Rajinikanth Jokes: ನಿಮ್ಮನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತವೆ ಈ ಫನ್ನಿ ತಲೈವಾ ಜೋಕ್ಸ್
ಸೂಪರ್ ಸ್ಟಾರ್ ರಜಿನಿಕಾಂತ್ 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ತಮ್ಮ ವಿಭಿನ್ನ ಮ್ಯಾನರಿಸಂ, ಸ್ಟೈಲ್‌ನಿಂದ ಮೋಡಿ ಮಾಡುತ್ತಾ ಬರುತ್ತಿದ್ದಾರೆ. ತಲೈವಾ ವಯಸ್ಸು 70 ದಾಟಿದ್ರು, ಅವ್ರ ಎನರ್ಜಿ, ನಟನೆಗೆ ಇನ್ನು 20ರ ಹರೆಯ.
ರಜನಿಕಾಂತ್ ಸಿನಿಮಾಗಳಲ್ಲಿ ಡ್ಯಾನ್ಸ್, ಆಕ್ಷನ್ ಜೊತೆ ಅವರ ಸ್ಟಂಟ್ಸ್ ಕೂಡ ಗಮನ ಸೆಳೆಯುತ್ತವೆ. ಸೂರ್ ಸ್ಟಾರ್ ಸಿಗರೇಟ್ ಹಚ್ಚುವ ಸ್ಟೈಲ್, ಚೂಯಿಂಗ್ ಗಮ್ ಬಾಯಿಗೆ ಹಾಕಿಕೊಳ್ಳುವ ಸ್ಟೈಲ್ ಅದೇ ರೀತಿ ಶಿವಾಜಿ ಚಿತ್ರದಲ್ಲಿ ನಾಣ್ಯವನ್ನು ಮೇಲಕ್ಕೆ ಚಿಮ್ಮುವ ಸ್ಟೈಲ್, ಎರಡೈ ಕೈಗಳಿಂದ ಒಮ್ಮೆಲೆ ಸಹಿ ಎಲ್ಲವೂ ಅಭಿಮಾನಿಗಳ ಮನಗೆದ್ದಿದೆ. ತೆರೆಮೇಲೆ ತಲೈವಾ ಮಾಡಿದ ಇಂತಹ ಟ್ರಿಕ್ಸ್, ಸ್ಟಂಟ್ಸ್ ನೋಡಿ ಅವರ ಮೇಲೆ ಒಂದಷ್ಟು ಜೋಕ್ಸ್ ಹುಟ್ಟಿಕೊಂಡವು.

ರೋಬೊ ಸಿನಿಮಾ ಬಳಿಕ ಅಂತಹ ಜೋಕ್ಸ್ ಸಂಖ್ಯೆ ಜಾಸ್ತಿ ಆಗಿತ್ತು. ಸೋಶಿಯಲ್ ಮೀಡಿಯಾ ಇಷ್ಟು ಜನಪ್ರಿಯ ಆಗುವ ಮುನ್ನ ಅದರಲ್ಲೂ ವಾಟ್ಸಪ್ ಇಲ್ಲದ ಕಾಲದಲ್ಲೇ ರಜನಿಕಾಂತ್ ಜೋಕ್ಸ್ ವೈರಲ್ ಆಗಿತ್ತು. ಜನ ಈ ಜೋಕ್ಸ್ ಓದಿ, ಕೇಳಿ ಸಖತ್ ಎಂಜಾಯ್ ಮಾಡಿದ್ದರು. ರಜನಿಕಾಂತ್ ಏನು ಬೇಕಾದರೂ ಮಾಡಬಲ್ಲರು ಎನ್ನುವ ಅರ್ಥದಲ್ಲಿ ಹುಟ್ಟಿಕೊಂಡ ಅಂತಹ ಕೆಲ ಜೋಕ್ಸ್ ಮುಂದೆ ಇದೆ ಓದಿ.. ಇದು ಬರೀ ತಮಾಷೆಗಾಗಿ..
1. ಗ್ರಹಾಂ ಬೆಲ್ ಟೆಲಿಫೋನ್ ಅನ್ನು ಕಂಡುಹಿಡಿದಾಗ, ಅದಾಗಲೇ ರಜನಿಕಾಂತ್ ಅವರಿಂದ ಎರಡು ಮಿಸ್ಡ್ ಕಾಲ್ ಕಂಡುಬಂದಿತ್ತು!
2. ತಲೈವಾ ತಮ್ಮ ಬಳಿ ಇರುವ ವಿಸಿಟಿಂಗ್ ಕಾರ್ಟ್ ಬಳಿಸಿ ಎಟಿಎಂನಿಂದ ಹಣ ಡ್ರಾ ಮಾಡಬಲ್ಲರು.
3. ದೇವರು ನೀರಿನ ಮೇಲೆ ನಡೆಯಬಹುದು. ಆದರೆ ರಜನಿಕಾಂತ್ ಭೂಮಿಯ ಮೇಲೆ ಈಜಬಲ್ಲರು.
4. ಒಮ್ಮೆ ರಜನಿಕಾಂತ್ ಪುಟ್ಟ ಬಾಲಕನ ಮುಂದೆ ತನ್ನ ಗರ್ಲ್‌ಫ್ರೆಂಡ್‌ಗೆ ಕಿಸ್ ಮಾಡಿದ್ದರು. ಆ ಬಾಲಕನೇ ಇಮ್ರಾನ್ ಹಶ್ಮಿ.
5. ರಜನಿಕಾಂತ್ ಒಮ್ಮೆ ಸೀನಿದ್ದಕ್ಕೆ ಸುನಾಮಿ ಬಂದಿತ್ತು.

