ಬಾಲಿವುಡ್ ಸ್ಟಾರ್ಸ್ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಇಬ್ಬರಲ್ಲಿ ಯಾರು ಶ್ರೀಮಂತರು?
ಬಾಲಿವುಡ್‌ನಲ್ಲಿ ಹಲವು ನಟರಿದ್ದರೂ ಯಾವಾಗಲು ಕಣ್ಣು ಹೋಗುವುದು ಮಾತ್ರ ಖಾನ್‌ಗಳ ಮೇಲೆ. ಸಲ್ಮಾನ್ ಖಾನ್, ಅಮೀರ್ ಖಾನ್, ಶಾರುಖ್ ಖಾನ್‌ರಿಗೆ ಫ್ಯಾನ್ಸ್ ಕೂಡ ಜಾಸ್ತಿ. ಹಾಗೇಯೆ ಈ ನಟರಲ್ಲಿ ಯಾರು ಹೆಚ್ಚು ಶ್ರೀಮಂತರು ಎಂಬ ಬಗ್ಗೆ ಹೆಚ್ಚು ಆಗ್ಗಾಗೆ ಚರ್ಚೆಗಳು ನಡೆಯುತ್ತವೆ. ಸದ್ಯಕ್ಕೆ ಈ ವಿಷಯ ಮತ್ತೆ ಮುನ್ನಲೆಗೆ ಬಂದಿದೆ. ಅದಕ್ಕೆ ಕಾರಣ ಕಾಫಿ ವಿತ್ ಕರಣ್ ಕಾರ್ಯಕ್ರಮ.
ಕಾಫಿ ವಿತ್ ಕರಣ್ 8 ರ ಇತ್ತೀಚಿನ ಸಂಚಿಕೆಯಲ್ಲಿ ನಟ ಅಜಯ್ ದೇವಗನ್ ಬಾಲಿವುಡ್ ನಟರಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರಲ್ಲಿ ಯಾರು ಶ್ರೀಮಂತರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ್ದು, ಅನೇಕರು ನಟರ ನೆಟ್ ವರ್ತ್ ಚೆಕ್ ಮಾಡುತ್ತಿದ್ದಾರೆ.

ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್‌ರಲ್ಲಿ ಯಾರು ಶ್ರೀಮಂತರು?
ಕಾಫಿ ವಿತ್ ಕರಣ್ 8 ಸಂಚಿಕೆಯಲ್ಲಿ ಮಾತನಾಡುತ್ತಾ, ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಕಡೆಗೆ ವಿಷಯ ತಿರುಗಿಸಿದ್ದಾರೆ. ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು ಎಂಬ ಪ್ರಶ್ನೆ ಬಂದಿದೆ. ಬ್ಯಾಂಕ್ ಬ್ಯಾಲೆನ್ಸ್ ವಿಷಯದಲ್ಲಿ ಶಾರುಖ್ ಖಾನ್‌ಗೆ ಅಜಯ್ ದೇವಗನ್ ಫುಲ್ ಮಾರ್ಕ್ಸ್ ನೀಡಿದ್ದಾರೆ.
ನಂಬಿಕೆ ಬಗೆಗಿನ ಪ್ರಶ್ನೆಗೆ ಇತ್ತರಿಸಿರುವ ಅಜಯ್ ದೇವಗನ್, ಬ್ಯಾಂಕ್ ಬ್ಯಾಲೆನ್ಸ್ ವಿಷಯದಲ್ಲಿ ಶಾರುಖ್ ಖಾನ್ ಮುಂದಿದ್ದಾರೆ. ಹಾಗಾಗಿ ಅವರನ್ನೇ ಹೆಚ್ಚು ನಂಬಿದ್ದೇನೆ ಎಂದು ಚಟಾಕಿ ಹಾರಿಸಿದ್ದಾರೆ. ಆಗ ಕಾಫಿ ವಿತ್ ಕರಣ್ ಶೋ ಹೋಸ್ಟ್, ಕರಣ್ ಜೋಹರ್ ಶಾರುಖ್ ಶಾರುಖ್ ಖಾನ್ ಅವರ ಇತ್ತೀಚಿನ ಬಿಡುಗಡೆಯಾದ "ಜವಾನ್" ಮತ್ತು "ಪಠಾಣ್" ಗಲ್ಲಾಪೆಟ್ಟಿಗೆಯನ್ನು ಉಡೀಸ್ ಮಾಡಿರುವ ವಿಷಯವನ್ನು ನೆನಪಿಸಿಕೊಂಡಿದ್ದಾರೆ. ಈ ವರ್ಷದ ಶಾರುಖ್ ಖಾನ್ ಅವರ ಮೂರನೇ ಸಿನಿಮಾ 'ಡಂಕಿ' ಬಿಡುಗಡೆಯಾಗಿದ್ದು, ಅವರ ನಿವ್ವಳ ಮೌಲ್ಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ .

