ಸಲಿಂಗಿಯ ಪಾತ್ರ ಮಾಡಿದ್ದರು ಶಾರುಖ್ ಖಾನ್,ಆದರೆ ಬಿಡುಗಡೆಯಾಗಲೇ ಇಲ್ಲ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಈ ಚಿತ್ರ..!
ಕೇವಲ ಅದೃಷ್ಟವನ್ನು ಮಾತ್ರ ನಂಬಿಕೊಂಡು ಕುಂತರೆ ಇಲ್ಲಿ ಯಾರು ಸಾಧನೆಯ ಶಿಖರಕ್ಕೇರಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಕನಸುಗಳನ್ನು ಸಾಕಾರಗೊಳಿಸಲು ಸತತ ಪರಿಶ್ರಮವನ್ನು ಹಾಕಬೇಕು. ಸವಾಲುಗಳನ್ನು ಎದುರಿಸಬೇಕು. ನೋವು, ಕಷ್ಟ, ಅವಮಾನಗಳಿಗೆ ಕುಗ್ಗದೇ ಮುನ್ನುಗ್ಗಬೇಕು. ಆಗ ಮಾತ್ರ ಅಂದುಕೊಂಡ ಗುರಿಯನ್ನು ತಲುಪಲು ಸಾಧ್ಯ. ಇದಕ್ಕೆ ಶಾರುಖ್ ಖಾನ್ ಅತ್ಯುತ್ತಮ ಉದಾಹರಣೆ.
ಹೌದು, ಯಾವುದೇ ಗಾಡ್ ಫಾದರ್‌ಗಳಿಲ್ಲದೇ ಕೇವಲ ತನ್ನಲ್ಲಿನ ಕಲೆಯನ್ನಷ್ಟೇ ನಂಬಿಕೊಂಡು ಚಿತ್ರರಂಗಕ್ಕೆ ಬಂದವರು ಶಾರುಖ್ ಖಾನ್. ಇವತ್ತು ಶಾರುಖ್ ಖಾನ್ ಬಳಿ ಎಲ್ಲವೂ ಇದೆ. ವಿಶ್ವದೆಲ್ಲೆಡೆ ಅಸಂಖ್ಯಾತ ಅಗಣಿತ ಅಭಿಮಾನಿ ಬಳಗ ಇದೆ. ಇನ್ನೂಇವರ ನಿವಾಸದಾಚೆ ಇವರ ಒಂದು ದರ್ಶನಕ್ಕೆ ಅಭಿಮಾನದ ಸಾಗರವೇ ಹರಿದು ಬರುತ್ತೆ. ಆದರೆ, ನಿಮಗೆ ಗೊತ್ತಾ.. ಈ ಹಂತಕ್ಕೆ ಬರಲು ಶಾರುಖ್ ಖಾನ್, ಬೆವರಲ್ಲ ರಕ್ತವನ್ನೇ ಬಸಿದಿದ್ದಾರೆ.

ಹೌದು, ಅಸಲಿಗೆ ಬೆಳ್ಳಿತೆರೆಗೆ ಬರುವ ಮುನ್ನ ಶಾರುಖ್ ಖಾನ್ ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದರು. ಅದೃಷ್ಟ ಪರೀಕ್ಷೆಯನ್ನೂ ಮಾಡಿಕೊಳ್ಳುತ್ತಿದ್ದರು. ಆ ಪೈಕಿ ಒಂದು ಫೌಜಿ ಆದರೆ ಮತ್ತೊಂದು ಸರ್ಕಸ್. ಇವೆರಡು ಧಾರಾವಾಹಿಗಳನ್ನು ಹೊರತು ಪಡಿಸಿದರೆ ಶಾರುಖ್ ಖಾನ್ ಉಮೀದ್ ಮತ್ತು ವಾಗ್ಲೆ ಕೀ ದುನಿಯಾ ಧಾರಾವಾಹಿಯಲ್ಲಿ ಚಿಕ್ಕ ಪಾತ್ರಗಳನ್ನು ನಿರ್ವಹಿಸಿದ್ದರು.
ಆದರೆ ಈ ನಾಲ್ಕು ಧಾರಾವಾಹಿಗಳಿಗಿಂತ ಮುಂಚೆ ಶಾರುಖ್ ಖಾನ್ ಚಿತ್ರವೊಂದಕ್ಕೆ ಬಣ್ಣ ಹಚ್ಚಿದ್ದರು. ಆ ಚಿತ್ರದ ಹೆಸರು ಇನ್ ವಿಚ್ ಅನ್ನಿ ಗಿವ್ಸ್ ಇಟ್ ದೋಸ್ ಓನ್ಸ್ ಅನ್ನುವುದು ಬಹುತೇಕರಿಗೆ ಗೊತ್ತಿರದ ವಿಚಾರ. ಹೌದು, 1989ರಲ್ಲಿ ಶಾರುಖ್ ಖಾನ್ ಇನ್ ವಿಚ್ ಅನ್ನಿ ಗಿವ್ಸ್ ಇಟ್ ದೋಸ್ ಓನ್ಸ್ ಎಂಬ ಇಂಗ್ಲೀಷ್ ಚಿತ್ರಕ್ಕೆ ಬಣ್ಣ ಹಚ್ಚಿದ್ದರು. ಅದು ತುಂಬಾ ಚಿಕ್ಕದಾದ ಮತ್ತು ಮಹತ್ವವಾದ ಪಾತ್ರ. ವಿಶೇಷ ಅಂದರೆ ಈ ಚಿತ್ರದಲ್ಲಿ ಶಾರುಖ್ ಖಾನ್ ಸಲಿಂಗಿಯ ಪಾತ್ರವನ್ನು ನಿರ್ವಹಿಸಿದ್ದರು. ಆದರೆ ಈ ಚಿತ್ರ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿಲ್ಲ. ಯಾಕೆಂದರೆ ದೂರದರ್ಶನ್ ಕ್ಕೋಸ್ಕರ ಎಂದೇ ಮಾಡಲಾದ ಚಿತ್ರ ಇದಾಗಿತ್ತು. 1989ರಲ್ಲಿ ಈ ಚಿತ್ರ ದೂರದರ್ಶನದಲ್ಲಿ ಪ್ರಸಾರವೂ ಆಗಿತ್ತು. ಕಿರುತೆರೆಯಲ್ಲಿ ಶಾರುಖ್ ಖಾನ್ ಯುಗ ಆರಂಭವಾಗಿದ್ದುಈ ಚಿತ್ರ ಪ್ರಸಾರವಾದ ನಂತರವಷ್ಟೇ.

