Don't Miss!
- Sports
Breaking: ಖೋ ಖೋ ಆಟಗಾರ ತೀರ್ಥಹಳ್ಳಿಯ ವಿನಯ್ ಇನ್ನಿಲ್ಲ: ಮೆದುಳು ಜ್ವರಕ್ಕೆ ಬಲಿಯಾದ ಕ್ರೀಡಾಪಟು
- News
Just in: ಹುಬ್ಬಳ್ಳಿಯಿಂದ ವಾರಣಾಸಿಗೆ ವಿಶೇಷ ರೈಲು
- Lifestyle
Today Rashi Bhavishya: ಮಂಗಳವಾರದ ದಿನ ಭವಿಷ್ಯ: ಕರ್ಕ, ತುಲಾ, ಕುಂಭ ರಾಶಿಯವರು ಆರೋಗ್ಯದ ಬಗ್ಗೆ ಜಾಗರೂಕರಾ
- Automobiles
ಹೊಸ ತಂತ್ರಜ್ಞಾನ ಪ್ರೇರಿತ ಹೋಂಡಾ ಸಿಬಿ300ಎಫ್ ಸ್ಟ್ರೀಟ್ಫೈಟರ್ ಬೈಕ್ ಬಿಡುಗಡೆ
- Finance
ಕೇರಳ ಲಾಟರಿ: 'ವಿನ್ ವಿನ್ W-680' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Technology
ಸೋನಿ ಸಂಸ್ಥೆಯಿಂದ ಹೊಸ ಸ್ಮಾರ್ಟ್ಟಿವಿ ಲಾಂಚ್! ಫೀಚರ್ಸ್ ಹೇಗಿದೆ ಗೊತ್ತಾ?
- Travel
ಭಾರತದಲ್ಲಿರುವ ಕೆಲವು ಸ್ಥಳಗಳು ಅಸ್ತಮಾ ರೋಗಿಗಳಿಗೆ ಸಲ್ಪ ಮಟ್ಟದಲ್ಲಿ ಅಪಾಯಕಾರಿಯಾಗಬಹುದು!
- Education
CSB Recruitment 2022 : 66 ಸೈಂಟಿಸ್ಟ್-ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ದಳಪತಿ ವಿಜಯ್ ಬಗ್ಗೆ ನಿಮಗೆ ಗೊತ್ತಿರದ ಆಸಕ್ತಿಕರ ಸಂಗತಿಗಳು ಇಲ್ಲಿವೆ
ತಮಿಳಿನ ಸ್ಟಾರ್ ನಟ ವಿಜಯ್ ಹುಟ್ಟುಹಬ್ಬ ಇಂದು (ಜೂನ್ 22). ಇಂದು ತಮ್ಮ 48ನೇ ಹುಟ್ಟುಹಬ್ಬವನ್ನು ವಿಜಯ್ ಆಚರಿಸಿಕೊಳ್ಳುತ್ತಿದ್ದಾರೆ.
ತಮಿಳಿನ ಈ ಸ್ಟಾರ್, ಭಾರತದಲ್ಲಿಯೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರು. ತಮಿಳಿನಲ್ಲಿ ಭಾರಿ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ವಿಜಯ್ ಅನ್ನು ರಜನೀಕಾಂತ್‌ರ ವಾರಸುದಾರ ಎಂದೂ ಕರೆಯಲಾಗುತ್ತದೆ.
ಬಾಲ ನಟನಾಗಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ವಿಜಯ್ ಸರಿ ಸುಮಾರು 40 ವರ್ಷಗಳಿಂದಲೂ ಚಿತ್ರರಂಗದಲ್ಲಿದ್ದಾರೆ. ತಮಿಳಿನ ಅತಿ ಶ್ರೀಮಂತ ನಟರಲ್ಲಿ ಒಬ್ಬರಾಗಿರುವ ವಿಜಯ್ ಸಿನಿಮಾ ಮಾತ್ರವೇ ಅಲ್ಲದೆ ತಮ್ಮ ಸಾಮಾಜಿಕ ಕಾರ್ಯಗಳಿಂದಲೂ ಪ್ರಸಿದ್ಧರೂ. ನಟ ವಿಜಯ್ ಬಗ್ಗೆ ಹೆಚ್ಚು ಮಂದಿಗೆ ಗೊತ್ತಿಲ್ಲದ ಕೆಲವು ಆಸಕ್ತಿಕರ ಸಂಗತಿಗಳು ಇಲ್ಲಿವೆ.

