twitter
    For Quick Alerts
    ALLOW NOTIFICATIONS  
    For Daily Alerts

    'ನಮ್ಮೂರ ಮಂದಾರ ಹೂವೇ' ಚಿತ್ರಕ್ಕೆ 25 ವರ್ಷ: ಆಸಕ್ತಿಕರ ಸಂಗತಿಗಳು

    |

    ಸುನೀಲ್ ಕುಮಾರ್ ದೇಸಾಯಿ ನಿರ್ದೇಶಿಸಿದ್ದ 'ನಮ್ಮೂರ ಮಂದಾರ ಹೂವೇ' ಚಿತ್ರ ಬಿಡುಗಡೆಯಾಗಿ 25 ವರ್ಷ ಕಳೆದಿದೆ. ಜಯಶ್ರೀದೇವಿ ನಿರ್ಮಾಣ ಈ ಚಿತ್ರ 1996ರ ಆಗಸ್ಟ್ ತಿಂಗಳಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಆಗಿನ ಸಮಯದಲ್ಲಿ ಈ ಚಿತ್ರ ದೊಡ್ಡ ಹಿಟ್ ಆಗಿತ್ತು. ಶಿವರಾಜ್ ಕುಮಾರ್ ಅವರ ಸಾರ್ವಕಾಲಿಕ ಹಿಟ್ ಚಿತ್ರಗಳನ್ನು ಪಟ್ಟಿ ಮಾಡಿದ್ರೆ ನಮ್ಮೂರ ಮಂದಾರ ಹೂವೇ ಚಿತ್ರವೂ ಟಾಪ್‌ನಲ್ಲಿರುತ್ತದೆ.

    ಇದು ತ್ರಿಕೋನ ಪ್ರೇಮ ಕಥೆ ಹೊಂದಿದ್ದು, ಶಿವರಾಜ್ ಕುಮಾರ್, ರಮೇಶ್ ಅರವಿಂದ್ ಹಾಗೂ ಪ್ರೇಮಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ವಿಶೇಷ ಅಂದ್ರೆ ಇಳಯರಾಜ ಸಂಗೀತ ನಿರ್ದೇಶನದಲ್ಲಿ ಬಂದಿದ್ದ ಹಾಡುಗಳು ಸೂಪರ್ ಡೂಪರ್ ಹಿಟ್ ಆಗಿದ್ದವು.

    ಬೆರಗುಗಣ್ಣಿನಿಂದ ಮೊದಲ ಬಾರಿ ಬೆಳ್ಳಿ ಪರದೆ ನೋಡಿದ ಕ್ಷಣಬೆರಗುಗಣ್ಣಿನಿಂದ ಮೊದಲ ಬಾರಿ ಬೆಳ್ಳಿ ಪರದೆ ನೋಡಿದ ಕ್ಷಣ

    ತರ್ಕ, ಉತ್ಕರ್ಷ, ಸಂಘರ್ಷ, ನಿಷ್ಕರ್ಷ ಅಂತಹ ಥ್ರಿಲ್ಲಿಂಗ್ ಚಿತ್ರಗಳನ್ನು ನಿರ್ದೇಶಿಸಿದ್ದ ಸುನೀಲ್ ಕುಮಾರ್ 'ನಮ್ಮೂರ ಮಂದಾರ ಹೂವೇ' ಎಂಬ ಕಂಪ್ಲೀಟ್ ಲವ್ ಸ್ಟೋರಿ ಮೂಲಕ ತಮ್ಮ ಟ್ರ್ಯಾಕ್ ಬದಲಿಸಿದ್ದರು. ಈ ಚಿತ್ರ ಈಗಲೂ ರಮೇಶ್-ಶಿವಣ್ಣನ ಸ್ನೇಹದ ಪ್ರತೀಕವಾಗಿ ಉಳಿದುಕೊಂಡಿದೆ. ಈ ಸಿನಿಮಾದ ಕುರಿತು ಕೆಲವು ಆಸಕ್ತಿ ವಿಷಯಗಳನ್ನು ಬಗ್ಗೆ ವಿಶೇಷವಾದ ವರದಿ ಇಲ್ಲಿದೆ. ಮುಂದೆ ಓದಿ...

