ಮೇಕಪ್ ಹಾಕಲ್ಲ.. ಎಕ್ಸ್‌ಪೋಸ್ ಮಾಡಲ್ಲ; ಸಾಯಿ ಪಲ್ಲವಿ ಬಗ್ಗೆ ಇಂಟ್ರೆಸ್ಟಿಂಗ್ ಸಂಗತಿಗಳು

ತಮಿಳುನಾಡಿನಲ್ಲಿ ಬಡಗ ಸಮುದಾಯದ ಕುಟುಂಬದಲ್ಲಿ ಹುಟ್ಟಿ ಬೆಳೆದ ಸಾಯಿ ಪಲ್ಲವಿ ಈಗ ಸ್ಟಾರ್ ನಟಿಯಾಗಿದ್ದಾರೆ. ಆರಂಭದಲ್ಲಿ ತಮಿಳು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ಚೆಲುವೆ 'ಪ್ರೇಮಂ' ಚಿತ್ರದಲ್ಲಿ ನಟಿಸಿ ಮೋಡಿ ಮಾಡಿದ್ದರು. ಬಳಿಕ ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.

ಒಳ್ಳೆ ಡ್ಯಾನ್ಸರ್ ಕೂಡ ಆಗಿರುವ ಸಾಯಿ ಪಲ್ಲವಿ ಸಾಕಷ್ಟು ವಿಚಾರಗಳಲ್ಲಿ ಬೇರೆ ನಟಿಯರಿಗಿಂತ ಬಹಳ ಭಿನ್ನ. ಇದೇ ಕಾರಣಕ್ಕೆ ಸಾಕಷ್ಟು ಜನರಿಗೆ ಆಕೆ ಇಷ್ಟವಾಗಿದ್ದಾರೆ. ಇನ್ನು ಸಿನಿಮಾಗಳಲ್ಲಿ ನಟಿಸೋದು ಮಾತ್ರವಲ್ಲ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೂ ಆಕೆ ಸುದ್ದಿ ಆಗಿದ್ದರು. ಇದೇ ಕಾರಣಕ್ಕೆ ಭಾರೀ ಟೀಕೆ, ಟ್ರೋಲ್ ಎದುರಿಸುವಂತಾಗಿತ್ತು. ದಕ್ಷಿಣದ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಸಾಯಿ ಪಲ್ಲವಿ 'ರಾಮಾಯಣ' ಚಿತ್ರದ ಸೀತೆ ಪಾತ್ರದ ಮೂಲಕ ಬಾಲಿವುಡ್ ಅಂಗಳಕ್ಕೆ ಜಿಗಿದಿದ್ದಾರೆ.

Some Interesting facts on Ramayana Tamil actress Sai Pallavi

ಎಂಬಿಬಿಎಸ್ ಓದಿಕೊಂಡಿರುವ ಸಾಯಿ ಪಲ್ಲವಿ ಅಚಾನಕ್ ಆಗಿ ಚಿತ್ರರಂಗಕ್ಕೆ ಬಂದವರು. ಒಂದೆರಡು ಸಿನಿಮಾಗಳಲ್ಲಿ ನಟಿಸಿ ಹೋಗೋಣ ಎಂದುಕೊಂಡವರು ಇಲ್ಲೇ ಉಳಿದುಬಿಟ್ಟರು. ಈ ಕ್ಷಣಕ್ಕೂ ಸಿನಿಮಾ ಅವಕಾಶ ಸಿಗದಿದ್ದರೆ ಸಣ್ಣ ಕ್ಲಿನಿಕ್ ತೆರೆದು ರೋಗಿಗಳಿಗೆ ಚಿಕಿತ್ಸೆ ನೀಡಲು ಬಯಸುತ್ತಿದ್ದಾರೆ. ಸಾಯಿ ಪಲ್ಲವಿ ಕುರಿತು ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳಿವೆ. ಮುಂದೆ ಓದಿ.

