For Quick Alerts
  ALLOW NOTIFICATIONS  
  For Daily Alerts

  ಶಾರುಖ್ ಮೊದಲ ಕಾರ್ ಯಾವುದು, ಗಿಫ್ಟ್ ನೀಡಿದ್ದು ಯಾರು? ಕಿಂಗ್ ಖಾನ್ ಮೊದಲ ಕಾರಿನ ಇಂಟರೆಸ್ಟಿಂಗ್ ಮಾಹಿತಿ

  |

  ಭಾರತೀಯ ಸಿನಿಮಾರಂಗದ ಜನಪ್ರಿಯ ನಟ ಶಾರುಖ್ ಖಾನ್. ಇಂದು ಅತೀ ಹೆಚ್ಚು ಸಂಭಾವನೆ ಪಡೆಯುವ ನಟನಾಗಿ, ಇಡೀ ಜಗತ್ತೇ ಪ್ರೀತಿಸಿ, ಆರಾಧಿಸುವ ವ್ಯಕ್ತಿಯಾಗಿ ಬೆಳೆದು ನಿಂತಿರುವ ಶಾರುಖ್ ಖಾನ್ ಒಬ್ಬ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ ಬಂದ ವ್ಯಕ್ತಿ.

  ನಟನಾಗಬೇಕು ಎನ್ನುವ ಕನಸು ಕಂಡಿದ್ದ ಶಾರುಖ್ ಇಂದು ಸೂಪರ್ ಸ್ಟಾರ್ ಆಗಿದ್ದಾರೆ. ಮಿಲಿಯನ್ ಗಟ್ಟಲೇ ಆಸ್ತಿ ಸಂಪಾದಿಸಿರುವ ಶಾರುಖ್ ಇಂದು ವಿಶ್ವದ ಶ್ರೀಮಂತ ನಟರುಗಳ ಸಾಲಿನಲ್ಲಿ ನಿಂತಿದ್ದಾರೆ. ಇಂದು ಇಷ್ಟೆಲ್ಲ ಸಾಧನೆ ಮಾಡಿ, ಅಪಾರ ಸಂಖ್ಯೆಯ ಅಭಿಮಾನಿ ಬಳಗ ಸಂಪಾದಿಸಿರುವ ಶಾರುಖ್ ಈ ಸ್ಥಾನಕ್ಕೆ ಬೆಳೆದು ಬಂದಿದ್ದೆ ರೋಚಕವಾಗಿದೆ. ಅವರ ಯಶಸ್ಸು, ಸಾಧನೆ ಅಪಾರ ಅಭಿಮಾನಿಗಳಿಗೆ ಪ್ರೇರಣೆಯಾಗಿದೆ.

  ಭಾರತದಲ್ಲಿ ಯಾರೂ ಪಡೆಯದಷ್ಟು ಸಂಭಾವನೆ ಪಡೆದ ಶಾರುಖ್ ಖಾನ್ಭಾರತದಲ್ಲಿ ಯಾರೂ ಪಡೆಯದಷ್ಟು ಸಂಭಾವನೆ ಪಡೆದ ಶಾರುಖ್ ಖಾನ್

  ಈ ವಯಸ್ಸಿನಲ್ಲೂ ಶಾರುಖ್ ತನ್ನ ಯಶಸ್ಸಿನ ವೇಗ ಒಂದಿಷ್ಟು ತಗ್ಗದಂತೆ ನೋಡಿಕೊಂಡಿದ್ದಾರೆ. ಒಂದು ಕಾಲದಲ್ಲಿ ಶಾರುಖ್ ಅಂದರೆ ಸಖತ್ ಕ್ರೇಜ್. ಆದರೆ ಶಾರುಖ್ ಖಾನ್‌ಗೆ ಕಾರ್‌ಗಳ ಮೇಲೆ ಕ್ರೇಜ್. ಕಿಂಗ್ ಖಾನ್ ಬಳಿ ಅನೇಕ ದುಬಾರಿ ಕಾರುಗಳಿವೆ. ಅವರ ಕನಸಿನ ಮನೆ ಮನ್ನತ್‌ನಲ್ಲಿ ಕಾರು ಸಂಗ್ರಹ ನೋಡಿದ್ರೆ ನಿಜಕ್ಕೂ ಅಚ್ಚರಿಯಾಗುತ್ತೆ. ವಾಹನಗಳ ಮೇಲೆ ಶಾರುಖ್ ಗೆ ಅಪಾರ ಪ್ರೀತಿ. ಮುಂದೆ ಓದಿ..

