ಶೆಟ್ರ ಗ್ಯಾಂಗ್ ಸದಸ್ಯರ ಅಡ್ಡ ಹೆಸರುಗಳೇನು? ತಂಡದಲ್ಲಿ ಯಾರು ಸ್ಮಾರ್ಟ್? ಯಾರು ಪೋಲಿ?

ಕನ್ನಡ ಚಿತ್ರರಂಗದಲ್ಲಿ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್‌ ಬಿ ಶೆಟ್ಟಿ ಕಮಾಲ್ ಮಾಡ್ತಿದ್ದಾರೆ. ಅವರೊಟ್ಟಿಗೆ ಮತ್ತಷ್ಟು ಶೆಟ್ರು ಸೇರ್ಕೊಂಡಿದ್ದಾರೆ. ಒಳ್ಳೆ ಸಿನಿಮಾ ಮಾಡಬೇಕು ಎನ್ನುವ ಹಠ ಹೊಂದಿದ್ದಾರೆ. ಶೆಟ್ರ ಗ್ಯಾಂಗ್, ಶೆಟ್ಟಿ ಮಾಫಿಯಾ ಅಂತ ಏನೇ ಕರೆದರೂ ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೇ ತಾವಾಯ್ತು ತಮ್ಮ ಕೆಲಸ ಆಯ್ತು ಎಂದು ಸಿನಿಮಾಗಳನ್ನು ಬ್ಯುಸಿಯಾಗಿದ್ದಾರೆ.

ರಕ್ಷಿತ್, ರಿಷಬ್ ಜೊತೆಗೆ ಪ್ರಮೋದ್, ಸುಪ್ರೀತಾ, ಶೀತಲ್, ಯಜ್ಞಾ, ಪ್ರಗತಿ ಶೆಟ್ಟಿ ಎಲ್ಲರೂ ಸೇರಿ ಟಪೋರೀಸ್ ಗ್ಯಾಂಗ್ ಎನ್ನುವ ವಾಟ್ಸಪ್ ಗ್ರೂಪ್ ಮಾಡಿಕೊಂಡಿದ್ದಾರೆ. 'ಉಳಿದವರು ಕಂಡಂತೆ' ಸಮಯದಲ್ಲಿ ಹುಟ್ಟಿಕೊಂಡ ಗ್ರೂಪ್ ಇದು. ಟಿವಿ9 ವಾಹಿನಿಯ ಮಾಜಿ ನಿರೂಪಕಿ ಶೀತಲ್ ಶೆಟ್ಟಿ ಕೂಡ ಈ ಗ್ರೂಪ್ ಸದಸ್ಯೆ. 'ಉಳಿದವರು ಕಂಡಂತೆ' ಚಿತ್ರದ ಸಣ್ಣ ಪಾತ್ರದಲ್ಲಿ ಅವರು ನಟಿಸಿದ್ದರು. 'ಕೀರ್ತಿ ENT ಕ್ಲಿನಿಕ್' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಶೀತಲ್ ಶೆಟ್ಟಿ ಭಾಗಿ ಆಗಿ ಮಾತನಾಡಿದ್ದಾರೆ.

Sheetal Shetty Opens Up About Her WhatsApp Group with Rakshit and Rishab Shetty

ತಮ್ಮ ವೈಯಕ್ತಿಯ ಹಾಗೂ ವೃತ್ತಿಪರ ವಿಚಾರವಾಗಿ ಸಾಕಷ್ಟು ವಿಚಾರಗಳನ್ನು ಶೀತಲ್ ಶೆಟ್ಟಿ ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ಟಪೋರಿಸ್ ಗ್ಯಾಂಗ್ ಅಥವಾ ಶೆಟ್ರ ಗ್ಯಾಂಗ್ ಬಗ್ಗೆಯೂ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಗ್ಯಾಂಗ್ ಸದಸ್ಯರ ಅಡ್ಡ ಹೆಸರಗಳನ್ನು ಹೇಳಿದ್ದಾರೆ.

ರಿಷಬ್ ಶೆಟ್ಟಿ ನಿಜವಾದ ಹೆಸರು ಪ್ರಶಾಂತ್ ಶೆಟ್ಟಿ. ಹಾಗಾಗಿ ಅವರನ್ನು ಪರ್ಷ್ಯ ಎಂದು ಮೊದಲಿನಿಂದಲೂ ಕರೆಯುತ್ತಿದ್ದರು. ಅದೇ ಹೆಸರಿನಲ್ಲೇ ನಾವು ಕರೆಯುತ್ತೇವೆ ಎಂದು ಶೀತಲ್ ಹೇಳಿದ್ದಾರೆ. ರಕ್ಷಿತ್ ಶೆಟ್ಟಿಗೆ ಚಿಂಟು ಎನ್ನುವ ಅಡ್ಡ ಹೆಸರಿದೆ. ಪ್ರಮೋದ್ ಅವರನ್ನು ಶೆಟ್ರೆ ಎಂದು ಕರೆಯುತ್ತೇವೆ. ನನಗೆ ಗುಡ್ಡೂ ಎನ್ನುವ ಮುದ್ದಾದ ಹೆಸರಿದೆ. ಯಜ್ಞಾಗೆ ಪುಂಡಿ ಅಂತಾರೆ. ಪ್ರಗತಿ ಅವರನ್ನು ಪಗ್ಗು ಅಂತ ಕರೀತಿವಿ. ಸುಪ್ರೀತಾ ಅವರನ್ನು ಸುಪ್ಪು ಎಂದು ಕೂಗ್ತೀವಿ ಎಂದು ಶೀತಲ್ ವಿವರಿಸಿದ್ದಾರೆ.

