ಮನೆಬಿಟ್ಟು ಬಂದು ಮದ್ವೆ.. ಒಳ್ಳೆದು ಮಾಡೋಕೆ ಹೋಗಿ ಕೇಸ್; ತಾರೇಶ್- ಸ್ವಾತಿ ರಿಯಲ್ ಸ್ಟೋರಿ

ಸೋಶಿಯಲ್ ಮೀಡಿಯಾದಲ್ಲಿ ರಾತ್ರೋರಾತ್ರಿ ಕೆಲವರು ಫೇಮಸ್ ಆಗಿಬಿಡುತ್ತಾರೆ. ರೀಲ್ಸ್‌ನಿಂದ ಆರಂಭಿಸಿ ಬಳಿಕ ಯೂಟ್ಯೂಬ್ ಚಾನಲ್ ಮಾಡಿಕೊಂಡು ಒಳ್ಳೆ ಆದಾಯ ಗಳಿಸುವವರು ಇದ್ದಾರೆ. ಗಂಡ- ಹೆಂಡತಿ ಸೇರಿ ರೀಲ್ಸ್ ಮಾಡೋದು, ತಮ್ಮ ದಿನ ನಿತ್ಯದ ಚಟುವಟಿಕೆಗಳನ್ನೇ ಕಂಟೆಂಟ್ ಆಗಿ ಕ್ರಿಯೇಟ್ ಮಾಡಿ ಗಮನ ಸೆಳೆಯುತ್ತಾರೆ.

ನೀವು ಸೋಶಿಯಲ್ ಮೀಡಿಯಾದಲ್ಲಿ ತಾರೇಶ್ ಹಾಗೂ ಸ್ವಾತಿ ಜೋಡಿಯನ್ನು ಒಮ್ಮೆ ಆದರೂ ನೋಡಿರ್ತೀರಾ. ಕೋಯಂಬತ್ತೂರಿನಲ್ಲಿ ನೆಲೆಸಿರುವ ದಂಪತಿ ಭಿನ್ನ ವಿಭಿನ್ನ ರೀಲ್ಸ್ ಮಾಡಿ ಮೋಡಿ ಮಾಡುತ್ತಾರೆ. ಅವರಿಬ್ಬರ ಕಾಮಿಡಿ ರೀಲ್ಸ್‌ಗೆ ದೊಡ್ಡ ಅಭಿಮಾನಿ ಬಳಗವಿದೆ. ಇನ್ನು ಕೆಲಸ ಹುಡುಕುವವರಿಗೆ ಮಾರ್ಗದರ್ಶನ ನೀಡುವ ಮೂಲಕವೂ ಗಮನ ಸೆಳೆಯುತ್ತಿದ್ದಾರೆ. ಸದಾ ಕಾಮಿಡಿ ರೀಲ್ಸ್‌ನಿಂದ ನಗಿಸೋ ಜೋಡಿ ನಿಜ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿ ಈಗ ನಿಟ್ಟುಸಿರು ಬಿಟ್ಟಿದ್ದಾರೆ.

Social Media Stars Tharesh and Swathi A Love Story That Defied All Odds

ತಾರೇಶ್ ಹಾಗೂ ಸ್ವಾತಿ ಅವರದ್ದು ಲವ್ ಮ್ಯಾರೇಜ್. ಪೋಷಕರ ಒಪ್ಪಿಗೆ ಇಲ್ಲದೇ ಸ್ವಾತಿ ಮನೆಯಿಂದ ಹೊರಬಂದು ಪ್ರೀತಿಸಿದ ಹುಡುಗನ ಕೈ ಹಿಡಿದಿದ್ದಾರೆ. ಇಬ್ಬರೂ ಕೂಡ ಹಾಸನ ಮೂಲದವರು. ಕಾಲೇಜು ದಿನಗಳಲ್ಲೇ ಪ್ರೀತಿ ಹುಟ್ಟಿತ್ತು. ಹಲವು ವರ್ಷಗಳ ಕಾಲ ಆ ಪ್ರೀತಿ ಮುಂದುವರೆದು ಕೊನೆಗೆ ಮದುವೆಯ ಮುದ್ರೆ ಬಿದ್ದಿತ್ತು. ತಮ್ಮಿಬ್ಬರು ಲವ್, ಮ್ಯಾರೇಜ್ ಹಾಗೂ ಸೋಶಿಯಲ್ ಮೀಡಿಯಾ ಕ್ರೇಜ್ ಬಗ್ಗೆ ಜೋಡಿ 'ನ್ಯೂಸೋ ನ್ಯೂಸು' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.