  ಶಾರುಖ್ ಮೊದಲ ಕಾರು ಮಾರುತಿ ಓಮ್ನಿ

  ಶಾರುಖ್ ಮೊದಲ ಕಾರು ಮಾರುತಿ ಓಮ್ನಿ

  ಇಂದು ವಿಶ್ವದ ಬಹುತೇಕ ಐಶಾರಾಮಿ ಕಾರುಗಳನ್ನು ಹೊಂದಿರುವ ಶಾರುಖ್ ಅವರ ಮೊದಲ ಕಾರು ಯಾವುದು ಅಂತ ಗೊತ್ತಾದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ. ಅಲ್ಲದೆ ಮೊದಲ ಕಾರನ್ನು ಗಿಫ್ಟ್ ನೀಡಿದವರು ಕೂಡ ಅಷ್ಟೆ ವಿಶೇಷವಾದ ವ್ಯಕ್ತಿ. ಶಾರುಖ್ ಬಳಿ ಇದ್ದ ಮೊದಲ ಕಾರು ಮಾರುತಿ ಓಮ್ನಿ. ಆ ಕಾರನ್ನು ಶಾರುಖ್‌ಗೆ ಅವರ ತಾಯಿ ಲತೀಫ್ ಫಾತಿಮಾ ಖಾನ್ ಉಡುಗೊರೆಯಾಗಿ ನೀಡಿದ್ದರು.

  ತಾಯಿ ಕೊಟ್ಟ ಉಡುಗೊರೆ

  ತಾಯಿ ಕೊಟ್ಟ ಉಡುಗೊರೆ

  ತಾಯಿ ಉಡುಗೊರೆ ಕೊಟ್ಟ ಕಾರ್ ಆಗಿದ್ದರಿಂದ ಶಾರುಖ್ ಅವರಿಗೆ ತುಂಬಾ ವಿಶೇಷವಾಗಿತ್ತು. ಅನೇಕ ವರ್ಷಗಳ ಕಾಲ ಶಾರುಖ್ ಮಾರುತಿ ಓಮ್ನಿ ಕಾರನ್ನೇ ಬಳಸುತ್ತಿದ್ದರಂತೆ. ಜೀವನದ ಮೊದಲುಗಳು ಯಾವಾಗಲು ವಿಶೇಷವಾಗಿರುತ್ತವೆ. ಶಾರುಖ್ ಬಳಿ ಈ ಕಾರು ಇಂದಿಗೂ ಇದಿಯಾ ಇಲ್ವಾ ಎನ್ನುವ ಬಗ್ಗೆ ಇನ್ನು ಮಾಹಿತಿ ಇಲ್ಲ. ಆದರೆ ಆ ಕಾರನ್ನು ಶಾರುಖ್ ತುಂಬಾ ಇಷ್ಟಪಡುತ್ತಿದ್ದರಂತೆ.

  ಶಾರುಖ್ ಖಾನ್ ತಂದೆ-ತಾಯಿ ಸಮಾಧಿ ಇರುವುದೆಲ್ಲಿ; ಕಿಂಗ್ ಖಾನ್ ದಿಢೀರ್ ಭೇಟಿ ನೀಡಿದ್ದೇಕೆ?ಶಾರುಖ್ ಖಾನ್ ತಂದೆ-ತಾಯಿ ಸಮಾಧಿ ಇರುವುದೆಲ್ಲಿ; ಕಿಂಗ್ ಖಾನ್ ದಿಢೀರ್ ಭೇಟಿ ನೀಡಿದ್ದೇಕೆ?

  ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿ ಕಳೆದುಕೊಂಡ ಶಾರುಖ್

  ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿ ಕಳೆದುಕೊಂಡ ಶಾರುಖ್

  ಶಾರುಖ್ ಚಿಕ್ಕ ವಯಸ್ಸಿನಲ್ಲೇ ತಂದೆ ಮತ್ತು ತಾಯಿಯನ್ನು ಕಳೆದುಕೊಳ್ಳುತ್ತಾರೆ. ಅನೇಕ ಸಂದರ್ಶನದಲ್ಲಿ ಶಾರುಖ್ ತಂದೆ-ತಾಯಿಯ ಪ್ರೀತಿ ಬಗ್ಗೆ ಹೇಳಿಕೊಂಡಿದ್ದಾರೆ. 15ನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಳ್ತಾರೆ. ತಂದೆಯ ಅಗಲಿಕೆಯ ನೋವು ಮಾಸುವ ಮೊದಲೆ ತಾಯಿ ಕೂಡ ಬಾರದ ಲೋಕಕ್ಕೆ ಹೊರಟು ಹೋಗುತ್ತಾರೆ.

  ಶಾರುಖ್ ಮೊದಲ ಸಂಬಳ 50 ರೂ.

  ಶಾರುಖ್ ಮೊದಲ ಸಂಬಳ 50 ರೂ.

  ಕಷ್ಟಪಟ್ಟು ಬೆಳೆದುಬಂದ ಶಾರುಖ್ ಮೊದಲು ದೆಹಲಿಯ ಡಾಬಾವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮೊದಲ ಸಂಬಳ 50 ರೂ. ಅದೇ ಹಣದಲ್ಲಿ ಟ್ರೈನ್ ಟಿಕೆಟ್ ಪಡೆದು ತಾಜ್ ಮಹಲ್ ನೋಡಲು ಆಗ್ರಾಗೆ ಹೋಗಿದ್ದರಂತೆ. ದೆಹಲಿಯಲ್ಲಿ ಬಾಲ್ಯ ಕಳೆದ ಶಾರುಖ್ ತಂದೆ-ತಾಯಿಯ ನಿಧನದ ಬಳಿಕ ಮುಂಬೈಗೆ ಶಿಫ್ಟ್ ಆಗುತ್ತಾರೆ.