ಬಾಲನಟನಾಗಿ ನಟಿಸಿದ್ದ ನಟ ವಿಜಯ್
ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದ ವಿಜಯ್‌ರ ತಾಯಿ ಹಿಂದು. ಹಾಗಾಗಿ ವಿಜಯ್ ಎರಡೂ ಧರ್ಮದ ಬಗ್ಗೆ ಅಪಾರ ಗೌರವ, ಪ್ರೀತಿ ಹೊಂದಿದ್ದಾರೆ. ವಿಜಯ್ ತಂದೆ ಎಸ್‌ಎ ಚಂದ್ರಶೇಖರ್ ತಮಿಳು ಚಿತ್ರರಂಗದ ಜನಪ್ರಿಯ ಸಿನಿಮಾ ನಿರ್ದೇಶಕ ಹಾಗೂ ನಿರ್ಮಾಪಕ. ತಂದೆ ನಿರ್ದೇಶನದ ಹಲವು ಸಿನಿಮಾಗಳಲ್ಲಿ ವಿಜಯ್ ಬಾಲನಟನಾಗಿ ನಟಿಸಿದ್ದಾರೆ. ನಂತರ ವಿಜಯ್ ನಾಯಕನಾದ ಮೊದಲ ಸಿನಿಮಾವನ್ನು ಸಹ ತಂದೆ ಎಸ್‌ಎ ಚಂದ್ರಶೇಖರ್ ಅವರೇ ನಿರ್ದೇಶನ ಮಾಡಿದರ. ನಿರ್ಮಾಣ ಮಾಡಿದ್ದು ಅವರ ತಾಯಿ ಶೋಭಾ.

ತಂಗಿಯ ಮೇಲೆ ವಿಜಯ್‌ಗೆ ಅಪಾರ ಪ್ರೇಮ
ವಿಜಯ್ ಬಾಲ್ಯದಲ್ಲಿಯೇ ತಮ್ಮ ತಂಗಿಯನ್ನು ಕಳೆದುಕೊಂಡರು. ತಂಗಿ ತೀರಿಕೊಂಡಾಗ ವಿಜಯ್‌ಗೆ ಇನ್ನೂ ಒಂಬತ್ತು ವರ್ಷ ವಯಸ್ಸು. ತಂಗಿಯ ಸಾವು ವಿಜಯ್ ಮನಸ್ಸಿಗೆ ತೀವ್ರ ಆಘಾತ ತಂದಿತ್ತು. ತಂಗಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ವಿಜಯ್ ಆ ನೋವಿನಿಂದ ಈಗಲೂ ಹೊರಗೆ ಬಂದಿಲ್ಲ. ವಿಜಯ್ ಸ್ಥಾಪಿಸಿದ ನಿರ್ಮಾಣ ಸಂಸ್ಥೆಗೆ ತಂಗಿಯ ಹೆಸರನ್ನು ಇಟ್ಟಿದ್ದಾರೆ. ವಿಜಯ್‌ರ ವಿವಿ ಪ್ರೊಡಕ್ಷನ್‌ನ ಪೂರ್ಣ ಹೆಸರು ವಿಜಯ್-ವಿದ್ಯಾ. ನಟ ವಿಜಯ್ ಸಹೋದರಿಯ ಹೆಸರು ವಿದ್ಯಾ.

