11 Years of Kaddipudi: ಶಿವಣ್ಣ-ಸೂರಿ ಜೋಡಿ 'ಕಡ್ಡಿಪುಡಿ' ಹಿಟ್ಟಾ- ಫ್ಲಾಪಾ? ಈ ಚಿತ್ರದ ವಿಶೇಷತೆಗಳೇನು?

ಶಿವಣ್ಣ- ದುನಿಯಾ ಸೂರಿ ಕ್ರೇಜಿ ಕಾಂಬಿನೇಷನ್ ಸಿನಿಮಾ 'ಕಡ್ಡಿಪುಡಿ'. ಸತತ ಸೋಲುಗಳಿಂದ ಕಂಗೆಟ್ಟಿದ್ದ ಸೆಂಚುರಿ ಸ್ಟಾರ್‌ಗೆ ಭರ್ಜರಿ ಸಕ್ಸಸ್ ಕೊಟ್ಟಿದ್ದ ಸಿನಿಮಾ. 2013 ಜೂನ್ 7ಕ್ಕೆ ಬಿಡುಗಡೆಯಾಗಿದ್ದ ಸಿನಿಮಾ ಇದೀಗ 11 ವರ್ಷ ಪೂರೈಸಿದೆ. ಸಿನಿರಸಿಕರು ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಈ ಕ್ಲಾಸಿಕ್ ಚಿತ್ರವನ್ನು ನೆನಪಿಸಿಕೊಳ್ತಿದ್ದಾರೆ.

'ದುನಿಯಾ' ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಅಲೆ ಎಬ್ಬಿಸಿದವರು ಸೂರಿ. ದೊಡ್ಡ ಕಥೆ ಬೇಡ, ಸಣ್ಣ ಎಳೆ ಇಟ್ಟುಕೊಂಡು ಸಿನಿಮಾ ಮಾಡೋಣ ಎಂದು ತೋರಿಸಿಕೊಟ್ಟವರು. ರೌಡಿಸಂ ಅಂದ್ರೆ ಬರೀ ಮುಚ್ಚು, ಲಾಂಗ್, ಕತ್ತರಿಸುವುದು ಅಷ್ಟೆ ಅಲ್ಲ. ಅದನ್ನು ಬಿಟ್ಟು ಭೂಗತಲೋಕದಲ್ಲಿ ಸಾಕಷ್ಟು ವಿಚಾರಗಳಿವೆ ಎಂದು ಸೂರಿ ತಮ್ಮ ಸಿನಿಮಾಗಳಲ್ಲಿ ಹೇಳುತ್ತಾ ಬರ್ತಿದ್ದಾರೆ. ಅಂತದ್ದೇ ಪಕ್ಕಾ ಸುಕ್ಕಾ ಸೂರಿ ಸ್ಟೈಲ್ ಸಿನಿಮಾ 'ಕಡ್ಡಿಪುಡಿ'. ರಾಧಿಕಾ ಪಂಡಿತ್ ಚಿತ್ರದಲ್ಲಿ ಶಿವಣ್ಣನಿಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದರು. ಎಂ. ಚಂದ್ರು ಚಿತ್ರಕ್ಕೆ ಬಂಡವಾಳ ಹಾಕಿದ್ದರು.

Soori and Shivarajkumar s Kaddipudi completes 10 Years The lesser known facts about the film

'ಕಡ್ಡಿಪುಡಿ' ಸಿನಿಮಾ ಹಿಟ್ಟಾ, ಫ್ಲಾಪಾ ಎನ್ನುವ ಗೊಂದಲ ಇನ್ನು ಕೆಲವರಿಗೆ ಇದೆ. ಯಾಕಂದ್ರೆ ಇವತ್ತಿಗೆ ಹೋಲಿಸಿದರೆ ಅವತ್ತಿಗೆ ಆ ಸಿನಿಮಾ ಸದ್ದು ಕಮ್ಮಿ ಎನಿಸುತ್ತದೆ. ಆದರೆ ಕಾರಣಾಂತರಗಳಿಂದ ಸಿನಿಮಾ ಕೊಂಚ ಹಿನ್ನಡೆ ಅನುಭವಿಸಿದ್ದು ಸುಳ್ಳಲ್ಲ. ಆದರೆ ಸಿನಿಮಾ ನಿರ್ಮಾಪಕರನ್ನು ಗೆಲ್ಲಿಸಿತ್ತು. ಮೊದಲ ವಾರವೇ 3 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸದ್ದು ಮಾಡಿತ್ತು. ಅಂದಾಜು ಎರಡೂವರೆ ಕೋಟಿ ರೂ.ಗೆ ಸ್ಯಾಟಲೈಟ್ ರೈಟ್ಸ್ ಮಾರಾಟವಾಗಿತ್ತು. ಬಜೆಟ್ ಕೂಡ ಕಮ್ಮಿ ಇದ್ದಿದ್ದು ಪ್ಲಸ್ ಆಗಿತ್ತು. ಅಬ್ಬಬ್ಬಾ ಎನ್ನುವ ಕಲೆಕ್ಷನ್ ಮಾಡದಿದ್ದರೂ ಆವರೇಜ್ ಹಿಟ್ ಎನಿಸಿಕೊಂಡಿತ್ತು.

