾರಾ ನಿವಾಸದ ಮುಂದೆ ಪ್ರತಿಭಟನೆ ಕೂಡ ನಡೆಸಿದ್ದರು. ಆದಾದ ಕೆಲ ದಿನಗಳಲ್ಲೇ ನಯನ ಹಾಗೂ ಪ್ರಭುದೇವ ಬ್ರೇಕಪ್‌ ಆಯಿತು. ಇಷ್ಟೆಲ್ಲಾ ಘಟನೆಗಳಾದ ಮೇಲೆ ನಟಿ ನಯನತಾರಾ ಸಿನಿಮಾ ಮಾಡುವುದನ್ನೇ ಮೂರು ವರ್ಷ ಸಂಪೂರ್ಣವಾಗಿ ನಿಲ್ಲಿಸಿಬಿಟ್ಟಿದ್ದರು. ಮೂರು ವರ್ಷದ ಬಳಿಕ ತೆಲುಗು ಸಿನಿಮಾದ 'ಕೃಷ್ಣಂ ಒಂದೇ ಜಗದ್ಗುರು' ಸಿನಿಮಾದಲ್ಲಿ ನಟಿಸುವ ಮೂಲಕ ಮತ್ತೆ ಸಿನಿ ಲೋಕಕ್ಕೆ ಕಾಲಿಟ್ಟರು.

  ಹೊಸ ಬ್ಯುಸಿನೆಸ್‌ಗೆ ಕೈ ಹಾಕಿದ ನಟಿ ನಯನತಾರಾಹೊಸ ಬ್ಯುಸಿನೆಸ್‌ಗೆ ಕೈ ಹಾಕಿದ ನಟಿ ನಯನತಾರಾ

  2009ರಲ್ಲಿ ನಯನತಾರಾ ಕೇರಳದ ಕಲ್ಲೆಕುಲನ್ಗರ ದೇಗುಲಕ್ಕೆ ವಿಶು ಹಬ್ಬದ ಪ್ರಯುಕ್ತ ಭೇಟಿ ನೀಡಿದ್ದರು. ಈ ವೇಳೆ ಸೆಲ್ವರ್ ಸೂಟ್ ಹಾಕಿದ್ದಕ್ಕೆ ದೇವಸ್ಥಾನ ಆಡಳಿತ ಮಂಡಳಿ ದೇಗುಲ ಪ್ರವೇಶಕ್ಕೆ ಅನುಮತಿ ನೀಡಿರಲಿಲ್ಲ. ಇದಕ್ಕೆ ನಟಿ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

  ತಮಿಳು ಸಿನಿಮಾದ 'ಮಾಸು ಎಂಗಿರಾ ಮಸಿಲಾಮನಿ' ಚಿತ್ರದಲ್ಲಿ ನಯನತಾರಾ ಅಭಿನಯಿಸಿದ್ದರು. ಈ ಸಿನಿಮಾದಲ್ಲಿ ಕೋ-ಸ್ಟಾರ್ ಆಗಿದ್ದ ಪ್ರೇಮ್‌ಗಿ ಅಮರೆನ್‌, ನಯನತಾರಾ ಅವರನ್ನು ಆಂಟಿ ಅಂತ ಕರೆದು ಗೇಲಿ ಮಾಡಿದ್ದರು. ಇದಕ್ಕೆ ನಯನತಾರಾ ಕೋಪ ಮಾಡಿಕೊಂಡಿದ್ದಲ್ಲದೆ, ಪ್ರೇಮ್‌ಗಿ ಅವರಿಗೆ ಮತ್ತೆ ಇದು ರಿಪೀಟ್‌ ಆದರೆ ಪರಿಣಾಮ ಕೆಟ್ಟದಾಗಿರುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

  Secrets of Tamil Movie Lady Super Star Nayanthara

  2013 ರಲ್ಲಿ ನಯನತಾರಾ ಹಾಗೂ ಆರ್ಯಾ ಮದುವೆಯಾಗಿರೋ ಪೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಇಬ್ಬರಿಗೂ ಮದುವೆಯಾಗಿದೆ ಅಂತ ಗಾಸಿಪ್ ಹರಿದಾಡಿದ್ದು, ಇದಾದ ಬಳಿಕ ರಾಜರಾಣಿ ಸಿನಿಮಾದ ಪ್ರಮೋಷನ್‌ಗೆ ಈ ಪೋಟೊ ರಿಲೀಸ್ ಮಾಡಲಾಗಿತ್ತು ಎಂದು ಚಿತ್ರತಂಡ ಸ್ಪಷ್ಟ ಪಡಿಸಿತ್ತು.

  ಬುರ್ಜ್ ಖಲೀಫಾ ಮುಂದೆ ನಯನಾತಾರಾ ಹಣೆಗೆ ಮುತ್ತಿಟ್ಟ ವಿಘ್ನೇಶ್ ಶಿವನ್: ಹೊಸ ವರ್ಷದ ಸಂಭ್ರಮ ಹೇಗಿತ್ತು?ಬುರ್ಜ್ ಖಲೀಫಾ ಮುಂದೆ ನಯನಾತಾರಾ ಹಣೆಗೆ ಮುತ್ತಿಟ್ಟ ವಿಘ್ನೇಶ್ ಶಿವನ್: ಹೊಸ ವರ್ಷದ ಸಂಭ್ರಮ ಹೇಗಿತ್ತು?

  ಸದ್ಯ ಇಷ್ಟೆಲ್ಲಾ ಘಟನೆಗಳಾದ ನಂತರ ನಟಿ ನಯನತಾರಾ ಈಗ ವಿಘ್ನೇಶ್ ಶಿವನ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ. ಸದ್ಯ ಇಬ್ಬರು ಸಹ ಖುಷಿಯಾಗಿದ್ದು, ಈ ಹಿಂದಿನ ಕಹಿ ಘಟನೆಗಳನ್ನು ಮರೆತು ಲೇಡಿ ಸೂಪರ್‌ಸ್ಟಾರ್ ತಮ್ಮ ಹೊಸ ಸಂಗಾತಿ ವಿಘ್ನೇಶ್ ಜೊತೆ ಹ್ಯಾಪಿಯಾಗಿ ಕಾಲ ಕಳೆಯುತ್ತಿದ್ದಾರೆ. ಸದ್ಯ ಈ ಜೋಡಿಗಳು ಇನ್ನು ಕೆಲವೇ ದಿನಗಳಲ್ಲಿ ಮದುವೆಯಾಗುತ್ತಾರೆ ಎಂಬ ಗುಸುಗುಸು ಸಹ ಪ್ರಾರಂಭವಾಗಿದ್ದು, ಮುಂದೆನಾಗುತ್ತೋ ಕಾದು ನೋಡಬೇಕಿದೆ.

  English summary
  Nayanthara has seen many ups and downs in her personal life. Many people in their lives have come and hid themselves in the darkest truths.
  Thursday, May 5, 2022, 9:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X