ಸಲ್ಮಾನ್ ಖಾನ್ ನೆಟ್ ವರ್ತ್ 2023:
ಭಾಯಿಜಾನ್ ಎಂದು ಕರೆಸಿಕೊಳ್ಳುವ ನಟ ಸಲ್ಮಾನ್ ಖಾನ್, ಬೆಳ್ಳಿತೆರೆಯಲ್ಲಿ ಕಮಾಲ್ ಮಾಡುವ ಜೊತೆಗೆ ಹಲವು ಬ್ಯುಸಿನೆಸ್ ಮತ್ತು ಕಿರುತೆರೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಸಲ್ಮಾನ್ ಖಾನ್ ಅವರ ನಿವ್ವಳ ಆದಾಯ 2000 ಕೋಟಿ ರೂಪಾಯಿ. ಬ್ಲಾಕ್‌ಬಸ್ಟರ್ ಚಲನಚಿತ್ರಗಳು, ಬ್ರಾಂಡ್ ಎಂಡೋರ್ಸ್‌ಮೆಂಟ್ ಮತ್ತು ಅವರ ಬಟ್ಟೆ ಬ್ರಾಂಡ್ 'ಬೀಯಿಂಗ್ ಹ್ಯೂಮನ್' ಸೇರಿದಂತೆ ಹಲವು ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ.
ಶಾರುಖ್ ಖಾನ್ ನಿವ್ವಳ ಆದಾಯ 2023:
"ಬಾಲಿವುಡ್‌ನ ಬಾದ್‌ಶಾ" ಎಂದು ಕರೆಸಿಕೊಳ್ಳುವ ಶಾರುಖ್ ಖಾನ್, ದಶಕಗಳಿಂದ ಬಾಲಿವುಡ್‌ನಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದಾರೆ. ಅವರು ರೆಡ್ ಚಿಲ್ಲಿಸ್ ಮೂಲಕ ಸಿನಿಮಾ ನಿರ್ಮಾಣ, ಹಲವು ಬ್ಯುಜಿನೆಸ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅವರ ನಿವ್ವಳ ಆದಾಯ ಬರೋಬ್ಬರಿ 6,300 ಕೋಟಿ ರೂಪಾಯಿಗೂ ಮೀರಿದೆ.
ಶಾರುಖ್ ಖಾನ್ ಕೇವಲ ನಟರಾಗಿರದೆ ಜಾಗತಿಕ ಬ್ರ್ಯಾಂಡ್ ಆಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ನಲ್ಲಿ ಹೂಡಿಕೆ ಮಾಡಿದ್ದಾತೆ. ರೆಡ್ ಚಿಲ್ಲೀಸ್ ಮೂಲಕ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅವರ ಪತ್ನಿ ಗೌರಿ ಖಾನ್, ಮಗಳು ಸುಹಾನಾ ಖಾನ್, ಮಗ ಆರ್ಯನ್ ಖಾನ್ ಕೂಡ ತಮ್ಮದೆ ವ್ಯವಹಾರಗಳನ್ನು ಹೊಂದಿದ್ದಾರೆ.


Click it and Unblock the Notifications










