'ಜೋಗಿ' ಬಜೆಟ್, ಕಲೆಕ್ಷನ್ ಎಷ್ಟಾಗಿತ್ತು? ಚಿತ್ರ ಬರೆದಿದ್ದ ದಾಖಲೆಗಳೇನು? ಇಲ್ಲಿದೆ ಪಿನ್ ಟು ಪಿನ್ ಲೆಕ್ಕ

20 ವರ್ಷಗಳ ಹಿಂದೆ ತೆರೆಗಪ್ಪಳಿಸಿದ್ದ 'ಜೋಗಿ' ಚಿತ್ರವನ್ನು ಮರೆಯೋಕೆ ಸಾಧ್ಯವಿಲ್ಲ. ಆ ಕ್ರೇಜ್ ಕನ್ನಡದಲ್ಲಿ ಮತ್ಯಾವುದೇ ಸಿನಿಮಾ ಹುಟ್ಟಾಕಲಿಲ್ಲ. ಶಿವಣ್ಣನ ಸಿನಿ ಕರಿಯರ್‌ನಲ್ಲಿ 'ಓಂ' ಬಿಟ್ಟರೆ ಅಂತಾದೊಂದು ಮ್ಯಾಜಿಕ್ ಮಾಡಿದ್ದು 'ಜೋಗಿ' ಮಾತ್ರ. ಇವತ್ತಿಗೂ ಈ ಸಿನಿಮಾ ಮರು ಬಿಡುಗಡೆ ಮಾಡುವಂತೆ ಅಭಿಮಾನಿಗಳು ಕೇಳುತ್ತಲೇ ಇದ್ದಾರೆ. ಅಂದು ಈ ಸಿನಿಮಾ ಬರೆದ ದಾಖಲೆ ಒಂದೆರಡಲ್ಲ.

ಚಿತ್ರದ ಟೈಟಲ್, ಹಾಡುಗಳು ಹಿಟ್ ಆಗಿದ್ದು ಪ್ರೇಮ್ ಪ್ರಚಾರ ತಂತ್ರಗಳು, ಬಹಳ ತಡವಾಗಿ ಸಿನಿಮಾ ಬಿಡುಗಡೆ ಆಗಿದ್ದು ಶಿವಣ್ಣ ಲಾಂಗ್ ಹಿಡಿದಿದ್ದು ಎಲ್ಲವೂ 'ಜೋಗಿ' ಬಗ್ಗೆ ನಿರೀಕ್ಷೆ ಹೆಚ್ಚುವಂತೆ ಮಾಡಿತ್ತು. ಸಿನಿಮಾ ತೆರೆಕಂಡು ಆ ನಿರೀಕ್ಷೆಯನ್ನು ಶೇಕಡಾ 100ರಷ್ಟು ತಲುಪಿತ್ತು. ಅಭಿಮಾನಿಗಳು ಸಿನಿಮಾ ನೋಡಲು ಮುಗಿಬಿದ್ದರು. ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಇಲ್ಲದ ಕಾಲದಲ್ಲಿ ಕೇವಲ 65 ಪ್ರಿಂಟ್‌ಗಳಲ್ಲಿ ಚಿತ್ರ ಬಿಡುಗಡೆ ಆಗಿತ್ತು. ಚಿತ್ರವನ್ನು ನೋಡಲು ಪ್ರೇಕ್ಷಕರು ನುಗ್ಗಿದ್ದರು. ಸಿನಿಮಾ ಟಿಕೆಟ್ ಡಿಮ್ಯಾಂಡ್ ಹೇಗಿತ್ತು ಅಂದ್ರೆ ಅವತ್ತಿನ ಕಾಲಕ್ಕೆ 1200 ರೂ.ಗೆ ಟಿಕೆಟ್ ಬ್ಲ್ಯಾಕ್‌ನಲ್ಲಿ ಮಾರಾಟವಾಗಿತ್ತು. ಅದು ಜೋಗಿ 'ಕ್ರಾಂತಿ'.

Shivarajkumar Prem s Jogi Turns 20 A Cult Kannada Blockbuster That Redefined Box Office Records