ಜಾಹೀರಾತುಗಳಲ್ಲಿ ನಟಿಸಲ್ಲ

ಸಾಯಿಪಲ್ಲವಿ ಸಿಕ್ಕಾಪಟ್ಟೆ ಫೇರ್ ಆಗಿ ಇದ್ದಾರೆ. ಇನ್ನು ಮುಖದ ಮೇಲೆ ಸಾಕಷ್ಟು ಮೊಡವೆಗಳಿವೆ. ಆದರೆ ಯಾವತ್ತೂ ಈ ಬಗ್ಗೆ ಆಕೆ ಬೇಸರಿಸಿಕೊಂಡಿದ್ದಿಲ್ಲ. 'ಪ್ರೇಮಂ' ಚಿತ್ರದಲ್ಲಿ ನಟಿಸಿದ್ದಾಗ ಜನ ಹೇಗೆ ಸ್ವೀಕರಿಸುತ್ತಾರೆ ಎಂದು ಆತಂಕ ಪಟ್ಟಿದ್ದು ನಿಜ. ವಿದ್ಯಾಭ್ಯಾಸಕ್ಕಾಗಿ ಜಾರ್ಜಿಯಾದಲ್ಲಿ ಒಂದಷ್ಟು ಸಿನ ಸಾಯಿ ಪಲ್ಲವಿ ನೆಲೆಸಿದ್ದರು. ತುಂಬಾ ಫೇರ್ ಆಗಿರುವ ಜಾರ್ಜಿಯಾ ಜನರನ್ನು ನೋಡಿ ನನ್ನ ಪಿಂಪಲ್ ಮುಖ ನೋಡಿದಾಗ ಭಯವಾಗುತ್ತಿತ್ತು ಎಂದು ಸಾಯಿ ಪಲ್ಲವಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಸಿನಿಮಾ ನಟ, ನಟಿಯರಿಗೆ ಬಹಳ ಸುಲಭವಾಗಿ ಜಾಹೀರಾತುಗಳು ಸಿಗುತ್ತವೆ. ತಾವು ಬಳಸುತ್ತಾರೋ ಇಲ್ಲವೋ ಯಾವುದಾದರೂ ಉತ್ಪನ್ನಗಳಿಗೆ ರಾಐಭಾರಿಗಳಾಗಿ ಆದಾಯ ಗಳಿಸುತ್ತಾರೆ. ಆದರೆ ಸಾಯಿ ಪಲ್ಲವಿ ಸ್ಕಿನ್‌ಸ್ಕೇರ್ ಪ್ರಚಾರದ ಅವಕಾಶ ಸಿಕ್ಕಾಗ 2 ಕೋಟಿ ರೂ. ಆಫರ್ ಒಲ್ಲೆ ಎಂದಿದ್ದರು. "ಇದು ಭಾರತೀಯರ ಬಣ್ಣ. ವಿದೇಶಿಯರ ಬಳಿ ಹೋಗಿ ಯಾಕೆ ಇಷ್ಟು ಬೆಳ್ಳಗಿದ್ದೀರಿ ಎಂದು ಕೇಳಲು ಆಗಲ್ಲ. ನಮಗೆ ಆ ರೀತಿ ಆಗಬೇಕು ಎಂದು ಯೋಚಿಸೋಕೆ ಸಾಧ್ಯವಿಲ್ಲ. ಅದು ಅವರ ಬಣ್ಣ, ಇದು ನಮ್ಮ ಬಣ್ಣ. ಈ ಜಾಹೀರಾತಿನಿಂದ ಬಂದ ಹಣ ನಾನು ಏನು ಮಾಡಲಿ, ನಾನು ತಿನ್ನೋದು 3 ಚಪಾತಿ. ದೊಡ್ಡ ಆಸೆಗಳಿಲ್ಲ" ಎಂದು ಸಾಯಿ ಪಲ್ಲವಿ ಹೇಳಿದ್ದರು.

