ಬೆಡ್‌ರೂಮ್‌ನಲ್ಲಿ ಸಂಜಯ್ ದತ್ ಕಂಡು ಗಢ ಗಢ ನಡುಗಿ ಹೋಗಿದ್ದ ನಟಿ...!
ಗಿರೀಶ್ ಕಾರ್ನಾಡ್ ನಿರ್ದೇಶನದ ರಾಷ್ಟ್ರ ಪ್ರಶಸ್ತಿ ಚಿತ್ರ ಚೆಲ್ವಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದವರು ಸೋನಾಲಿ ಕುಲಕರ್ಣಿ. ಆ ನಂತರ ಮರಾಠಿ, ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡ ಸೋನಾಲಿ ಅತೀ ಕಿರಿಯ ವಯಸ್ಸಿನಲ್ಲಿಯೇ ಮಹಾರಾಷ್ಟ್ರದ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿಯನ್ನು ಪಡೆದರು. ಫಿಲ್ಮ್‌ಸೇರಿ ಸೇರಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಇನ್ನೂ ಸಾಮಾನ್ಯವಾಗಿ ಅವಕಾಶ ಒದ್ದೊದ್ದಿಕೊಂಡು ಬರುವ ಸಮಯದಲ್ಲಿ ಕಿರುತೆರೆಯತ್ತ ಅನೇಕರು ಮುಖ ಮಾಡುವುದಿಲ್ಲ. ಆದರೆ ಜನಪ್ರಿಯತೆಯ ಅಮಲನ್ನ ನೆತ್ತಿಗೇರಿಸಿಕೊಳ್ಳದೇ ಸೋನಾಲಿ ಕಿರುತೆರೆಯಲ್ಲಿ ಕೂಡ ಕೆಲಸ ಮಾಡಿದರು. ಆ ನಂತರ ಹೃತಿಕ್ ರೋಷನ್ ಮತ್ತು ಸಂಜಯ್ ದತ್ ಅಭಿನಯದ ಮಿಷನ್ ಕಾಶ್ಮೀರ್ ಚಿತ್ರದಲ್ಲಿ ಹೃತಿಕ್ ರೋಷನ್ ಸಾಕು ತಾಯಿ ಮತ್ತು ಸಂಜಯ್ ದತ್ ಪತ್ನಿಯ ಪಾತ್ರವನ್ನು ಸೋನಾಲಿ ನಿರ್ವಹಿಸಿದರು. ದಿಲ್ ಚಾಹ್ತಾ ಹೈ ಚಿತ್ರದಲ್ಲಿ ಸೈಫ್ ಅಲಿ ಖಾನ್‌ಗೆ ನಾಯಕಿಯಾಗಿ ಜನ ಮನ ಗೆದ್ದರು.