ಸೋಶಿಯಲ್ ಮೀಡಿಯಾ ಇಲ್ಲದ ಕಾಲದಲ್ಲಿ ಬರೀ ಮೌತ್‌ ಟಾಕ್‌ನಿಂದಲೇ 'ಜೋಗಿ' ಸಿನಿಮಾ ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ದೊಡ್ಡಮಟ್ಟದಲ್ಲಿ ಚಿತ್ರಮಂದಿರಗಳಿಗೆ ಸೆಳೆಯಿತು. 81 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಂಡಿತ್ತು. 78 ಕೇಂದ್ರಗಳಲ್ಲಿ 25 ದಿನಗಳ ಪ್ರದರ್ಶನ, 63 ಕೇಂದ್ರಗಳಲ್ಲಿ 50 ದಿನಗಳ ಪ್ರದರ್ಶನ, 54 ಕೇಂದ್ರಗಳಲ್ಲಿ 75 ದಿನಗಳ ಪ್ರದರ್ಶನ ಹಾಗೂ 45 ಕೇಂದ್ರಗಳಲ್ಲಿ 100 ದಿನ ಪ್ರದರ್ಶನ ಕಂಡು ಸಿನಿಮಾ ದಾಖಲೆ ಬರೆದಿತ್ತು. ಪ್ರೇಮ್ ಚಿತ್ರದಲ್ಲಿ ಎರಡು ಟ್ರಂಪ್ ಕಾರ್ಡ್ ಹಿಡಿದು ಆಟ ಆಡಿದ್ದರು. ಒಂದು ರೌಡಿಸಂ. ಮತ್ತೊಂದು ಮದರ್ ಸೆಂಟಿಮೆಂಟ್. ಎರಡನ್ನು ಸೇರಿಸಿ ಪ್ರೇಕಕರಿಗೆ ಮನ ಮಟ್ಟುವಂತೆ ಕಥೆ ಹೇಳಿ ಗೆದ್ದಿದ್ದರು.

ಬರೀ ಆಡಿಯೋ ಕ್ಯಾಸೆಟ್‌ಗಳಿಂದಲೇ ಸಿನಿಮಾ ಕೋಟಿ ಕೋಟಿ ಗಳಿಸಿತ್ತು. ಯೂಟ್ಯೂಬ್ ಇಲ್ಲ, ಆನ್ಲೈನ್ ಮ್ಯೂಸಿಕ್ ಆಪ್‌ಗಳು ಇಲ್ಲ. ಬರೀ ಸಿಡಿ, ಕ್ಯಾಸೆಟ್‌ಗಳಲ್ಲಿ ಹಾಡುಗಳನ್ನು ಕೇಳುತ್ತಿದ್ದ ಕಾಲ ಅದು. ಈಗ ಲಿರಿಕಲ್ ಸಾಂಗ್, ವೀಡಿಯೋ ಸಾಂಗ್‌ಗಳನ್ನು ಸಿನಿಮಾ ಬಿಡುಗಡೆಗೂ ಮುನ್ನ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತಾರೆ. ಆದರೆ ಆಗ ಟಿವಿಯಲ್ಲಿ ವೀಡಿಯೋ ಸಾಂಗ್ ಪ್ರಸಾರ ಮಾಡುವ ಅವಕಾಶ ಇತ್ತು. ಆದರೆ 'ಜೋಗಿ' ಚಿತ್ರದ ಹಾಡುಗಳನ್ನು ಟಿವಿಯಲ್ಲಿ ಹಾಕಲು ಪ್ರೇಮ್ ಕೊಟ್ಟಿರಲಿಲ್ಲ. ಹಾಗಾಗಿ ಹಿಟ್ ಹಾಡುಗಳು ತೆರೆಮೇಲೆ ಹೇಗಿರುತ್ತದೆ ಎಂದು ನೋಡಲು ಹಲವರು ಚಿತ್ರಮಂದಿರಗಳಿಗೆ ಮುಗಿಬಿದ್ದಿದ್ದರು. ಆಡಿಯೋದಿಂದಲೇ 5 ಕೋಟಿ ರೂ.ಗೂ ಅಧಿಕ ಆದಾಯ ಬಂದಿತ್ತು.

Shivarajkumar Prem s Jogi Turns 20 A Cult Kannada Blockbuster That Redefined Box Office Records

'ಜೋಗಿ' ರಿಲೀಸ್ ಕ್ರೇಜ್ ಹೇಗಿತ್ತು ಅಂದ್ರೆ ಸಾಕಷ್ಟು ಕಡೆಗಳಲ್ಲಿ ಮಿಡ್‌ನೈಟ್ ಶೋಗಳನ್ನು ಹಾಕಲಾಗಿತ್ತು. ಸಿನಿಮಾ ನೋಡಿ ಅದ್ಭುತ ಎಂದು ಬಿಟ್ಟಿದ್ದರು. ಇದು ಸಹಜವಾಗಿಯೇ 'ಜೋಗಿ' ಫೀವರ್ ಹೆಚ್ಚುವಂತೆ ಮಾಡಿತ್ತು. ಬಳ್ಳಾರಿ, ಹೊಸಪೇಟೆ, ಚಾಮರಾಜನಗರದಲ್ಲಿ ಮಧ್ಯರಾತ್ರಿಯೇ ಅಭಿಮಾನಿಗಳು ಸಿನಿಮಾ ನೋಡಿದ್ದರು. ಕಪಾಲಿ ಚಿತ್ರಮಂದಿರದಲ್ಲೇ 2.35 ಕೋಟಿ ರೂ. ಕಲೆಕ್ಷನ್ ಆಗಿತ್ತು. ಗರುಡ ಮಾಲ್ ಐನಾಕ್ಸ್‌ನಲ್ಲಿ 100 ದಿನ ಪ್ರದರ್ಶನ ಕಂಡಿತ್ತು.