Some Interesting facts on Ramayana Tamil actress Sai Pallavi

ಸಾಯಿ ಪಲ್ಲವಿ ಡ್ಯಾನ್ಸ್

ತಮಿಳು ನಟಿ ಸಾಯಿ ಪಲ್ಲವಿ ಅದ್ಭುತ ಡ್ಯಾನ್ಸರ್. ಆಕೆ ಡ್ಯಾನ್ಸ್ ಮಾಡುತ್ತಿದ್ದರೆ ಪಕ್ಕದಲ್ಲೊ ಯಾರೇ ಇದ್ದರೂ ಅವರ ಕಡೆಗೆ ನೋಡುಗರ ಗಮನ ಹೋಗುವುದಿಲ್ಲ. ಕಾರಣ ತಮ್ಮ ಡ್ಯಾನ್ಸ್‌ ಮೂಲಕ ಅಷ್ಟರಮಟ್ಟಿಗೆ ಮೋಡಿ ಮಾಡಿಬಿಡುತ್ತಾರೆ. ನಿಮಗೆ ಗೊತ್ತಾ ಸಾಯಿ ಪಲ್ಲವಿ ಯಾವುದೇ ಡ್ಯಾನ್ಸ್ ಕ್ಲಾಸ್‌ಗೆ ಹೋಗದೇ ತಮ್ಮಷ್ಟಕ್ಕೆ ತಾವೇ ಕುಣಿಯೋದು ಕಲಿತವರು. ಚಿಕ್ಕಂದಿನಿಂದ ಮಾಧುರಿ ದೀಕ್ಷಿತ್ ಹಾಗೂ ಐಶ್ವರ್ಯಾ ರೈ ಡ್ಯಾನ್ಸ್ ನೋಡಿ ಅವರಂತೆ ತಾವು ಹೆಜ್ಜೆ ಹಾಕಲು ಆರಂಭಿಸಿದ್ದರು.

15 ವರ್ಷ ವಯಸ್ಸಿನಲ್ಲೇ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಹೆಜ್ಜೆ ಹಾಕಲು ಆರಂಭಿಸಿದ್ದರು. "ಉಂಗಲಿಲ್ ಯಾರ್ ಅಡತ್ತು ಪ್ರಭುದೇವ' ಎಂದು ತಮಿಳು ಡ್ಯಾನ್ಸ್ ಶೋನಲ್ಲಿ ಮೊದಲಿಗೆ ಕಾಣಿಸಿಕೊಂಡಿದ್ದರು. ಬಳಿಕ 'ಢೀ' ಎಂಬ ಡ್ಯಾನ್ಸ್ ಶೋನಲ್ಲಿ ಕೂಡ ಕುಣಿದು ರಂಗೇರಿಸಿದ್ದರು. ತಮಿಳಿನ 'ಕಸ್ತೂರಿ ಮಾನ್' ಹಾಗೂ 'ಧಾಂ ಧೂಂ' ಎಂಬ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಆದರೆ ಅದೆಲ್ಲಾ ಸಣ್ಣಪುಟ್ಟ ಪಾತ್ರಗಳು. 'ಪ್ರೇಮಂ' ನಾಯಕಿಯಾಗಿ ಆಕೆಯ ಮೊದಲ ಸಿನಿಮಾ. ಜಾರ್ಜಿಯಾದಲ್ಲಿ ಇದ್ದಾಗ 'ಟಾಂಗಾ' ಎಂಬ ಡ್ಯಾನ್ಸ್ ಪ್ರಕಾರ ಕಲಿತಿದ್ದರು.

