twitter
    For Quick Alerts
    ALLOW NOTIFICATIONS  
    For Daily Alerts

    ಅಪಸವ್ಯಗಳ ಆಗರ ಕನ್ನಡ ರ್ಯಾಪ್ ದುನಿಯಾ: ಭರವಸೆಯ ಬೆಳಕು ದೂರ

    |

    ರ್ಯಾಪರ್ ಚಂದನ್ ಶೆಟ್ಟಿಯ 'ಕೋಲುಮಂಡೆ' ಹಾಡು ವಿವಾದಕ್ಕೆ ಈಡಾಗಿದೆ. ಹಾಡಿನಲ್ಲಿ ಮಲೆ ಮಾದಪ್ಪ, ಶರಣೆ ಶಂಕಮ್ಮನಿಗೆ ಅಪಚಾರ ಎಸಗಿದ್ದಾರೆಂದು ಆರೋಪಿಸಿ ದೂರು ಸಹ ದಾಖಲಾಗಿದೆ. ಚಂದನ್ ಶೆಟ್ಟಿ ರ್ಯಾಪ್ ಹಾಡು ವಿವಾದಕ್ಕೆ ಈಡಾಗುತ್ತಿರುವುದು ಮೊದಲಲ್ಲ. ಈ ಮೊದಲು ಗಾಂಜಾ ಹಾಡೊಂದು ವಿವಾದ ಎಬ್ಬಿಸಿತ್ತು, ಚಂದನ್ ಶೆಟ್ಟಿ ಸಿಸಿಬಿಯವರ ಕ್ಷಮೆ ಸಹ ಕೇಳಬೇಕಾಗಿ ಬಂತು.

    Recommended Video

    ಅಂದು ರಾಜ್ ಕುಮಾರ್ ಇಂದು ರಚಿತಾ | Rachita Ram statement | Filmibeat Kannada

    ಹಾಗೆ ನೋಡಿದರೆ ಕನ್ನಡ ರ್ಯಾಪ್ ಜಗತ್ತಿನಲ್ಲಿ ಇಂಥಹಾ ಅಪಸವ್ಯಗಳು ಸಾಕಷ್ಟು. ಹೆಣ್ಣು, ಹೆಂಡ, ಧಮ್ಮು ಗಳು ಬಹುತೇಕ ರ್ಯಾಪ್ ಹಾಡುಗಳ 'ಸಾಮಾನ್ಯ ಸ್ಪೂರ್ತಿ'. ಸೊಂಟದ ಕೆಳಗಿನ ಭಾಷೆಯನ್ನೂ ಕನ್ನಡದ ಕೆಲವು ರ್ಯಾಪ್ ಹಾಡುಗಳಲ್ಲಿ ಬಳಸಿಯಾಗಿದೆ. ಚಂದನ್ ಶೆಟ್ಟಿ 'ಪ್ರಸಿದ್ಧ' ರ್ಯಾಪರ್ ಆಗಿರುವ ಕಾರಣ ಅವರ ಹಾಡು ಕಣ್ಣಿಗೆ ಬಿದ್ದು ಸುದ್ದಿಯಾಗಿದೆ. ಉಳಿದವರದ್ದು ಸುದ್ದಿಯಾಗಿಲ್ಲವಷ್ಟೆ.

    ಹಾಗೆಂದ ಮಾತ್ರಕ್ಕೆ ಕನ್ನಡ ರ್ಯಾಪ್ ಹಾಡುಗಳೆಲ್ಲವೂ ಕಳಪೆ ಎನ್ನುವಂತೆಯೂ ಇಲ್ಲ. ನಿಜವಾಗಿಯೂ ಸೃಜನಶೀಲ ರ್ಯಾಪ್ ಹಾಡುಗಳನ್ನು ನೀಡುತ್ತಿರುವ ಕೆಲ ಯುವಕರು ಈಗಲೂ ಇದ್ದಾರೆ. ಆದರೆ ಚಂದನ್ ಶೆಟ್ಟಿ ಅವರಿಗೆ ದೊರೆತಷ್ಟು 'ಮೈಲೇಜ್' ಅವರಿಗೆ ದೊರೆಯಲಿಲ್ಲವಷ್ಟೆ.

    Slight Look Into Kannada Rap World

    'ರ್ಯಾಪ್' ಎಂಬುದು ಕನ್ನಡಕ್ಕೆ ತುಸು ಅಪರಿಚಿತ 'ಗಾಯನ ಪದ್ಧತಿ'. 2006-07 ರಲ್ಲಿ 'ಅರ್ಬನ್ ಲ್ಯಾಡ್ಸ್' ಕನ್ನಡದ ಮೊದಲ ರ್ಯಾಪ್ ಹಾಡುಗಳ ಗುಚ್ಛವನ್ನು ಹೊರತಂದಿತ್ತು. ಸಿಡಿ, ಕ್ಯಾಸೆಟ್‌ಗಳ ಆ ಜಮಾನಾದಲ್ಲಿ ಅಬರ್ನ್ ಲ್ಯಾಡ್ಸ್‌ ಹಾಡುಗಳು ಯುವಕರ ಗಮನ ಸೆಳೆದಿತ್ತು. ಹೊಸ ಬಗೆಯ ಗಾಯನ ಪದ್ಧತಿ, ಚುಟುಕು ಪದಗಳಲ್ಲಿ ಹಿಡಿದಿಟ್ಟ ಹಾಸ್ಯ, ಲಘು ವೇದಾಂತ ಎಲ್ಲವೂ ಯುವಕರನ್ನು ಆಕರ್ಷಿಸಿತ್ತು. ಆಗಿನ ಕಾಲಕ್ಕೆ 80,000 ಸಿಡಿಗಳು ಮಾರಾಟವಾಗಿದ್ದವಂತೆ.