ರಜನೀಕಾಂತ್‌ರ ದೊಡ್ಡ ಅಭಿಮಾನಿ ವಿಜಯ್
ನಟ ವಿಜಯ್, ರಜನೀಕಾಂತ್‌ರ ದೊಡ್ಡ ಅಭಿಮಾನಿ. ಹಲವು ಬಾರಿ ಅವರು ರಜನೀಕಾಂತ್ ಬಗ್ಗೆ ಮಾತನಾಡಿದ್ದಾರೆ. ಅವರೇ ಹೇಳಿಕೊಂಡಿರುವಂತೆ, ರಜನೀಕಾಂತ್ ಅವರನ್ನು ನೋಡಿಯೇ ನಟಿಸಬೇಕೆನ್ನುವ, ನಾಯಕ ನಟ ಆಗಬೇಕೆನ್ನುವ ಆಸೆ ವಿಜಯ್‌ಗೆ ಮೂಡಿತಂತೆ. ಮೊದಲ ಸಿನಿಮಾಕ್ಕೆ ಆಡಿಷನ್ ನೀಡಲು ಹೇಳಿದಾಗ ಸಹ ರಜನೀಕಾಂತ್ ನಟಿಸಿರುವ 'ಅಣ್ಣಮಲೈ' ಸಿನಿಮಾದ ಡೈಲಾಗ್ ಹೇಳಿದ್ದರಂತೆ ವಿಜಯ್. ರಜನೀಕಾಂತ್ ಅವರನ್ನು ಬಿಟ್ಟರೆ ಅತಿ ಹೆಚ್ಚು ಸಂಖ್ಯೆಯ ಮಾಸ್ ಫ್ಯಾನ್ ಬೇಸ್ ಇರುವುದು ವಿಜಯ್‌ಗೆ.

ಟಾಮ್ ಕ್ರೂಸ್ ಮನೆ ಹೋಲುವಂಥಹಾ ಮನೆ ನಿರ್ಮಾಣ
ವಿಜಯ್ ಒಮ್ಮೆ ಅಮೆರಿಕಕ್ಕೆ ಭೇಟಿ ನೀಡಿದ್ದಾಗ ಅಲ್ಲಿ ಖ್ಯಾತ ಹಾಲಿವುಡ್ ನಟ ಟಾಮ್ ಕ್ರೂಸ್‌ರ ಬೀಚ್ ಹೌಸ್‌ಗೆ ಭೇಟಿ ನೀಡಿದ್ದರು. ಅವರಿಗೆ ಆ ಮನೆ ಬಹಳ ಹಿಡಿಸಿತು. ಆ ಮನೆಯ ಫೋಟೊ, ವಿಡಿಯೋಗಳನ್ನು ತೆಗೆದುಕೊಂಡು ಬಂದು ತಮಿಳುನಾಡಿನ ನೀಲಂಕರೈನಲ್ಲಿ ಅಂಥಹುದೇ ಒಂದು ಮನೆ ನಿರ್ಮಾಣ ಮಾಡಿಸಿದರು. ಅಲ್ಲಿಗೆ ಆಗಾಗ್ಗೆ ಕುಟುಂಬ ಸಮೇತ ಭೇಟಿ ನೀಡಿ ಸಮಯ ಕಳೆಯುತ್ತಾರೆ ನಟ ವಿಜಯ್.

ಹಲವು ಹೊಸ ನಿರ್ದೇಶಕರಿಗೆ ಅವಕಾಶ
ವಿಜಯ್, ನಾಯಕ ನಟನಾಗಿ ಎಂಟ್ರಿ ಕೊಟ್ಟು 30 ವರ್ಷಗಳಾದವು ಸುಮಾರು 60 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಿಜಯ್ ನಟಿಸಿದ್ದಾರೆ. ತಮ್ಮ 60 ಸಿನಿಮಾಗಳಲ್ಲಿ ಸುಮಾರು 20 ಮಂದಿ ಹೊಸ ನಿರ್ದೇಶಕರಿಗೆ ಅವಕಾಶ ನೀಡಿದ್ದಾರೆ ವಿಜಯ್. ಹೊಸ ನಿರ್ದೇಶಕರಿಗೆ ಅವಕಾಶ ನೀಡುವಲ್ಲಿ ವಿಜಯ್ ಮೊದಲಿಗರು. ತಮ್ಮ ನಿರ್ಮಾಣ ಸಂಸ್ಥೆಯ ಮೂಲಕವೂ ಕೆಲವು ಒಳ್ಳೆಯ ಸಿನಿಮಾಗಳನ್ನು ವಿಜಯ್ ನೀಡುತ್ತಿದ್ದಾರೆ.