ತುಂಡು ಬಟ್ಟೆ ಧರಿಸಲ್ಲ

ಇತ್ತೀಚೆಗೆ ನಟಿಯರು ತುಂಡು ಬಟ್ಟೆ ಧರಿಸುವುದು ಸರ್ವೇ ಸಾಮಾನ್ಯ. ಆದರೆ ಸಾಯಿ ಪಲ್ಲವಿ ಮಾತ್ರ ಅದರಿಂದ ದೂರ. ಸದಾ ಪಕ್ಕದ್ಮನೆ ಹುಡುಗಿ ರೀತಿ ಡೀ ಗ್ಲಾಮರಸ್ ರೋಲ್‌ಗಳಲ್ಲಿ ನಟಿಸುತ್ತಾರೆ. ಇದೇ ಕಾರಣಕ್ಕೆ ಆಕೆಯನ್ನು ಇಷ್ಟ ಪಡುವವರ ಸಂಖ್ಯೆ ಕೂಡ ದೊಡ್ಡದಿದೆ. ಹಾಗಂತ ಸಾಯಿ ಪಲ್ಲವಿಗೆ ತುಂಡು ಬಟ್ಟೆ ಧರಿಸುವುದರ ಬಗ್ಗೆ ಯಾವುದೇ ಆಕ್ಷೇಪ ಇಲ್ಲ. ಆದರೆ ತಾವು ಯಾಕೆ ಅದಕ್ಕೆ ಒಪ್ಪುವುದಿಲ್ಲ ಎಂದು ತೆಲುಗಿನ Idreams ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಒಮ್ಮೆ ಹೇಳಿಕೊಂಡಿದ್ದರು.

"ಜಾರ್ಜಿಯಾದದಲ್ಲಿದ್ದಾಗ ಟಾಂಗಾ ಡ್ಯಾನ್ಸ್ ಕ್ಲಾಸ್‌ಗೆ ಸೇರಿದ್ದೆ. ಅಲ್ಲಿ ಡ್ಯಾನ್ಸ್ ಮಾಡಲು ಸ್ಲಿಟ್ ಗೌನ್ ಧರಿಸಬೇಕಿತ್ತು. ನಾನು ಪೋಕಷರ ಒಪ್ಪಿಗೆ ಪಡೆದು ಆ ಬಟ್ಟೆ ಧರಿಸಿ ಡ್ಯಾನ್ಸ್ ಪ್ರಾಕ್ಟೀಸ್ ಮಾಡಿದ್ದೆ. ಆದರೆ 'ಪ್ರೇಮಂ' ಸಿನಿಮಾ ರಿಲೀಸ್ ಬಳಿಕ ನನ್ನ ಟಾಂಗಾ ಡ್ಯಾನ್ಸ್ ವೀಡಿಯೋ ವೈರಲ್ ಆಗಿತ್ತು. ಕೆಲವರು ಅದು ಗ್ಲಾಮರ್, ಎಕ್ಸ್‌ಪೋಸ್ ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಮಾಡಿದ್ದರು. ಅದನ್ನು ನೋಡಿ ನನಗೆ ನಾಚಿಕೆ ಎನಿಸಿತು. ಜನ ಅದನ್ನು ಆ ರೀತಿ ಬಿಂಬಿಸಿದಾಗ ಒಂದು ಭಾವನೆ ಬಂತು. ಜನ ಆ ರೀತಿ ನನ್ನನ್ನು ನೋಡುವುದು ಸರಿಯಲ್ಲ. ಜನರು ನೋಡುವ ಮನಸ್ಥಿತಿ ಬದಲಾಗಬೇಕು. ಆಗ ಮಾತ್ರ ಆ ರೀತಿ ಕಾಣಿಸಿಕೊಳ್ಳುತ್ತೇನೆ" ಎಂದು ನಿರ್ಧರಿಸಿದ್ದಾಗಿ ನೆನಪಿಸಿಕೊಂಡಿದ್ದರು.

ಸಾಯಿ ಪಲ್ಲವಿ ವಿವಾದಗಳು

ನಟಿ ಸಾಯಿ ಪಲ್ಲವಿ ಎರಡು ಬಾರಿ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಟೀಕೆಗೆ ಗುರಿಯಾಗಿದ್ದರು. ಅದು ಇಂದಿಗೂ ಆಕೆಯನ್ನು ಕಾಡುತ್ತಿದೆ. "ಕಾಶ್ಮೀರಿ ಪಂಡಿತರ ಹತ್ಯೆ, ಮುಸ್ಲಿಮರ ಮೇಲೆ ದಾಳಿ ಎರಡೂ ಒಂದೇ" ಎನ್ನುವ ಅರ್ಥದಲ್ಲಿ ಸಾಯಿ ಪಲ್ಲವಿ ನೀಡಿದ್ದ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. "ಪಾಕಿಸ್ತಾನದಲ್ಲಿರುವವರು ಭಾರತೀಯ ಸೇನಯನ್ನು ಉಗ್ರರು ಎಂದುಕೊಳ್ಳುತ್ತಾರೆ, ನಮಗೆ ಅವರ ಸೈನ್ಯ" ಅದೇ ರೀತಿ ಕಾಣುತ್ತದೆ" ಎಂದು ಹೇಳಿ ಸಾಯಿ ಪಲ್ಲವಿ ಮತ್ತೊಮ್ಮೆ ವಿವಾದ ಮೈಮೇಲೆ ಎಳೆದುಕೊಂಡಿದ್ದರು.