    'ತ್ಯಾಗರಾಜ' ರಮೇಶ್ ಅರವಿಂದ್

    'ತ್ಯಾಗರಾಜ' ರಮೇಶ್ ಅರವಿಂದ್

    - 'ನಮ್ಮೂರ ಮಂದಾರ ಹೂವೇ' ಸಿನಿಮಾವನ್ನು ಚಿತ್ರಕಥೆ ಮಾಡದೇ ಶೂಟ್ ಮಾಡಲಾಗಿದೆ ಎಂದು ವಿಕಿಪೀಡಿಯದಲ್ಲಿ ವರದಿಯಾಗಿದೆ. ಆಗಿನ ಸಮಯದಲ್ಲಿ ಚಿತ್ರಕಥೆ ಮಾಡದೇ ಯಾವ ಚಿತ್ರವೂ ಶೂಟಿಂಗ್ ಮಾಡ್ತಿರಲಿಲ್ಲ. ಅಂತಹ ಸಮಯದಲ್ಲಿ ಚಿತ್ರಕಥೆ ಇಲ್ಲದೇ ತಯಾರಾದ ಸಿನಿಮಾ ಎಂದು ಗುರುತಿಸಿಕೊಂಡಿದೆ.

    - ಈ ಸಿನಿಮಾ ಬಳಿಕ ರಮೇಶ್ ಅರವಿಂದ್ 'ತ್ಯಾಗರಾಜ' ಎಂಬ ಹೆಸರು ಪಡೆದುಕೊಂಡರು. ರಮೇಶ್ ಹೆಚ್ಚಾಗಿ ಪ್ರೀತಿಸಿದ ಹುಡುಗಿಯನ್ನು ಬಿಟ್ಟು ಕೊಡುವ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.

    ಪ್ರವಾಸಿ ತಾಣ ಆಯ್ತು 'ಯಾನ'

    ಪ್ರವಾಸಿ ತಾಣ ಆಯ್ತು 'ಯಾನ'

    - ಮಲೆನಾಡಿನ ಭಾಗದಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆದಿತ್ತು. ಅದರಲ್ಲೂ ಯಾನದಲ್ಲಿ ಹೆಚ್ಚು ದೃಶ್ಯಗಳನ್ನು ಶೂಟ್ ಮಾಡಲಾಗಿತ್ತು. ನಮ್ಮೂರ ಮಂದಾರ ಹೂವೇ ಬಿಡುಗಡೆಯಾದ ಬಳಿಕ 'ಯಾನ' ಪ್ರವಾಸಿ ತಾಣ ಆಯಿತು. ಹೆಚ್ಚು ಹೆಚ್ಚು ಸಿನಿಮಾಗಳು ಚಿತ್ರೀಕರಣ ಮಾಡಲು ಆಯ್ಕೆ ಮಾಡಿಕೊಂಡರು.

    - ಅಂದ್ಹಾಗೆ, ನಮ್ಮೂರ ಮಂದಾರ ಹೂವೇ ಸಿನಿಮಾದ ಕಥೆ ಸುನೀಲ್ ಕುಮಾರ್ ದೇಸಾಯಿ ಅವರ ಜತೆ ಕೆಲಸ ಮಾಡ್ತಿದ್ದ ಸಹಾಯಕ ನಿರ್ದೇಶಕರ ನಿಜ ಜೀವನದ ಕಥೆಯಂತೆ.

    - ಈ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಧರಿಸಿದ್ದ ಟೋಪಿ ಹೆಚ್ಚು ಖ್ಯಾತಿ ಹೊಂದಿತ್ತು. ಕ್ಯಾಪ್ ಮೇಲೆ ''ಮಂದಾರ'' ಎಂದು ಹೆಸರಿತ್ತು. 'ಮಂದಾರ' ಕ್ಯಾಪ್ ಹೆಚ್ಚು ಫೇಮಸ್ ಆಗಿತ್ತು.