6. ರಜನಿಕಾಂತ್ ಒಮ್ಮೆ ರೋಡ್ ರೋಲರ್ ಕೊಂಡುಕೊಂಡಿದ್ದರು. ಯಾಕೆ ಗೊತ್ತಾ? ತಮ್ಮ ಬಟ್ಟೆ ಇಸ್ತ್ರೀ ಮಾಡಲು.
7. ಒಮ್ಮೆ ಸೂಪರ್ ಸ್ಟಾರ್ ಶಾಲೆಗೆ ಬಂಕ್ ಮಾಡಿದ್ದರು. ಅಂದಿನಿಂದ ಅದೇ ಭಾನುವಾರ ಆಯಿತು.
8. ರಜನಿಕಾಂತ್ 3ನೇ ತರಗತಿಯಲ್ಲಿದ್ದಾಗ ಟೀಚರ್ ಪ್ರಬಂಧ ಬರೆಯಲು ಹೇಳಿದ್ದರು. ಅದೇ ಇವತ್ತು ವಿಕಿಪಿಡಿಯ ಆಗಿದೆ.
9. ಒಮ್ಮೆ ರೈತ ಹೊಲದಲ್ಲಿ ದೃಷ್ಟಿ(ಬೆದರು) ಬೊಂಬೆ ಬದಲು ರಜನಿಕಾಂತ್ ಫೋಟೊ ಹಾಕಿದ್ದನಂತೆ. ಬಳಿಕ ಏನಾಯ್ತು ಹೊತ್ತಾ? ಪಕ್ಷಿಗಳು ಕಳೆದ ವರ್ಷ ಕದ್ದ ಧಾನ್ಯವನ್ನು ತಂದು ವಾಪಸ್ ಕೊಟ್ಟಿದ್ದವಂತೆ.
10. ರಜನಿಕಾಂತ್ 'ಗುಡ್ ಮಾರ್ನಿಂಗ್' ಹೇಳುವವರೆಗೂ ಸೂರ್ಯ ಉದಯಿಸುವುದಿಲ್ಲ.
11. ತಲೈವಾ ಮನೆಯಲ್ಲೇ ಮೇಡಮ್ ಟುಸ್ಸಾಡ್ ಪ್ರತಿಮೆ ಇದೆ!
12. ಒಮ್ಮೆ ತಲೈವಾ ಪರೀಕ್ಷೆಯಲ್ಲಿ ಕಾಪಿ ಹೊಡೆಯುವಾಗ ಸಿಕ್ಕಿಬಿದ್ದರು. ಆಗ ಏನಾಯ್ತು ಗೊತ್ತಾ? ಇನ್ನೇನಾಗತ್ತೆ ಟೀಚರೇ ಸಸ್ಪೆಂಡ್ ಆಗಿಬಿಟ್ಟರು!
13. ಆಡಂ ಹಾಗೂ ಈವ್ ಕೂಡ ರಜನಿಕಾಂತ್ ಮಕ್ಕಳು!
14. ಶಿವ: ನನ್ನ ತ್ರಿಶೂಲ ಏನಾಯ್ತು?
ಪಾರ್ವತಿ: ರಜನಿಕಾಂತ್ ತಗೊಂಡು ಹೋದ್ರು?
ಶಿವ: ಯಾಕೆ
ಪಾರ್ವತಿ: ಮ್ಯಾಗಿ ನ್ಯೂಡಲ್ಸ್ ತಿನ್ನಲು
15. ರಜನಿಕಾಂತ್ ಬಳಿ ಗಿಫ್ಟ್ ಪಡೆಯಲು ಸಾಂತಾ ಕ್ಲಾಸ್ ಪ್ರತಿ ಕ್ರಿಸ್‌ಮಸ್‌ಗೆ ಕಾಯುತ್ತಾರೆ.
16. ನ್ಯೂಟನ್ ತಲೆ ಮೇಲೆ ಬಿದ್ದಿದ್ದ ಆಪಲ್ ಹಾಕಿದ್ದು ರಜನಿಕಾಂತ್!
17. ಸೂಪರ್ ಸ್ಟಾರ್ ಯಾವ ಪರಿ ಸ್ಪೀಡಾಗಿ ಓಡ್ತಾರಂದ್ರೆ, ಅವರು ಯಾವತ್ತೂ ನಿನ್ನೆ ಬರ್ತಾರೆ!
18. ರಜನಿಕಾಂತ್ ಭಾರತದಲ್ಲಿ ನೆಲೆಸಿರುವುದಕ್ಕೆ ಸರ್ಕಾರವೇ ತೆರೆಗೆ ಪಾವತಿಸುತ್ತದೆ!


Click it and Unblock the Notifications