ತಂಡದಲ್ಲಿ ಯಾರು ಸ್ಮಾರ್ಟ್ ಎನ್ನುವ ಪ್ರಶ್ನೆಗೆ ರಕ್ಷಿತ್, ರಿಷಬ್ ಇಬ್ಬರೂ ಸ್ಮಾರ್ಟ್.. ಒಂದರ್ಥದಲ್ಲಿ ಎಲ್ಲರೂ ಸ್ಮಾರ್ಟ್, ನಾನೇ ದಡ್ಡಿ ಎಂದು ಶೀತಲ್ ನಕ್ಕಿದ್ದಾರೆ. ಯಾರು ಬಹಳ ಪೋಲಿ ಎನ್ನುವ ಪ್ರಶ್ನೆಗೆ ರಿಷಬ್ ಎಂದು ಉತ್ತರಿಸಿದ್ದಾರೆ. ರಕ್ಷಿತ್ ಶೆಟ್ಟಿ ಇಂಟೆಲಿಜೆಂಟ್, ಪಗ್ಗು(ಪ್ರಗತಿ) ಬಹಳ ಪ್ರೊಸ್ಸೆಸಿವ್. ಗಂಡ ಅಂದ್ರೆ ಬಹಳ ಇಷ್ಟ. ಪಗ್ಗು, ಸುಪ್ಪು ಇಬ್ಬರೂ ಬಹಳ ಕೇರಿಂಗ್. ಡ್ರೆಸ್ಸಿಂಗ್ ಸೆನ್ಸ್ ಯಾರಿಗೂ ಇಲ್ಲ. ನನ್ನ ಪ್ರಕಾರ ಎಲ್ಲರೂ ಎಡಬಿಡಂಗಿಗಳು ಎಂದು ಶೀತಲ್ ತಿಳಿಸಿದ್ದಾರೆ.

ನಮ್ಮ ಗ್ರೂಪ್‌ನಲ್ಲಿ ತುಂಬಾ ಒಳ್ಳೆ ಮೊಮೆಂಟ್ಸ್ ಸ್ಪೆಂಡ್ ಮಾಡಿದ್ದೀವಿ. ಎಲ್ಲರ ಕಷ್ಟ ಸುಖ ಎಲ್ಲಿರಿಗೂ ಗೊತ್ತು. ಎಲ್ಲರ ಒಳಗಿನ ರಾಕ್ಷಸನೂ ಗೊತ್ತು ದೇವರು ಗೊತ್ತು. ಹಾಗಾಗಿ ಆ ಗ್ರೂಪ್ ಸಿಕ್ಕಾಪಟ್ಟೆ ಸ್ಟ್ರಾಂಗ್. ಆ ಗ್ರೂಪ್‌ನಲ್ಲಿ ಎಂಥೆಂತ ಆರ್ಭಟ ಆಗುತ್ತೆ, ಚರ್ಚೆ ಆಗುತ್ತದೆ ಎನ್ನುವುದು ತರ್ಕಕ್ಕೆ ನಿಲುಕದ್ದು ಎಂದು ಶೀತಲ್ ವಿವರಿಸಿದ್ದಾರೆ. ಇತ್ತೀಚೆಗೆ ಎಲ್ಲರೂ ಬ್ಯುಸಿ, ಹಾಗಾಗಿ ಹೆಚ್ಚು ಭೇಟಿ ಮಾಡಲು ಆಗ್ತಿಲ್ಲ ಎಂದಿದ್ದಾರೆ.

ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ ಮೂವರು ಫುಡ್ಡಿ ಎಂದು ಶೀತಲ್ ಹೇಳಿದ್ದಾರೆ. ಶೆಟ್ಟಿ ಎನ್ನುವ ಕಾರಣಕ್ಕೆ 'ಉಳಿದವರು ಕಂಡಂತೆ' ಚಿತ್ರಕ್ಕೆ ಬೇಡ ಎಂದು ರಕ್ಷಿತ್ ಹೇಳಿದ್ದರಂತೆ. ಬಳಿಕ ಅದು ಹೇಗೋ ಅವಕಾಶ ನನ್ನನ್ನೇ ಹುಡುಕಿಕೊಂಡು ಬಂದಿತ್ತು. ಮೊದಲ ದಿನವೇ ಅಚ್ಯುತ್‌ ಕುಮಾರ್ ಅವರೊಟ್ಟಿಗೆ ನಟಿಸಬೇಕಿತ್ತು. ಬಹಳ ಕಷ್ಟ ಇತ್ತು. ಶೂಟಿಂಗ್ ಮುಗಿದ ಬಳಿಕ ಅಚ್ಯುತ್ ಸರ್ "ಯಾವುದಾದರೂ ಒಳ್ಳೆ ಆಕ್ಟಿಂಗ್ ಕ್ಲಾಸ್‌ಗೆ ಸೇರ್ಕೊ" ಎಂದು ಸಲಹೆ ಕೊಟ್ಟಿದ್ದಾಗಿ ಹೇಳಿ ಶೀತಲ್ ನೆನಪಿಸಿಕೊಂಡು ನಕ್ಕಿದ್ದಾರೆ.

More from Filmibeat

Read more about: rakshit shetty rishab shetty
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X