ಹಿರಿಯ ನಟಿ ಶ್ರುತಿ ಪುತ್ರಿ ಗೌರಿ ಚಿತ್ರರಂಗಕ್ಕೆ ಎಂಟ್ರಿ ಕೊಡೋದ್ಯಾವಾಗ? ಏನಿದೆ ಸುದ್ದಿ?
ಇದು ಸೋಶಿಯಲ್ ಮೀಡಿಯಾ ಯುಗ. ಫೇಸ್ ಬುಕ್, ಇನ್ ಸ್ಟಾಗ್ರಾಂ, ಟ್ವಿಟ್ಟರ್ ನಂತಹ ಸೋಶಿಯಲ್ ಮೀಡಿಯಾ ಖಾತೆಗಳಿಂದಾಗಿ ಅನೇಕರು ಜನಪ್ರಿಯತೆಯನ್ನು ಗಿಟ್ಟಿಸಿಕೊಂಡು ಬಿಡುತ್ತಾರೆ. ಇನ್ನು ಸೆಲೆಬ್ರಿಟಿಗಳ ವಿಚಾರ ಕೇಳಬೇಕೆ? ಅವರು ನಿಂತರೆ ಸುದ್ದಿ, ಕುಳಿತರೆ ಸುದ್ದಿ! ಸೋಶಿಯಲ್ ಮೀಡಿಯಾಗಳ ಹವಾದಿಂದಾಗಿ ಸೆಲೆಬ್ರಿಟಿಗಳು ಮಾತ್ರವಲ್ಲ, ಅವರ ಮಕ್ಕಳು ಕೂಡಾ ಇದೀಗ ಫೇಮಸ್ಸು ಆಗಿ ಬಿಟ್ಟಿದ್ದಾರೆ.
ಈಗ್ಯಾಕೆ ಈ ವಿಷಯ ಎಂದರೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಈಕೆ ಸೆಲೆಬ್ರಿಟಿ ಮಗಳು ಹೌದು! ನಾವಿಂದು ಮಾತನಾಡುತ್ತಿರುವುದು ಚಂದನವನದ ಎವರ್ ಗ್ರೀನ್ ತಾರೆ ಶ್ರುತಿ ಅವರ ಮಗಳು ಗೌರಿ ಆಲಿಯಾಸ್ ಮಿಲಿ ಬಗ್ಗೆ. ಗೌರಿ ಆಲಿಯಾಸ್ ಮಿಲಿ ಸೋಶಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಇರುವ ಈಕೆ 158000 ಫಾಲೋವರ್ಸ್ ಅನ್ನು ಹೊಂದಿದ್ದಾರೆ.

