ಹಸುವಿನ ವೇಷದಲ್ಲಿದ್ದ ವ್ಯಾಘ್ರ; ನಾನು ಸೆ*ಕ್ಸ್‌ಗಾಗಿ ಇದೆಲ್ಲಾ ಮಾಡ್ದೆ ಅಂತ ಲೇಬಲ್ ಮಾಡೋಕೆ ನೋಡಿದ್ರು- ರಮ್ಯಾ ವಸಿಷ್ಠ
ಕನ್ನಡದ ಹೆಸರಾಂತ ಗಾಯಕ ಹಾಗೂ ನಟಿ, ಗಾಯಕಿ ರಮ್ಯಾ ವಶಿಷ್ಠ 14 ವರ್ಷಗಳ ಹಿಂದೆ ಮದುವೆ ಆಗಿದ್ದರು. ಆದರೆ ಮದುವೆಯಾದ ಒಂದೇ ವರ್ಷದಲ್ಲಿ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. 2013ರಲ್ಲಿ ರಮ್ಯಾ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಪತಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಬಹಳ ವರ್ಷಗಳ ಬಳಿಕ ಈ ಬಗ್ಗೆ ಆಕೆ ಮೌನ ಮುರಿದಿದ್ದಾರೆ.
ಡಿವೋರ್ಸ್ ಬಳಿಕ ರಮ್ಯಾ ವಶಿಷ್ಠ ತಾವಾಯ್ತು ತಮ್ಮ ಕೆಲಸ ಆಯ್ತು ಎಂದು ಇದ್ದು ಬಿಟ್ಟರು. ಅದಾಗಲೇ ಎರಡು ಮದುವೆ ಆಗಿದ್ದ ಗಾಯಕನ ಜೊತೆ ಅವರಿಗೆ 3ನೇ ಮದುವೆ ಆಗಿತ್ತು. ಮದುವೆಗೂ ಮುನ್ನ ಕೆಲವರು ಬೇಡ ಅಂದಿದ್ದರು. ನಾನು ಕೂಡ ಇದೆಲ್ಲಾ ಸಾಧ್ಯವಿಲ್ಲ ಎಂದುಕೊಂಡಿದ್ದೆ. ಆದರೆ ಮದುವೆಯಾಗಿ ಬಹಳ ಬೇಗ ದೂರಾಗುವಂತಾಯಿತು ಎಂದು ರಘುರಾಮ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ರಮ್ಯಾ ವಸಿಷ್ಠ ತಿಳಿಸಿದ್ದಾರೆ.

ಆ ವ್ಯಕ್ತಿ ಹಸುವಿನ ವೇಷದಲ್ಲಿದ್ದ ವ್ಯಾಘ್ರ ಎಂದು ರಮ್ಯಾ ವಸಿಷ್ಠ ತಮ್ಮ ಜೀವನದ ಕಹಿ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. "ಸೋಕಾಲ್ಡ್ ಮದುವೆ ಏನು ಆಯ್ತು, ಅದಕ್ಕಿಂತ ತಿಂಗಳ ಮುನ್ನ ನಾನು ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದೆ. ಆಗ ಕೂಡ ಅವರನ್ನು ಯಾರು ಮದುವೆ ಆಗ್ತಾರೆ? ಎಂದು ನಾನೇ ಹೇಳಿದ್ದೆ. 3 ತಿಂಗಳಲ್ಲಿ ಮಗಳು ವಾಪಸ್ ಬಂದ್ರೆ ಸರಿ, ಇಲ್ಲದಿದ್ದರೆ ಅಲ್ಲೇ ಸತ್ತು ಹೋಗ್ತಾಳೆ ಅಂತ ನಮ್ಮ ತಾಯಿಗೂ ಯಾರೋ ಹೇಳಿದ್ರಂತೆ" ಎಂದು ರಮ್ಯಾ ಮೊದಲ ಬಾರಿಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ.