  ಸೂಪರ್ ಸ್ಟಾರ್ ಶಾರುಖ್ ಖಾನ್

  ಸೂಪರ್ ಸ್ಟಾರ್ ಶಾರುಖ್ ಖಾನ್

  ಸಿನಿಮಾ ಹಿನ್ನಲೆ ಇಲ್ಲದೆ, ಚಿತ್ರರಂಗದ ಗಂಧಗಾಳಿಯೂ ಗೊತ್ತಿರದ ಶಾರುಖ್ ಬಾಲಿವುಡ್ ಎಂಬ ಬಣ್ಣದ ಲೋಕದ ಮಾಯೆಯಲ್ಲಿ ತನ್ನದೆ ಆದ ಛಾಪು ಮೂಡಿಸಿದ್ದಾರೆ. ಕಿರುತೆರೆಯಿಂದ ಬಣ್ಣದ ಲೋಕದ ಪಯಣ ಪ್ರಾರಂಭಿಸಿದ ಕಿಂಗ್ ಖಾನ್ ಬಳಿಕ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದುಕೊಳ್ಳುತ್ತಾರೆ. ದಿವಾನಾ ಸಿನಿಮಾ ಮೂಲಕ ಬೆಳ್ಳಿ ಪರದೆ ಮೇಲೆ ಮೊದಲ ಬಾರಿಗೆ ಕಾಣಿಸಿಕೊಂಡ ಶಾರುಖ್ ನಂತರ ನಡೆದಿದೆಲ್ಲ ಇತಿಹಾಸ. 1995ರಲ್ಲಿ ಬಂದ ದಿಲ್ವಾಲೆ ದುಲ್ಹನಿಯಾ ಲೇಜಾಯೆಂಗೆ ಸಿನಿಮಾ ಬಳಿಕ ಶಾರುಖ್ ಹಿಂದೆ ತಿರುಗಿ ನೋಡಿದ್ದೆ ಇಲ್ಲ.

  'ಶಾರುಖ್ ಖಾನ್ ನನ್ನ ಕಾಲು ನೆಕ್ಕುತ್ತಿದ್ದಾನೆ' ಎಂದು ಹೇಳಿ ಬೇಷರತ್ ಕ್ಷಮೆ ಕೇಳಿದ್ದ ಆಮೀರ್ ಖಾನ್'ಶಾರುಖ್ ಖಾನ್ ನನ್ನ ಕಾಲು ನೆಕ್ಕುತ್ತಿದ್ದಾನೆ' ಎಂದು ಹೇಳಿ ಬೇಷರತ್ ಕ್ಷಮೆ ಕೇಳಿದ್ದ ಆಮೀರ್ ಖಾನ್

  ಅಪಾರ್ಥ ಮಾಡಿಕೊಂಡ ಬಿಸಿ ಪಾಟೀಲ್ ಗೆ ಜಗ್ಗೇಶ್ ಅರ್ಥ ಮಾಡಿಸಿದ್ದು ಹೇಗೆ? | Filmibeat Kannada
  ಮೂರು ವರ್ಷದ ಬಳಿಕ ಮತ್ತೆ ನಟನೆಯತ್ತ ಶಾರುಖ್

  ಮೂರು ವರ್ಷದ ಬಳಿಕ ಮತ್ತೆ ನಟನೆಯತ್ತ ಶಾರುಖ್

  ಸುಮಾರು 3 ದಶಕಗಳ ಸಿನಿಮಾ ಜೀವನದಲ್ಲಿ ಶಾರುಖ್ ಸಿನಿಮಾಗಳನ್ನು ಒಪ್ಪಿಕೊಳ್ಳದೆ ಖಾಲಿಯಾಗಿ ಕುಳಿತ್ತಿದ್ದು ಅಂದರೆ ಕಳೆದ ಮೂರು ವರ್ಷಗಳು. ಸತತ ಸೋಲಿನಿಂದ ಕಂಗೆಟ್ಟಿದ್ದ ಶಾರುಖ್ ಬಣ್ಣ ಹಚ್ಚುವುದನ್ನೇ ನಿಲ್ಲಿಸಿದ್ದರು. ಇದೀಗ ಮೂರು ವರ್ಷದ ಬಳಿಕ ಮತ್ತೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಶಾರುಖ್ ಬಳಿ ಸದ್ಯ ಮೂರ್ನಾಲ್ಕು ಸಿನಿಮಾಗಳಿವೆ. ಯಾವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಾರೆ ಎಂದು ಕಾದು ನೋಡಬೇಕು.

  English summary
  Bollywood Actor Shah Rukh Khan got his first car as a Gift from his mother.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X