ಜೋಡಿ ಬಹುತೇಕ ಕಾಮಿಡಿ ರೀಲ್ಸ್ ಮಾಡುತ್ತಾರೆ. ಆದರೆ ಕೆಲವರು ಬಹಳ ಕೆಟ್ಟದಾಗಿ ಕಾಮೆಂಟ್ ಮಾಡಿ ಟ್ರೋಲ್ ಮಾಡುತ್ತಾರೆ. ಆ ಬಗ್ಗೆ ಸ್ವಾತಿ ಬಹಳ ನೊಂದಿರುವುದು ಇದೆ. ಕಣ್ಣೀರು ಹಾಕಿದ್ದು ಇದೆ. ಬಹಳಿ ಟ್ರೋಲ್ ಮಾಡುವವರ ಬಗ್ಗೆ ಹೆದರದೇ ತಮಗೆ ಬೆಂಬಲ ಸೂಚಿಸುವವರಿಗಾಗಿ ರೀಲ್ಸ್ ಮಾಡಿ ರಂಜಿಸುವ ಪ್ರಯತ್ನ ಮಾಡುತ್ತಿದ್ದಾರೆ. ತಮ್ಮ ಮಾರ್ಗದರ್ಶನದಿಂದ ಯಾರಿಗಾದರೂ ಕೆಲಸ ಸಿಕ್ಕರೆ ಅದಕ್ಕೆ ಹರಕೆ ಹೊತ್ತು ತೀರಿಸುತ್ತಾರೆ ತಾರೇಶ್. ಈ ಎಲ್ಲಾ ವಿಚಾರಗಳ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Social Media Stars Tharesh and Swathi A Love Story That Defied All Odds

ತಾರೇಶ್- ಸ್ವಾತಿ ಲವ್ ಸ್ಟೋರಿ

ಹಾಸನದ ವಿದ್ಯಾನಿಕೇತನ್ ಪಾಲಿಟೆಕ್ನಿಕ್‌ನಲ್ಲಿ ಓದುವಾಗ ಶುರುವಾದ ಪರಿಚಯ ಬಳಿಕ ಪ್ರೀತಿ ತಿರುಗಿತ್ತು. ಮೊದಲ ನೋಟದಲ್ಲೇ ಸ್ವಾತಿ ಮೇಲೆ ನನಗೆ ಮನಸ್ಸಾಗಿತ್ತು. ಆದರೆ ಸ್ವಾತಿಗೆ ಆರಂಭದಲ್ಲಿ ಇಷ್ಟವಿರಲಿಲ್ಲ. ಕೆಲವೇ ದಿನಗಳ ಬಳಿಕ ಸ್ವಾತಿ ಬೇರೆ ಕಾಲೇಜಿಗೆ ಹೋಗಿದ್ದರು. ಬಳಿಕ ಫೋನ್ ನಂಬರ್ ಪಡೆದು ನಾನು ಮೆಸೇಜ್ ಮಾಡಲು ಆರಂಭಿಸಿದ್ದೆ. ಆರಂಭದಲ್ಲಿ ನಾನು ಪೊಲೀಸ್ ಆಫೀಸರ್ ಮಗಳು ಎಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದರು.

ಬಳಿಕ ಅಸಲಿ ವಿಚಾರ ತಿಳಿದು ತಾರೇಶ್ ಪದೇ ಪದೆ ಮೆಸೇಜ್, ಫೋನ್ ಮಾಡಿ ಇಬ್ಬರ ನಡುವೆ ಪ್ರೀತಿ ಮೂಡಿತ್ತು. ಕೊನೆಗೆ ತಾರೇಶ್ ಪ್ರಪೋಸ್ ಮಾಡಿದ್ದರಂತೆ. ಆಗಷ್ಟೆ ಹಾಸನದಲ್ಲಿ ಹೊಸ ಬಸ್‌ಸ್ಯಾಂಡ್ ನಿರ್ಮಾಣವಾಗಿತ್ತು. ನನ್ನ ಮೇಲೆ ನಿನಗೆ ಇಷ್ಟ ಇದ್ದರೆ ಪಿಂಕ್ ಡ್ರೆಸ್ ತೊಟ್ಟು ಅಲ್ಲಿಗೆ ಬರಲು ಹೇಳಿದ್ದೆ. ಸ್ವಾತಿ ಬಂದಳು, ನನ್ನ ಪ್ರೀತಿ ಒಪ್ಪಿಕೊಂಡಿದ್ದಳು. ಹೀಗೆ ನಮ್ಮ ಪ್ರೇಮ್ ಕಹಾನಿ ಶುರುವಾಯಿತು ಎಂದು ಇಬ್ಬರೂ ಹೇಳಿದ್ದಾರೆ.