ಇಂಥಾ ಸೋನಾಲಿ ಕುಲಕರ್ಣಿ ಸದ್ಯ ಮಿಷನ್ ಕಾಶ್ಮೀರ್ ಚಿತ್ರದ ಒಂದು ಸನ್ನಿವೇಶವನ್ನು ನೆನಪು ಮಾಡಿಕೊಂಡಿದ್ದಾರೆ. ಚಿತ್ರೀಕರಣದ ಸ್ಥಳದಲ್ಲಿ ಬೆವರಿ ನಲುಗಿ ಹೋಗಿದ್ದ ಘಟನೆಯನ್ನು ಮೆಲುಕು ಹಾಕಿದ್ದಾರೆ. ಸಿದ್ಧಾರ್ಥ್ ಕಣ್ಣನ್ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸೋನಾಲಿ ಕುಲಕರ್ಣಿ, ಮಿಷನ್ ಕಾಶ್ಮೀರ್ ಚಿತ್ರದಲ್ಲಿ ''ಬೆಡ್ ರೂಮ್'' ದೃಶ್ಯವೊಂದಿತ್ತು. ಈ ದೃಶ್ಯಕ್ಕೆ ನಾನು ನನ್ನ ಕಾಸ್ಟ್ಯೂಮ್ ಬದಲಿಸಿಕೊಂಡು ಬಂದೆ. ಅಷ್ಟರಲ್ಲಿಯೇ ಏಕಾಏಕಿ ನನ್ನ ಹೇರ್ ಡ್ರೆಸರ್ ವ್ಯಾಕ್ಸಿಂಗ್ ಮಾಡಿಸಿಕೊಂಡು ಬಂದಿದೀಯಾ ತಾನೇ ಎಂದು ಪ್ರಶ್ನೆ ಕೇಳಿದರು. ಈ ಪ್ರಶ್ನೆಯಿಂದ ನಾನು ತಬ್ಬಿಬ್ಬಾದೆ. ಗಾಬರಿಯಾದೆ.ಆ ನಂತರ ನನಗೆ ಪಾತ್ರದ ಕಡೆ ಆ ದೃಶ್ಯದ ಕಡೆ ಗಮನಹರಿಸಲು ಸಾಧ್ಯವೇ ಆಗುತ್ತಿರಲಿಲ್ಲ ನನ್ನ ಕೈಗಳು ನಡುಗುತ್ತಿದ್ದವು, ತುಟಿಗಳು ನಡುಗುತ್ತಿದ್ದವು ಎಂದು ಹೇಳಿದ್ದಾರೆ.
ಮುಂದುವರೆದು ನನ್ನ ಈ ಸ್ಥಿತಿಯನ್ನು ಗಮನಿಸಿದ ಸಂಜಯ್ ದತ್ ಆ ನಂತರ ನನ್ನನ್ನು ತಮ್ಮ ಬಳಿ ಕರೆದರು. ಈ ದೃಶ್ಯದಲ್ಲಿ ಮುತ್ತು ಕೊಡುವುದೇನು ಇಲ್ಲ ಕೇವಲ ಎರಡು ಡೈಲಾಗ್‌ಗಳಿವೆ ಆ ನಂತರ ಅಪ್ಪಿಕೊಳ್ಳಬೇಕಷ್ಟೇ ಎಂದು ಹೇಳಿದರು. ನಿನ್ನ ಈ ಸ್ಥಿತಿ ನಾನು ಈಗ ನರ್ವಸ್ ಆಗಿದ್ದೇನೆ ಹೀಗೆ ಆದರೆ ಈ ಸನ್ನಿವೇಶ ಮುಗಿಯುವುದಿಲ್ಲ. ಹೀಗಾಗಿ ಜಾಸ್ತಿ ಯೋಚನೆ ಮಾಡಬೇಡ ಆರಾಮಾಗಿರು ಎಂದು ಸಂಜಯ್ ದತ್ ನನಗೆ ಹೇಳಿದರು ಎಂದು ಸೋನಾಲಿ ಕುಲಕರ್ಣಿ ಹೇಳಿದ್ದಾರೆ.

ಅಂದ್ಹಾಗೇ ಹೃತಿಕ್ ರೋಷನ್ ಮತ್ತು ಸಂಜಯ್ ದತ್ ಚಿತ್ರದಲ್ಲಿದ್ದರೂ ಕೂಡ ಮಿಷನ್ ಕಾಶ್ಮೀರ್ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿರಲಿಲ್ಲ. ಆದರೆ. ಈ ಚಿತ್ರದಲ್ಲಿ ಸೋನಾಲಿ ಕುಲಕರ್ಣಿ ಅವರ ಅಭಿನಯಕ್ಕೆ ಎಲ್ಲರು ಮನ ಸೋತಿದ್ದರು. ಇದಕ್ಕೆ ಕೈಗನ್ನಡಿ ಎಂಬಂತೆ ಫಿಲ್ಮ್‌ಫೇರ್ , ಸೈಮಾ ಸೇರಿ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಸೋನಾಲಿ ಕುಲಕರ್ಣಿ ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮಾಂಕಿತರಾಗಿದ್ದರು. ಸದ್ಯಕ್ಕೆ ಸೋನಾಲಿ ಕುಲಕರ್ಣಿ ಹಿಂದಿ ಚಿತ್ರರಂಗಕ್ಕಿಂತ ಮರಾಠಿ ಚಿತ್ರರಂಗದಲ್ಲಿ ತುಸು ಹೆಚ್ಚು ಬ್ಯುಸಿಯಾಗಿದ್ದಾರೆ. ಒಂದಾದ ಮೇಲೊಂದು ಚಿತ್ರಗಳನ್ನು ಮಾಡುತ್ತಿದ್ದಾರೆ. ಮರಾಠಿಯಲ್ಲಿ ಇವರು ಅಭಿನಯಿಸಿರುವ ಎರಡು ಚಿತ್ರಗಳು ತೆರೆಗೆ ಬರಲು ಸದ್ಯ ಸಿದ್ಧವಾಗಿವೆ. ಇನ್ನೂ ಸೆಪ್ಟೆಂಬರ್ 27ರಂದು ಜೀ5ನಲ್ಲಿ ಪ್ರಸಾರವಾದ ನಾಗಚೈತನ್ಯ ಭಾವಿ ಪತ್ನಿ ಶೋಭಿತಾ ಅಭಿನಯದ ಲವ್ ಸಿತಾರಾ ಚಿತ್ರದಲ್ಲಿ ಕೂಡ ಸೋನಾಲಿ ಕುಲಕರ್ಣಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.


Click it and Unblock the Notifications