ಅಂದ್ಹಾಗೇ ಈ ಚಿತ್ರದಲ್ಲಿ ಕೇವಲ ಶಾರುಖ್ ಖಾನ್ ಮಾತ್ರ ಅಲ್ಲ ಇವತ್ತು ಕೈತುಂಬಾ ಕೆಲಸವನ್ನೊಂದಿರುವ ಮನೋಜ್ ಬಾಜ್‌ಪೈ ಕೂಡ ಇದ್ದರು. ಅವತ್ತು ಅವಕಾಶಕ್ಕೆ ಅಲೆಯುತ್ತಿದ್ದ ಇವರು ಇಬ್ಬರು ಇವತ್ತು ಬಾಲಿವುಡ್‌ನ ಟಾಪ್ ಸ್ಟಾರ್‌ಗಳಾಗಿದ್ದಾರೆ. ಪ್ರಯತ್ನಕ್ಕೆ ತಕ್ಕ ಫಲ ಸಿಗುತ್ತೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ..?
ಉಳಿದಂತೆ ಅರುಂಧತಿ ರಾಯ್ ಬರೆದ ಕಥೆಯನ್ನು ಪ್ರದೀಪ್ ಕಿಶನ್ ನಿರ್ದೇಶಿಸಿದ್ದರು. ಅರುಂಧತಿ ರಾಯ್ ಕೂಡ ಚಿತ್ರದ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇವರಿಗೆ ಅರ್ಜುನ್ ರೈನಾ ಮತ್ತು ರೋಷನ್ ಸೇಠ್ ಸಾಥ್ ನೀಡಿದ್ದರು. ಇನ್ನೂ ವಿಶೇಷ ಅಂದರೆ ಈ ಚಿತ್ರ ಎರಡು ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿತ್ತು.
ಸದ್ಯಕ್ಕೆ ಈ ಚಿತ್ರದಲ್ಲಿ ಶಾರುಖ್ ಖಾನ್ ಸಲಿಂಗಿಯ ಪಾತ್ರದಲ್ಲಿ ಅಭಿನಯಿಸಿದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಾರುಖ್ ಖಾನ್ ಅಭಿಮಾನಿಗಳ ಹೃದಯವನ್ನೂ ಗೆಲ್ಲುತ್ತಿದೆ. ಶಾರುಖ್ ಖಾನ್ ಅವರ ಈ ಸುಧೀರ್ಘ ಪ್ರಯಾಣವನ್ನೂ ಈ ಚಿಕ್ಕ ತುಣುಕು ಮತ್ತೊಮ್ಮೆ ಎಲ್ಲರಿಗೆ ನೆನಪಿಸಿದೆ.
ಉಳಿದಂತೆ 2023 ಶಾರುಖ್ ಖಾನ್ ಗೆ ಅದೃಷ್ಟದ ವರ್ಷವಾಗಿತ್ತು. ತೆರೆಗೆ ಬಂದ ಪಠಾಣ್.. ಡಂಕಿ ಮತ್ತು ಜವಾನ್ ಚಿತ್ರಗಳಿಂದ ಒಟ್ಟು 2500 ಕೋಟಿ ಹಣ ಗಲ್ಲಾಪೆಟ್ಟಿಗೆಯಲ್ಲಿ ಲೂಟಿಯಾಗಿತ್ತು. ಇನ್ನೂ ಜನವರಿಯಿಂದ ಶಾರುಖ್ ತಮ್ಮ ಪುತ್ರಿ ಸುಹಾನಾ ಜೊತೆ ಕಿಂಗ್ ಚಿತ್ರವನ್ನು ಶುರು ಮಾಡಲಿದ್ದು ಈ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ವಿಲನ್ ಪಾತ್ರವನ್ನು ನಿರ್ವಹಿಸಲಿದ್ಧಾರೆ.


Click it and Unblock the Notifications