     ಸುನೀಲ್ ಕುಮಾರ್ ದೇಸಾಯಿ ಜೊತೆ ಮತ್ತೆ ಕೈ ಜೋಡಿಸುತ್ತಾರಾ ಸುದೀಪ್.? ಸುನೀಲ್ ಕುಮಾರ್ ದೇಸಾಯಿ ಜೊತೆ ಮತ್ತೆ ಕೈ ಜೋಡಿಸುತ್ತಾರಾ ಸುದೀಪ್.?

    ಬೆಂಗಳೂರಿನಲ್ಲಿ 22 ವಾರ ಪ್ರದರ್ಶನ

    ಬೆಂಗಳೂರಿನಲ್ಲಿ 22 ವಾರ ಪ್ರದರ್ಶನ

    - ಚಿತ್ರದಲ್ಲಿ ಬರುವ ಫ್ರೆಂಡ್‌ಷಿಪ್ ಸ್ಲೋಗನ್ ಟ್ರೆಂಡ್ ಆಯಿತು. ರಮೇಶ್ ಅರವಿಂದ್ ಮತ್ತು ಶಿವರಾಜ್ ಕುಮಾರ್ ಭೇಟಿ ಮಾಡುವ ಸಮಯದಲ್ಲಿ ಅವರು ಬಳಸುತ್ತಿದ್ದ ''ಹೇ ಹೇ,,,ಓಹೋ ಓಹೋ'' ಎನ್ನುವುದು ಆಗ ಸ್ನೇಹಿತರ ಪಾಲಿಗೆ ಸ್ಲೋಗನ್ ಆಗಿ ಬಳಕೆಯಾಗಿತ್ತು.

    - ಉತ್ತರ ಕನ್ನಡದ ಹವ್ಯಕ ಭಾಷೆಯನ್ನು ಚಿತ್ರದಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗಿತ್ತು. ಇದು ಸಹ ಸಿನಿಮಾದ ಯಶಸ್ಸಿಗೆ ಕಾರಣ ಆಯಿತು.

    - ಬೆಂಗಳೂರಿನ ಚಿತ್ರಮಂದಿರದಲ್ಲಿ 22 ವಾರಗಳ ಕಾಲ ಪ್ರದರ್ಶನ ಆಗಿತ್ತು. ಕನ್ನಡ ಚಿತ್ರರಂಗದ ಅತ್ಯುತ್ತಮ ಲವ್ ಸ್ಟೋರಿ ಸಿನಿಮಾಗಳ ಪಟ್ಟಿಯಲ್ಲೂ ಈ ಸಿನಿಮಾ ಇದೆ.

    ಎರಡು ರಾಜ್ಯ ಪ್ರಶಸ್ತಿ ಲಭಿಸಿದೆ

    ಎರಡು ರಾಜ್ಯ ಪ್ರಶಸ್ತಿ ಲಭಿಸಿದೆ

    'ನಮ್ಮೂರ ಮಂದಾರ ಹೂವೇ' ಸಿನಿಮಾಗೆ 1996-97ನೇ ಸಾಲಿನಲ್ಲಿ ಎರಡು ರಾಜ್ಯ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ಬಾಲ ನಟ (ಮಾಸ್ಟರ್ ವಿನಾಯಕ್ ಜೋಶಿ) ಹಾಗೂ ಅತ್ಯುತ್ತಮ ಹಿನ್ನೆಲೆ ಗಾಯಕಿ (ಕೆಎಸ್ ಚಿತ್ರಾ) ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿತ್ತು.

    ತಮಿಳಿಗೂ ಈ ಚಿತ್ರ ರಿಮೇಕ್ ಆಯಿತು. ವಿಕ್ರಂ, ಶ್ರೀರಾಮ್ ಹಾಗೂ ಕನ್ನಡ ನಟಿ ಪ್ರೇಮ ತಮಿಳಿನಲ್ಲಿಯೂ ಅಭಿನಯಿಸಿದರು.

    English summary
    Kannada actro Shiva Rajkumar's Nammura Mandara Hoove Movie Complets 25 Years; Know interesting facts about the movie.
    Tuesday, August 10, 2021, 16:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X