    ಅರ್ಬನ್ ಲ್ಯಾಡ್ಸ್ ಯಶಸ್ಸನ್ನು ಕಂಡು ಹಲವರು ರ್ಯಾಪರ್‌ಗಳಾಗುವ ಉತ್ಸಾಹವನ್ನು ತೋರಿ ಮುಂದೆ ಬಂದರು. ಅವರಲ್ಲಿ ಬಹುತೇಕರಿಗೆ ಯಶಸ್ಸು ಗಳಿಸುವ ಉತ್ಸಾಹ ಇತ್ತೇ ಹೊರತು, ಒಳ್ಳೆಯ ರ್ಯಾಪ್ ನೀಡುವ ಆಸೆ ಇರಲಿಲ್ಲ ಎಂದು ಅರ್ಬನ್ ಲ್ಯಾಡ್ಸ್‌ ತಂಡದಲ್ಲಿದ್ದ ಒಬ್ಬರು ಫಿಲ್ಮೀಬೀಟ್ ಜೊತೆ ಮಾತನಡುತ್ತಾ ಹೇಳಿದರು. ಕನ್ನಡ ರ್ಯಾಪ್ ದುನಿಯಾ ಗುರಿಯಿಲ್ಲದ ಹುಚ್ಚು ಕುದುರೆಯಾದ ಮೇಲೆ ರ್ಯಾಪ್ ನಿಂದ ದೂರವೇ ಉಳಿದುಬಿಟ್ಟಿದ್ದಾರೆ ಅವರು.

    ಅಷ್ಟೇ ಅಲ್ಲದೆ ರ್ಯಾಪರ್‌ ಗಳ ತಂಡಗಳಲ್ಲಿ ತಲೆದೂರಿದ ಗುಂಪುಗಾರಿಕೆ. ಪರಸ್ಪರ ಕಾಲೆಳೆತ, ಭಿನ್ನಾಭಿಪ್ರಾಯಗಳು, ಶಕ್ತವಾದ ಕನ್ನಡ ರ್ಯಾಪ್ ಸಂಸ್ಕೃತಿಯೊಂದನ್ನು ಹುಟ್ಟುಹಾಕಲು ಇದ್ದ ಅವಕಾಶಗಳನ್ನು ನೀರಿಗೆ ಚೆಲ್ಲಿದಂತಾಯಿತು. ಮನರಂಜನೆಗೆ ಹಾಡು ಮಾಡುವ ಬದಲಿಗೆ ಒಬ್ಬ ರ್ಯಾಪರ್ ಮತ್ತೊಬ್ಬ ರ್ಯಾಪರ್ ಅನ್ನು ಹೀಗಳೆಯಲು ಹಾಡುಗಳನ್ನು ಬರೆಯುವ ಮಟ್ಟ ತಲುಪಿತು ಕನ್ನಡ ರ್ಯಾಪ್ ದುನಿಯಾ. ರ್ಯಾಪರ್‌ಗಳ ನಡುವೆ ದೊಡ್ಡ ಮಟ್ಟದ ಗುಂಪುಗಾರಿಕೆ ಪ್ರಾರಂಭವಾಯಿತು. ಇದನ್ನು ವಿವರಿಸಲು ಪ್ರತ್ಯೇಕ ಲೇಖನದ ಅವಶ್ಯಕತೆಯೇ ಇದೆ.

    ಕನ್ನಡದಲ್ಲಿ ಈಗಲೂ ಅಲ್ಲೊಂದು ಇಲ್ಲೊಂದು ಒಳ್ಳೆಯ ರ್ಯಾಪ್ ಹಾಡುಗಳು ಬರುತ್ತಲೇ ಇವೆ. ದಶಕದಿಂದ ರ್ಯಾಪ್ ಮಾಡುತ್ತಾ ಬಂದ ಕೆಲವರು ಸಭ್ಯತೆ ಇತಿ-ಮಿತಿಯಲ್ಲಿ. ಎಲ್ಲರೂ ಗುನುಗಬಹುದಾದ ಹಾಡುಗಳನ್ನು ನೀಡುತ್ತಲೇ ಇದ್ದಾರೆ. ಸಿನಿಮಾಗಳಲ್ಲಿಯೂ ರ್ಯಾಪ್ ಹಾಡುಗಳ ಬಳಕೆ ಆಗೊಮ್ಮೆ-ಈಗೊಮ್ಮೆ ಆಗುವುದುಂಟು. ಇತ್ತೀಚಿನ 'ಫ್ರೆಂಚ್ ಬಿರಿಯಾನಿ' ಸಿನಿಮಾದ 'ಬೆಂಗಳೂರು' ಹಾಡು ಇದಕ್ಕೆ ಉದಾಹರಣೆ. ಕನ್ನಡ ರ್ಯಾಪ್‌ ರಂಗದ ಮೇಲೆ ತೀರಾ ಭರವಸೆ ಕಳೆದುಕೊಳ್ಳುವ ಸಮಯ ಇನ್ನೂ ಬಂದಿಲ್ಲ.
    ಕನ್ನಡ ರ್ಯಾಪ್ ದುನಿಯಾದ ಇನ್ನಷ್ಟು ಮಾಹಿತಿ ಮುಂದಿನ ಲೇಖನದಲ್ಲಿ.

    English summary
    Kannada rap culture in more than one decade old. But Kannada rapper content not meeting the expectation.
    Saturday, August 29, 2020, 19:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X