ಸಂತೋಷ್ ಚಿತ್ರಮಂದಿರದಲ್ಲಿ 'ಕಡ್ಡಿಪುಡಿ' 47 ದಿನ ಪ್ರದರ್ಶನ ಕಂಡಿತ್ತು. ಶಿವಣ್ಣನ ಅಭಿಮಾನಿಗಳಿಗೆ ಇವತ್ತಿಗೂ 'ಕಡ್ಡಿಪುಡಿ' ಹಾಟ್ ಫೇವರಿಟ್. ಆದರೆ ತೆರೆಕಂಡ ಬಳಿಕ ಪ್ರಚಾರ ಕಮ್ಮಿ ಆಗಿ ಚಿತ್ರ ಸೊರಗುವಂತೆ ಆಗಿಬಿಡ್ತು. ಸೂರಿ, ಮಾಸ್ತಿ ಬರವಣಿಗೆ, ಶಿವಣ್ಣನ ಪರ್ಫಾರ್ಮನ್ಸ್, ಕೃಷ್ಣ ಛಾಯಾಗ್ರಹಣ ಹೈಲೆಟ್ ಆಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ವಿ. ಹರಿಕೃಷ್ಣ ಸಂಗೀತ ಚಿತ್ರಕ್ಕೆ ದೊಡ್ಡ ಶಕ್ತಿ ಆಗಿತ್ತು. ಜಯಂತ್ ಕಾಯ್ಕಿಣಿ ಹಾಗೂ ಯೋಗರಾಜ್ ಭಟ್ಟರ ಸಾಹಿತ್ಯ ಸೊಗಸಾಗಿತ್ತು. ಎಲ್ಲಾ ಸೇರಿ 'ಕಡ್ಡಿಪುಡಿ' ಸಿನಿಮಾ ಹಿಟ್ ಆಗಿತ್ತು.

'ಕಡ್ಡಿಪುಡಿ' ಕಥೆ ಬಹಳ ಸಿಂಪಲ್. ಒಮ್ಮೆ ರೌಡಿಸಂಗೆ ಇಳಿದರೆ ಮುಗೀತು. ಅದರಿಂದ ಹೊರಗೆ ಬರೋದು ಕಷ್ಟ. ಈ ವ್ಯವಸ್ಥೆ ಆತನನ್ನು ಮತ್ತೆ ಸಮಾಜದಲ್ಲಿ ಸಾಮಾನ್ಯನಂತೆ ಬದುಕಲು ಬಿಡಲ್ಲ. ಚಿತ್ರದ ನಾಯಕ 'ಕಡ್ಡಿಪುಡಿ' ಅಲಿಯಾಸ್ ಆನಂದ್ ಕಥೆ ಕೂಡ ಇದೆ. ಮಚ್ಚು ಹಿಡಿದು ಬಿಟ್ಟವನು ಬೀದಿ ಹೆಣವಾಗುತ್ತಾನೆ ಎಂದು ಗೊತ್ತಾದಾಗ ಆತ ಅಧಿಕಾರದ ಮೊರೆ ಹೋಗುತ್ತಾನೆ. ಪತ್ನಿಯನ್ನು ರಾಜಕೀಯರಂಗಕ್ಕೆ ಕರೆದುಕೊಂಡು ಬಂದು ಗೆಲ್ಲಿಸಿ, ಜೀವನ ಸಾಗಿಸುವ ಪ್ರಯತ್ನ ಮಾಡ್ತಾನೆ. ಅದು ಸಾಧ್ಯವೇ? ಎನ್ನುವಂತೆ ಕೊನೆಗೆ 'ಅಲ್ಪವಿರಾಮ' ಎಂದು ಹಾಕಿ ಸೂರಿ 'ಕಡ್ಡಿಪುಡಿ' ಕಥೆ ಮುಗಿಸಿದ್ದರು.