'ಜೋಗಿ' ಸಿನಿಮಾ ಕ್ರೇಜ್ ಹೇಗಿತ್ತು ಎಂದು ಚಿತ್ರದಲ್ಲಿ ನಟಿಸಿದ್ದ ರಘುರಾಮ್ ಫಿಲ್ಮಿಬೀಟ್ ಜೊತೆ ಹಂಚಿಕೊಂಡಿದ್ದಾರೆ. ಅವತ್ತಿನ ಕಾಲಕ್ಕೆ 3ರಿಂದ 4 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿತ್ತು. ಬರೋಬ್ಬರಿ 20ರಿಂದ 25 ಕೋಟಿ ರೂ.ಗೂ ಅಧಿಕ ಆದಾಯ ತಂದಿರಬಹುದು ಎನ್ನುತ್ತಾರೆ. ಚಿತ್ರಮಂದಿರಗಳಲ್ಲಿ ಟಿಕೆಟ್ ದರ ಬಹಳ ಕಮ್ಮಿ ಇತ್ತು. ಸಿಂಗಲ್ ಸ್ಕ್ರೀನ್‌ ಥಿಯೇಟರ್‌ಗಳಲ್ಲಿ 50 ರೂ, 80 ರೂ, 120 ರೂ. ಟಿಕೆಟ್ ದರ ಇತ್ತು. ಕೋರಮಂಗಲ ಫೋರಂ, ಗರುಡಮಾಲ್ ಐನಾಕ್ಸ್ ಬಿಟ್ಟರೆ ಹೆಚ್ಚು ಮಲ್ಟಿಪ್ಲೆಕ್ಸ್‌ಗಳು ಇಲ್ಲದ ಕಾಲ ಅದು.

ಬರೀ ಬಿಕೆಟಿ ಏರಿಯಾ ಕಲೆಕ್ಷನ್ 9 ಕೋಟಿ ರೂ. ದಾಟಿತ್ತು. ಆಗ ಓಟಿಟಿ ಇರಲಿಲ್ಲ. ಟಿವಿ ಸ್ಯಾಟಲೈಟ್ ರೈಟ್ಸ್ 81 ಲಕ್ಷ ರೂ.ಗೆ ಮಾರಾಟವಾಗಿತ್ತು. ಅದು ಅವತ್ತಿನ ಕಾಲಕ್ಕೆ ಹೊಸ ದಾಖಲೆ ಆಗಿತ್ತು. ಇನ್ನು ಡಬ್ಬಿಂಗ್ ರೈಟ್ಸ್ ಇರಲಿಲ್ಲ. ತೆಲುಗು, ತಮಿಳು ರೀಮೆಕ್ ರೈಟ್ಸ್ ಮಾತ್ರ ಒಳ್ಳೆ ದರಕ್ಕೆ ಮಾರಾಟವಾಗಿತ್ತು. ಸಿನಿಮಾ ಬಿಡುಗಡೆಗೂ ಮುನ್ನ ಬಹುತೇಕ ಎಲ್ಲಾ ಥಿಯೇಟರ್‌ಗಳಲ್ಲಿ ಒಂದು ವಾರದ ಟಿಕೆಟ್ ಮಾರಾಟವಾಗಿಬಿಟ್ಟಿತ್ತು. ತಮಿಳುನಾಡಿನ ಹೊಸೂರಿನಲ್ಲಿ ಕೂಡ 'ಜೋಗಿ' ಸಿನಿಮಾ ತೆರೆಕಂಡಿತ್ತು.

ಚಿತ್ರದಲ್ಲಿ ಶಿವರಾಜ್‌ಕುಮಾರ್ ಸ್ನೇಹಿತನ ಪಾತ್ರದಲ್ಲಿ ರಘುರಾಮ್ ನಟಿಸಿದ್ದರು. ಅವರ ಪಾತ್ರಕ್ಕೂ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಆಗ ಈಟಿವಿ ಕನ್ನಡ ವಾಹಿನಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ಹಾಗಾಗಿ 'ಜೋಗಿ' ಸಿನಿಮಾ ಪ್ರಚಾರದಲ್ಲಿ ಕೂಡ ಪ್ರಮುಖ ಪಾತ್ರ ವಹಿಸಿದ್ದರು.

More from Filmibeat

English summary
Released 20 years ago, Shivarajkumar’s Jogi remains a landmark in Kannada cinema.
Read more about: shivarajkumar prem sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X