ವಿಜಯ್ ಪುತ್ರನ ಹೆಸರು ಸಂಜಯ್
ವಿಜಯ್ ಪುತ್ರನ ಹೆಸರು ಸಂಜಯ್. ತಮ್ಮ ಹಾಗೂ ಪತ್ನಿಯ ಹೆಸರನ್ನು ಕೂಡಿಸಿ ಮಗನಿಗೆ ನಾಮಕರಣ ಮಾಡಿದ್ದಾರೆ ವಿಜಯ್. ಅಂದಹಾಗೆ ವಿಜಯ್ ಪತ್ನಿಯ ಹೆಸರು ಸಂಗೀತ. ವಿಜಯ್ ಪುತ್ರ ಸಹ ಸಿನಿಮಾಗಳಲ್ಲಿ ನಟಿಸಲು ತಯಾರಾಗಿದ್ದಾರೆ. ವಿಜಯ್ ಪುತ್ರನನ್ನು ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಲಾಂಚ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ತೆಲುಗಿನ ಹಿಟ್ ಸಿನಿಮಾ 'ಉಪ್ಪೆನ' ರೀಮೇಕ್ ಮೂಲಕ ವಿಜಯ್ ಮಗ ಚಿತ್ರರಂಗಕ್ಕೆ ಕಾಲಿಡಲಿದ್ದಾರಂತೆ.

ದಾಖಲೆ ಬರೆವ ವಿಜಯ್ ಟ್ವೀಟ್‌ಗಳು
ನಟ ವಿಜಯ್ ಟ್ವಿಟ್ಟರ್ ಸೇರಿದಂತೆ ಕೆಲವು ಸಾಮಾಜಿಕ ಜಾಲತಾಣದಲ್ಲಿದ್ದಾರಾದರೂ ಸಾಮಾಜಿಕ ಜಾಲತಾಣವನ್ನು ಬಳಸುವುದು ಬಹಳ ಅಪರೂಪ. ಆದರೆ ಸಾಮಾಜಿಕ ಜಾಲತಾಣ ಬಳಸಿದರೆ ಅದು ಹೊಸ ರೆಕಾರ್ಡ್ ಮಾಡುವುದು ಪಕ್ಕಾ. 2021 ರಲ್ಲಿ ವಿಜಯ್ ಮಾಡಿದ್ದು ಕೇವಲ ಐದು ಟ್ವೀಟ್ ಆದರೆ ಆ ವರ್ಷ ಅತಿ ಹೆಚ್ಚು ರೀಟ್ವೀಟ್ ಆದ, ಲೈಕ್ಸ್ ಪಡೆದ ಅತಿ ಹೆಚ್ಚು ಎಂಗೇಜ್‌ಮೆಂಟ್ ಗಳಿಸಿದ ಟ್ವೀಟ್‌ಗಳಲ್ಲಿ ವಿಜಯ್‌ರ ಟ್ವೀಟ್ ಮೊದಲ ಸ್ಥಾನ ಪಡೆಯಿತು.

ಹಿಂದಿಯ ಒಂದು ಸಿನಿಮಾದಲ್ಲಿ ಅತಿಥಿ ಪಾತ್ರ
ವಿಜಯ್, ತಮಿಳು ಬಿಟ್ಟು ಬೇರೆ ಭಾಷೆಯ ಸಿನಿಮಾದಲ್ಲಿ ನಟಿಸಿಲ್ಲ. ಆದರೆ ಹಿಂದಿಯ ಅಕ್ಷಯ್ ಕುಮಾರ್ ನಟನೆಯ 'ರೌಡಿ ರಾಥೋಡ್' ಸಿನಿಮಾದ ಹಾಡೊಂದರಲ್ಲಿ ಕೆಲ ಸೆಕೆಂಡ್ ಕಾಣಿಸಿಕೊಂಡು ಅಕ್ಷಯ್ ಹಾಗೂ ಪ್ರಭುದೇವಾ ಜೊತೆಗೆ ಸ್ಟೆಪ್ ಹಾಕಿದ್ದಾರೆ. ತಮಿಳು ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದರೂ ಸಹ ಮಲಯಾಳಂನಲ್ಲಿ ಅತಿ ಹೆಚ್ಚು ಫ್ಯಾನ್ಸ್ ಹೊಂದಿರುವ ಮಲಯಾಳಂಯೇತರ ನಟರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ ವಿಜಯ್. ಮೊದಲ ಸ್ಥಾನ ಅಲ್ಲು ಅರ್ಜುನ್‌ಗೆ.