ಸಾಯಿ ಪಲ್ಲವಿ ತಮ್ಮ ಹೇಳಿಕೆಗೆ ಸ್ಪಷ್ಟನೆ ಕೊಟ್ಟು ಕ್ಷಮೆ ಕೇಳಿದರೂ ಕೆಲವರು ಆಕೆಯನ್ನು ಇಂದಿಗೂ ವಿರೋಧಿಸುತ್ತಿದ್ದಾರೆ. ಪಹಲ್ಗಾಮ್ ದಾಳಿಯನ್ನು ಖಂಡಿಸಿ ಹಾಗೂ ಆಪರೇಷನ್ ಸಿಂಧೂರ್ ಕಾರ್ಯಚರಣೆಯ ಬಗ್ಗೆ ಬೆಂಬಲಿಸಿ ಸಾಯಿ ಪಲ್ಲವಿ ಪೋಸ್ಟ್ ಮಾಡಿದ್ದರೂ ಆಕೆಯನ್ನು ಕೆಲವರು ಟೀಕಿಸುತ್ತಲೇ ಇದ್ದಾರೆ. ಅಂದು ಆ ರೀತಿ ಮಾತನಾಡಿದೇ ಈಗ ಸತ್ಯ ಗೊತ್ತಾಯ್ತಾ? ಎಂದು ಮೂದಲಿಸಿ ಕಾಮೆಂಟ್ ಮಾಡುತ್ತಿದ್ದಾರೆ.

ಮೇಕಪ್ ಇಲ್ಲದೇ ನಟನೆ

ಇತ್ತೀಚೆಗೆ ತರಹೇವಾರಿ ಮೇಕಪ್‌ಗಳು ಬಂದಿವೆ. ಸಭೆ, ಸಮಾರಂಭಗಳ ಮೇಕಪ್‌ಗಾಗಿ ಮಹಿಳೆಯರು ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ಇನ್ನು ಕ್ಯಾಮರಾ ಮುಂದೆ ನಿಲ್ಲಲು ಮೇಕಪ್ ಬೇಕೇಬೇಕು ಎನ್ನುವವರು ಇದ್ದಾರೆ. ಆದರೆ ಸಾಯಿ ಪಲ್ಲವಿ ಮಾತ್ರ ಮೇಕಪ್ ಇಲ್ಲದೆಯೇ ನಟಿಸುತ್ತಾರೆ. ತಮ್ಮ ಬಗ್ಗೆ ಬಹಳ ಕಾನ್ಫಿಡೆಂಟ್ ಆಗಿರುವ ಆಕೆ ಮೇಕಪ್ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. 'ಪ್ರೇಮಂ' ಚಿತ್ರದ ಚಿತ್ರೀಕರಣದ ವೇಳೆ ನಿರ್ದೇಶಕ ಆಲ್ಫೋನ್ಸ್ ಪುತ್ರೇನ್ ನೀಡಿದ ಪ್ರೋತ್ಸಾಹದಿಂದ ಈ ನಿರ್ಧಾರಕ್ಕೆ ಬಂದಿದ್ದಾಗಿ ಸಾಯಿ ಪಲ್ಲವಿ ಸಂದರ್ಶನವೊಂದರಲ್ಲಿ ಹೇಳಿದ್ದರು.

More from Filmibeat

English summary
Sai Pallavi turns 33: Here are some lesser known facts about the actress;
Read more about: sai pallavi tamil kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X