ಅಂದು ಟಾರ್ ರೋಡ್‌ನಲ್ಲಿದ್ದ ಈ ವ್ಯಕ್ತಿ ಇಂದು ಸೂಪರ್ ಸ್ಟಾರ್, ಭಾರತದ ನಂಬರ್ 1 ಶ್ರೀಮಂತ ಹೀರೋನ ಆಸ್ತಿ ಎಷ್ಟು..?
ಬದುಕು ಹೀಗೆ ಎಂದು ಹೇಳಲು ಸಾಧ್ಯ ಇಲ್ಲ. ಯಾವ ಕ್ಷಣದಲ್ಲಾದರೂ ಬದುಕು ಬದಲಾಗಬಹುದು. ಆರಕ್ಕೇರಿದವರು ಮೂರಕ್ಕಿಳಿಯಬಹುದು. ಮೂರಕ್ಕಿಳಿದವರು ಆರಕ್ಕೇರಬಹುದು.ನಾನೇನೂ ಅಲ್ಲ ಅಂದುಕೊಂಡೇ ಕುಂತರೆ ಇದ್ದಲ್ಲೇ ಇರಬಹುದು. ಅಥವಾ, ನನ್ನಲ್ಲೇನೋ ಇದೆ ಅಂದುಕೊಳ್ಳುವುದರ ಜೊತೆಗೆ ತನ್ನ ಶಕ್ತಿ ಸಾಮರ್ಥ್ಯಗಳನ್ನು ಗುರುತಿಸಿಕೊಂಡವನು, ಮತ್ತದನ್ನು ಹೊರತೆಗೆಯುವಲ್ಲಿ ಶ್ರಮಿಸಿದವನು ಎಂಥ ಎತ್ತರಕ್ಕೆ ಬೇಕಾದರೂ ಏರಿ ನಿಲ್ಲಬಹುದು. ಇದಕ್ಕೆ ಶಾರುಖ್ ಖಾನ್ ಅತ್ಯುತ್ತಮ ಉದಾಹರಣೆ.
ಹೌದು, ಹೌದು, ಯಾವುದೇ ಗಾಡ್ ಫಾದರ್‌ಗಳಿಲ್ಲದೇ ಕೇವಲ ತನ್ನಲ್ಲಿನ ಕಲೆಯನ್ನಷ್ಟೇ ನಂಬಿಕೊಂಡು ಚಿತ್ರರಂಗಕ್ಕೆ ಬಂದವರು ಶಾರುಖ್ ಖಾನ್. ಇವತ್ತು ಶಾರುಖ್ ಖಾನ್ ಬಳಿ ಎಲ್ಲವೂ ಇದೆ. ವಿಶ್ವದೆಲ್ಲೆಡೆ ಅಸಂಖ್ಯಾತ ಅಗಣಿತ ಅಭಿಮಾನಿ ಬಳಗ ಇದೆ. ಇನ್ನೂಇವರ ನಿವಾಸದಾಚೆ ಇವರ ಒಂದು ದರ್ಶನಕ್ಕೆ ಅಭಿಮಾನದ ಸಾಗರವೇ ಹರಿದು ಬರುತ್ತೆ. ಆದರೆ, ನಿಮಗೆ ಗೊತ್ತಾ.. ಈ ಹಂತಕ್ಕೆ ಬರಲು ಶಾರುಖ್ ಖಾನ್, ಬೆವರಲ್ಲ ರಕ್ತವನ್ನೇ ಬಸಿದಿದ್ದಾರೆ.

