ಸೋ ಬ್ಯೂಟಿಫುಲ್ ಸೋ ಎಲಿಗೆಂಟ್, ಮೋಯೆ ಮೋಯೆ ಸೇರಿ ಈ ವರ್ಷ ಹೆಚ್ಚು ಸರ್ಚ್ ಮಾಡಿದ ಟಾಪ್ 10 ಮೀಮ್ಸ್
ಪ್ರತಿ ವರ್ಷ ಕೆಲವೊಂದು ಮೀಮ್ಸ್‌ಗಳು ಟ್ರೆಂಡ್ ಆಗುತ್ತಲೇ ಇರುತ್ತವೆ. 2022 ರಲ್ಲಿ ಕಡಲೆಕಾಯಿ ಮಾರಾಟ ಮಾಡುವ ಬೆಂಗಾಲಿ ವ್ಯಕ್ತಿ ಕಚ್ಚಾ ಬದಾಮ್ ಹಾಡು ಸೂಪರ್ ಹಿಟ್ ಆಗಿತ್ತು. ಅದರ ಜೊತೆಗೆ ಮತ್ತಷ್ಟು ಮೀಮ್ಸ್‌ಗಳು ಟ್ರೆಂಡ್ ಸ್ಋಷ್ಟಿ ಮಾಡಿ ಗೂಗಲ್‌ನಲ್ಲಿ ಹುಡುಕಾಡಿದ ಟಾಪ್ ಲಿಸ್ಟ್‌ಗೆ ಸೇರಿದ್ದವು.
ಈ ವರ್ಷವೂ ಕೂಡ ಹಲವು ಮೀಮ್ಸ್‌ಗಳನ್ನು ಜನ ಎಂಜಾಯ್ ಮಾಡಿದ್ದಾರೆ. ನಾವಾಡುವ ಚಿಕ್ಕ ಮಾತು, ಹೇಳಿಕೆ, ಹಾಡು ಕೂಡ ಮೀಮ್ಸ್ ರೂಪ ಪಡೆದು ಹಿಟ್ ಆಗುತ್ತವೆ. 2023 ರಲ್ಲಿ ವೈರಲ್ ಆಗಿ ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆದ ಟಾಪ್ 10 ಮೀಮ್ಸ್‌ಗಳ ಪಟ್ಟಿ ಇಲ್ಲಿದೆ.

ಗೂ್ಲ್ ಈ ವರ್ಷ ಹೆಚ್ಚು ಸರ್ಚ್ ಆದ ಟಾಪ್ 10 ಮೀಮ್ಸ್ ಟ್ರೆಂಟ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ, 'ಭೂಪೇಂದ್ರ ಜೋಗಿ', 'ಸೋ ಬ್ಯೂಟಿಫುಲ್ ಸೋ ಎಲಿಗಂಟ್', 'ಮೋಯೆ ಮೋಯೆ', 'ಆಯೆನ್' ಮತ್ತು 'ಔಕತ್ ದಿಖಾ ದಿ' ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಿದ ಟಾಪ್ 5 ಮೀಮ್‌ಗಳಲ್ಲಿ ಸೇರಿವೆ.
ಭಾರತದಲ್ಲಿ ಹೆಚ್ಚು ಗೂಗಲ್ ಮಾಡಿದ ಟಾಪ್ 10 ಮೀಮ್‌ಗಳು
1. ಭೂಪೇಂದ್ರ ಜೋಗಿ
2. ಸೋ ಬ್ಯೂಟಿಫುಲ್ ಸೋ ಎಲಿಗಂಟ್
3. ಮೋಯೆ ಮೋಯೆ
4. ಆಯಿನ್
5. ಔಕಾತ್ ದಿಖಾ ದಿ
6. ಓಹಿಯೋ
7. ಹುಡುಗರು
8. ಎಲ್ವಿಶ್ ಭಾಯ್
9. ದಿ ವಫೇಲ್ ಹೌಸ್ ನ್ಯೂ ಹೋಸ್ಟ್
10. ಸ್ಮರ್ಫ್ ಕ್ಯಾಟ್
ತುಂಬಾ ಬ್ಯೂಟಿಫುಲ್ ಸೋ ಎಲಿಗಂಟ್ ಜಸ್ಟ್ ಲುಕಿಂಗ್ ಲೈಕ್ ಕ ವಾವ್
ದೆಹಲಿ ಮೂಲದ ಬಟ್ಟೆ ಅಂಗಡಿ ಓನರ್ ಆದ ಜಾಸ್ಮಿನ್ ಕೌರ್ ಅವರು ತಮ್ಮ ಸೂಟ್‌ಗಳನ್ನು ಮಾರಾಟ ಮಾಡುವಾಗ 'ಜಸ್ಟ್ ಲುಕಿಂಗ್ ಲೈಕ್ ಎ ವಾವ್' ಎಂದು ಹೇಳುವ ರೀಲ್ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆದ ನಂತರ ರಾತ್ರೋರಾತ್ರಿ ಟ್ರೆಂಡ್ ಕ್ರಿಯೇಟ್ ಮಾಡಿತ್ತು. ಈ ಟ್ರೆಂಡ್ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ತುಂಬಾ ವೈರಲ್ ಆಗಿದ್ದು, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ಸನ್ಯಾ ಮಲ್ಹೋತ್ರಾ ಕೂಡ ರೀಲ್ಸ್ ಮಾಡಿದ್ದರು.
ಮೋಯೆ ಮೋಯೆ
ಈ ಹೆಚ್ಚು ಟ್ರೆಂಟ್ ಆದ ಮೀಮ್‌ನಲ್ಲಿ ಮೋಯೆ ಮೋಯೆಗೂ ಸ್ಥಾನವಿದೆ. ಟಿಕ್‌ಟಾಕ್‌ನಲ್ಲಿ ವೈರಲ್ ಆಗಿರುವ ತೇಯಾ ಡೋರಾ ಅವರ ಸರ್ಬಿಯನ್ ಹಾಡು ಈ ಮೋಯೆ ಮೋಯೆ ಟ್ರೆಂಡ್‌ಗೆ ಕಾರಣ. ಯೂಟ್ಯೂಬ್‌ನಲ್ಲಿ 62 ಮಿಲಿಯನ್ ವೀಕ್ಷಣೆಗಳನ್ನು ಹೊಂದಿರುವ ತೇಯಾ ಡೋರಾ ಅವರ ಝಾನಮ್ ಹಾಡಿನ ಕೋರಸ್‌ನಿಂದ 'ಮೋಯೆ ಮೋಯೆ' ಬಂದಿದೆ.

ಈ ಹಾಡಿನ ಅರ್ಥವೇ ತಲೆ ಕೆಳಗಾಗುವಂತೆ ನಮ್ಮವರು ಅದನ್ನು ಬಳಸಿದ್ದಾರೆ. ದುರಂತದ ಈ ಹಾಡನ್ನು ತಮ್ಮ ರೀಲ್‌ಗಳಿಗೆ ಹಾಸ್ಯಮಯ ತಿರುವನ್ನು ನೀಡಲು ಬಳಸಿದ್ದಾರೆ. ಈ ಟ್ರೆಂಡ್ ಎಷ್ಟು ಜನಪ್ರಿಯವಾಯಿತು ಎಂದರೆ ದೆಹಲಿ ಪೊಲೀಸರು ಮತ್ತು ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಕೂಡ ಇದನ್ನು ಬಳಸಿದ್ದಾರೆ.


Click it and Unblock the Notifications