ಸ್ವಾತಿ ಮನೆಯಲ್ಲಿ ವಿರೋಧ

ಪ್ರೀತಿ ಮಾಡಲು ಆರಂಭಿಸಿದ 3 ತಿಂಗಳಿಗೆ ಸ್ವಾತಿ ಅವರನ್ನು ತಾರೇಶ್ ತಮ್ಮ ಮನೆಗೆ ಕರೆದುಕೊಂಡು ಹೋಗಿ ಪರಿಚಯಿಸಿದ್ದರು. ಇವಳನ್ನೇ ನಾನು ಮದುವೆ ಆಗುವುದು ಎಂದು ಪೋಷಕರಿಗೆ ಹೇಳಿದ್ದರಂತೆ. ಅವ್ರು ಸರಿ ಎಂದು ಒಪ್ಪಿಕೊಂಡರು. ಆದರೆ ಸ್ವಾತಿ ಪೋಷಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆರಂಭದಲ್ಲಿ ಅಕ್ಕ, ಅಪ್ಪನಿಗೆ ಇಷ್ಟವಿದ್ದರೂ ಬಳಿಕ ಯಾಕೋ ಹಿಂದೇಟು ಹಾಕಿದ್ದರು. ನಾನು ಅವರ ಮಗಳನ್ನು ಹೇಗೆ ನೋಡಿಕೊಳ್ತಿನೋ ಎನ್ನುವ ಭಯ ಸ್ವಾತಿ ಪೋಷಕರಿಗೆ ಬಂದಿರಬಹುದು. ಅದನ್ನು ತಪ್ಪು ಎನ್ನಲು ಸಾಧ್ಯವಿಲ್ಲ ಎಂದು ತಾರೇಶ್ ತಿಳಿಸಿದ್ದಾರೆ.

ಇವತ್ತಿಗೂ ನಮ್ಮನ್ನು ನಮ್ಮ ಪೋಷಕರು ಒಪ್ಪಿಕೊಂಡಿಲ್ಲ ಎಂದು ಸ್ವಾತಿ ಹೇಳಿದ್ದಾರೆ. ಇಬ್ಬರ ಮನೆಯಲ್ಲಿ ನಮಗೆ ಬೇರೆಯವರ ಜೊತೆ ಮದುವೆ ಮಾಡುವ ಪ್ರಯತ್ನಗಳು ನಡೀತು. ಆದರೆ ನಾವಿಬ್ಬರೂ ಒಬ್ಬರನ್ನು ಒಬ್ಬರು ಪ್ರೀತಿಸಿ ಅರ್ಥ ಮಾಡಿಕೊಂಡಿದ್ದೆವು. ಹಾಗಾಗಿ ಬೇರೆ ಮದುವೆಗೆ ಒಪ್ಪಲಿಲ್ಲ. ಕೊನೆಗೆ ಯಾರಿಗೂ ಹೇಳದೇ ದೇವಸ್ಥಾನದಕ್ಕೆ ಹೋಗಿ ಇಬ್ಬರೂ ಮದುವೆ ಮಾಡಿಕೊಂಡಿದ್ದೆವು ಎಂದು ತಾರೇಶ್ ವಿವರಿಸಿದ್ದಾರೆ.

ಕೋಯಂಬತ್ತೂರಿನ ದೊಡ್ಡ ಹೋಟೆಲ್‌ನಲ್ಲಿ ಸ್ವಾತಿ ಕೆಲಸ ಮಾಡುತ್ತಿದ್ದಾರೆ. ತಾರೇಶ್ ಅಲ್ಲೇ ಖಾಸಗಿ ಕಂಪನಿಯಲ್ಲಿ ಉದ್ಯೋಗಿ ಆಗಿದ್ದಾರೆ. ಕೆಲವೊಮ್ಮೆ ಅತ್ತೆ ಮಾವನ ಜೊತೆ ಸೇರಿ ಸ್ವಾತಿ ರೀಲ್ಸ್ ಮಾಡುತ್ತಾರೆ. ಮೂರ್ನಾಲ್ಕು ಸೋಶಿಯಲ್ ಮೀಡಿಯಾ ಅಕೌಂಟ್ ಇದೆ. ಯುಟ್ಯೂಬ್ ಚಾನಲ್ ಸಹ ಹೊಂದಿದ್ದಾರೆ. ಕೋಚಿಂಗ್ ಸೆಂಟರ್‌ಗೆ ಹೋಗಿ ತಾರೇಶ್ ಮೋಸ ಹೋಗಿದ್ದರಂತೆ. ಅದೇ ಕಾರಣಕ್ಕೆ ಅಂತಹ ಫೇಕ್ ಕೋಚಿಂಗ್ ಸೆಂಟರ್‌ಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾತನಾಡುತ್ತಾರೆ. ಇದೇ ಕಾರಣಕ್ಕೆ ಅವರ ವಿರುದ್ಧ ಕೇಸ್ ದಾಖಲಾಗಿತ್ತಂತೆ. ಆ ವಿಚಾರವನ್ನು ಹಂಚಿಕೊಂಡಿದ್ದಾರೆ.

More from Filmibeat

English summary
Meet Tharesh and Swathi, a couple from Coimbatore who turned their love story into laughter-filled reels on social media. From college romance to family opposition and online fame, their journey is both inspiring and emotional.
Read more about: social media sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X