ಇಂಥಾ ಶಾರುಖ್ ಖಾನ್ ಇವತ್ತು ಭಾರತದ ನಂಬರ್ 1 ಶ್ರೀಮಂತ ಹೀರೋ ಅಂದರೆ ನೀವು ನಂಬ್ತೀರಾ. ನಂಬ್ಲೇಬೇಕು. ಯಾಕೆಂದರೆ ಇದು ನಿಜಾ. ಹೌದು, ಕಳೆದ ಮೂರುವರೆ ದಶಕಗಳಿಂದ ಮನರಂಜನೆಯ ರಸದೌತಣ ಬಡಿಸುತ್ತಿರುವ ಶಾರುಖ್ ಖಾನ್ ಬಳಿ ₹7300 ಕೋಟಿ ಆಸ್ತಿ ಇದೆ. 1000 ಕೋಟಿ ರೂಪಾಯಿಗಿಂತ ಹೆಚ್ಚಿನ ನಿವ್ವಳ ಸಂಪತ್ತು ಹೊಂದಿರುವ ಭಾರತೀಯರ ಪಟ್ಟಿಯನ್ನು ಪ್ರತಿ ವರ್ಷ ಬಿಡುಗಡೆ ಮಾಡುವ ಹುರುನ್ ಇಂಡಿಯಾದಲ್ಲಿ ಶಾರುಖ್ ಆಸ್ತಿಯನ್ನು ₹7300 ಕೋಟಿ ಎಂದು ಉಲ್ಲೇಖಿಸಿದೆ.
ಅಂದ್ಹಾಗೇ ಶಾರುಖ್ ಖಾನ್ ಕೇವಲ ಆಕ್ಟರ್ ಮಾತ್ರ ಅಲ್ಲ ಪ್ರೊಡ್ಯೂಸರ್ ಕೂಡ ಹೌದು. ವ್ಯಾಪಾರಸ್ಥ ಕೂಡ ಹೌದು. ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್ ಹೆಸರಿನ ನಿರ್ಮಾಣ ಸಂಸ್ಥೆಯನ್ನು ಹೊಂದಿರುವ ಶಾರುಖ್ ತಮ್ಮ ಈ ಸಂಸ್ಥೆಯ ಮೂಲಕ ಚಿತ್ರಗಳನ್ನು ನಿರ್ಮಾಣ ಮಾಡುತ್ತಾರೆ. ಇದಲ್ಲದೇ ಬೇರೆ ಚಿತ್ರಗಳ ಕೆಲಸಗಳನ್ನು ಮಾಡಲು ಕೂಡ ತಮ್ಮ ಸ್ಟುಡಿಯೋದಲ್ಲಿ ಅವಕಾಶ ಮಾಡಿಕೊಡುತ್ತಾರೆ. ಅದರಲ್ಲಿಯೂ ವಿಎಫ್‌ಎಕ್ಸ್ ಕೆಲಸದಲ್ಲಿ ಇವರ ಸಂಸ್ಥೆ ಸದಾ ಮುಂದು. ಇದಕ್ಕೆ ಕೈಗನ್ನಡಿ ಎನ್ನುವಂತೆ ಹಲವಾರು ವಿಎಫ್‌ಎಕ್ಸ್ ವಿಭಾಗದಲ್ಲಿ ಹಲವಾರು ಪ್ರಶಸ್ತಿಗಳನ್ನು ರೆಡ್ ಚಿಲ್ಲೀಸ್ ಸಂಸ್ಥೆ ಮುಡಿಗೇರಿಸಿಕೊಂಡಿದೆ.

ಇನ್ನೂ.. ಕೇವಲ ಸಿನಿಮಾ ಮಾತ್ರವಲ್ಲದೇ ಶಾರುಖ್ ಖಾನ್ ಕ್ರಿಕೆಟ್‌ನಲ್ಲಿ ಹಣ ಹೂಡಿದ್ದಾರೆ. ತಮ್ಮ ಆಪ್ತ ಸ್ನೇಹಿತೆ ಜ್ಯೂಹಿ ಚಾವ್ಲಾ ಅವರ ಜೊತೆ ಸೇರಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಖರೀದಿ ಮಾಡಿದ್ದಾರೆ. ಈ ಫ್ರಾಂಚೈಸಿಯ ಮೌಲ್ಯವೇ ನೂರಾರು ಕೋಟಿ ಇದೆ. ಇದಲ್ಲದೇ ಶಾರುಖ್ ಖಾನ್ ಚಿತ್ರವೊಂದಕ್ಕೆ 150 ಕೋಟಿಯಿಂದ 200 ಕೋಟಿಯವರೆಗೆ ಸಂಭಾವನೆ ಪಡೆಯುತ್ತಾರೆ. ಇನ್ನೂ ಹತ್ತು ಹಲವು ಬ್ರ್ಯಾಂಡ್‌ಗಳನ್ನು ಪ್ರಚಾರ ಮಾಡಲು ಹೀಗೆ ಬಂದು ಹಾಗೇ ಹೋಗಲು ಇವರು ಪಡೆಯುವ ಸಂಭಾವನೆ 5 ಕೋಟಿ ಎನ್ನುವ ಮಾತು ಇದೆ.