ನನ್ನ ಜೀವನದ ಕಷ್ಟದ ದಿನಗಳು ಅವು.. ನಾನು ಬದುಕಿರುವುದೇ ಹೆಚ್ಚು. ಆ ವ್ಯಕ್ತಿ ಇವತ್ತಿಗೂ ಜಿದ್ದು ಸಾಧಿಸುತ್ತಿದ್ದಾರೆ. ನನಗೆ ಆ ವ್ಯಕ್ತಿ ಬಗ್ಗೆ ಗೊತ್ತಿಲ್ಲ, ಆದರೆ ಆತನಿಗೆ ಆತ ಏನು ಎಂದು ಗೊತ್ತಿಲ್ವಾ? ಇಂಡಸ್ಟ್ರಿ ಯಾಕೆ ಇನ್ನು ಆ ವ್ಯಕ್ತಿಗೆ ಬೆಂಬಲವಾಗಿ ನಿಂತಿದ್ದಾರೆ. ನನ್ನ ಮೇಲೆ ಸುಳ್ಳು ಕೇಸ್ ಹಾಕಿಸಿದ್ರು.. ನನಗೆ ಬರಬೇಕಿದ್ದ ದುಡ್ಡ ಬರದಂತೆ ಮಾಡಿದ್ರು ಎಂದು ರಮ್ಯಾ ಬೇಸರ ವ್ಯಕ್ತಪಡಿಸಿದ್ದಾರೆ. "ಈ ಘಟನೆಗಳನ್ನೆಲ್ಲಾ ನೋಡಿದ್ಮೇಲೆ ಮತ್ತೆ ಮದುವೆ ಬೇಡ ಎನಿಸಿಬಿಡ್ತು.. ನನ್ನ ವೃತ್ತಿ ಜೀವನಕ್ಕೂ ಬಹಳ ಅಡ್ಡಗಾಲು ಹಾಕಿದ್ರು" ಎಂದು ಆರೋಪಿಸಿದ್ದಾರೆ.
ಒಂದು ದೊಡ್ಡ ಕಾರ್ಯಕ್ರಮ ಮಾಡಿದ್ದೆವು. ಚೌಡಯ್ಯ ಹಾಲ್‌ನಲ್ಲಿ ಫಿನಾಲೆ ನಡೀತು. ಆ ವ್ಯಕ್ತಿಯ ಸ್ನೇಹಿತರೊಬ್ಬರನ್ನು ನಂಬಿ ಕಾರ್ಯಕ್ರಮದ ವಿಡಿಯೋ ಚಿತ್ರೀಕರಣದ ಜವಾಬ್ದಾರಿ ಕೊಟ್ಟಿದ್ದೆ. ಇವತ್ತಿಗೂ ಆ ಕಾರ್ಯಕ್ರಮದ ಒಂದೇ ಒಂದು ವಿಡಿಯೋ ತುಣುಕು ಸಿಕ್ಕಿಲ್ಲ.. ನಾನು ಸಂಪೂರ್ಣ ಹಣ ಕೊಟ್ಟುಬಿಟ್ಟಿದ್ದೀನಿ.. ಇದಕ್ಕೆ ಏನಂತೀರಾ? ಎಂದು ರಮ್ಯಾ ಪ್ರಶ್ನಿಸಿದ್ದಾರೆ. ನಾನು ಒಂದೇ ಒಂದು ರೂಪಾಯಿ ಜೀವನಾಂಶ ಪಡೆದಿಲ್ಲ. ನಾನು ಕೆಲಸ ಮಾಡಿದ ಹಣ ಅವರ ಅಕೌಂಟ್‌ಗೆ ಹೋಗಿ ಅದು ವಾಪಸ್ ಬಂದಿಲ್ಲ. ಬೇರೆಯಾದಾಗ ಹಣವನ್ನೆಲ್ಲಾ ಕೊಟ್ಟುಬಿಟ್ಟೆ. ಒಂದು ರೂಪಾಯಿ ತಗೊಂಡಿಲ್ಲ ಎಂದು ರಮ್ಯಾ ಸ್ಪಷ್ಟನೆ ಕೊಟ್ಟಿದ್ದಾರೆ.
ಈ ಘಟನೆ ಬಳಿಕ ಸಾಕಷ್ಟು ಜನ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ರು.. ನಿಮಗೆ ತುಂಬಾ ಧನ್ಯವಾದ. ಕೊನೆ ಪಕ್ಷ ನೀವು ಮಾತಾಡಿದ್ರಲ್ಲ.. ಇದರಿಂದ ನಮಗೆ ಒಂದು ದಾರಿ ಸಿಕ್ತು ಎಂದ್ರು.. ನಾನು ನ್ಯಾಯಕ್ಕಾಗಿ ಹೋರಾಟವನ್ನು "ಇವ್ಳು ಸೆ*ಕ್ಸ್‌ಗೋಸ್ಕರ ಇದೆಲ್ಲಾ ಮಾಡ್ತಿದ್ದಾಳೆ" ಎಂದು ಲೇಬಲ್ ಮಾಡಲು ಟ್ರೈ ಮಾಡಿದ್ರು.. ಇಂತಹ ವ್ಯಕ್ತಿ, ಈತನ ನ್ಯೂನ್ಯತೆಗಳು ಇದು ಎಂದಾಕ್ಷಣ ಆ ಕ್ಯಾಟಗರಿಗೆ ಬರುವ ಗಂಡಸರು ನನ್ನ ವಿರುದ್ಧ ನಿಂತ್ರು" ಎಂದು ರಮ್ಯಾ ವಶಿಷ್ಠ ವಿವರಿಸಿದ್ದಾರೆ.


Click it and Unblock the Notifications