ಈಗಾಗಲೇ ನೂರರಷ್ಟು ಪೋಸ್ಟ್‌ಗಳನ್ನು ಪೋಸ್ಟ್ ಮಾಡಿರುವ ಗೌರಿ ಹೆಚ್ಚಿನ ಫೋಟೋಗಳಲ್ಲಿ ಸಿಂಪಲ್ ಆಗಿ ಮಿಂಚಿದ್ದೇ ಹೆಚ್ಚು. ಸಾಂಪ್ರದಾಯಿಕ ಉಡುಗೆಯಲ್ಲಿ ಮನಸೆಳೆಯುವ ಗೌರಿಯ ಸರಳತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಇನ್ನು ಜನ್ಮಾಷ್ಟಮಿಯ ಶುಭ ದಿನದಂದು ಗೌರಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದು ಅದು ಸಾಕಷ್ಟು ಸದ್ದು ಮಾಡುತ್ತಿದೆ. ಹೌದು, ಶ್ರೀಕೃಷ್ಣ ಹಾಗೂ ಕೃಷ್ಣನ ರಾಸಲೀಲೆಗಳ ಚಿತ್ರಗಳನ್ನೊಳಗೊಂಡಿರುವ ಸೀರೆಯನ್ನು ಉಟ್ಟಿದ್ದರು ಗೌರಿ. ನಾಲ್ಕು ಗಂಟೆಗಳ ಹಿಂದೆಯಷ್ಟೇ ಗೌರಿ ಈ ಫೋಟೋವನ್ನು ಹಂಚಿಕೊಂಡಿದ್ದು, ಈಗಾಗಲೇ ಏಳು ಸಾವಿರಕ್ಕೂ ಅಧಿಕ ಜನ ಲೈಕ್ ಕೊಟ್ಟಿದ್ದಾರೆ. ಅಂದ ಹಾಗೆ ಗೌರಿ ಹಲವಾರು ಸೆಲೆಬ್ರಿಟಿಗಳ ಮದುವೆಗಳಲ್ಲಿ ಇನ್ನಿತರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಾಗಲೂ ಬಹಳ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಜನಮನ ಸೆಳೆಯುತ್ತಿರುತ್ತಾರೆ.
ಜೊತೆಗೆ ಅದ್ಭುತವಾದ ಕಂಠಸಿರಿಯನ್ನು ಹೊಂದಿರುವ ಗೌರಿ ಗಾಯಕಿಯೂ ಹೌದು. ಅಪರೂಪಕ್ಕೊಮ್ಮೆ ತಾವು ಹಾಡಿರುವ ಹಾಡನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡುವ ಗೌರಿ ಆ ಮೂಲಕ ನೆಟ್ಟಿಗರನ್ನು ರಂಜಿಸುತ್ತಾರೆ. ಇನ್ನು ಗೌರಿಯನ್ನು ನಟಿಯಾಗಿ ತೆರೆಯ ಮೇಲೆ ನೋಡಬೇಕು ಎಂಬುದು ಬಹಳಷ್ಟು ಸಿನಿಪ್ರಿಯರ, ಹಾಗೆಯೇ ಶ್ರುತಿ ಅಭಿಮಾನಿಗಳ ಬಯಕೆ. ಆದರೆ ಅದು ಯಾವಾಗ ಈಡೇರುತ್ತದೆ?

ಅಂದಹಾಗೆ ಗೌರಿ, ಕನ್ನಡದ ಖ್ಯಾತ ನಿರ್ದೇಶಕರಲ್ಲೊಬ್ಬರಾದ ಎಸ್ ಮಹೇಂದರ್ ಅವರ ಏಕೈಕ ಸುಪುತ್ರಿ. ಎಸ್ ಮಹೇಂದ್ರ ಈಗಾಗಲೇ 30ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಹಾಗೆ ಗೌರಿಯ ತಾಯಿ ನಟಿ ಶ್ರುತಿ, ಮಾವಾ ಶರಣ್ ಅವರು ಸಹ ಹಲವಾರು ಸಿನಿಮಾಗಳನ್ನು ನಿರ್ದೇಶಿಸುತ್ತಾ ನಟಿಸುತ್ತಾ ಇಂದಿಗೂ ಕನ್ನಡ ಜನಪ್ರಿಯ ನಟರಲ್ಲೊಬ್ಬರಾಗಿದ್ದಾರೆ. ಅಷ್ಟೇ ಅಲ್ಲದೆ ಗೌರಿಯ ಅಜ್ಜ ಅಜ್ಜಿ ಕೂಡ ರಂಗಕಲಾವಿದರು. ಇಷ್ಟೆಲ್ಲ ಅದ್ಬುತವಾದ ಸಿನಿ ಹಾಗೂ ನಾಟಕದ ಬ್ಯಾಕ್ ಗ್ರೌಂಡ್ ಇರುವ ಗೌರಿ ಯಾವಾಗ ತೆರೆ ಮುಂದೆ ಕಾಣಿಸಿಕೊಳ್ಳಲಿದ್ದಾರೆ ಎಂಬುದೇ ಬಹುದೊಡ್ಡ ಪ್ರಶ್ನೆ ಹಾಗೂ ಕುತೂಹಲವಾಗಿ ಉಳಿದಿದೆ.
ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ಇವರನ್ನು ನೆಟ್ಟಿಗರು ಆಗಾಗ ಬಣ್ಣದ ಲೋಕಕ್ಕೆ ಯಾವಾಗ ಕಾಲಿಡುತ್ತೀರಿ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಉತ್ತರಕ್ಕೆ ಮಾತ್ರ ಇನ್ನೂ ಕಾಯಬೇಕಿದೆ.


Click it and Unblock the Notifications