ಹೀಗೆ ಹತ್ತು ಹಲವು ಆದಾಯದ ಮೂಲ ಹೊಂದಿರುವ ಶಾರುಖ್ ಖಾನ್ ಮುಂಬೈನ ಬಾಂದ್ರಾದ ಅತಿ ದುಬಾರಿ ಪ್ರದೇಶದಲ್ಲಿ ಮನೆಯನ್ನು ಹೊಂದಿದ್ದಾರೆ. ಮನ್ನತ್ ಎಂದು ತಮ್ಮ ಕನಸಿನ ಅರಮನೆಗೆ ಹೆಸರಿಟ್ಟಿದ್ದಾರೆ. ಜಿಮ್, ಈಜುಕೊಳ, ಥಿಯೇಟರ್, ಬೃಹತ್ತಾದ ಕೊಠಡಿಗಳು ಹೊಂದಿರುವ ಈ ಮನ್ನತ್ 200 ಕೋಟಿ ರೂಪಾಯಿ ಬೆಲೆ ಬಾಳುತ್ತದೆಯಂತೆ.
ಇದಿಷ್ಟೇ ಅಲ್ಲದೇ ತಮ್ಮ ಸ್ವಂತ ಊರು ದೆಹಲಿಯಲ್ಲಿ ಕೂಡ ಶಾರುಖ್ ಖಾನ್ ಮನೆ ಹೊಂದಿದ್ದಾರೆ. ದುಬೈನಲ್ಲಿ ಶಾರುಖ್ ಖಾನ್‌ಗೆ ಸೇರಿರುವ ಐಸ್‌ಲ್ಯಾಂಡ್ ಕೂಡ ಇದೆ. ಲಂಡನ್‌ನಲ್ಲಿ ಕೂಡ ಶಾರುಖ್ ಖಾನ್ ಹೆಸರಿನಲ್ಲಿ ಆಸ್ತಿ ಇದೆ. ಅಲಿಬಾಗ್‌ನಲ್ಲಿ ಚೆಂದದ ಫಾರ್ಮ್ ಹೌಸ್ ಇದೆ. ಹೀಗೆ ಹಲವಾರು ಕಡೆ ಆಸ್ತಿಯನ್ನು ಹೊಂದಿರುವ ಶಾರುಖ್ ಖಾನ್ ಇನ್ನೂ ಅನೇಕ ಉದ್ಯಮಗಳಲ್ಲಿ ಹಣ ಹೂಡಿದ್ದಾರೆ.
ಒಟ್ನಲ್ಲಿ ಕೇವಲ ಅದೃಷ್ಟವನ್ನು ಮಾತ್ರ ನಂಬಿಕೊಂಡು ಕುಂತರೆ ಇಲ್ಲಿ ಯಾರು ಸಾಧನೆಯ ಶಿಖರಕ್ಕೇರಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಕನಸುಗಳನ್ನು ಸಾಕಾರಗೊಳಿಸಲು ಸತತ ಪರಿಶ್ರಮವನ್ನು ಹಾಕಬೇಕು. ಸವಾಲುಗಳನ್ನು ಎದುರಿಸಬೇಕು. ನೋವು, ಕಷ್ಟ, ಅವಮಾನಗಳಿಗೆ ಕುಗ್ಗದೇ ಮುನ್ನುಗ್ಗಬೇಕು. ಆಗ ಮಾತ್ರ ಅಂದುಕೊಂಡ ಗುರಿಯನ್ನು ತಲುಪಲು ಸಾಧ್ಯ ಎನ್ನುವುದನ್ನು ಸಾಬೀತು ಮಾಡಿರುವ ಈ ₹7300 ಕೋಟಿ ಒಡೆಯನ ಬದುಕು ನಿಜಕ್ಕೂ ಅನೇಕರಿಗೆ ಪ್ರೇರಣೆದಾಯಕ. Happy Birthday King Khan...


Click it and Unblock the Notifications