Soori and Shivarajkumar s Kaddipudi completes 10 Years The lesser known facts about the film

ಸಿನಿಮಾಗಳಲ್ಲಿ ಕೆಲಸ ಮಾಡಿಕೊಂಡಿರುವ ಜ್ಯೂನಿಯರ್ ಆರ್ಟಿಸ್ಟ್ ಉಮಾ ಪಾತ್ರದಲ್ಲಿ ರಾಧಿಕಾ ಪಂಡಿತ್ ಕಾಣಿಸಿಕೊಂಡಿದ್ದರು. ಅವರ ಕರಿಯರ್‌ನಲ್ಲಿ ಇದು ಬಹಳ ವಿಭಿನ್ನವಾದ ಪಾತ್ರವಾಗಿತ್ತು. ಒಂದೆರಡು ದೃಶ್ಯಗಳಲ್ಲಿ, ಒಂದು ಹಾಡಲ್ಲಿ ಐಂದ್ರಿರಾ ರೈ ಮಿಂಚಿದ್ದರು. ಇನ್ನುಳಿದಂತೆ 'ಕಡ್ಡಿಪುಡಿ' ಜೊತೆ ಜಿಂಕೆ ಆಗಿ ರಂಗಾಯಣ ರಘು ಬಹಳ ಹೊತ್ತು ತೆರೆಮೇಲೆ ಕಾಣಿಸಿಕೊಂಡಿದ್ದರು. ಸೆಕೆಂಡ್ ಹಾಫ್ ಕೊಂಚ ಎಳೆದಂತೆ ಭಾಸವಾಗಿದ್ದು ಸುಳ್ಳಲ್ಲ.

ವಿಶೇಷ ಅಂದ್ರೆ 'ಕಡ್ಡಿಪುಡಿ' ಚಿತ್ರದಲ್ಲಿ ಡ್ಯಾನ್ಸ್ ಮಾಸ್ಟರ್ಸ್, ಫೈಟ್ಸ್ ಮಾಸ್ಟರ್ ಅಷ್ಟಾಗಿ ಕೆಲಸ ಮಾಡಲಿಲ್ಲ. ಅಚ್ಚರಿ ಎಂದರೆ 'ಬುಡುಬುಡಿಕೆ ಮಾಲಿಂಗ' ಹಾಡಿಗೆ ಖುದ್ದು ಶಿವಣ್ಣ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿಕೊಂಡಿದ್ದರು. ಇನ್ನು ಫೈಟ್‌ವೊಂದಕ್ಕೆ ಕೂಡ ತಾವೇ ಕೊರಿಯೋಗ್ರಫಿ ಮಾಡಿದ್ದರು. ಕೇವಲ 57 ದಿನಗಳಲ್ಲಿ 'ಕಡ್ಡಿಪುಡಿ' ಸಿನಿಮಾ ಚಿತ್ರೀಕರಣ ಮಾಡಿ ಮುಗಿಸಲಾಗಿತ್ತು. ಬಹಳ ಬೇಗ ಸಿನಿಮಾ ತೆರೆಗೆ ಬಂದಿತ್ತು. ಶಿವಣ್ಣ ನಟಿಸಿದ 'ಶಿವ', 'ಲಕ್ಷ್ಮಿ', 'ಅಂದರ್‌ಬಾಹರ್' ಹೀಗೆ ಬ್ಯಾಕ್ ಟು ಬ್ಯಾಕ್ 3 ಸಿನಿಮಾಗಳು ನಿರಾಸೆ ಮೂಡಿಸಿದ್ದವು. ಆದರೆ 'ಕಡ್ಡಿಪುಡಿ' ಗೆದ್ದು ಅಭಿಮಾನಿಗಳಲ್ಲಿ ಜೋಶ್ ತುಂಬಿತ್ತು.

More from Filmibeat

English summary
11 Years For Cult Classic Kaddipudi; some interesting facts about the crime drama
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X